ಕೊನೆಗೂ ರೈತರ ಹಠಕ್ಕೆ ಮಣಿದ ದೆಹಲಿ ಪೊಲೀಸರು.. ‘ಕಿಸಾನ್ ಗಣತಂತ್ರ’ ಪರೇಡ್ಗೆ ಅನುಮತಿ
ನಾಳೆ ಗಣರಾಜ್ಯೋತ್ಸವದಂದು ದೆಹಲಿಯಲ್ಲಿ ಟ್ರಾಕ್ಟರ್ ಪರೇಡ್ ನಡೆಸಲು ರೈತರಿಗೆ ಕೊನೆಗೂ ಪೊಲೀಸರು ಅನುಮತಿ ನೀಡಿದ್ದಾರೆ. ಪರೇಡ್‌ನಲ್ಲಿ ಎರಡು ಲಕ್ಷ ಟ್ರ್ಯಾಕ್ಟರ್ ಭಾಗಿಯಾಗುವ ನಿರೀಕ್ಷೆಯಿದೆ. ಪೊಲೀಸ್ ಬಿಗಿ ಭದ್ರತೆಯಲ್ಲಿ ದೆಹಲಿ ಔಟರ್ ರಿಂಗ್ ರೋಡ್ನಲ್ಲಿ ಪರೇಡ್ ನಡೆಯಲಿದೆ.
ದೆಹಲಿ: ಕೇಂದ್ರ ಸರ್ಕಾರದ ಕೃಷಿ ತಿದ್ದುಪಡಿ ಕಾಯ್ದೆಗಳನ್ನು ವಾಪಾಸ್ ಪಡೆಯುವಂತೆ ರೈತರು ನಡೆಸುತ್ತಿರುವ ಹೋರಾಟ ತೀವ್ರ ಸ್ವರೂಪ ಪಡೆಯುತ್ತಿದೆ. ಕೇಂದ್ರ ಸರ್ಕಾರ ಮತ್ತು ರೈತ ಮುಖಂಡರ ನಡುವೆ ನಡೆದ 11 ಸುತ್ತಿನ ಮಾತುಕತೆಗಳು ವಿಫಲವಾಗಿವೆ. ಹೋರಾಟದ ತೀವ್ರತೆಯನ್ನು ಹೆಚ್ಚಿಸಲು ಮುಂದಾಗಿರುವ ರೈತರು ಗಣರಾಜ್ಯೋತ್ಸವ ದಿನದಂದು ದೆಹಲಿಯಲ್ಲಿ ಟ್ರ್ಯಾಕ್ಟರ್ ಱಲಿ ನಡೆಸಲು ಮುಂದಾಗಿದ್ದಾರೆ. ಮೊದಲು ರೈತರ ಟ್ರ್ಯಾಕ್ಟರ್ ಪರೇಡ್ಗೆ ದೆಹಲಿ ಪೊಲೀಸರು ಅನುಮತಿ ನೀಡಿರಲಿಲ್ಲ. ರೈತರು ಹಾಗೂ ಪೊಲೀಸರ ನಡುವೆ ನಡೆದ ಅನೇಕ ಸುತ್ತಿನ ಮಾತುಕತೆಗಳ ಬಳಿಕ ಕೊನೆಗೂ ರೈತರ ಹಠಕ್ಕೆ ಮಣಿದಿರುವ ಪೊಲೀಸರು ಟ್ರ್ಯಾಕ್ಟರ್ ಱಲಿಗೆ ಅನುಮತಿ ನೀಡಿದ್ದಾರೆ.
