Ayodhya Deepotsav 2021: ಅಯೋಧ್ಯೆಯಲ್ಲಿ ದೀಪೋತ್ಸವ ಸಂಭ್ರಮ; ಸರಯೂ ನದಿ ತಟದಲ್ಲಿ ಬೆಳಗಲಿವೆ 9 ಲಕ್ಷ ಹಣತೆಗಳು

ಅಯೋಧ್ಯೆಯಲ್ಲಿ ದೀಪೋತ್ಸವ ನಿಮಿತ್ತ ಇಂದು ಶೋಭಾ ಯಾತ್ರೆ ಶುರುವಾಗಿದ್ದು ಉತ್ತರಪ್ರದೇಶ ಉಪಮುಖ್ಯಮಂತ್ರಿ ದಿನೇಶ್​ ಶರ್ಮಾ ಚಾಲನೆ ನೀಡಿದ್ದಾರೆ. ಅವಧ್​ ಯೂನಿರ್ವಸಿಟಿಯ ವಿದ್ಯಾರ್ಥಿಗಳು ಅಯೋಧ್ಯೆಯಲ್ಲಿ ರಂಗೋಲಿಗಳನ್ನು ಹಾಕಿ ಸಂಭ್ರಮಿಸಿದ್ದಾರೆ.

Ayodhya Deepotsav 2021: ಅಯೋಧ್ಯೆಯಲ್ಲಿ ದೀಪೋತ್ಸವ ಸಂಭ್ರಮ; ಸರಯೂ ನದಿ ತಟದಲ್ಲಿ ಬೆಳಗಲಿವೆ 9 ಲಕ್ಷ ಹಣತೆಗಳು
ದೀಪೋತ್ಸವಕ್ಕೆ ಆಗಮಿಸಿದ ರಾಮ-ಲಕ್ಷ್ಮಣ ಸೀತಾ ಪಾತ್ರಧಾರಿಗಳನ್ನು ಸ್ವಾಗತಿಸಿದ ಯೋಗಿ ಆದಿತ್ಯನಾಥ್​
Follow us
TV9 Web
| Updated By: Lakshmi Hegde

Updated on: Nov 03, 2021 | 4:41 PM

ದೀಪಾವಳಿ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ದೀಪೋತ್ಸವದ ಸಂಭ್ರಮ ಶುರುವಾಗಿದ್ದು, ಅದ್ದೂರಿಯಾಗಿ ಚಾಲನೆ ಸಿಕ್ಕಿದೆ.  ಈ ಬಾರಿ ರಾಜ್ಯದಲ್ಲಿ ಒಟ್ಟು 12 ಲಕ್ಷ ಹಣತೆಗಳನ್ನು ಬೆಳಗಲು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರ ಸಿದ್ಧವಾಗಿದ್ದು, ಅದರಲ್ಲಿ 9 ಲಕ್ಷ ಮಣ್ಣಿನ ದೀಪಗಳನ್ನು ಸರಯೂ ನದಿ ತಟದಲ್ಲಿ ಬೆಳಗಲಾಗುವುದು ಎಂದು ಸರ್ಕಾರವೇ ಮಾಹಿತಿ ನೀಡಿದೆ. ಈ ಮೂಲಕ ಕಳೆದ ದೀಪಾವಳಿಗಿಂತಲೂ ಹೆಚ್ಚಿನ ದೀಪಗಳನ್ನು ಈ ಬಾರಿ ಹಚ್ಚಲಾಗುತ್ತಿದೆ.  

ದೀಪೋತ್ಸವ ನಿಮಿತ್ತ ಅಯೋಧ್ಯೆಯಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಪಟ್ಟಣದ ಹೊರವಲಯದಿಂದ ಒಳಗಿನ ವೃತ್ತದವರೆಗೆ ಒಟ್ಟು ಏಳುಹಂತದ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದೆ. ವಿಶೇಷ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ. ಅದರ ಹೊರತಾಗಿ ಕೂಡ ಪೊಲೀಸರು ಮಾರುವೇಷದಲ್ಲಿ ಅಂದರೆ ಸಮವಸ್ತ್ರವಿಲ್ಲದೆ ಅಯೋಧ್ಯೆಯಲ್ಲಿ ಗಸ್ತು ತಿರುಗುತ್ತಿದ್ದಾರೆ.  ಈ ಬಗ್ಗೆ ಅಯೋಧ್ಯೆ ಎಸ್​ಎಸ್​ಪಿ ಶೈಲೇಶ್​ ಪಾಂಡೆ ಮಾಹಿತಿ ನೀಡಿದ್ದಾರೆ.  ಕಳೆದ ವರ್ಷ ಒಟ್ಟು 5,84,572 ಹಣತೆಗಳನ್ನು ಸರಯೂ ನದಿ ತಟದಲ್ಲಿ ಬೆಳಗಲಾಗಿತ್ತು. ಅದು ಗಿನ್ನೀಸ್​ ದಾಖಲೆ ನಿರ್ಮಿಸಿತ್ತು. ಆದರೆ ಈ ಬಾರಿ ಆ ದಾಖಲೆಯನ್ನೂ ಮುರಿಯಲಾಗುತ್ತಿದೆ.

