ಚೆನ್ನೈ: ತಮಿಳುನಾಡಿನ ಮಾಮಲ್ಲಪುರಂ ಕರಾವಳಿಯನ್ನು ದಾಟಿರುವ ಮಾಂಡೌಸ್ ಚಂಡಮಾರುತ (Mandous Cyclone) ಚೆನ್ನೈ ಮತ್ತು ಅದರ ನೆರೆಹೊರೆಯಲ್ಲಿ ಹಾನಿಯನ್ನು ಉಂಟುಮಾಡಿದೆ. ಚೆನ್ನೈನಲ್ಲಿ ಮಳೆ (Chennai Rains) ಸಂಬಂಧಿತ ಘಟನೆಗಳಿಂದ ಇಬ್ಬರು ಮತ್ತು ಕಾಂಚೀಪುರಂನಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ವರದಿಗಳ ಪ್ರಕಾರ, ಚೆನ್ನೈ ಮೂಲದ ಮೃತರನ್ನು ಲಕ್ಷ್ಮಿ (45) ಮತ್ತು ರಾಜೇಂದ್ರನ್ (25) ಎಂದು ಗುರುತಿಸಲಾಗಿದೆ. ಭೂಕುಸಿತದ ಸಮಯದಲ್ಲಿ ವಿದ್ಯುತ್ ತಂತಿಗೆ ಸಿಲುಕಿ ಅವರಿಬ್ಬರೂ ಸಾವನ್ನಪ್ಪಿದ್ದಾರೆ.
ಭಾರೀ ಗಾಳಿಯಿಂದಾಗಿ ಚೆನ್ನೈನಲ್ಲಿ ಸುಮಾರು 400 ಮರಗಳು ಧರೆಗುರುಳಿವೆ. ಚೆನ್ನೈನ ಹಲವು ಭಾಗಗಳಲ್ಲಿ ವಿದ್ಯುತ್ ವ್ಯತ್ಯಯವೂ ವರದಿಯಾಗಿದೆ. ಚೆನ್ನೈನಲ್ಲಿ 205 ಪರಿಹಾರ ಕೇಂದ್ರಗಳಲ್ಲಿ 9,000ಕ್ಕೂ ಹೆಚ್ಚು ಜನರನ್ನು ಇರಿಸಲಾಗಿದೆ. 5 ಕಡೆ ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದು, ಮೂರನ್ನು ತೆರವುಗೊಳಿಸಲಾಗಿದೆ. ಚಂಡಮಾರುತದಿಂದಾಗಿ ತಮಿಳುನಾಡಿನ ತಿರುವಳ್ಳೂರು, ಚೆನ್ನೈ, ಕಾಂಚೀಪುರಂ, ಚೆಂಗಲ್ಪಟ್ಟು, ರಾಣಿಪೆಟ್ಟೈ, ವೆಲ್ಲೂರು, ತಿರುಪತ್ತೂರ್, ತಿರುವಣ್ಣಾಮಲೈ, ಕೃಷ್ಣಗಿರಿ ಮತ್ತು ಧರ್ಮಪುರಿ ಸೇರಿದಂತೆ ಹಲವೆಡೆ ಇಂದು ಭಾರೀ ಮಳೆಯಾಗುವ ನಿರೀಕ್ಷೆಯಿದೆ. ನೀಲಗಿರಿ, ಈರೋಡ್, ಸೇಲಂ, ಕಲ್ಲಕುರಿಚಿ ಮತ್ತು ವಿಲ್ಲುಪುರಂನಲ್ಲಿ ಕೂಡ ವ್ಯಾಪಕ ಮಳೆಯಾಗುವ ನಿರೀಕ್ಷೆಯಿದೆ.
