ದಿಲ್ಲಿ ಕಾಂಗ್ರೆಸ್​ ಪತನಕ್ಕೆ ಮೂಲ ಯಾವುದು, ಎಲ್ಲಿಂದ ಆರಂಭವಾಯ್ತು? ಇಲ್ಲಿದೆ ಪುರಾವೆ!

  • TV9 Web Team
  • Published On - 13:18 PM, 12 Feb 2020
ದಿಲ್ಲಿ ಕಾಂಗ್ರೆಸ್​ ಪತನಕ್ಕೆ ಮೂಲ ಯಾವುದು, ಎಲ್ಲಿಂದ ಆರಂಭವಾಯ್ತು? ಇಲ್ಲಿದೆ ಪುರಾವೆ!

ದೆಹಲಿ: ಅಸೆಂಬ್ಲಿಯಲ್ಲಿ ವಿರೋಧ ಪಕ್ಷಕ್ಕೂ ಸ್ಥಾನ ಇಲ್ಲದಂತೆ ವಿಧಾನಸಭೆ ಚುನಾವಣೆಯಲ್ಲಿ ಆಮ್​ ಆದ್ಮಿಗಳು ಮೇಲುಗೈ ಸಾಧಿಸಿದ್ದಾರೆ. ಈ ಮಧ್ಯೆ ಕೈ ಪಕ್ಷ ಹೀನಾಯ ಸೋಲು ಅನುಭವಿಸಿದೆ. ದೆಹಲಿ ಕಾಂಗ್ರೆಸ್ ಉಸ್ತುವಾರಿ ಪಕ್ಷದ ಸೋಲಿಗೆ ಮೂಲ ಯಾವುದು, ಎಲ್ಲಿಂದ ಆರಂಭವಾಯ್ತು ದಿಲ್ಲಿ ಕಾಂಗ್ರೆಸ್​ ಪತನ ಎಂಬುದರ ಬಗ್ಗೆ ಕಾಂಗ್ರೆಸ್ ಉಸ್ತುವಾರಿ ಪಿ.ಸಿ.ಚಾಕೋ ಮಾತನಾಡಿದ್ದಾರೆ.

2013ರಲ್ಲಿ ಶೀಲಾ ದೀಕ್ಷಿತ್ ಸಿಎಂ ಆಗಿದ್ದ ವೇಳೆಯಿಂದಲೇ ದೆಹಲಿಯಲ್ಲಿ ಕಾಂಗ್ರೆಸ್ ಪತನವು ಆರಂಭವಾಯಿತು. ಹೊಸ ಪಕ್ಷ ಆಪ್ ಹುಟ್ಟಿಕೊಂಡು ಕಾಂಗ್ರೆಸ್ ಪಕ್ಷದ ಪೂರ್ತಿ ವೋಟ್ ಬ್ಯಾಂಕ್ ಅನ್ನು ತನ್ನತ್ತ ಸೆಳೆದುಕೊಂಡುಬಿಟ್ಟಿದೆ ಎಂದು ಪಿ.ಸಿ.ಚಾಕೋ ಹೇಳಿದ್ದಾರೆ. ನಾವು ನಮ್ಮ ವೋಟ್ ಬ್ಯಾಂಕ್ ಅನ್ನು ವಾಪಸ್ ಪಡೆಯಲು ಸಾಧ್ಯವಾಗಿಲ್ಲ. ಕಾಂಗ್ರೆಸ್ ವೋಟ್ ಬ್ಯಾಂಕ್ ಈಗಲೂ ಆಪ್ ಜೊತೆಯೇ ಇದೆ ಎಂದು ಪಿ.ಸಿ. ಚಾಕೋ ವಿಶ್ಲೇಷಿಸಿದ್ದಾರೆ.

ಈ ಮಧ್ಯೆ ಪಕ್ಷದ ಹಿರಿಯ ನಾಯಕರೊಬ್ಬರು, ಶೀಲಾ ಮೇಡಂ​ ಮುಖ್ಯಮಂತ್ರಿಯಾಗಿದ್ದ ವಿವಿಧ ಕಾಲಘಟ್ಟಗಳಲ್ಲಿ ಭಾರೀ ಪ್ರಮಾಣದ ಭ್ರಷ್ಟಾಚಾರ ನಡೆಸಿದ್ದರು. ಅದೇ ಪಕ್ಷದ ಅವನತಿಗೆ ಕಾರಣವಾಯ್ತು. ಅವರ ಜೊತೆಗೆ ಅಂದಿನ ಕೇಂದ್ರ ಸರ್ಕಾರದಲ್ಲಿದ್ದ ಕಾಂಗ್ರೆಸ್​ ಸಚಿವರೂ ಭ್ರಷ್ಟಾಚಾರದಲ್ಲಿ ತಮ್ಮ ಪಾಲು ಹೊಂದಿದ್ದರು. ಇದನ್ನು ದಿಲ್ಲಿ ಜನ ಸೂಕ್ಷ್ಮವಾಗಿ ಗಮನಿಸಿದ್ದರು. ಹಾಗಾಗಿ ತಮ್ಮ ಪಕ್ಷಕ್ಕೆ ಸೋಲುಣಿಸುತ್ತಾ ಬಂದರು ಎಂದಿದ್ದಾರೆ.

ಪಿ.ಸಿ. ಚಾಕೋ ಹೇಳಿಕೆಗೆ ಮುಂಬೈ ಕಾಂಗ್ರೆಸ್ ನಾಯಕ ಮಿಲಿಂದಾ ದಿಯೋರಾ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಸೋಲಿಗೆ ಶೀಲಾ ದೀಕ್ಷಿತ್ ಅವ್ರನ್ನ ಹೊಣೆ ಮಾಡುವುದು ಸರಿಯಲ್ಲ. ಶೀಲಾ ದೀಕ್ಷಿತ್ ತಮ್ಮ ಜೀವನವನ್ನು ಕಾಂಗ್ರೆಸ್​ಗೆ ಅರ್ಪಿಸಿಕೊಂಡಿದ್ದರು ಎಂದ ಮಿಲಿಂದಾ ದಿಯೋರಾ ಹೇಳಿದ್ದಾರೆ.