ವೈಚಾರಿಕ ಚರ್ಚೆಗೆ ಇವತ್ತಿಗೂ ನಾನು ಸಿದ್ಧನಿದ್ದೇನೆ: ಸಿ ಟಿ ರವಿ ಹೇಳಿಕೆ

CT Ravi: ಆರ್​ಎಸ್​ಎಸ್​​ ಭಯೋತ್ಪಾದನೆಗೆ ಬೆಂಬಲವನ್ನು ಕೊಟ್ಟಿಲ್ಲ. ನಾನು ರಾಷ್ಟ್ರಭಕ್ತನಾಗುತ್ತೇನೆ ಹೊರತು ಗುಲಾಮನಾಗಲ್ಲ. ನಾನು ಕುಟುಂಬದ ಗುಲಾಮನಾಗುವುದಿಲ್ಲ ಎಂದು ಸಿ.ಟಿ. ರವಿ ಹೇಳಿದ್ದಾರೆ.

ವೈಚಾರಿಕ ಚರ್ಚೆಗೆ ಇವತ್ತಿಗೂ ನಾನು ಸಿದ್ಧನಿದ್ದೇನೆ: ಸಿ ಟಿ ರವಿ ಹೇಳಿಕೆ
ಸಿ.ಟಿ. ರವಿ
Edited By:

Updated on: Aug 21, 2021 | 6:44 PM

ದೆಹಲಿ: ನಾನು ಜವಾಹರ್​​ ಲಾಲ್​​ ನೆಹರು ಚಾರಿತ್ರ್ಯ ಹರಣ ಮಾಡಿಲ್ಲ. ಪ್ರಧಾನಿ ಮೋದಿ ಹೆಸರು ಶೌಚಾಲಯಕ್ಕೆ ಇಡಿ ಅಂತಾರೆ. ನರೇಂದ್ರ ಮೋದಿ ಹೆಸರಿಡುವುದು ಅಗೌರವ ಅಂತ ನಾನು ಹೇಳಲ್ಲ. 217 ಯೋಜನೆಗಳಿಗೆ ಒಂದು ಕುಟುಂಬದ ಹೆಸರಿಟ್ಟಿದ್ದಾರೆ. ಆ ಕುಟುಂಬದ ಕೊಡುಗೆ ಇಲ್ಲವೆಂದು ಹೇಳಲ್ಲ. ಆದರೆ, ಒಂದು ಕುಟುಂಬದಿಂದ ಅನೇಕ ತಪ್ಪುಗಳಾಗಿವೆ ಎಂದು ದೆಹಲಿಯಲ್ಲಿ ಬಿಜೆಪಿ ನಾಯಕ ಸಿ.ಟಿ ರವಿ ಹೇಳಿದ್ದಾರೆ. ವೈಚಾರಿಕ ಚರ್ಚೆಗೆ ಇವತ್ತಿಗೂ ನಾನು ಸಿದ್ಧನಿದ್ದೇನೆ ಎಂದು ಸಿ.ಟಿ ರವಿ ತಿಳಿಸಿದ್ದಾರೆ.

ನೆಹರು, ಮಹಾತ್ಮ ಗಾಂಧೀಜಿಯ ವಿಚಾರಗಳು ತದ್ವಿರುದ್ಧ ಆಗಿದೆ. ನನ್ನ ವಿರುದ್ಧ 21 ಕಾಂಗ್ರೆಸ್ ನಾಯಕರು ಅವಾಚ್ಯ ಶಬ್ದ ಬಳಸಿದ್ದಾರೆ. ಆರ್​ಎಸ್​ಎಸ್​ನ್ನು​ ಭಯೋತ್ಪಾದಕ ಸಂಘಟನೆಗೆ ಹೋಲಿಸಲಾಗುತ್ತಿದೆ. ಆರ್​ಎಸ್​ಎಸ್​​ ಭಯೋತ್ಪಾದನೆಗೆ ಬೆಂಬಲವನ್ನು ಕೊಟ್ಟಿಲ್ಲ. ನಾನು ರಾಷ್ಟ್ರಭಕ್ತನಾಗುತ್ತೇನೆ ಹೊರತು ಗುಲಾಮನಾಗಲ್ಲ. ನಾನು ಕುಟುಂಬದ ಗುಲಾಮನಾಗುವುದಿಲ್ಲ ಎಂದು ಸಿ.ಟಿ. ರವಿ ಹೇಳಿದ್ದಾರೆ.

ರಾಷ್ಟ್ರಭಕ್ತರಿಗೂ, ಭಯೋತ್ಪಾದಕರಿಗೂ ವ್ಯತ್ಯಾಸ ಗೊತ್ತಿಲ್ಲ. ವ್ಯತ್ಯಾಸ ಗೊತ್ತಿರದ ಮಾನಸಿಕ ಅಸ್ವಸ್ಥರು ಕಾಂಗ್ರೆಸ್​ನವರು. ಸಾವಿರ ಕೋಟಿ ಒಡೆಯ ಎಂದು ನನ್ನ ಮೇಲೆ‌ ಆರೋಪ ಮಾಡುತ್ತಾರೆ. ಆರೋಪ ಸಾಬೀತು ಮಾಡಿ ನಾನು ವಾಪಸ್ ಕೊಡುತ್ತೇನೆ ಎಂದು ನವದೆಹಲಿಯಲ್ಲಿ ಬಿಜೆಪಿ ನಾಯಕ ಸಿ.ಟಿ. ರವಿ ತಿಳಿಸಿದ್ದಾರೆ. ಕಾಂಗ್ರೆಸೇತರರೂ ಸ್ವಾತಂತ್ರ್ಯ ಹೋರಟ ಮಾಡಿದ್ದಾರೆ. ಕಾಂಗ್ರೆಸ್ ಹುಟ್ಟುಹಾಕಿದ್ದು ಭಾರತೀಯರಲ್ಲ. ನಾನು ರಾಷ್ಟ್ರಭಕ್ತನಾಗುತ್ತೇಯೇ ಹೊರತು ಕುಟುಂಬ ಗುಲಾಮನಾಗಲ್ಲ ಎಂದು ಅವರು ಹೇಳಿದ್ದಾರೆ.

YouTube video player

ಇದನ್ನೂ ಓದಿ: ಹತ್ತು ದಿನಗಳ ಕಾಲ ಪ್ರಕೃತಿ ಚಿಕಿತ್ಸೆಗೆ ಹೋಗ್ತಿದ್ದೇನೆ: ಮಾಜಿ ಸಿಎಂ ಸಿದ್ದರಾಮಯ್ಯ, ಸಿಟಿ ರವಿ ಬಗ್ಗೆ ಟೀಕೆ

ಸಿಟಿ ರವಿ ನೆನಪಾದವರನ್ನು, ಅಡ್ಡ ಸಿಕ್ಕವರನ್ನು ಕಚ್ತಾ ಕಚ್ತಾ ಬರ್ತಾರೆ: ಬಿಜೆಪಿ ಶಾಸಕ ಎಂಪಿ ಕುಮಾರಸ್ವಾಮಿ ಟಾಂಗ್

TV9 Web

TV9 Kannada

Read More
Loading...
Unable to load recommendations.
Follow Us