‘ಆಸ್ಪತ್ರೆಯಲ್ಲಿ ಸಿಬ್ಬಂದಿಗಳು ಮಲಯಾಳಂನಲ್ಲಿ ಮಾತನಾಡಬಾರದು’ ಎಂಬ ಆದೇಶ ಹಿಂಪಡೆದ ದೆಹಲಿಯ ಜಿಬಿ ಪಂತ್ ಆಸ್ಪತ್ರೆ

'ಆಸ್ಪತ್ರೆಯಲ್ಲಿ ಸಿಬ್ಬಂದಿಗಳು ಮಲಯಾಳಂನಲ್ಲಿ ಮಾತನಾಡಬಾರದು' ಎಂಬ ಆದೇಶ ಹಿಂಪಡೆದ ದೆಹಲಿಯ ಜಿಬಿ ಪಂತ್ ಆಸ್ಪತ್ರೆ
ಪ್ರಾತಿನಿಧಿಕ ಚಿತ್ರ

Malayalam: ಈ ಆದೇಶವು ದೆಹಲಿ ಸರ್ಕಾರದಿಂದ ಅಥವಾ ಆಸ್ಪತ್ರೆಯ ಆಡಳಿತದಿಂದ ಬಂದಿಲ್ಲ. ಈ ಆದೇಶದ ಬಗ್ಗೆ ನನಗೆ ತಿಳಿದಿರಲಿಲ್ಲ. ಇದು ಶುಶ್ರೂಷಾ ಸಿಬ್ಬಂದಿಯೊಳಗಿನ ಆಂತರಿಕ ಸಂವಹನ ಎಂದು ತೋರುತ್ತದೆ. ತಕ್ಷಣದ ಕ್ರಮವೆಂದರೆ ಸಮಸ್ಯೆಯನ್ನು ಸರಿಪಡಿಸುವುದು. ತಮ್ಮ ಭಾಷೆಯಲ್ಲಿ ಭಾಷೆ ಅರಿಯುವವರೊಂದಿಗೆ ಮಾತುಕತೆ ನಡೆಸುವುದು ಅವರ ಮೂಲಭೂತ ಹಕ್ಕು.

TV9kannada Web Team

| Edited By: Rashmi Kallakatta

Jun 06, 2021 | 12:32 PM

ದೆಹಲಿ: ದೆಹಲಿಯಲ್ಲಿರುವ ಗೋವಿಂದ್ ಬಲ್ಲಭ್ ಪಂತ್ ಇನ್ಸ್ಟಿಟ್ಯೂಟ್ ಆಫ್ ಪೋಸ್ಟ್ ಗ್ರಾಜುವೇಟ್ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಕೇಂದ್ರದಲ್ಲಿ (GIPMER) ನರ್ಸಿಂಗ್ ಸಿಬ್ಬಂದಿಗಳು ಮಲಯಾಳಂನಲ್ಲಿ ಮಾತನಾಡಬಾರದು ಎಂಬ ಆದೇಶವನ್ನು ಹಿಂಪಡೆಯಲಾಗಿದೆ ಎಂದು ಸಂಸ್ಥೆಯ ವೈದ್ಯಕೀಯ ನಿರ್ದೇಶಕ ಡಾ.ಅನಿಲ್ ಅಗರ್ವಾಲ್  ಭಾನುವಾರ ತಿಳಿಸಿದ್ದಾರೆ.

ದೆಹಲಿ ಸರ್ಕಾರಿ ಆಸ್ಪತ್ರೆಯ ನರ್ಸಿಂಗ್ ಸೂಪರಿಂಟೆಂಡೆಂಟ್ ಶನಿವಾರ ಹೊರಡಿಸಿದ ಆದೇಶದಲ್ಲಿ, “GIPMER ನಲ್ಲಿ ಸಿಬ್ಬಂದಿಗಳು ಸಂವಹನಕ್ಕಾಗಿ ಮಲಯಾಳಂ ಭಾಷೆಯನ್ನು ಬಳಸುತ್ತಿರುವ ಬಗ್ಗೆ ದೂರು ಬಂದಿದೆ. ಆದರೆ ಹೆಚ್ಚಿನ ರೋಗಿಗಳಿಗೆ ಮತ್ತು ಸಹೋದ್ಯೋಗಿಗಳಿಗೆ ಈ ಭಾಷೆ ತಿಳಿದಿಲ್ಲ. ಹಾಗಾಗಿ ಇದು ಅನಾನುಕೂಲತೆಯನ್ನು ಉಂಟುಮಾಡುತ್ತಾರೆ. ಆದ್ದರಿಂದ ಸಂವಹನಕ್ಕಾಗಿ ಹಿಂದಿ ಮತ್ತು ಇಂಗ್ಲಿಷ್ ಮಾತ್ರ ಬಳಸುವಂತೆ ಎಲ್ಲಾ ನರ್ಸಿಂಗ್ ಸಿಬ್ಬಂದಿಗೆ ನಿರ್ದೇಶಿಸಲಾಗಿದೆ. ಇಲ್ಲದಿದ್ದರೆ ಗಂಭೀರ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿತ್ತು. ಭಾನುವಾರ ಬೆಳಿಗ್ಗೆ ಡಾ. ಅಗರ್ವಾಲ್ ಅವರು ಆದೇಶವನ್ನು ಹಿಂಪಡೆಯಲಾಗಿದೆ ಎಂದು ಹೇಳಿದ್ದಾರೆ.

