AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

7 ವರ್ಷಗಳ ನಂತರ ಬ್ರಿಕ್ಸ್ ಶೃಂಗಸಭೆಗೆ ಭಾರತಕ್ಕೆ ಆಗಮಿಸಲಿದ್ದಾರೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್

ಸೆಪ್ಟೆಂಬರ್ 12 ಮತ್ತು 13ರಂದು ನವದೆಹಲಿಯಲ್ಲಿ ನಡೆಯಲಿರುವ ಬ್ರಿಕ್ಸ್ (BRICS) ಶೃಂಗಸಭೆಯಲ್ಲಿ ಭಾಗವಹಿಸಲು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಭಾರತಕ್ಕೆ ಆಗಮಿಸುವ ನಿರೀಕ್ಷೆಯಿದೆ. ಈ ಭೇಟಿ ಅಧಿಕೃತವಾಗಿ ಖಚಿತಗೊಂಡರೆ 2020ರ ಗಾಲ್ವಾನ್ ಕಣಿವೆ ಸಂಘರ್ಷದ ನಂತರ ಹಾಗೂ ಕಳೆದ 7 ವರ್ಷಗಳಲ್ಲೇ ಕ್ಸಿ ಜಿನ್‌ಪಿಂಗ್ ಕೈಗೊಳ್ಳುತ್ತಿರುವ ಮೊದಲ ಭಾರತ ಪ್ರವಾಸ ಇದಾಗಲಿದೆ. ಸೆಪ್ಟೆಂಬರ್ 12 ಮತ್ತು 13ರಂದು ನವದೆಹಲಿ ಬ್ರಿಕ್ಸ್ ಶೃಂಗಸಭೆಯನ್ನು ಆಯೋಜಿಸಲು ಸಿದ್ಧವಾಗಿದೆ.

7 ವರ್ಷಗಳ ನಂತರ ಬ್ರಿಕ್ಸ್ ಶೃಂಗಸಭೆಗೆ ಭಾರತಕ್ಕೆ ಆಗಮಿಸಲಿದ್ದಾರೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್
Pm Modi With China PresidentImage Credit source: PTI
ಸುಷ್ಮಾ ಚಕ್ರೆ
|

Updated on: Aug 25, 2026 | 7:44 PM

Share

ನವದೆಹಲಿ, ಆಗಸ್ಟ್ 25: ಮುಂದಿನ ತಿಂಗಳು ನವದೆಹಲಿಯಲ್ಲಿ ನಡೆಯಲಿರುವ ಬ್ರಿಕ್ಸ್ (BRICS) ಶೃಂಗಸಭೆಯಲ್ಲಿ ಭಾಗವಹಿಸಲು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ (Xi Jinping) ಸುಮಾರು 400 ಅಧಿಕಾರಿಗಳನ್ನೊಳಗೊಂಡ ಬೃಹತ್ ನಿಯೋಗದೊಂದಿಗೆ ಭಾರತಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ. ಗಡಿ ವಿವಾದದಿಂದಾಗಿ ಕಳೆದ ಕೆಲವು ವರ್ಷಗಳಿಂದ ಉದ್ವಿಗ್ನಗೊಂಡಿದ್ದ ಭಾರತ ಮತ್ತು ಚೀನಾ ನಡುವಿನ ಸಂಬಂಧಗಳು ಸುಧಾರಿಸುತ್ತಿರುವ ಹಿನ್ನೆಲೆಯಲ್ಲಿ ಈ ಭೇಟಿ ಬಹಳ ಮುಖ್ಯವಾಗಿದೆ. ಈ ಭೇಟಿ ಅಧಿಕೃತವಾಗಿ ಖಚಿತಗೊಂಡರೆ, 7 ವರ್ಷಗಳ ನಂತರ ಕ್ಸಿ ಜಿನ್‌ಪಿಂಗ್ ಅವರು ಭಾರತಕ್ಕೆ ನೀಡುತ್ತಿರುವ ಮೊದಲ ಪ್ರವಾಸ ಇದಾಗಲಿದೆ.

