ಜನರ ದಿಲ್ ಗೆದ್ದು, ದಿಲ್ಲಿ ದರ್ಬಾರ್ ನಡೆಸಲು ದಾಪುಗಾಲು ಹಾಕುತ್ತಿರುವ ಆಮ್ ಆದ್ಮಿ!
ದೆಹಲಿ: ವಿಧಾನಸಭೆ ಚುನಾವಣೆಯ ಫಲಿತಾಂಶ ಬಹುತೇಕ ಮುಕ್ತಾಯದ ಹಂತಕ್ಕೆ ತಲುಪಿದೆ. ಐದು ವರ್ಷ ಆಡಳಿತ ನಡೆಸಿದ ಆಮ್ಆದ್ಮಿ ಪಕ್ಷ 58 ಕ್ಷೇತ್ರದಲ್ಲಿ ಮುನ್ನಡೆ ಗಳಿಸಿದೆ ಹಾಗೂ ಗದ್ದುಗೆ ಏರಲು ಹವಣಿಸ್ತಿರೋ ಬಿಜೆಪಿ 12 ಕ್ಷೇತ್ರಗಳನ್ನು ಗೆಲುತ್ತ ಮುನ್ನುಗ್ಗಿದೆ. ಆದರೆ ಕಾಂಗ್ರೆಸ್ ಇನ್ನು ಯಾವುದೇ ಖಾತೆಯನ್ನು ತೆರೆದಿಲ್ಲ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಆಮ್ಆದ್ಮಿ ಪಕ್ಷ 70 ಸ್ಥಾನಕ್ಕೆ 67 ಸ್ಥಾನಗಳನ್ನು ಗೆದ್ದು ಭರ್ಜರಿ ಜಯ ಸಾಧಿಸಿತ್ತು. ಬಿಜೆಪಿ ಹಿನ್ನಡೆಗೆ ಕಾರಣ: ಬಿಜೆಪಿ ಕೇವಲ12 ಸೀಟುಗಳನ್ನು ಮಾತ್ರ ಗೆದ್ದಿದೆ. ದೆಹಲಿ […]
ದೆಹಲಿ: ವಿಧಾನಸಭೆ ಚುನಾವಣೆಯ ಫಲಿತಾಂಶ ಬಹುತೇಕ ಮುಕ್ತಾಯದ ಹಂತಕ್ಕೆ ತಲುಪಿದೆ. ಐದು ವರ್ಷ ಆಡಳಿತ ನಡೆಸಿದ ಆಮ್ಆದ್ಮಿ ಪಕ್ಷ 58 ಕ್ಷೇತ್ರದಲ್ಲಿ ಮುನ್ನಡೆ ಗಳಿಸಿದೆ ಹಾಗೂ ಗದ್ದುಗೆ ಏರಲು ಹವಣಿಸ್ತಿರೋ ಬಿಜೆಪಿ 12 ಕ್ಷೇತ್ರಗಳನ್ನು ಗೆಲುತ್ತ ಮುನ್ನುಗ್ಗಿದೆ. ಆದರೆ ಕಾಂಗ್ರೆಸ್ ಇನ್ನು ಯಾವುದೇ ಖಾತೆಯನ್ನು ತೆರೆದಿಲ್ಲ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಆಮ್ಆದ್ಮಿ ಪಕ್ಷ 70 ಸ್ಥಾನಕ್ಕೆ 67 ಸ್ಥಾನಗಳನ್ನು ಗೆದ್ದು ಭರ್ಜರಿ ಜಯ ಸಾಧಿಸಿತ್ತು.
ಬಿಜೆಪಿ ಹಿನ್ನಡೆಗೆ ಕಾರಣ: ಬಿಜೆಪಿ ಕೇವಲ12 ಸೀಟುಗಳನ್ನು ಮಾತ್ರ ಗೆದ್ದಿದೆ. ದೆಹಲಿ ಜನರ ದಿಲ್ ಗೆಲ್ಲುವಲ್ಲಿ ಬಿಜೆಪಿ ಎಡವಿದ್ದು ಎಲ್ಲಿ ಎನ್ನುವುದಾದರೆ. ದೆಹಲಿಯಲ್ಲಿ ಬಿಜೆಪಿ ಸಿಎಂ ಅಭ್ಯರ್ಥಿಯನ್ನ ಘೋಷಿಸದೆ ಇದದ್ದು ಬಿಜೆಪಿಗೆ ಮುಳುವಾಗಿದೆ. ಜೊತೆಗೆ ಮನೋಜ್ ತಿವಾರಿಯನ್ನ ಸಿಎಂ ಅಭ್ಯರ್ಥಿ ಎಂಬಂತೆ ಬಿಂಬಿಸಲಾಗಿತ್ತು. ಕೇಜ್ರಿವಾಲ್ಗಿರೋ ಫೇಸ್ ವ್ಯಾಲ್ಯೂ ಮನೋಜ್ ತಿವಾರಿಗೆ ಇಲ್ಲದಿರುವುದು ಬಿಜೆಪಿಯ ಹಿನ್ನೆಡೆಗೆ ಕಾರಣವಾಗಿದೆ. ಬಿಜೆಪಿ ಅಭಿವೃದ್ಧಿ ವಿಚಾರವನ್ನ ಮುಂದಿಟ್ಟುಕೊಂಡು ಸ್ಪರ್ಧಿಸಲಿಲ್ಲ. ಕೇಜ್ರಿವಾಲ್ ವೈಫಲ್ಯಗಳನ್ನ ಎತ್ತಿ ಹಿಡಿಯುವಲ್ಲಿ ಬಿಜೆಪಿ ವಿಫಲವಾಗಿದೆ.
ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹೆಚ್ಚು ಱಲಿ ನಡೆಸಲಿಲ್ಲ. ಹಾಗೂ ಪ್ರಚಾರದ ವೇಳೆ A370, ಸಿಎಎ, ಪಾಕಿಸ್ತಾನ, ಶಾಹೀನ್ ಬಾಗ್ ವಿಚಾರ ಪ್ರಸ್ತಾಪ ಮಾಡಿದ್ದಾರೆ ಇದು ಜನರಲ್ಲಿ ಮತ್ತಷ್ಟು ಕೋಪಕ್ಕೆ ಕಾರಣವಾಗಿದೆ. ದೆಹಲಿಗೆ ಸಂಬಂಧಿಸದ ವಿಚಾರ ಪ್ರಸ್ತಾಪಿಸಿದ್ದು ಬಿಜೆಪಿಗೆ ಮುಳುವಾಯಿತು. ಬಿಜೆಪಿ ನಾಯಕರು ಕೇಜ್ರಿವಾಲ್ ಮೇಲೆ ವೈಯಕ್ತಿಕ ಟೀಕೆ ಮಾಡಿದ್ದಾರೆ. ಬಿಜೆಪಿ ನಾಯಕರು ಕೇಜ್ರಿವಾಲ್ರನ್ನ ‘ಭಯೋತ್ಪಾದಕ’ ಎಂದು ಜರಿದಿದ್ದಾರೆ. ವಿವಾದಾತ್ಮಕ ಹೇಳಿಕೆಯಿಂದ ಬಿಜೆಪಿ ಜನರ ವಿಶ್ವಾಸ ಕಳೆದುಕೊಂಡಿರಬಹುದು ಎಂಬುವುದು ಸಹ ಕಾರಣವಾಗಿದೆ. ಜಾಮಿಯಾ, ಜೆಎನ್ಯು ಸೇರಿದಂತೆ ವಿವಿಗಳಲ್ಲಿ ಗಲಾಟೆಯಿಂದ ಹೊಡೆತ ಬಿದ್ದಿದೆ.
ಆಪ್ಗೆ ಮುನ್ನಡೆ ಹೇಗೆ? ಕೇಜ್ರಿವಾಲ್ರಿಂದ ದೆಹಲಿಯಲ್ಲಿ ಉತ್ತಮ ಆಡಳಿತಕ್ಕೆ ಜನರ ಮನ್ನಣೆ ಸಿಕ್ಕಿರುವುದು, ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ಕೊಟ್ಟಿದ್ದಕ್ಕೆ ಜನ ಬೆಂಬಲ ನೀಡಿದ್ದಾರೆ. ಆಮ್ ಆದ್ಮಿ ಪಾರ್ಟಿ ಕೋಮು ಧ್ರುವೀಕರಣದಿಂದ ದೂರ ಉಳಿದಿತ್ತು. ಶಾಹೀನ್ ಬಾಗ್ ಹೋರಾಟಕ್ಕೆ ಬೆಂಬಲ ನೀಡಿರಲಿಲ್ಲ. ಸಿಎಎ, ಎನ್ಆರ್ಸಿ ವಿಚಾರದಲ್ಲಿ ‘ಆಪ್’ ತಟಸ್ಥ ನಿಲುವು ವ್ಯಕ್ತಪಡಿಸಿತ್ತು. ಇವೆಲ್ಲ ಕಾರಣಗಳು ಆಮ್ ಆದ್ಮಿ ಪಾರ್ಟಿ ಗೆಲುವಿಗೆ ಕಾರಣವಾಗಿದೆ. ರಸ್ತೆ ತೆರವುಗೊಳಿಸಲು ಬೆಂಬಲ ನೀಡುವುದಾಗಿ ಕೇಜ್ರಿವಾಲ್ ಹೇಳಿದ್ದರು. ಉಚಿತ ವಿದ್ಯುತ್, ಉಚಿತ ನೀರು, ಮಹಿಳೆಯರಿಗೆ ಉಚಿತ ಸಾರಿಗೆ ಸೌಲಭ್ಯ, ಆಪ್ ಕೊಟ್ಟ ಸಬ್ಸಿಡಿ ಉಡುಗೊರೆಗೆ ದೆಹಲಿ ಜನ ಮನಸೋತಿದ್ದಾರೆ.
ಶಿಕ್ಷಣಕ್ಕೆ ಹೆಚ್ಚು ಒತ್ತು, ಸರ್ಕಾರದ ಸಾಧನೆಯನ್ನ ಜನರಿಗೆ ತಲುಪಿಸುವಲ್ಲಿ ಪಕ್ಷ ಯಶಸ್ವಿಯಾಗಿದೆ. ಆಪ್ ನಾಯಕರು ಪ್ರಚಾರದಲ್ಲಿ ಮೋದಿ ಹೆಸರು ಪ್ರಸ್ತಾಪಿಸದೆ ಇರುವುದು. ಚುನಾವಣೆಯಲ್ಲಿ ಮೋದಿ ಪ್ರಭಾವ ಬೀರದಂತೆ ಎಚ್ಚರ ವಹಿಸಿದ್ದು, ಎಷ್ಟೇ ವೈಯಕ್ತಿಕ ಟೀಕೆ ಮಾಡಿದ್ರೂ ಸುಮ್ಮನಿದ್ದದ್ದು, ವಿವಿಐಪಿ ಸಂಸ್ಕೃತಿಯನ್ನ ದೂರವಿಟ್ಟು, ದೆಹಲಿ ಜನರಿಗೆ ಹತ್ತಿರವಾಗಿದ್ದು ಬಹುಮುಖ್ಯ ಕಾರಣಗಳಾಗಿವೆ.
Published On - 12:35 pm, Tue, 11 February 20