AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೆಹಲಿಯಲ್ಲಿ 13 ಅಕ್ರಮ ಐಎಎಸ್​ ತರಬೇತಿ ಕೇಂದ್ರಗಳಿಗೆ ಬೀಗ

ದೆಹಲಿಯ ಐಎಎಸ್ ಸ್ಟಡಿ ಸರ್ಕಲ್‌ ಕಟ್ಟಡದ ನೆಲಮಾಳಿಗೆಯಲ್ಲಿ ಪ್ರವಾಹದ ನೀರಿನಲ್ಲಿ ಸಿಲುಕಿ ಮೂವರು ವಿದ್ಯಾರ್ಥಿಗಳು ಸಾವನ್ನಪ್ಪಿದ ಬೆನ್ನಲ್ಲೇ ದೆಹಲಿ ಮುನ್ಸಿಪಾಲಿಟಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಅಕ್ರಮವಾಗಿ ನಡೆಸುತ್ತಿದ್ದ 13 ಕೋಚಿಂಗ್ ಸೆಂಟರ್​ಗಳನ್ನು ಅಧಿಕಾರಿಗಳು ಬಂದ್‌ ಮಾಡಿದ್ದಾರೆ. ನಿಯಮಾವಳಿಗೆ ವಿರುದ್ಧವಾಗಿ ತರಬೇತಿ ಕೇಂದ್ರಗಳನ್ನು ನಡೆಸುತ್ತಿರುವುದು ಕಂಡುಬಂದಿದ್ದು, ನೋಟಿಸ್‌ ನೀಡಿ ಕ್ರಮ ಕೈಗೊಳ್ಳಲಾಗಿದೆ.

ದೆಹಲಿಯಲ್ಲಿ 13 ಅಕ್ರಮ ಐಎಎಸ್​ ತರಬೇತಿ ಕೇಂದ್ರಗಳಿಗೆ ಬೀಗ
ಐಎಎಸ್​ ತರಬೇತಿ ಕೇಂದ್ರ
ನಯನಾ ರಾಜೀವ್
|

Updated on: Jul 29, 2024 | 9:59 AM

Share

ಕಳೆದ ಎರಡು ದಿನಗಳ ಹಿಂದಷ್ಟೇ ಐಎಎಸ್​ ತರಬೇತಿ ಕೇಂದ್ರದೊಳಗೆ ನೀರು ನುಗ್ಗಿ ಮೂವರು ಐಎಎಸ್​ ಆಕ್ಷಾಂಕ್ಷಿಗಳು ಮೃತಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ದೆಹಲಿಯಲ್ಲಿರುವ ಎಲ್ಲಾ ಅಕ್ರಮ ತರಬೇತಿ ಕೇಂದ್ರಗಳ ಮೇಲೆ ಕಣ್ಣಿಟ್ಟಿದ್ದು, ಈಗಾಗಲೇ 13 ಕೇಂದ್ರಗಳಿಗೆ ಬೀಗ ಹಾಕಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ರಾವು ಅವರ ಐಎಎಸ್ ಸ್ಟಡಿ ಸರ್ಕಲ್‌ನ ನೆಲಮಾಳಿಗೆಯಲ್ಲಿ ಇದ್ದಕ್ಕಿದ್ದಂತೆ ನೀರು ನುಗ್ಗಿ ಮೂವರು ವಿದ್ಯಾರ್ಥಿಗಳಾದ ತಾನಿಯಾ ಸೋನಿ, ಶ್ರೇಯಾ ಯಾದವ್ ಮತ್ತು ನವೀನ್ ಡೆಲ್ವಿನ್ ಸಾವನ್ನಪ್ಪಿದ್ದಾರೆ.

