ಕೊವಿಡ್ 4ನೇ ಅಲೆಯ ಭೀತಿ; ಪಾಟ್ನಾದಲ್ಲಿ ಒಮಿಕ್ರಾನ್ ಹೊಸ ರೂಪಾಂತರಿ BA.2.12 ಮೊದಲ ಪ್ರಕರಣ ಪತ್ತೆ
ಏಪ್ರಿಲ್ 23ರಂದು ರಾಷ್ಟ್ರ ರಾಜಧಾನಿಯಲ್ಲಿ ಮೊದಲ ಬಾರಿಗೆ COVID-19 ನ BA.2.12 ರೂಪಾಂತರ ಕಾಣಿಸಿಕೊಂಡಿತ್ತು. ಇದು ಕೊವಿಡ್ ವೈರಸ್‌ನ ಒಮಿಕ್ರಾನ್ ರೂಪಾಂತರಕ್ಕಿಂತ (BA.2) ಹೆಚ್ಚು ವೇಗವಾಗಿ ಹರಡುತ್ತದೆ.
ಪಾಟ್ನಾ: ಬಿಹಾರದ ಆರೋಗ್ಯ ಇಲಾಖೆಯು ಪಾಟ್ನಾದ ಇಂದಿರಾಗಾಂಧಿ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (IGIMS) ಇಂದು ಹೊಸ ಒಮಿಕ್ರಾನ್ ಕೊವಿಡ್-19 ರೂಪಾಂತರವನ್ನು ಪತ್ತೆ ಮಾಡಿದೆ. ಹೊಸ ಕೊವಿಡ್ ರೂಪಾಂತರ BA.2. 12 BA.2ಗಿಂತ 10 ಪಟ್ಟು ಹೆಚ್ಚು ಅಪಾಯಕಾರಿಯಾಗಿದೆ. ಭಾರತದಲ್ಲಿ ಕೊರೋನಾ ಮೂರನೇ ಅಲೆಯ ಸಮಯದಲ್ಲಿ ಈ ಹೊಸ ಕೊವಿಡ್ ವೈರಸ್ ಪ್ರಕರಣ ಪತ್ತೆಯಾಗಿದೆ. BA.2.12 ರೂಪಾಂತರವನ್ನು ಮೊದಲು ಅಮೆರಿಕಾದಲ್ಲಿ ಕಂಡುಹಿಡಿಯಲಾಯಿತು. ದೆಹಲಿಯಲ್ಲಿ ಒಟ್ಟು ಐದು ಬಿಎ.2.12 ಪ್ರಕರಣಗಳು ಪತ್ತೆಯಾಗಿದ್ದು, ಈಗ ಪಾಟ್ನಾದಲ್ಲಿ ಒಂದು ಪ್ರಕರಣ ಪತ್ತೆಯಾಗಿದೆ.
ಐಜಿಐಎಂಎಸ್‌ನ ಮೈಕ್ರೋಬಯಾಲಜಿ ವಿಭಾಗದ ಹೆಚ್‌ಓಡಿ ಪ್ರೊಫೆಸರ್ ಡಾ. ನಮ್ರತಾ ಕುಮಾರಿ ಮಾತನಾಡಿ, ಹೆಚ್ಚುತ್ತಿರುವ ಕೊವಿಡ್ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು, ನಾವು ಕೊರೊನಾದ ಒಮಿಕ್ರಾನ್ ರೂಪಾಂತರದ ಮಾದರಿಗಳ ಜಿನೋಮ್ ಅನುಕ್ರಮವನ್ನು ಪ್ರಾರಂಭಿಸಿದ್ದೇವೆ. ಈ ವೇಳೆ 13 ಮಾದರಿಗಳನ್ನು ಪರೀಕ್ಷಿಸಲಾಯಿತು. ಅವುಗಳಲ್ಲಿ ಒಂದು ಬಿಎ.12 ತಳಿಗಳನ್ನು ಹೊಂದಿತ್ತು. ಉಳಿದ 12 ಮಾದರಿಗಳು BA.2 ತಳಿಗಳನ್ನು ಹೊಂದಿವೆ.
ಒಮಿಕ್ರಾನ್‌ನ ಎಲ್ಲಾ ಪಾಸಿಟಿವ್ ಮಾದರಿಗಳ ಸಂಪರ್ಕ ಪತ್ತೆಹಚ್ಚುವಿಕೆಗಾಗಿ ನಾವು ಪ್ರಾಧಿಕಾರವನ್ನು ಕೇಳಿದ್ದೇವೆ. BA.12 ರೂಪಾಂತರವು BA.2ಗಿಂತ 10 ಪಟ್ಟು ಹೆಚ್ಚು ಅಪಾಯಕಾರಿಯಾಗಿದೆ. ಆದರೂ ಆತಂಕ ಪಡುವ ಅಗತ್ಯವಿಲ್ಲ. ಇದರಿಂದ ರಕ್ಷಣೆ ಪಡೆಯಲು ಇಲ್ಲಿ ಮುನ್ನೆಚ್ಚರಿಕೆ ಅಗತ್ಯ ಎಂದು ಹೇಳಿದ್ದಾರೆ.
ಏಪ್ರಿಲ್ 23ರಂದು ರಾಷ್ಟ್ರ ರಾಜಧಾನಿಯಲ್ಲಿ ಮೊದಲ ಬಾರಿಗೆ COVID-19 ನ BA.2.12 ರೂಪಾಂತರ ಕಾಣಿಸಿಕೊಂಡಿತ್ತು. ಇದು ಕೊವಿಡ್ ವೈರಸ್‌ನ ಒಮಿಕ್ರಾನ್ ರೂಪಾಂತರಕ್ಕಿಂತ (BA.2) ಹೆಚ್ಚು ವೇಗವಾಗಿ ಹರಡುತ್ತದೆ. BA.2.12 ಒಮಿಕ್ರಾನ್ ರೂಪಾಂತರದ ಉಪ-ವಂಶಾವಳಿಯಾಗಿದೆ.
ಇದನ್ನೂ ಓದಿ: Covid XE Variant: ಭಾರತಕ್ಕೂ ಕಾಲಿಟ್ಟ ಹೊಸ ಕೊವಿಡ್ ರೂಪಾಂತರಿ; ಮುಂಬೈನಲ್ಲಿ ಮೊದಲ XE ವೈರಸ್ ಪತ್ತೆ
Omicron XE Variant: ಹೊಸ ಒಮಿಕ್ರಾನ್ ಎಕ್ಸ್ಇ ರೂಪಾಂತರದ ಲಕ್ಷಣ, ಪರಿಣಾಮಗಳೇನು?
Published On - 3:24 pm, Thu, 28 April 22