2020ರ ಗಾಲ್ವಾನ್ ಕಣಿವೆ ಸಂಘರ್ಷದ ನಂತರ ಉಭಯ ದೇಶಗಳ ನಡುವಿನ ಬಾಂಧವ್ಯವನ್ನು ಸ್ಥಿರಗೊಳಿಸಲು ನಡೆಯುತ್ತಿರುವ ಪ್ರಯತ್ನಗಳ ಹಿನ್ನೆಲೆಯಲ್ಲಿ ಅವರ ಈ ಭೇಟಿ ತೀವ್ರ ಕುತೂಹಲ ಕೆರಳಿಸಿದೆ. ಗಡಿ ಹಾಗೂ ಪ್ರಾದೇಶಿಕ ಭದ್ರತೆಗೆ ಸಂಬಂಧಿಸಿದ ಭಿನ್ನಾಭಿಪ್ರಾಯಗಳನ್ನು ನಿರ್ವಹಿಸುತ್ತಲೇ ಸಂಬಂಧವನ್ನು ಸುಧಾರಿಸಲು ಎರಡೂ ದೇಶಗಳು ಪ್ರಯತ್ನಿಸುತ್ತಿವೆ.

ಇದನ್ನೂ ಓದಿ: ಭಾರತ-ಚೀನಾ ಗಡಿ ಮಾತುಕತೆ: ಬೀಜಿಂಗ್​ನಲ್ಲಿ ಆ. 24ರಂದು ಅಜಿತ್ ದೋವಲ್ ಮತ್ತು ವಾಂಗ್ ಯಿ ಭೇಟಿ

ಬೃಹತ್ ನಿಯೋಗ ಮತ್ತು ಭದ್ರತಾ ಸಿದ್ಧತೆ:

ವರದಿಗಳ ಪ್ರಕಾರ, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಸುಮಾರು 400 ಅಧಿಕಾರಿಗಳನ್ನೊಳಗೊಂಡ ಬೃಹತ್ ನಿಯೋಗದೊಂದಿಗೆ ಭಾರತಕ್ಕೆ ಭೇಟಿ ನೀಡುವ ಸಾಧ್ಯತೆಯಿದೆ. ಇದು 2019ರಲ್ಲಿ ನಡೆದ ಅವರ ಕೊನೆಯ ಭಾರತ ಪ್ರವಾಸದಲ್ಲಿದ್ದ ನಿಯೋಗದ ಗಾತ್ರಕ್ಕಿಂತ ಎರಡರಷ್ಟಿರಲಿದೆ. ಚೀನಾದ ಅಧಿಕಾರಿಗಳ ತಂಡ ಈಗಾಗಲೇ ನವದೆಹಲಿಯಲ್ಲಿ ಹೋಟೆಲ್ ಕಾಯ್ದಿರಿಸುವಿಕೆ ಮತ್ತು ಭದ್ರತಾ ನಿಯಮಾವಳಿಗಳನ್ನು ಅಂತಿಮಗೊಳಿಸುವ ಕೆಲಸದಲ್ಲಿ ನಿರತವಾಗಿದೆ ಎನ್ನಲಾಗಿದೆ.

ಈ ಪ್ರವಾಸದ ಕುರಿತು ಪ್ರತಿಕ್ರಿಯಿಸಿರುವ ಚೀನಾದ ವಿದೇಶಾಂಗ ಸಚಿವಾಲಯವು, ಬ್ರಿಕ್ಸ್ ಸಹಕಾರಕ್ಕೆ ಚೀನಾ ಹೆಚ್ಚಿನ ಆದ್ಯತೆ ನೀಡುತ್ತದೆ ಮತ್ತು ಭಾರತದ ಅಧ್ಯಕ್ಷತೆಯಲ್ಲಿ ನಡೆಯುವ ಶೃಂಗಸಭೆಗೆ ಸಂಪೂರ್ಣ ಬೆಂಬಲ ನೀಡುತ್ತದೆ ಎಂದು ತಿಳಿಸಿದೆ.

