ಮಣಿಪುರದಲ್ಲಿ ಸಿಆರ್​ಪಿಎಫ್​, ಪೊಲೀಸ್ ಜಂಟಿ ​ ಪಡೆಯ ಮೇಲೆ ಹೊಂಚು ದಾಳಿ, ಓರ್ವ ಯೋಧ ಹುತಾತ್ಮ

ಮಣಿಪುರದ ಜಿರಿಬಾಮ್​ನಲ್ಲಿ ಸಿಆರ್​ಪಿಎಫ್​, ಪೊಲೀಸರ ಜಂಟಿ ಪಡೆಯ ಮೇಲೆ ದುಷ್ಕರ್ಮಿಗಳು ಹೊಂಚು ದಾಳಿ ನಡೆಸಿದ್ದು, ಓರ್ವ ಯೋಧ ಮೃತೊಟ್ಟಿದ್ದು, ಮೂವರು ಪೊಲೀಸರು ಗಾಯಗೊಂಡಿದ್ದಾರೆ. ಇಂದು ಬೆಳಗ್ಗೆ 9.40ರ ಸುಮಾರಿಗೆ ದಾಳಿ ನಡೆಸಿದ್ದಾರೆ. 20 ಬೆಟಾಲಿಯನ್ ಸಿಆರ್​ಪಿಎಫ್​ ಮತ್ತು ಜಿರಿಬಾಮ್ ಜಿಲ್ಲಾ ಪೊಲೀಸರ ಜಂಟಿ ತಂಡವು ಒಟ್ಟಾಗಿ ಕಾರ್ಯಾಚರಣೆಯಲ್ಲಿ ತೊಡಗಿತ್ತು. ಇದೇ ವೇಳೆ ಜಂಟಿ ತಂಡದ ಮೇಲೆ ದುಷ್ಕರ್ಮಿಗಳು ಹೊಂಚು ದಾಳಿ ನಡೆಸಿದ್ದರು.

ಮಣಿಪುರದಲ್ಲಿ ಸಿಆರ್​ಪಿಎಫ್​, ಪೊಲೀಸ್ ಜಂಟಿ ​ ಪಡೆಯ ಮೇಲೆ ಹೊಂಚು ದಾಳಿ, ಓರ್ವ ಯೋಧ ಹುತಾತ್ಮ
ಸಿಆರ್​ಪಿಎಫ್
Image Credit source: Aaj Tak

Updated on: Jul 14, 2024 | 2:57 PM

ಮಣಿಪುರದ ಜಿರಿಬಾಮ್​ನಲ್ಲಿ ಸಿಆರ್​ಪಿಎಫ್​, ಪೊಲೀಸರ ಜಂಟಿ ಪಡೆಯ ಮೇಲೆ ದುಷ್ಕರ್ಮಿಗಳು ಹೊಂಚು ದಾಳಿ ನಡೆಸಿದ್ದು, ಓರ್ವ ಯೋಧ ಮೃತೊಟ್ಟಿದ್ದು, ಮೂವರು ಪೊಲೀಸರು ಗಾಯಗೊಂಡಿದ್ದಾರೆ.
ಇಂದು ಬೆಳಗ್ಗೆ 9.40ರ ಸುಮಾರಿಗೆ ದಾಳಿ ನಡೆಸಿದ್ದಾರೆ. 20 ಬೆಟಾಲಿಯನ್ ಸಿಆರ್​ಪಿಎಫ್​ ಮತ್ತು ಜಿರಿಬಾಮ್ ಜಿಲ್ಲಾ ಪೊಲೀಸರ ಜಂಟಿ ತಂಡವು ಒಟ್ಟಾಗಿ ಕಾರ್ಯಾಚರಣೆಯಲ್ಲಿ ತೊಡಗಿತ್ತು. ಇದೇ ವೇಳೆ ಜಂಟಿ ತಂಡದ ಮೇಲೆ ದುಷ್ಕರ್ಮಿಗಳು ಹೊಂಚು ದಾಳಿ ನಡೆಸಿದ್ದರು.

ದಾಳಿಯ ವೇಳೆ ಮೂವರು ಪೊಲೀಸರು ಗಾಯಗೊಂಡಿದ್ದು, ಯೋಧರೊಬ್ಬರು ಸಾವನ್ನಪ್ಪಿದ್ದಾರೆ.
ಪೊಲೀಸ್ ವರದಿ ಪ್ರಕಾರ, ಜುಲೈ 13ರಂದು ನಡೆದ ಗುಂಡಿನ ದಾಳಿಗೆ ಸಬಂಧಿಸಿದಂತೆ ಶೋಧ ಕಾರ್ಯಾಚರಣೆ ನಡೆಸಲು ಜಂಟಿ ಭದ್ರತಾ ತಂಡವು ಜಿರಿಬಾಮ್ ಜಿಲ್ಲಾ ಪೊಲೀಸ್ ಠಾಣೆ ವ್ಯಾಪ್ತಿಯ ಮೊನಬಂಗ್ ಗ್ರಾಮದ ಬಳಿ ಹೋಗುತ್ತಿತ್ತು.

ದಾಳಿಯಲ್ಲಿ ಮೃತಪಟ್ಟ ಯೋಧ ಸಿಆರ್​ಪಿಎಫ್​ನ ಭಾಗವಾಗಿದ್ದರು. ಅವರನ್ನು ಬಿಹಾರದ ನಿವಾಸಿ ಅಜಯ್​ ಕುಮಾರ್​ ಝಾ ಎಂದು ಗುರುತಿಸಲಾಗಿದೆ.

ಮತ್ತಷ್ಟು ಓದಿ: ಮಣಿಪುರ: ಚುರಾಚಂದ್‌ಪುರ ಶಾಸಕರ ನಿವಾಸದ ಮೇಲೆ ಶಸ್ತ್ರಸಜ್ಜಿತ ದುಷ್ಕರ್ಮಿಗಳಿಂದ ಗುಂಡಿನ ದಾಳಿ

ಕಳೆದ ಹಲವು ತಿಂಗಳಿನಿಂದ ಮಣಿಪುರದಲ್ಲಿ ಹಿಂಸಾಚಾರದ ವಾತಾವರಣವಿದೆ. ಹಿಂಸಾಚಾರ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಇಲ್ಲಿ ಕುಕಿ ಹಾಗೂ ಮೈತಿ ಸಮುದಾಯಗಳ ನಡುವಿನ ಸಂಘರ್ಷ ಮುಂದುವರೆದಿದೆ.
ಏಪ್ರಿಲ್​ನಲ್ಲಿ ಎರಡು ಸಶಸ್ತ್ರ ಗುಂಪುಗಳ ನಡುವೆ ಗುಂಡಿನ ದಾಳಿ ನಡೆದಿದೆ.

ಇಂಫಾಲ್​ ಪೂರ್ವದ ಕಾಂಗ್​ಪೋಕ್ಷಿ, ಉಖ್ರುಲ್ ಮತ್ತು ಟ್ರೈಜಂಕ್ಷನ್ ಜಿಲ್ಲೆಗಳಲ್ಲಿ ದುಷ್ಕರ್ಮಿಗಳು ಪರಸ್ಪರ ಗುಂಡು ಹಾರಿಸಿದ್ದಾರೆ. ಗುಂಡಿನ ದಾಳಿಯಲ್ಲಿ ಕುಕಿ ಸಮುದಾಯದ ಇಬ್ಬರು ಸಾವನ್ನಪ್ಪಿದ್ದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

 

ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Loading...
Unable to load recommendations.
Follow Us