ಅಯೋದ್ಯೆಯಲ್ಲಿ ದೀಪೋತ್ಸವ ನಿಮಿತ್ತ ಶ್ರೀರಾಮಾಯಣ ಕಥೆಯನ್ನು ಪ್ರಸ್ತುತಪಡಿಸಲಾಗುವುದು. ತನ್ನಿಮಿತ್ತ ಭಗವಾನ್​ ರಾಮ, ಲಕ್ಷ್ಮಣ, ಸೀತಾ ದೇವಿ ಪಾತ್ರಧಾರಿಗಳು ಹೆಲಿಕಾಪ್ಟರ್​ ಮೂಲಕ ಅಯೋಧ್ಯೆಗೆ ಆಗಮಿಸಿದ್ದಾರೆ. ಈಗಾಗಲೇ ಇಲ್ಲಿಗೆ ಆಗಮಿಸಿರುವ ಸಿಎಂ ಆದಿತ್ಯನಾಥ್​, ಪಾತ್ರಧಾರಿಗಳಿಗೆ ಮಾಲಾರ್ಪಣೆ ಮಾಡಿ ಸ್ವಾಗತಿಸಿದ್ದಾರೆ. ಹಾಗೇ ದೀಪೋತ್ಸವದ ಎಲ್ಲ ಸಿದ್ಧತೆಗಳನ್ನೂ ಪರಿಶೀಲನೆ ನಡೆಸಿದ್ದಾರೆ.

ಹಾಗೇ, ಅಯೋಧ್ಯೆಯಲ್ಲಿ ದೀಪೋತ್ಸವ ನಿಮಿತ್ತ ಇಂದು ಶೋಭಾ ಯಾತ್ರೆ ಶುರುವಾಗಿದ್ದು ಉತ್ತರಪ್ರದೇಶ ಉಪಮುಖ್ಯಮಂತ್ರಿ ದಿನೇಶ್​ ಶರ್ಮಾ ಚಾಲನೆ ನೀಡಿದ್ದಾರೆ. ಅವಧ್​ ಯೂನಿರ್ವಸಿಟಿಯ ವಿದ್ಯಾರ್ಥಿಗಳು ಅಯೋಧ್ಯೆಯಲ್ಲಿ ರಂಗೋಲಿಗಳನ್ನು ಹಾಕಿ ಸಂಭ್ರಮಿಸಿದ್ದಾರೆ.  ಅದಕ್ಕೂ ಪೂರ್ವ  ಸಾರ್ವಜನಿಕ ಪ್ರತಿನಿಧಿಗಳು ಮತ್ತು ಅಧಿಕಾರಿಗಳೊಂದಿಗೆ ಮಾತನಾಡಿದ ಸಿಎಂ ಯೋಗಿ, ಈ ಬಾರಿ ಬಡಕುಟುಂಬದವರೊಂದಿಗೆ ಹಬ್ಬ ಆಚರಣೆ ಮಾಡುವಂತೆ ಕರೆ ನೀಡಿದ್ದಾರೆ. ಬಡಕುಟುಂಬಗಳಿಗೂ ಸಿಹಿ, ಹಂಚಿ ಅವರೊಂದಿಗೆ ದೀಪ ಬೆಳಗಿ ಎಂದು ಹೇಳಿದ್ದರು.

ಇದನ್ನೂ ಓದಿ: ಫಿಸಿಯೊಥೆರಪಿಗೆ ಬಂದಾಗ ಪುನೀತ್ ರಾಜಕುಮಾರ್​ಗೆ ಹೃದಯಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆ ಇರಲಿಲ: ಪಳನಿವೇಲ್, ಫಿಸಿಯೊಥೆರಪಿಸ್ಟ್