ದೆಹಲಿ: ದೆಹಲಿಯಲ್ಲಿ ಪ್ರಬಲ ಭೂಕಂಪ (Earthquake) ಸಂಭವಿಸಿದೆ ಎಂದು ANI ವರದಿ ಮಾಡಿದೆ. ರಾಷ್ಟ್ರ ರಾಜಧಾನಿ ವ್ಯಾಪ್ತಿಯಲ್ಲಿ ಭೂಮಿ ಕಂಪಿಸಿದೆ. ಉತ್ತರಾಖಂಡ್ನ ಹಲವೆಡೆ 35 ಸೆಕೆಂಡ್ ಭೂಮಿ ಕಂಪಿಸಿದೆ ಎಂದು ಹೇಳಲಾಗಿದೆ. ರಿಕ್ಟರ್ ಮಾಪಕದಲ್ಲಿ 5.4ರಷ್ಟು ಕಂಪನದ ತೀವ್ರತೆ ದಾಖಲಾಗಿದೆ. ಇದರಿಂದ ದೆಹಲಿಯಲ್ಲಿ ಜನರು ಭಯ ಭಯಗೊಂಡು ಮನೆ, ಕಚೇರಿಗಳಿಂದ ಹೊರಗೆ ಓಡಿಬಂದಿದ್ದಾರೆ.
Strong earthquake tremors felt in Delhi pic.twitter.com/VZkRU4uyLy
— ANI (@ANI) January 24, 2023
Felt the tremors of the #earthquake in Delhi. pic.twitter.com/xTIBi3oiqW
— roobina mongia (@roobinam) January 24, 2023
ಕಲಬುರಗಿ ಜಿಲ್ಲೆಯ ಹಲವೆಡೆ ಲಘು ಭೂಕಂಪನ
ಕಲಬುರಗಿ ಜಿಲ್ಲೆಯ ಹಲವೆಡೆ ಜನವರಿ 18ರಂದು ಲಘು ಭೂಕಂಪನದ ಅನುಭವ ಉಂಟಾಗಿದೆ. ಬೆಳಗ್ಗೆ 9.48ರ ಸಮಯದಲ್ಲಿ 5 ಸೆಕೆಂಡ್ ಭೂಮಿ ಕಂಪಿಸಿದೆ. ರಿಕ್ಟರ್ ಮಾಪಕದಲ್ಲಿ 3.4ರಷ್ಟು ಕಂಪನದ ತೀವ್ರತೆ ದಾಖಲಾಗಿತ್ತು. ಬೆನಕನಹಳ್ಳಿ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಂಪನದ ಅನುಭವಾಗಿತ್ತು. 3.4, ಭೂಕಂಪನ ಸಂಭವಿಸಿದೆ, 09:48:26 IST, ಲ್ಯಾಟ್: 17.06 ಮತ್ತು ಉದ್ದ: 77.18, ಆಳ: 5 ಕಿಮೀ, ಸ್ಥಳ: ಕಲಬುರಗಿ ಎಂದು ರಾಷ್ಟ್ರೀಯ ಭೂಕಂಪನಶಾಸ್ತ್ರ ಕೇಂದ್ರ ಟ್ವೀಟ್ ಮಾಡಿತ್ತು.
Published On - 2:40 pm, Tue, 24 January 23