“ಈ ಆದೇಶವು ದೆಹಲಿ ಸರ್ಕಾರದಿಂದ ಅಥವಾ ಆಸ್ಪತ್ರೆಯ ಆಡಳಿತದಿಂದ ಬಂದಿಲ್ಲ. ಈ ಆದೇಶದ ಬಗ್ಗೆ ನನಗೆ ತಿಳಿದಿರಲಿಲ್ಲ. ಇದು ಶುಶ್ರೂಷಾ ಸಿಬ್ಬಂದಿಯೊಳಗಿನ ಆಂತರಿಕ ಸಂವಹನ ಎಂದು ತೋರುತ್ತದೆ. ತಕ್ಷಣದ ಕ್ರಮವೆಂದರೆ ಸಮಸ್ಯೆಯನ್ನು ಸರಿಪಡಿಸುವುದು. ತಮ್ಮ ಭಾಷೆಯಲ್ಲಿ ಭಾಷೆ ಅರಿಯುವವರೊಂದಿಗೆ ಮಾತುಕತೆ ನಡೆಸುವುದು ಅವರ ಮೂಲಭೂತ ಹಕ್ಕು. ಈ ರೀತಿಯ ಆದೇಶಗಳು ಸರಿಯಲ್ಲ ಅವರು ಹೇಳಿರುವುದಾಗಿ ಇಂಡಿಯನ್ ಎಕ್ಸ್ ಪ್ರೆಸ್ ವರದಿಮಾಡಿದೆ.

ಸುತ್ತೋಲೆ ಆಕ್ರೋಶಕ್ಕೆ ಕಾರಣವಾಗಿದ್ದು, ಹಿರಿಯ ರಾಜಕೀಯ ಮುಖಂಡರು ಇದನ್ನು ಖಂಡಿಸಿದ್ದಾರೆ. ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಈ ಬಗ್ಗೆ ಟ್ವೀಟ್ ಮಾಡಿದ್ದು, ಭಾರತದ ಇತರ ಭಾಷೆಯಂತಚೆ ಮಲಯಾಳಂ ಕೂಡಾ ಇನ್ನೊಂದು ಭಾಷೆ. ಭಾಷಾ ತಾರತಮ್ಯವನ್ನು ನಿಲ್ಲಿಸಿ ಎಂದಿದ್ದಾರೆ.

ಸುತ್ತೋಲೆಯನ್ನು ಹಿಂತೆಗೆದುಕೊಳ್ಳುವಂತೆ ರಾಜಸ್ಥಾನದ ಕಾಂಗ್ರೆಸ್ ರಾಜ್ಯಸಭಾ ಸಂಸದ ಕೆ ಸಿ ವೇಣುಗೋಪಾಲ್ ಅವರು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅವರಿಗೆ ಪತ್ರ ಬರೆದಿದ್ದರು. ಇದು “ಹೆಚ್ಚು ತಾರತಮ್ಯ ಮತ್ತು ನಮ್ಮ ಸಂವಿಧಾನವು ಖಾತರಿಪಡಿಸಿದ ಮೂಲಭೂತ ಮೂಲಭೂತ ಹಕ್ಕನ್ನು ನಿರಾಕರಿಸುತ್ತಿದೆ” ಎಂದು ವೇಣುಗೋಪಾಲ್ ಹೇಳಿದ್ದಾರೆ.

ತಿರುವನಂತಪುರಂನ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ಈ ಬಗ್ಗೆ ಟ್ವೀಟ್ ಮಾಡಿದ್ದು “ಪ್ರಜಾಪ್ರಭುತ್ವ ಭಾರತದಲ್ಲಿ ಸರ್ಕಾರಿ ಸಂಸ್ಥೆಯು ತನ್ನ ದಾದಿಯರಲ್ಲಿ ತಮ್ಮ ಮಾತೃಭಾಷೆಯಲ್ಲಿ ಅರ್ಥಮಾಡಿಕೊಳ್ಳಬಲ್ಲ ಇತರರೊಂದಿಗೆ ಮಾತನಾಡಬಾರದು ಎಂದದು ಹೇಳಿರುವುದು ಮನಸ್ಸನ್ನು ಕಂಗೆಡಿಸುತ್ತದೆ. ಇದು ಸ್ವೀಕಾರಾರ್ಹವಲ್ಲ.ಇದು ಭಾರತೀಯ ನಾಗರಿಕರ ಮೂಲಭೂತ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದಿದ್ದಾರೆ.

ಇದನ್ನೂ ಓದಿ: ‘ಇನ್ಮುಂದೆ ರೋಗಿಗಳು, ಸಹೋದ್ಯೋಗಿಗಳ ಜತೆ ಮಲಯಾಳಂನಲ್ಲಿ ಮಾತಾಡಬೇಡಿ..’ -ನರ್ಸ್​ ಸಿಬ್ಬಂದಿಗೆ ಸುತ್ತೋಲೆ ಹೊರಡಿಸಿದ ಸರ್ಕಾರಿ ಆಸ್ಪತ್ರೆ

(Delhi Govind Ballabh Pant hospital circular asking nursing staff not to converse in Malayalam has been withdrawn)

Follow us on

Related Stories

Most Read Stories

Click on your DTH Provider to Add TV9 Kannada