ಇದನ್ನೂ ಓದಿ: ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇಗಿಂತ 18 ಪಟ್ಟು ದೊಡ್ಡದು: ಗಡಿಯಲ್ಲಿ 25,000 ಕಿ.ಮೀ ಉದ್ದದ ಮೆಗಾ ರಿಂಗ್ ರೋಡ್ ನಿರ್ಮಿಸುತ್ತಿದೆ ಚೀನಾ

ಚೀನಾ ಅಧ್ಯಕ್ಷರ ಪ್ರಯಾಣದ ಅಂತಿಮ ವೇಳಾಪಟ್ಟಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ದ್ವಿಪಕ್ಷೀಯ ಮಾತುಕತೆಯ ಕಾರ್ಯಸೂಚಿ ಇನ್ನೂ ಅಂತಿಮಗೊಂಡಿಲ್ಲ. ಈ ಕುರಿತು ಪ್ರತಿಕ್ರಿಯಿಸಿರುವ ಚೀನಾದ ವಿದೇಶಾಂಗ ಸಚಿವಾಲಯ, “ಚೀನಾ ಬ್ರಿಕ್ಸ್ ಸಹಕಾರಕ್ಕೆ ಹೆಚ್ಚಿನ ಆದ್ಯತೆ ನೀಡುತ್ತದೆ ಮತ್ತು ಭಾರತದ ಅಧ್ಯಕ್ಷತೆಯಲ್ಲಿ ನಡೆಯುವ ಶೃಂಗಸಭೆಗೆ ಬೆಂಬಲ ನೀಡುತ್ತದೆ. ಆದರೆ ಪ್ರವಾಸದ ಕುರಿತು ಪ್ರಸ್ತುತ ಯಾವುದೇ ಅಧಿಕೃತ ಮಾಹಿತಿ ಇಲ್ಲ” ಎಂದು ಹೇಳಿದೆ. ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವೂ ಈ ಕುರಿತು ಇನ್ನೂ ಯಾವುದೇ ಹೇಳಿಕೆ ನೀಡಿಲ್ಲ.

ಭಾರತ-ಚೀನಾ ಗಡಿ ಬಿಕ್ಕಟ್ಟು:

