AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

3 ತಿಂಗಳಿಂದ ಬಾಂಗ್ಲಾದೇಶದ ಜೈಲಿನಲ್ಲಿದ್ದ ಆಂಧ್ರದ 9 ಮೀನುಗಾರರು ಭಾರತಕ್ಕೆ ವಾಪಾಸ್

ಬಾಂಗ್ಲಾದೇಶದಲ್ಲಿ 3 ತಿಂಗಳಿನಿಂದ ಬಂಧನಕ್ಕೊಳಗಾಗಿದ್ದ 9 ಮೀನುಗಾರರು ಆಂಧ್ರಪ್ರದೇಶಕ್ಕೆ ವಾಪಾಸ್ ಮರಳಿದ್ದಾರೆ. ಕಳೆದ ವರ್ಷ ಅಕ್ಟೋಬರ್‌ನಿಂದ ಬಾಂಗ್ಲಾದೇಶ ನೌಕಾಪಡೆಯಿಂದ ಬಂಧನಕ್ಕೊಳಗಾಗಿದ್ದ ಆಂಧ್ರದ 9 ಮೀನುಗಾರರು ಸುರಕ್ಷಿತವಾಗಿ ಮನೆಗೆ ಮರಳಿದ್ದಾರೆ. ಆಂಧ್ರಪ್ರದೇಶದ ವಿಜಯನಗರಂ ಜಿಲ್ಲೆಯ 9 ಮೀನುಗಾರರಿಗೆ ಅಧಿಕಾರಿಗಳು ಭವ್ಯ ಸ್ವಾಗತ ಕೋರಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿಶೇಷ ಪ್ರಯತ್ನದಿಂದ ಬಾಂಗ್ಲಾದೇಶದ ಬಂಧನದಲ್ಲಿದ್ದ 9 ಮೀನುಗಾರರ ಬಿಡುಗಡೆಯಾಗಿದೆ.

3 ತಿಂಗಳಿಂದ ಬಾಂಗ್ಲಾದೇಶದ ಜೈಲಿನಲ್ಲಿದ್ದ ಆಂಧ್ರದ 9 ಮೀನುಗಾರರು ಭಾರತಕ್ಕೆ ವಾಪಾಸ್
9 Fishermen Return To Ap From Bangladesh
ಸುಷ್ಮಾ ಚಕ್ರೆ
|

Updated on: Feb 02, 2026 | 4:12 PM

Share

ಹೈದರಾಬಾದ್, ಫೆಬ್ರವರಿ 2: ಬಾಂಗ್ಲಾದೇಶದಲ್ಲಿ ಕಳೆದ 3 ತಿಂಗಳಿನಿಂದ ಬಂಧನದಲ್ಲಿದ್ದ ಆಂಧ್ರಪ್ರದೇಶದ ವಿಜಯನಗರಂ ಜಿಲ್ಲೆಯ 9 ಮೀನುಗಾರರು (Fishermen) ಸ್ವದೇಶಕ್ಕೆ ಮರಳಿದ್ದಾರೆ. ಜನವರಿ 29ರಂದು ಬಾಂಗ್ಲಾದೇಶದ ಕೋಸ್ಟ್ ಗಾರ್ಡ್ ಮೀನುಗಾರರನ್ನು ಭಾರತದ ಕೋಸ್ಟ್​ ಗಾರ್ಡ್​ಗೆ ಹಸ್ತಾಂತರಿಸಲಾಯಿತು. ನಂತರ ಅವರು ಅವರನ್ನು ಸ್ಥಳೀಯ ಪೊಲೀಸರಿಗೆ ಒಪ್ಪಿಸಿದರು.

2025ರ ಅಕ್ಟೋಬರ್‌ನಲ್ಲಿ ಮೀನುಗಾರಿಕೆಗೆ ಹೋಗಿದ್ದ 9 ಮೀನುಗಾರರು ಬಂಗಾಳಕೊಲ್ಲಿಯಲ್ಲಿ ಮೀನುಗಾರಿಕೆ ಮಾಡುವಾಗ ಅಜಾಗರೂಕತೆಯಿಂದ ಸಮುದ್ರದ ಗಡಿಯನ್ನು ದಾಟಿದ್ದರು. ಹೀಗಾಗಿ, ಬಾಂಗ್ಲಾದೇಶದ ನೌಕಾಪಡೆಯ ಅಧಿಕಾರಿಗಳು ಅವರನ್ನು ಬಂಧಿಸಿದ್ದರು. ನಂತರ ಅವರನ್ನು ಬಗೇರ್‌ಹಟ್ ಜೈಲಿನಲ್ಲಿ ಇರಿಸಲಾಗಿತ್ತು.

ಇದನ್ನೂ ಓದಿ: Chanchal Bhowmik: ಬಾಂಗ್ಲಾದೇಶದಲ್ಲಿ ಮತ್ತೊಂದು ಹಿಂದೂ ಯುವಕನ ಹತ್ಯೆ; ಗ್ಯಾರೇಜ್‌ನೊಳಗೆ ಸಜೀವ ದಹನ

ಭಾರತ ಮತ್ತು ಬಾಂಗ್ಲಾದೇಶದ ನಡುವಿನ ರಾಜತಾಂತ್ರಿಕ ಮಾತುಕತೆಗಳ ನಂತರ ಮೀನುಗಾರರನ್ನು ಬಿಡುಗಡೆ ಮಾಡಲಾಯಿತು. ಬಾಂಗ್ಲಾದಿಂದ ಬಿಡುಗಡೆಯಾದ ಅವರು ಇಂದು ವಿಶಾಖಪಟ್ಟಣಂ ಕರಾವಳಿಗೆ ತಲುಪಿದ್ದಾರೆ.

