ಬ್ರಿಕ್ಸ್ ಶೃಂಗಸಭೆ ಎಫೆಕ್ಟ್; ದೆಹಲಿಯಲ್ಲಿ ಗಗನಕ್ಕೇರಿದ ಹೋಟೆಲ್ ದರ, ಒಂದು ರಾತ್ರಿಗೆ 2.4 ಲಕ್ಷ ರೂ.!

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸೆಪ್ಟೆಂಬರ್ 11ರಿಂದ 13ರವರೆಗೆ ನಡೆಯಲಿರುವ ಬ್ರಿಕ್ಸ್ (BRICS) ಶೃಂಗಸಭೆಯ ಸಿದ್ಧತೆ ಭರದಿಂದ ಸಾಗುತ್ತಿದೆ. ಈ ಜಾಗತಿಕ ಕಾರ್ಯಕ್ರಮದ ಪರಿಣಾಮವಾಗಿ ದೆಹಲಿ ಮತ್ತು ಎನ್‌ಸಿಆರ್ ವಲಯದ ಹೋಟೆಲ್ ಕೊಠಡಿಗಳ ಬಾಡಿಗೆ ದರ ಆಕಾಶಕ್ಕೇರಿದೆ. ವಿದೇಶಿ ನಿಯೋಗಗಳು, ರಾಜತಾಂತ್ರಿಕರು, ಭದ್ರತಾ ಪಡೆಗಳು ಹಾಗೂ ಉನ್ನತ ಮಟ್ಟದ ಅಧಿಕಾರಿಗಳು ಒಂದೇ ಸಮಯದಲ್ಲಿ ದೆಹಲಿಗೆ ಆಗಮಿಸುತ್ತಿರುವುದರಿಂದ, ಸೆಂಟ್ರಲ್ ದೆಹಲಿಯ ಹೈ-ಎಂಡ್ ಹೋಟೆಲ್‌ಗಳಲ್ಲಿ ಕೊಠಡಿಗಳ ಬುಕಿಂಗ್ ಸಂಪೂರ್ಣ ಭರ್ತಿಯಾಗಿದೆ.

ಬ್ರಿಕ್ಸ್ ಶೃಂಗಸಭೆ ಎಫೆಕ್ಟ್; ದೆಹಲಿಯಲ್ಲಿ ಗಗನಕ್ಕೇರಿದ ಹೋಟೆಲ್ ದರ, ಒಂದು ರಾತ್ರಿಗೆ 2.4 ಲಕ್ಷ ರೂ.!
ಬ್ರಿಕ್ಸ್ ಶೃಂಗಸಭೆ
Image Credit source: PTI

Updated on: Sep 10, 2026 | 8:26 PM

ನವದೆಹಲಿ, ಸೆಪ್ಟೆಂಬರ್ 10: ಸೆಪ್ಟೆಂಬರ್ 12 ಮತ್ತು 13ರಂದು ದೆಹಲಿಯಲ್ಲಿ ನಡೆಯಲಿರುವ ಬಹುನಿರೀಕ್ಷಿತ ಬ್ರಿಕ್ಸ್ ಶೃಂಗಸಭೆಯ ಹಿನ್ನೆಲೆಯಲ್ಲಿ ದೆಹಲಿಯ ಪ್ರಮುಖ ಐಷಾರಾಮಿ ಹೋಟೆಲ್‌ಗಳ ಬಾಡಿಗೆ ದರ ಆಕಾಶಕ್ಕೇರಿದೆ. ಸೆಂಟ್ರಲ್ ದೆಹಲಿ ವಲಯದ ಪ್ರಮುಖ ಪಂಚತಾರಾ ಹೋಟೆಲ್‌ಗಳಲ್ಲಿ ಕೊಠಡಿಗಳು ಬಹುತೇಕ ಬುಕ್ ಆಗಿವೆ. ದೆಹಲಿಯ ತಾಜ್ ಮಹಲ್ ಹೋಟೆಲ್, ಐಟಿಸಿ ಮೌರ್ಯ ಮತ್ತು ದಿ ಲಲಿತ್ ಸೇರಿದಂತೆ ದೆಹಲಿಯ ಪ್ರಸಿದ್ಧ ಐಷಾರಾಮಿ ಹೋಟೆಲ್‌ಗಳಲ್ಲಿ ವಿಶ್ವನಾಯಕರ ಹಾಗೂ ರಾಜತಾಂತ್ರಿಕ ನಿಯೋಗಗಳ ತಂಗುವಿಕೆಗಾಗಿ ಭಾರಿ ಪ್ರಮಾಣದಲ್ಲಿ ಕೊಠಡಿಗಳನ್ನು ಕಾಯ್ದಿರಿಸಲಾಗಿದೆ.