ಭಾರತ ಮತ್ತು ಚೀನಾ ಸುಮಾರು 3,800 ಕಿಲೋಮೀಟರ್‌ ಉದ್ದದ ಗಡಿಯನ್ನು ಹಂಚಿಕೊಂಡಿವೆ. 2020ರ ಗಾಲ್ವಾನ್ ಕಣಿವೆ ಸಂಘರ್ಷದ ನಂತರ ಉಭಯ ದೇಶಗಳ ಬಾಂಧವ್ಯ ತೀವ್ರವಾಗಿ ಹದಗೆಟ್ಟಿತ್ತು. ಅಕ್ಟೋಬರ್ 24ರಂದು ಸೈನಿಕರ ಹಿಂಪಡೆಯುವಿಕೆ ಒಪ್ಪಂದ ಏರ್ಪಟ್ಟಿತಾದರೂ, ಉದ್ವಿಗ್ನತೆ ಸಂಪೂರ್ಣವಾಗಿ ಶಮನಗೊಂಡಿಲ್ಲ. ಇತ್ತೀಚೆಗೆ ಅರುಣಾಚಲ ಪ್ರದೇಶದ ಗಡಿ ಭಾಗದಲ್ಲಿ ಭಾರತ ಮತ್ತು ಚೀನಾ ಸೈನಿಕರು ಮುಖಾಮುಖಿಯಾಗಿದ್ದರು ಎಂಬ ವರದಿಗಳ ನಡುವೆ, ಗಡಿಯಲ್ಲಿ ಶಾಂತಿ ಕಾಯ್ದುಕೊಳ್ಳುವುದು ದ್ವಿಪಕ್ಷೀಯ ಬಾಂಧವ್ಯಕ್ಕೆ ಅತ್ಯಗತ್ಯ ಎಂದು ಭಾರತ ಪ್ರತಿಪಾದಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಕರ್ತವ್ಯ ಲೋಪ ಕೇಸ್​: ಶಾಸಕ ಉಮೇಶ್ ಮೇಟಿ ಸೊಸೆ ಡಾ ಅಂಕಿತಾ ಯರಗಲ್​​ ವಜಾ
ಕರ್ತವ್ಯ ಲೋಪ ಕೇಸ್​: ಶಾಸಕ ಉಮೇಶ್ ಮೇಟಿ ಸೊಸೆ ಡಾ ಅಂಕಿತಾ ಯರಗಲ್​​ ವಜಾ
ಗಣಪತಿ ಮೆರವಣಿಗೆಗೆ ಇರುವ ಕಂಡೀಷನ್​​, ಈದ್​ ಮಿಲಾದ್​ಗೆ ಯಾಕಿಲ್ಲ?: ಅಶೋಕ್​
ಗಣಪತಿ ಮೆರವಣಿಗೆಗೆ ಇರುವ ಕಂಡೀಷನ್​​, ಈದ್​ ಮಿಲಾದ್​ಗೆ ಯಾಕಿಲ್ಲ?: ಅಶೋಕ್​
ವಿಜಯಪುರದಲ್ಲಿ ಅಗ್ನಿವೀರ್​ ನೇಮಕಾತಿ: 11 ಜಿಲ್ಲೆಗಳಿಂದ ಅಭ್ಯರ್ಥಿಗಳು ಭಾಗಿ
ವಿಜಯಪುರದಲ್ಲಿ ಅಗ್ನಿವೀರ್​ ನೇಮಕಾತಿ: 11 ಜಿಲ್ಲೆಗಳಿಂದ ಅಭ್ಯರ್ಥಿಗಳು ಭಾಗಿ
ಚಾಮರಾಜನಗರದಲ್ಲಿ ಕಾಡಾನೆ ದಾಳಿಗೆ ರೈತ ಬಲಿ
ಚಾಮರಾಜನಗರದಲ್ಲಿ ಕಾಡಾನೆ ದಾಳಿಗೆ ರೈತ ಬಲಿ
ಬಿಗ್ ಬಾಸ್ ಮನೆಯಲ್ಲಿ ಮಿತಿ ಮೀರಿದ ಜಗಳ: ಸೌಂದರ್ಯಾ-ಮಂಜು ನಡುವೆ ಗಲಾಟೆ
ಬಿಗ್ ಬಾಸ್ ಮನೆಯಲ್ಲಿ ಮಿತಿ ಮೀರಿದ ಜಗಳ: ಸೌಂದರ್ಯಾ-ಮಂಜು ನಡುವೆ ಗಲಾಟೆ
ಹುಬ್ಬಳ್ಳಿಯಲ್ಲಿ ಈದ್ಗಾ ಮೈದಾನದಲ್ಲಿ ಎಲ್ಲರ ಗಮನ ಸೆಳೆದ ಕೇಸರಿ ಗಣೇಶ
ಹುಬ್ಬಳ್ಳಿಯಲ್ಲಿ ಈದ್ಗಾ ಮೈದಾನದಲ್ಲಿ ಎಲ್ಲರ ಗಮನ ಸೆಳೆದ ಕೇಸರಿ ಗಣೇಶ
ಮೈಸೂರಿನಲ್ಲಿ ಹಿಂದೂ-ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶೋತ್ಸವ
ಮೈಸೂರಿನಲ್ಲಿ ಹಿಂದೂ-ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶೋತ್ಸವ
ಬಿಜೆಪಿ ಹೇಳಿದಂಗೆ ಇನ್ಸ್​ಪೆಕ್ಟರ್​ ಧನಂಜಯ್​ನ ಸಸ್ಪೆಂಡ್ ಮಾಡೋಕ್ಕಾಗಲ್ಲ
ಬಿಜೆಪಿ ಹೇಳಿದಂಗೆ ಇನ್ಸ್​ಪೆಕ್ಟರ್​ ಧನಂಜಯ್​ನ ಸಸ್ಪೆಂಡ್ ಮಾಡೋಕ್ಕಾಗಲ್ಲ
ಡಿಕೆಶಿ ನೇತೃತ್ವದ ಸರ್ಕಾರಕ್ಕೆ ಶತದಿನದ ಸಂಭ್ರಮ: ವಿಧಾನಸೌಧಕ್ಕೆ ದೀಪಾಲಂಕಾರ
ಡಿಕೆಶಿ ನೇತೃತ್ವದ ಸರ್ಕಾರಕ್ಕೆ ಶತದಿನದ ಸಂಭ್ರಮ: ವಿಧಾನಸೌಧಕ್ಕೆ ದೀಪಾಲಂಕಾರ
ತಿರುಪತಿ ಎಕ್ಸ್‌ಪ್ರೆಸ್ ಹೋರಿ ಜನ್ಮದಿನ: ಕೇಕ್ ಕತ್ತರಿಸಿ ಸಂಭ್ರಮಾಚರಣೆ
ತಿರುಪತಿ ಎಕ್ಸ್‌ಪ್ರೆಸ್ ಹೋರಿ ಜನ್ಮದಿನ: ಕೇಕ್ ಕತ್ತರಿಸಿ ಸಂಭ್ರಮಾಚರಣೆ