ಛತ್ತೀಸ್​ಗಢದಲ್ಲಿ ನಕ್ಸಲರೊಂದಿಗೆ ಗುಂಡಿನ ಚಕಮಕಿ; ಸಿಆರ್​ಪಿಎಫ್ ಅಧಿಕಾರಿ ಹುತಾತ್ಮ, ಇನ್ನೋರ್ವ ಯೋಧನ ಸ್ಥಿತಿ ಗಂಭೀರ

ನಕ್ಸಲರ ವಿರುದ್ಧದ ಕಾರ್ಯಾಚರಣೆಯಲ್ಲಿ ಯೋಧನಿಗೆ ಬುಲೆಟ್​ನಿಂದ ಗಾಯಗಳಾಗಿದ್ದು, ನಂತರ ಅವರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಛತ್ತೀಸ್​ಗಢದಲ್ಲಿ ನಕ್ಸಲರೊಂದಿಗೆ ಗುಂಡಿನ ಚಕಮಕಿ; ಸಿಆರ್​ಪಿಎಫ್ ಅಧಿಕಾರಿ ಹುತಾತ್ಮ, ಇನ್ನೋರ್ವ ಯೋಧನ ಸ್ಥಿತಿ ಗಂಭೀರ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ಸುಷ್ಮಾ ಚಕ್ರೆ

Updated on:Feb 12, 2022 | 2:32 PM

ಛತ್ತೀಸ್​ಗಢ: ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಮತ್ತು ನಕ್ಸಲರ  (Naxal Encounter) ನಡುವೆ ಇಂದು ನಡೆದ ಎನ್‌ಕೌಂಟರ್‌ನಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (ಸಿಆರ್‌ಪಿಎಫ್) ಒಬ್ಬ ಸಿಬ್ಬಂದಿ ಹುತಾತ್ಮರಾಗಿದ್ದಾರೆ. ಮಾಹಿತಿ ಪ್ರಕಾರ, ಮೃತ ಸಿಬ್ಬಂದಿ ಸಿಆರ್‌ಪಿಎಫ್ (CRPF) 168 ಬೆಟಾಲಿಯನ್‌ನ ಸಹಾಯಕ ಕಮಾಂಡೆಂಟ್ ಆಗಿದ್ದರು. ಅವರನ್ನು ಎಸ್.ಬಿ ಟಿರ್ಕಿ ಎಂದು ಗುರುತಿಸಲಾಗಿದೆ. ಅಪ್ಪಾ ರಾವ್‌ ಎಂಬ ಯೋಧರಿಗೆ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 

ನಕ್ಸಲರ ವಿರುದ್ಧದ ಕಾರ್ಯಾಚರಣೆಯಲ್ಲಿ ಯೋಧನಿಗೆ ಬುಲೆಟ್​ನಿಂದ ಗಾಯಗಳಾಗಿದ್ದು, ನಂತರ ಅವರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಛತ್ತೀಸ್​ಗಢದ ರಾಜಧಾನಿ ರಾಯ್‌ಪುರದಿಂದ ಸುಮಾರು 440 ಕಿಮೀ ದೂರದಲ್ಲಿರುವ ಪ್ರದೇಶದಲ್ಲಿ ಕೂಂಬಿಂಗ್ ಕಾರ್ಯಾಚರಣೆ ನಡೆಯುತ್ತಿದೆ.

ಬಿಜಾಪುರದ ಬಸಗುಡ ಪೊಲೀಸ್ ಠಾಣಾ ವ್ಯಾಪ್ತಿಯ ಪುಟ್ಕೆಲ್ ಅರಣ್ಯದಲ್ಲಿ ಅಧಿಕಾರಿಗಳು ರಸ್ತೆ ತೆರೆಯುವಿಕೆ ಮತ್ತು ನೈರ್ಮಲ್ಯ ಕರ್ತವ್ಯಕ್ಕಾಗಿ ಗಸ್ತು ತಿರುಗುವ ತಂಡ ಅರಣ್ಯವನ್ನು ಸುತ್ತುವರೆದಾಗ ಈ ಎನ್‌ಕೌಂಟರ್ ನಡೆದಿದೆ. ಗುಂಡಿನ ದಾಳಿಯಲ್ಲಿ ಮತ್ತೋರ್ವ ಯೋಧ ಗಾಯಗೊಂಡಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.

ಇಂದು ಬಿಜಾಪುರ ಜಿಲ್ಲೆಯಲ್ಲಿ ನಕ್ಸಲರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಅಧಿಕಾರಿಯೊಬ್ಬರು ಸಾವನ್ನಪ್ಪಿದ್ದಾರೆ ಮತ್ತು ಸೈನಿಕರೊಬ್ಬರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ. ಸಿಆರ್‌ಪಿಎಫ್‌ನ 168ನೇ ಬೆಟಾಲಿಯನ್‌ನ ತಂಡವೊಂದು ರಸ್ತೆ ಭದ್ರತಾ ಕಾರ್ಯದಲ್ಲಿ ನಿರತರಾಗಿದ್ದಾಗ ಬಸಗುಡ ಪೊಲೀಸ್ ಠಾಣಾ ವ್ಯಾಪ್ತಿಯ ಪುಟ್ಕೆಲ್ ಗ್ರಾಮದ ಸಮೀಪವಿರುವ ನದಿಯ ಬಳಿ ಇಂದು ಬೆಳಗ್ಗೆ 9.30ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಪೊಲೀಸ್ ಮಹಾನಿರೀಕ್ಷಕ (ಬಸ್ತರ್ ರೇಂಜ್) ಪಿ. ಸುಂದರರಾಜ್ ಪಿಟಿಐಗೆ ತಿಳಿಸಿದ್ದಾರೆ.

ಇದನ್ನೂ ಓದಿ: ಶೋಪಿಯಾನ್​ನಲ್ಲಿ ಎನ್​ಕೌಂಟರ್​​; ಇಬ್ಬರು ಭಯೋತ್ಪಾದಕರನ್ನು ಹತ್ಯೆ ಮಾಡಿದ ಭದ್ರತಾ ಪಡೆ

ಛತ್ತೀಸ್​ಗಢ್​​ನಲ್ಲಿ ಎನ್​ಕೌಂಟರ್​; ಪ್ರಮುಖ ಮಾವೋವಾದಿ ನಾಯಕನೊಬ್ಬನ ಹತ್ಯೆ

Published On - 2:29 pm, Sat, 12 February 22