ಸಾಮಾನ್ಯವಾಗಿ ದಿನಕ್ಕೆ 18,000 ರೂ. ಇರುತ್ತಿದ್ದ ಐಷಾರಾಮಿ ಕೊಠಡಿಗಳ ದರ ಪ್ರಸ್ತುತ 80,000 ರೂ. ಇದ್ದುದು ಈಗ 1 ಲಕ್ಷದಿಂದ 2.4 ಲಕ್ಷ ರೂ.ವರೆಗೆ ತಲುಪಿದೆ. ಪ್ರಮುಖ ವಿದೇಶಿ ನಿಯೋಗಗಳು, ರಾಜತಾಂತ್ರಿಕರು, ಸಚಿವರು ಹಾಗೂ ಹಿರಿಯ ಅಧಿಕಾರಿಗಳ ಆಗಮನದಿಂದಾಗಿ ಲ್ಯೂಟಿಯನ್ಸ್ ದೆಹಲಿ ಮತ್ತು ಏರೋಸಿಟಿ ಭಾಗದ ಪಂಚತಾರಾ ಹೋಟೆಲ್‌ಗಳಲ್ಲಿ ಕೊಠಡಿಗಳು ಸಂಪೂರ್ಣ ಭರ್ತಿಯಾಗಿವೆ. ಹೋಟೆಲ್ ದರಗಳ ಈ ಏರಿಕೆಯು ಸೆಪ್ಟೆಂಬರ್ 20ರವರೆಗೆ ಮುಂದುವರಿಯುವ ನಿರೀಕ್ಷೆಯಿದೆ.

ಇದನ್ನೂ ಓದಿ: ಬ್ರಿಕ್ಸ್ ಶೃಂಗಸಭೆಗೆ ದೆಹಲಿ ಸಜ್ಜು; ಕ್ಸಿ ಜಿನ್‌ಪಿಂಗ್, ಪುಟಿನ್‌ಗೆ ಹೇಗಿರಲಿದೆ ಹೋಟೆಲ್ ವ್ಯವಸ್ಥೆ?

ಆನ್‌ಲೈನ್ ಬುಕಿಂಗ್‌ನಲ್ಲಿ ಶೇ. 50ರಷ್ಟು ಏರಿಕೆ:

ಪ್ರಮುಖ ಪ್ರವಾಸೋದ್ಯಮ ವೇದಿಕೆ ‘ಇಕ್ಸಿಗೋ’ ಸಂಸ್ಥೆಯ ಸಿಇಒ ಅಲೋಕ್ ಬಾಜಪೇಯಿ ಪ್ರಕಾರ, ದೆಹಲಿಯ ಪಂಚತಾರಾ ಹೋಟೆಲ್‌ಗಳ ಹುಡುಕಾಟದಲ್ಲಿ ಶೇ. 50ರಷ್ಟು ಹೆಚ್ಚಳವಾಗಿದೆ. ಲೀಲಾ ಪ್ಯಾಲೇಸ್, ತಾಜ್ ಗ್ರೂಪ್, ರೇಡಿಸನ್ ಮತ್ತು ಐಟಿಸಿ ಗ್ರೂಪ್‌ಗಳ ಬಹುತೇಕ ಹೋಟೆಲ್‌ಗಳು ಸೆಪ್ಟೆಂಬರ್ 12ರಿಂದ 13ರವರೆಗೆ ಸಂಪೂರ್ಣ ಬುಕ್ ಆಗಿವೆ.

ಇದನ್ನೂ ಓದಿ: 7 ವರ್ಷಗಳ ನಂತರ ಬ್ರಿಕ್ಸ್ ಶೃಂಗಸಭೆಗೆ ಭಾರತಕ್ಕೆ ಆಗಮಿಸಲಿದ್ದಾರೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್

ಕೊಠಡಿಗಳ ಅಭಾವ ಕೇವಲ ಸೆಂಟ್ರಲ್ ದೆಹಲಿಗೆ ಮಾತ್ರ ಸೀಮಿತವಾಗಿರದೆ, ಗುರುಗ್ರಾಮ, ನೊಯ್ಡಾ ಮತ್ತು ಏರೋಸಿಟಿ ಹೋಟೆಲ್‌ಗಳ ಮೇಲೂ ತೀವ್ರ ಪರಿಣಾಮ ಬೀರಿದೆ. ಎನ್‌ಸಿಆರ್‌ನ ಬಹುತೇಕ ಹೋಟೆಲ್‌ಗಳ ಕೊಠಡಿಗಳು ಭರ್ತಿಯಾಗಿವೆ.

ಐಟಿಸಿ ಮೌರ್ಯದಲ್ಲಿ ಕೊಠಡಿ ದರ 2.4 ಲಕ್ಷ ರೂ.ಗೆ ಜಿಗಿತ:

ಶೃಂಗಸಭೆಯ ದಿನಗಳಲ್ಲಿ ಐಟಿಸಿ ಮೌರ್ಯ ಹೋಟೆಲ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ಒಂದು ರಾತ್ರಿಯ ತಂಗುವಿಕೆಗೆ ಸುಮಾರು 2.33 ಲಕ್ಷ ರೂ. ದರ ನಿಗದಿಪಡಿಸಲಾಗಿದೆ. ‘ಮೇಕ್‌ಮೈಟ್ರಿಪ್’ನಂತಹ ಥರ್ಡ್-ಪಾರ್ಟಿ ಬುಕಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ ಇದೇ ಕೊಠಡಿಯ ದರ 2.5 ಲಕ್ಷ ರೂ.ವರೆಗೆ ತಲುಪಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸುಷ್ಮಾ ಚಕ್ರೆ

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More
Loading...
Unable to load recommendations.
Follow Us