ಬಾಂಗ್ಲಾದೇಶದಿಂದ ಬಿಡುಗಡೆಯಾದ ಮೀನುಗಾರರನ್ನು ಮರುಪಲ್ಲಿ ಚಿನ್ನಪ್ಪಣ್ಣ, ರಮೇಶ್ ಅಪ್ಪಲಕೊಂಡ, ಪ್ರವೀಣ್, ರಾಮು, ನಕ್ಕ ರಾಮು, ಸೀತಯ್ಯ ಎಂದು ಗುರುತಿಸಲಾಗಿದೆ. ಅವರಲ್ಲಿ 6 ಮಂದಿ ಭೋಗಪುರಂ ಮಂಡಲದ ಕೊಂಡರಾಜುಪಾಲಂ ಗ್ರಾಮದವರು ಮತ್ತು ಮೂವರು ವಿಜಯನಗರಂ ಜಿಲ್ಲೆಯ ತಿಪ್ಪಲವಲಸ ಗ್ರಾಮದವರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಅನಂತ್ ನಾಗ್ ಅವರಿಗೆ ದಾದಾ ಸಾಹೇಬ್ ಫಾಲ್ಕೆ: ಸಾರಾ ಗೋವಿಂದು ಪ್ರತಿಕ್ರಿಯೆ
ಅನಂತ್ ನಾಗ್ ಅವರಿಗೆ ದಾದಾ ಸಾಹೇಬ್ ಫಾಲ್ಕೆ: ಸಾರಾ ಗೋವಿಂದು ಪ್ರತಿಕ್ರಿಯೆ
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ: ಹಲವೆಡೆ ಎಂಟ್ರಿ-ಎಕ್ಸಿಟ್ ಕ್ಲೋಸ್​​
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ: ಹಲವೆಡೆ ಎಂಟ್ರಿ-ಎಕ್ಸಿಟ್ ಕ್ಲೋಸ್​​
ನನ್ನ ಮಾತು ಎಷ್ಟು ನಡೆಯುತ್ತೆ? ಎಷ್ಟು ನಡೆಯಲ್ಲ ಅನ್ನೋದು ನನಗೆ ಗೊತ್ತು
ನನ್ನ ಮಾತು ಎಷ್ಟು ನಡೆಯುತ್ತೆ? ಎಷ್ಟು ನಡೆಯಲ್ಲ ಅನ್ನೋದು ನನಗೆ ಗೊತ್ತು
ತುಂಗಭದ್ರಾ ಜಲಾಶಯಕ್ಕೆ ಒಳಹರಿವು ಸಂಪೂರ್ಣ ಸ್ಥಗಿತ, ರೈತರಲ್ಲಿ ಆತಂಕ
ತುಂಗಭದ್ರಾ ಜಲಾಶಯಕ್ಕೆ ಒಳಹರಿವು ಸಂಪೂರ್ಣ ಸ್ಥಗಿತ, ರೈತರಲ್ಲಿ ಆತಂಕ
‘ಕಣ್ಣಿನಲ್ಲೇ ಕಥೆ ಹೇಳುವ ಕಲಾವಿದ’: ಅನಂತ್ ನಾಗ್ ಬಗ್ಗೆ ಜಯಮಾಲಾ ಮಾತು
‘ಕಣ್ಣಿನಲ್ಲೇ ಕಥೆ ಹೇಳುವ ಕಲಾವಿದ’: ಅನಂತ್ ನಾಗ್ ಬಗ್ಗೆ ಜಯಮಾಲಾ ಮಾತು
ಕಾವ್ಯಾ ಅಂದವ ಹೊಗಳಿ ಅಟ್ಟಕ್ಕೇರಿಸಿದ ತಾಂಡವ್, ಗಗನ್: ವಿಡಿಯೋ
ಕಾವ್ಯಾ ಅಂದವ ಹೊಗಳಿ ಅಟ್ಟಕ್ಕೇರಿಸಿದ ತಾಂಡವ್, ಗಗನ್: ವಿಡಿಯೋ
ಗಾಣಗಾಪುರ ದೇವಸ್ಥಾನಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭೇಟಿ
ಗಾಣಗಾಪುರ ದೇವಸ್ಥಾನಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭೇಟಿ
ದಸರಾ ಗಜಪಡೆಗೆ ಹಣ್ಣು ತಿನ್ನಿಸಿದ ತ್ರಿಷಿಕಾ, ಆದ್ಯವೀರ್
ದಸರಾ ಗಜಪಡೆಗೆ ಹಣ್ಣು ತಿನ್ನಿಸಿದ ತ್ರಿಷಿಕಾ, ಆದ್ಯವೀರ್
2028ಕ್ಕೆ ರಾಮನಗರದಿಂದಲೇ ಸ್ಪರ್ಧೆ: ನಿಖಿಲ್​ ಕುಮಾರಸ್ವಾಮಿ
2028ಕ್ಕೆ ರಾಮನಗರದಿಂದಲೇ ಸ್ಪರ್ಧೆ: ನಿಖಿಲ್​ ಕುಮಾರಸ್ವಾಮಿ
ಎತ್ತಿನಹೊಳೆ ಯೋಜನೆಯ ಕಾಮಗಾರಿ ವೀಕ್ಷಿಸಿದ ಸಚಿವ ಚಲುವರಾಯಸ್ವಾಮಿ
ಎತ್ತಿನಹೊಳೆ ಯೋಜನೆಯ ಕಾಮಗಾರಿ ವೀಕ್ಷಿಸಿದ ಸಚಿವ ಚಲುವರಾಯಸ್ವಾಮಿ