ಈ ರಾಜ್ಯದಲ್ಲಿ 45 ದಿನ ಬಾರ್, ಲಿಕ್ಕರ್ ಶಾಪ್ಗಳು ಬಂದ್; ಮದ್ಯಪ್ರಿಯರಿಗೆ ಶಾಕ್ ನೀಡಿದ ಸರ್ಕಾರ
ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರ ಹೊಸ ಅಬಕಾರಿ ನೀತಿಯನ್ನು ಜಾರಿಗೆ ತಂದಿದ್ದು ಅದರ ಅನುಸಾರ ಅಕ್ಟೋಬರ್ 1ರಿಂದ ಖಾಸಗಿ ಲಿಕ್ಕರ್ ಶಾಪ್ಗಳನ್ನು ತೆರೆಯುವಂತಿಲ್ಲ.
ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಅಕ್ಟೋಬರ್ 1ರಿಂದ 45 ದಿನಗಳ ಕಾಲ ಖಾಸಗಿ ಲಿಕ್ಕರ್ ಶಾಪ್, ಬಾರ್ಗಳನ್ನು ಮುಚ್ಚಲಾಗುವುದು. ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರ ಹೊಸ ಅಬಕಾರಿ ನೀತಿಯನ್ನು ಜಾರಿಗೆ ತಂದಿದ್ದು ಅದರ ಅನುಸಾರ ಅಕ್ಟೋಬರ್ 1ರಿಂದ ಖಾಸಗಿ ಲಿಕ್ಕರ್ ಶಾಪ್ಗಳನ್ನು ತೆರೆಯುವಂತಿಲ್ಲ. ಅ. 1ರಿಂದ ನವೆಂಬರ್ 17ರವರೆಗೆ ದೆಹಲಿಯಲ್ಲಿ ಲಿಕ್ಕರ್ ಅಥವಾ ಆಲ್ಕೋಹಾಲ್ ಮಾರಾಟ ಮಾಡುವಂತಿಲ್ಲ.
ಹೀಗಾಗಿ, ಖಾಸಗಿ ಲಿಕ್ಕರ್ ಶಾಪ್ಗಳು ಹೊಸತಾಗಿ ಆಲ್ಕೋಹಾಲ್ ಸ್ಟಾಕ್ ಮಾಡುತ್ತಿಲ್ಲ. ಇದರಿಂದ ಈಗಾಗಲೇ ಕೆಲವು ಬಾರ್ ಹಾಗೂ ಲಿಕ್ಕರ್ ಶಾಪ್ಗಳಲ್ಲಿ ಆಲ್ಕೋಹಾಲ್ ಅಭಾವ ಕಂಡುಬರುತ್ತಿದೆ. ಖಾಸಗಿ ಲಿಕ್ಕರ್ ಶಾಪ್ಗಳಲ್ಲಿ ಬಹುತೇಕ ಅಂಗಡಿಗಳು ಪರ್ಮನೆಂಟ್ ಆಗಿಯೇ ಮುಚ್ಚಲಿವೆ. ಸದ್ಯಕ್ಕೆ ದೆಹಲಿಯಲ್ಲಿ 849 ಮದ್ಯದಂಗಡಿಗಳಿವೆ. ಅವುಗಳಲ್ಲಿ 276 ಖಾಸಗಿಯಾಗಿ ಲಿಕ್ಕರ್ ಶಾಪ್ಗಳಾಗಿವೆ. ಬಾಕಿ ಮದ್ಯದಂಗಡಿಗಳನ್ನು ದೆಹಲಿ ಸರ್ಕಾರದ ಏಜೆನ್ಸಿಗಳು ನಡೆಸುತ್ತವೆ.