I inspected the affected areas. Corporation workers have worked very well. 4 people have lost their lives in this heavy rainfall. 98 cattle died too. 151 houses and huts got damaged, other damages are being calculated. In Chennai 400 trees uprooted: Tamil Nadu CM#CycloneMandous pic.twitter.com/h1RrjtBEdO
— ANI (@ANI) December 10, 2022
ಇದನ್ನೂ ಓದಿ: Cyclone Mandous: ಮಾಂಡೌಸ್ ಚಂಡಮಾರುತದ ಅಬ್ಬರ; ತಮಿಳುನಾಡಿನಲ್ಲಿ ಬಿರುಗಾಳಿ ಸಹಿತ ಮಳೆ, ಭೂಕುಸಿತ
ಚಂಡಮಾರುತಕ್ಕೆ ಸಿದ್ಧವಾಗಲು 476 ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ಸಿಬ್ಬಂದಿಗಳನ್ನು ಒಳಗೊಂಡ 14 ಗುಂಪುಗಳನ್ನು 10 ಜಿಲ್ಲೆಗಳಲ್ಲಿ ನಿಯೋಜಿಸಲಾಗಿದೆ. ನಾಗಪಟ್ಟಣಂ, ತಂಜಾವೂರು, ತಿರುವರೂರ್, ಕಡಲೂರು, ಮೈಲಾದುರೈ, ಚನ್ನೈ, ಕಂಚೆಪಟ್ಟುಪುರಂ, ಚೆನ್ನೈ, ತಿರುವಳ್ಳೂರು ವಿಲ್ಲುಪುರಂ ಜಿಲ್ಲೆಗಳಲ್ಲಿ ರಕ್ಷಣಾ ಪಡೆ ಸಿದ್ಧವಾಗಿವೆ.
#WATCH | Heavy rains with strong winds in Pattinapakkam area of Chennai as landfall process of cyclone #Mandous begins. pic.twitter.com/tVFN7nbPYH
— ANI (@ANI) December 9, 2022
ಮಾಂಡೌಸ್ ಚಂಡಮಾರುತವು ಶುಕ್ರವಾರ ರಾತ್ರಿ 11.30ಕ್ಕೆ ಮಾಮಲ್ಲಪುರಂನ ಆಗ್ನೇಯಕ್ಕೆ ಸುಮಾರು 15 ಕಿಮೀ ದೂರದಲ್ಲಿ ಉಂಟಾಗಿದೆ. ಮಾಂಡೌಸ್ ಚಂಡಮಾರುತದಿಂದ ಮಾಮಲ್ಲಪುರಂನಲ್ಲಿ ಭೂಕುಸಿತವಾದ ನಂತರ ಚೆನ್ನೈನ ಹಲವಾರು ಭಾಗಗಳಲ್ಲಿ ಭಾರೀ ಮಳೆ ಮತ್ತು ಬಿರುಗಾಳಿ ಶುರುವಾಗಿದೆ. ಚೆನ್ನೈನಲ್ಲಿ ಭಾರೀ ಮಳೆ ಸುರಿಯುತ್ತಿರುವುದರಿಂದ ಪಟ್ನಂಪಕ್ಕಂ ಕೂಡ ಜಲಾವೃತವಾಗಿದೆ. ಮಾಂಡೌಸ್ ಚಂಡಮಾರುತದ ಹಿನ್ನೆಲೆಯಲ್ಲಿ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪರಿಸ್ಥಿತಿ ಎಷ್ಟೇ ಕೆಟ್ಟದಾಗಿದ್ದರೂ ಜನರ ಸುರಕ್ಷತೆಗಾಗಿ ಸರ್ಕಾರ ಎಲ್ಲ ಕ್ರಮಗಳನ್ನೂ ಕೈಗೊಳ್ಳಲಿದೆ. ಜಿಲ್ಲಾವಾರು ಚಂಡಮಾರುತದ ಮೇಲ್ವಿಚಾರಣೆ ಕೂಡ ನಡೆಸಲಾಗುತ್ತಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಹೇಳಿದ್ದಾರೆ.
