ಸ್ನೇಹಿತರನ್ನು ಇಂಪ್ರೆಸ್ ಮಾಡಲು ಪಾರ್ಟಿಗೆ ಗನ್ ತಂದು ಪೊಲೀಸರ ಅತಿಥಿಯಾದ
ತನ್ನ ಸ್ನೇಹಿತರನ್ನು ಇಂಪ್ರೆಸ್ ಮಾಡಲು ಪಾರ್ಟಿಗೆ ಗನ್ ತೆಗೆದುಕೊಂಡು ಹೋಗಿ ಇದೀಗ ಪೊಲೀಸರ ಅತಿಥಿಯಾಗಿರುವ ಘಟನೆ ವರದಿಯಾಗಿದೆ.
ತನ್ನ ಸ್ನೇಹಿತರನ್ನು ಇಂಪ್ರೆಸ್ ಮಾಡಲು ಪಾರ್ಟಿಗೆ ಗನ್ ತೆಗೆದುಕೊಂಡು ಹೋಗಿ ಇದೀಗ ಪೊಲೀಸರ ಅತಿಥಿಯಾಗಿರುವ ಘಟನೆ ವರದಿಯಾಗಿದೆ.ದೆಹಲಿಯಲ್ಲಿ ಈ ಘಟನೆ ನಡೆದಿದ್ದು, ತನ್ನ ಸ್ನೇಹಿತರಿಗೆ ತೋರಿಸಲು ಪಾರ್ಟಿಗೆ ತನ್ನ ತಂದೆಯ ಗನ್ ತಂದಿದ್ದ ವ್ಯಕ್ತಿಯನ್ನು ನವದೆಹಲಿಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಉತ್ತರ ದೆಹಲಿಯ ರೂಪ್ ನಗರ ಪ್ರದೇಶದಲ್ಲಿ 22 ವರ್ಷದ ಯುವಕನನ್ನು ಪಾರ್ಟಿಗೆ ತನ್ನ ತಂದೆಯ ಗನ್ ತಂದಿದ್ದಕ್ಕಾಗಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯನ್ನು ಮೌಜ್‌ಪುರದ ಹರ್ಷ ಎಂದು ಗುರುತಿಸಲಾಗಿದೆ , ಆತ ತನ್ನ ತಂದೆಯ ಪಿಸ್ತೂಲ್ ಅನ್ನು ಕದ್ದು ತನ್ನ ಸ್ನೇಹಿತರನ್ನು ಮೆಚ್ಚಿಸಲು ಪಾರ್ಟಿಗೆ ತೆಗೆದುಕೊಂಡು ಹೋಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಕಳೆದ ಭಾನುವಾರ ರಾತ್ರಿ 11.45ಕ್ಕೆ ಶಕ್ತಿನಗರದಲ್ಲಿ ವ್ಯಕ್ತಿಯ ಕೈಯಲ್ಲಿ ಗನ್ ಇದ್ದಿದ್ದನ್ನು ಸ್ಥಳೀಯರೊಬ್ಬರು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಪೊಲೀಸರು ಆತನನ್ನು ಹಿಡಿದು, ಆತನ ಬಳಿಯಿದ್ದ ಗುಂಡುಗಳೊಂದಿಗೆ ಕಂಟ್ರಿ ಗನ್ ವಶಪಡಿಸಿಕೊಂಡಿದ್ದಾರೆ. ಪೊಲೀಸರು ವ್ಯಕ್ತಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಆತ ತಂದೆಯ ಅಲಮಾರಿಯಲ್ಲಿದ್ದ ಪಿಸ್ತೂಲ್ ಅನ್ನು ಕದ್ದು ತನ್ನ ಸ್ನೇಹಿತರನ್ನು ಮೆಚ್ಚಿಸಲು ಪಾರ್ಟಿಗೆ ತೆಗೆದುಕೊಂಡು ಹೋಗಿದ್ದ.
ವ್ಯಕ್ತಿಯ ತಂದೆ ಯೋಗೇಂದರ್ ಕುಮಾರ್ ಎಂಬುವವರು ಆಸ್ತಿ ಡೀಲರ್ ಆಗಿದ್ದು, ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ರಾಕೇಶ್ ಸೋಲಂಕಿ ಎಂಬುವವರ ಹೆಸರಿನಲ್ಲಿ ಪಿಸ್ತೂಲ್ ಖರೀದಿಸಿರುವುದಾಗಿ ತಿಳಿಸಿದ್ದಾರೆ. ಸೋಲಂಕಿ ಪಿಸ್ತೂಲಿನ ಪರವಾನಗಿ ಹೊಂದಿದ್ದು, ಎರಡು ದಿನಗಳ ಹಿಂದೆ ಉತ್ತರ ಪ್ರದೇಶದ ಹತ್ರಾಸ್ನಲ್ಲಿರುವ ಗ್ರಾಮಕ್ಕೆ ತೆರಳುವ ಮೊದಲು ಗನ್ ಅನ್ನು ಇಟ್ಟುಕೊಳ್ಲುವಂತೆ ಕುಮಾರ್ಗೆ ತಿಳಿಸಿದ್ದರು ಎನ್ನಲಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