ಅಂದಹಾಗೆ, ಅಕ್ಟೋಬರ್ 1ರಿಂದ ಸರ್ಕಾರ ನಡೆಸುವ ಮದ್ಯದಂಗಡಿಗಳನ್ನು ಮಾತ್ರ ತೆರೆಯಲಾಗುತ್ತದೆ. ಖಾಸಗಿ ಮದ್ಯದಂಗಡಿಗಳು ನವೆಂಬರ್ 17ರವರೆಗೆ ಮುಚ್ಚಲಿವೆ. ದೆಹಲಿ ಸರ್ಕಾರದ ಹೊಸ ಅಬಕಾರಿ ನೀತಿಯಡಿ ಚಿಲ್ಲರೆ ಮಾರಾಟ ಕೇಂದ್ರಗಳನ್ನು ತೆರೆಯಲು ಸರ್ಕಾರ ಬಿಡ್ ಆಹ್ವಾನಿಸಿ ಟೆಂಡರ್ ಕರೆದಿತ್ತು. ಈ ಬಗ್ಗೆ ಸೆ. 15ರಂದು ಸರ್ಕಾರ ಘೋಷಣೆ ಮಾಡಿತ್ತು.
ದೆಹಲಿಯಲ್ಲಿ ಮದ್ಯ ಮಾಫಿಯಾವನ್ನು ತಡೆಗಟ್ಟುವ ಉದ್ದೇಶದಿಂದ ದೆಹಲಿ ಸರ್ಕಾರ ಹೊಸ ಅಬಕಾರಿ ನೀತಿಯನ್ನು ಘೋಷಿಸಿತ್ತು. ದೆಹಲಿ ಸರ್ಕಾರವು ನಗರದಲ್ಲಿ ವಿಂಗಡಿಸಿರುವ 32 ವಲಯಗಳಲ್ಲಿ ಎಲ್-7ವಿ (ಭಾರತೀಯ ಮತ್ತು ವಿದೇಶಿ ಮದ್ಯ) ಪರವಾನಗಿಗಳಿಗೆ ಟೆಂಡರ್ ನೀಡಿತ್ತು. ಅಬಕಾರಿಯ ಈ ಹೊಸ ನೀತಿಯನ್ನು ಜನರಿಗಾಗಿ ಜಾರಿಗೊಳಿಸಲಾಗಿದ್ದು, ಎಲ್-7ವಿ (ಭಾರತೀಯ ಮತ್ತು ವಿದೇಶಿ ಮದ್ಯ) ರೂಪದಲ್ಲಿ ಚಿಲ್ಲರೆ ಮಾರಾಟವನ್ನು ಯಾವುದೇ ಮಾರುಕಟ್ಟೆ, ಮಾಲ್, ಕಮರ್ಷಿಯಲ್ ರೋಡ್ ಮತ್ತು ಏರಿಯಾ, ಸ್ಥಳೀಯ ಶಾಪಿಂಗ್ ಕಾಂಪ್ಲೆಕ್ಸ್ ಮುಂತಾದ ರಸ್ತೆಗಳಲ್ಲಿ ತೆರೆಯಬಹುದು.
ಇದನ್ನೂ ಓದಿ: ದೆಹಲಿ ಪ್ರವಾಸಿ ತಾಣಗಳ ಮಾಹಿತಿ ನೀಡುವ ಆ್ಯಪ್ ಬಿಡುಗಡೆ: ದೆಹಲಿಯನ್ನು ಅನುಭವಿಸಿ
ದೆಹಲಿ ಕೋರ್ಟ್ನಲ್ಲಿ ಫೈರಿಂಗ್: ಜೈಲಿನಲ್ಲಿದ್ದೇ ಲೈವ್ ಅಪ್ಡೇಟ್ಸ್ ಪಡೆಯುತ್ತಿದ್ದ ಗ್ಯಾಂಗ್ಸ್ಟರ್
(Delhi Liquor Shops To Remain Shut For 45 Days from October 1 as per New Excise Policy by Arvind Kejriwal Government)
Published On - 9:09 pm, Mon, 27 September 21