ಸೀಲ್ ಮಾಡಲಾದ ಕೋಚಿಂಗ್ ಸೆಂಟರ್‌ಗಳಲ್ಲಿ ಐಎಎಸ್ ಗುರುಕುಲ, ಚಾಹಲ್ ಅಕಾಡೆಮಿ, ಪ್ಲುಟಸ್ ಅಕಾಡೆಮಿ, ಸಾಯಿ ಟ್ರೇಡಿಂಗ್, ಐಎಎಸ್ ಸೇತು, ಟಾಪರ್ಸ್ ಅಕಾಡೆಮಿ, ದೈನಿಕ್ ಸಂವಾದ್, ಸಿವಿಲ್ಸ್ ಡೈಲಿ ಐಎಎಸ್, ಕೆರಿಯರ್ ಪವರ್, ವಿದ್ಯಾ ಗುರು, ಗೈಡೆನ್ಸ್ ಐಎಎಸ್ ಸೇರಿದೆ.

ಮತ್ತಷ್ಟು ಓದಿ: ದೆಹಲಿಯ ಐಎಎಸ್​ ತರಬೇತಿ​ ಕೇಂದ್ರಕ್ಕೆ ನುಗ್ಗಿದ ನೀರು, ಮೂವರು ವಿದ್ಯಾರ್ಥಿಗಳು ಸಾವು

ಈ ಕೋಚಿಂಗ್ ಸೆಂಟರ್‌ಗಳು ನಿಯಮಗಳನ್ನು ಉಲ್ಲಂಘಿಸಿ ನೆಲಮಾಳಿಗೆಯಲ್ಲಿ ಕಾರ್ಯನಿರ್ವಹಿಸುತ್ತಿರುವುದು ಕಂಡುಬಂದಿದೆ ಮತ್ತು ಅವುಗಳನ್ನು ಸ್ಥಳದಲ್ಲೇ ಸೀಲ್ ಮಾಡಲಾಗಿದೆ ಮತ್ತು ನೋಟಿಸ್‌ಗಳನ್ನು ಅಂಟಿಸಲಾಗಿದೆ ಎಂದು ಎಂಸಿಡಿ ಮೇಯರ್ ಶೈಲಿ ಒಬೆರಾಯ್ ಆದೇಶದಲ್ಲಿ ತಿಳಿಸಿದ್ದಾರೆ.

ರಾವ್ಸ್​ ಕೋಚಿಂಗ್ ಸೆಂಟರ್‌ನಲ್ಲಿ ಒಳಚರಂಡಿ ವ್ಯವಸ್ಥೆ ಮತ್ತು ಸುರಕ್ಷತಾ ಕ್ರಮಗಳ ಕೊರತೆಯಿಂದಾಗಿ ಮೂವರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ. ಕೋಚಿಂಗ್ ಸೆಂಟರ್‌ನ ಮಾಲೀಕ ಅಭಿಷೇಕ್ ಗುಪ್ತಾ ಮತ್ತು ಕೋಚಿಂಗ್ ಸೆಂಟರ್‌ನ ಸಂಯೋಜಕ ದೇಶಪಾಲ್ ಸಿಂಗ್ ಅವರನ್ನು ನರಹತ್ಯೆ ಮತ್ತು ಇತರ ಆರೋಪಗಳ ಮೇಲೆ ಬಂಧಿಸಲಾಗಿದ್ದು, ನ್ಯಾಯಾಲಯ 14 ದಿನಗಳ ಕಾಲ ರಿಮಾಂಡ್ ವಿಧಿಸಿದೆ.

ನಿಯಮಾವಳಿಗೆ ವಿರುದ್ಧವಾಗಿ ಕೋಚಿಂಗ್‌ ಸೆಂಟರ್‌ಗಳನ್ನು ನಡೆಸುತ್ತಿರುವುದು ಕಂಡುಬಂದಿದ್ದು, ನೋಟಿಸ್‌ ನೀಡಿ ಕ್ರಮ ಕೈಗೊಳ್ಳಲಾಗಿದೆ. ಕೋಚಿಂಗ್ ಕೇಂದ್ರದಲ್ಲಿ ಸಂಭವಿಸಿದ ದುರಂತಕ್ಕೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