ಇದನ್ನೂ ಓದಿ: Bengaluru Rain: ಮಾಂಡೌಸ್ ಚಂಡಮಾರುತದ ಎಫೆಕ್ಟ್; ಬೆಂಗಳೂರಿನಲ್ಲಿ ಮುಂಜಾನೆಯಿಂದಲೇ ತುಂತುರು ಮಳೆ, ಮೈ ಕೊರೆವ ಚಳಿ
ಮಾಂಡೌಸ್ ಚಂಡಮಾರುತವು ಇಂದು ಪುದುಚೇರಿ ಮತ್ತು ಶ್ರೀಹರಿಕೋಟಾವನ್ನು ದಾಟುವ ನಿರೀಕ್ಷೆಯಿರುವುದರಿಂದ ಶುಕ್ರವಾರ ಪುದುಚೇರಿಯಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಯಾಗಿದೆ. ತಮಿಳುನಾಡಿನ ದಿಂಡುಗಲ್ ಜಿಲ್ಲಾಧಿಕಾರಿ ಸಿರುಮಲೈ ಮತ್ತು ಕೊಡೈಕೆನಾಲ್‌ನ ಶಾಲಾ-ಕಾಲೇಜುಗಳಿಗೆ ಇಂದು ರಜೆ ಘೋಷಿಸಿದ್ದಾರೆ. ಚೆನ್ನೈ ಸಂಚಾರ ಪೊಲೀಸರು ಅಕ್ಕರೈ ಮತ್ತು ಕೋವಲಂ ನಡುವಿನ ಪೂರ್ವ ಕರಾವಳಿ ರಸ್ತೆಯಲ್ಲಿ ಈ ಪ್ರದೇಶದಲ್ಲಿ ವಾಸಿಸುವ ನಿವಾಸಿಗಳು ಮತ್ತು ತುರ್ತು ಸೇವೆಗಳ ವಾಹನಗಳನ್ನು ಹೊರತುಪಡಿಸಿ ಮುಂದಿನ ಸೂಚನೆ ಬರುವವರೆಗೆ ಸಂಚಾರವನ್ನು ನಿರ್ಬಂಧಿಸಿದ್ದಾರೆ.
#CycloneMandous | A large tree uprooted in Nungambakkam area of Chennai due to strong winds. Visuals from 4th Lane Nungambakkam High Road. #TamilNadu pic.twitter.com/hgCOu068cu
— ANI (@ANI) December 10, 2022
ಗಾಳಿಯ ವೇಗ ಗಂಟೆಗೆ ಸುಮಾರು 14 ಕಿಮೀ ಇರಲಿದೆ. ಚೆನ್ನೈ ಮತ್ತು ಹತ್ತಿರದ ಪ್ರದೇಶಗಳಲ್ಲಿ ಈಗಾಗಲೇ ಗಂಟೆಗೆ 50-60 ಕಿಮೀ ವೇಗದಲ್ಲಿ ಬಲವಾದ ಗಾಳಿ ಪ್ರಾರಂಭವಾಗಿದೆ. ಭೂಕುಸಿತ ಪ್ರಕ್ರಿಯೆ ಕೂಡ ಪ್ರಾರಂಭವಾಗಿದೆ. ಮಳೆ ಮತ್ತು ಹೆಚ್ಚಿನ ವೇಗದ ಗಾಳಿಯು ಮುಂದುವರಿಯುತ್ತದೆ. ಈ ಹಿಂದೆ ಮಾಂಡೌಸ್ ಚಂಡಮಾರುತದ ಹಿನ್ನೆಲೆಯಲ್ಲಿ ಗರಿಷ್ಠ ಗಾಳಿಯ ವೇಗ ಗಂಟೆಗೆ 85 ಕಿಮೀ ದಾಟಬಹುದು ಎಂದು IMD ಊಹಿಸಿತ್ತು. ಹಾಗೇ, ರೆಡ್ ಅಲರ್ಟ್ ಘೋಷಿಸಿತ್ತು.