ಪ್ರವಾಸಿ ಸ್ಥಳಗಳನ್ನು ನೋಡುವಾಗ ಕಾಲು ಜಾರಿ ನದಿಯಲ್ಲಿ ಮುಳುಗಿ ನವವಿವಾಹಿತ ಸಾವು; ಹೆಂಡತಿ ಬಚಾವ್
ಮಾರ್ಚ್ 14ರಂದು ಈ ದಂಪತಿಗಳು ಮದುವೆಯಾಗಿದ್ದರು. ರೆಜಿಲ್ ಮತ್ತು ಕನ್ನಿಕಾ ತನ್ನ ತಂದೆ ಮತ್ತು ಚಿಕ್ಕಪ್ಪನೊಂದಿಗೆ ರಮಣೀಯ ಸ್ಥಳಗಳ ಸೌಂದರ್ಯವನ್ನು ಆನಂದಿಸಲು 9 ಗಂಟೆಯ ಸುಮಾರಿಗೆ ಪಕ್ಕದ ಊರಿನ ನದಿಯ ಬಳಿ ಹೋಗಿದ್ದರು.
ಕೋಳಿಕೋಡ್: ನವವಿವಾಹಿತ ವ್ಯಕ್ತಿಯೊಬ್ಬರು ತಮ್ಮ ಪತ್ನಿ ಹಾಗೂ ಸಂಬಂಧಿಕರೊಂದಿಗೆ ಪ್ರಕೃತಿ ಸೌಂದರ್ಯವನ್ನು ಸವಿಯುತ್ತಿದ್ದ ವೇಳೆ ಬಂಡೆಯಿಂದ ಜಾರಿ ಬಿದ್ದು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಕಡಿಯಾಂಗಡ್ನ ಜಾನಕಿಕ್ಕಾಡು ಸಮೀಪದ ಕುಟ್ಟಿಯಾಡಿ ನದಿಯಲ್ಲಿ ನಡೆದಿದೆ. ಪೆರಂಬ್ರಾ ಸಮೀಪದ ಕಡಿಯಂಗಾಡ್‌ನ ಕೆ ಎಂ ರೆಜಿಲಾಲ್ (28) ಮೃತಪಟ್ಟಿದ್ದು, ಅವರ ಪತ್ನಿ ಕೂಡ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ನೀರಿನಿಂದ ರಕ್ಷಿಸಿ, ಖಾಸಗಿ ಆಸ್ಪತ್ರೆಗೆ (Private Hospital) ದಾಖಲಿಸಲಾಗಿದೆ.
ಮಾರ್ಚ್ 14ರಂದು ಈ ದಂಪತಿಗಳು ಮದುವೆಯಾಗಿದ್ದರು. ರೆಜಿಲ್ ಮತ್ತು ಕನ್ನಿಕಾ ತನ್ನ ತಂದೆ ಮತ್ತು ಚಿಕ್ಕಪ್ಪನೊಂದಿಗೆ ರಮಣೀಯ ಸ್ಥಳಗಳ ಸೌಂದರ್ಯವನ್ನು ಆನಂದಿಸಲು 9 ಗಂಟೆಯ ಸುಮಾರಿಗೆ ಪಕ್ಕದ ಊರಿನ ನದಿಯ ಬಳಿ ಹೋಗಿದ್ದರು. ಕೆಲವು ದಿನಗಳ ಹಿಂದೆ ಇದೇ ಸ್ಥಳದಲ್ಲಿ ಈ ಜೋಡಿ ಮದುವೆಯ ನಂತರದ ಫೋಟೋ ಶೂಟ್ ಮಾಡಿಸಿಕೊಂಡಿದ್ದರು.
ಆ ಜಾಗಕ್ಕೆ ಮತ್ತೆ ಹೋಗಿದ್ದಾಗ ಆಯ ತಪ್ಪಿ ರೆಜಿಲಾಲ್ ನದಿಗೆ ಬಿದ್ದಿದ್ದಾರೆ. ಅವರ ಜೊತೆಗೆ ಅವರ ಹೆಂಡತಿಯೂ ನೀರಿಗೆ ಬಿದ್ದಿದ್ದು, ಕನ್ನಿಕಾಳನ್ನು ರಕ್ಷಿಸಲಾಗಿದೆ. ಆದರೆ, ರೆಜಿಲಾಲ್ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಕನ್ನಿಕಾಳ ತಂದೆ ಮತ್ತು ಚಿಕ್ಕಪ್ಪ ಸೇರಿ ಮುಳುಗುತ್ತಿರುವ ರೆಜಿಲ್ ಅವರಿಗೆ ಸಹಾಯ ಮಾಡಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಆ ವೇಳೆ ಸ್ಥಳಕ್ಕಾಗಮಿಸಿದ ಟಿಪ್ಪರ್ ಲಾರಿ ಚಾಲಕ ಕನ್ನಿಲಾರನ್ನು ರಕ್ಷಿಸಿದ್ದಾರೆ. ಕೂಡಲೇ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದರಿಂದ ಆಕೆಯ ಪ್ರಾಣ ಉಳಿಯಿತು. ಆದರೆ, ರೆಜಿಲ್ ಅವರನ್ನು ರಕ್ಷಿಸಲು ಸಾಧ್ಯವಾಗಲಿಲ್ಲ.
ನೀರಿನ ಅಡಿಯಲ್ಲಿ ಆಳವಾದ ಹೊಂಡಗಳಿದ್ದು, ಈಜು ಬಾರದಿದ್ದ ರೆಜಿಲ್ ಹೊಂಡವೊಂದರಲ್ಲಿ ಸಿಲುಕಿಕೊಂಡಿದ್ದರು ಎಂದು ತಿಳಿದುಬಂದಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮದುವೆಯ ನಂತರದ ಫೋಟೋ ಶೂಟ್‌ಗಾಗಿ ಪೋಸ್ ನೀಡುತ್ತಿದ್ದಾಗ ದಂಪತಿಗಳು ಅಪಘಾತಕ್ಕೀಡಾಗಿದ್ದಾರೆ ಎಂದು ಈ ಹಿಂದೆ ಹೇಳಲಾಗಿತ್ತು. ಆದರೆ ಫೋಟೋ ಶೂಟ್ ಕೆಲವು ದಿನಗಳ ಹಿಂದೆ ಪೂರ್ಣಗೊಂಡಿದ್ದರಿಂದ ಅದು ನಿಜವಲ್ಲ ಎಂದು ಫೋಟೋಗ್ರಾಫರ್ ಮತ್ತು ಸಂಬಂಧಿಕರು ಖಚಿತಪಡಿಸಿದ್ದಾರೆ.
ಇದನ್ನೂ ಓದಿ: 2 ವರ್ಷದ ಮಗನನ್ನು ಬಕೆಟ್ ನೀರಲ್ಲಿ ಮುಳುಗಿಸಿ ಸಾಯಿಸಿ, ಬಳಿಕ ತಾನೂ ನೇಣಿಗೆ ಶರಣಾದ ತಾಯಿ
Crime News: ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಬರ್ಬರ ಹತ್ಯೆ; ಬಳಿಕ ಮನೆ ಬಳಿ ಶವ ಎಸೆದು ಪರಾರಿ