ಕೊನೆಗೂ ರೈತರ ಹಠಕ್ಕೆ ಮಣಿದ ದೆಹಲಿ ಪೊಲೀಸರು ರೈತರಿಗೆ ದೆಹಲಿಗೆ ಪ್ರವೇಶಿಸಲು ಮತ್ತು ಪ್ರತಿ ಮಾರ್ಗದಲ್ಲಿ 100 ಕಿ.ಮೀ ದೂರ ಪ್ರಯಾಣಿಸಲು ಅವಕಾಶ ನೀಡಲಾಗಿದೆ. ಕಿಸಾನ್ ಗಣತಂತ್ರ ಪರೇಡ್‌ನಲ್ಲಿ ಒಟ್ಟು 2 ಲಕ್ಷ ಟ್ರ್ಯಾಕ್ಟರ್‌ಗಳು ಭಾಗವಹಿಸಲಿವೆ. ಶಾಂತಿ-ಸುವ್ಯವಸ್ಥೆ ಕಾಪಾಡಲು 2,500 ಸ್ವಯಂ ಸೇವಕರನ್ನ ನಿಯೋಜಿಸಲಾಗುತ್ತೆ ಅಂತಾ ರೈತ ಮುಖಂಡರು ತಿಳಿಸಿದ್ದಾರೆ. ಪರೇಡ್‌ನಲ್ಲಿ ಭಾಗವಹಿಸುವ ಸಂಖ್ಯೆಯನ್ನ ಆಧರಿಸಿ ಸ್ವಯಂ ಸೇವಕರನ್ನು ನಿಯೋಜಿಸಲಾಗುತ್ತೆ ಅಂತಾ ರೈತ ಮುಖಂಡರು ಹೇಳಿದ್ದಾರೆ. ದೆಹಲಿಯ ಸಿಂಘು, ಟಿಕ್ರಿ, ಘಾಜಿಯಬಾದ್, ಬುರಾರಿ ಮೈದಾನದಿಂದ 2 ಲಕ್ಷ ಟ್ರ್ಯಾಕ್ಟರ್‌ಗಳು ದೆಹಲಿಯಲ್ಲಿ ಪರೇಡ್ ನಡೆಸಲಿವೆ. ಪಂಜಾಬ್, ಹರಿಯಾಣ, ಉತ್ತರ ಪ್ರದೇಶದಿಂದ ಟ್ರ್ಯಾಕ್ಟರ್‌ಗಳು ಬರುತ್ತಿದ್ದು, ಟ್ರ್ಯಾಕ್ಟರ್ ಱಲಿಗೆ ಪೊಲೀಸರು ನಿಗದಿತ ಮಾರ್ಗ ಸೂಚಿಸಿದ್ದಾರೆ.
ಸಿಂಘು ಗಡಿಯಿಂದ ಸಂಜಯ್ ಗಾಂಧಿ ಸಾರಿಗೆ ನಗರ ಮೂಲಕ ಬವಾನಾಗೆ ತೆರಳಿ, ಅಲ್ಲಿಂದ ವಾಪಸ್ ಗಡಿ ಮರಳಬೇಕು. ಟಿಕ್ರಿಯಿಂದ ನಜಾಫ್‌ಗರ್, ಧನ್ಸಾ, ಬದ್ಲಿ ಬಂದು ಬಳಿಕ ಟಿಕ್ರಿಗೆ ವಾಪಸ್ ಆಗಬೇಕಿದೆ. ಘಾಜಿಪುರ ಗಡಿಯಿಂದ ಘಾಜಿಯಾಬಾದ್, ದುಹೈಗೆ ತೆರಳಿ ಅಲ್ಲಿಂದ ವಾಪಸ್ ಆಗಬೇಕಿದೆ. ಹೀಗಾಗಿ ಪಂಜಾಬ್ನಿಂದ ಮನೆಗೊಂದರಂತೆ ಟ್ರ್ಯಾಕ್ಟರ್ಗಳನ್ನ ತನ್ನಿ ಅಂತಾ ರೈತ ಸಂಘಟನೆಗಳು ಸೂಚಿಸಿವೆ. ಟ್ರ್ಯಾಕ್ಟರ್ ಇದ್ದು ಪರೇಡ್‌ನಲ್ಲಿ ಭಾಗವಹಿಸದ ರೈತರಿಗೆ ಗ್ರಾಮದಿಂದ ಬಹಿಷ್ಕಾರ ಹಾಕುವ ಎಚ್ಚರಿಕೆಯನ್ನ ನೀಡಿದ್ದಾರೆ. ಟ್ರ್ಯಾಕ್ಟರ್ ಪರೇಡ್‌ನಲ್ಲಿ ಭಾಗಿಯಾಗುವವರು ರಾಜಕೀಯ ಪಕ್ಷಗಳ ಧ್ವಜ ತರುವಂತಿಲ್ಲ. ಕೇವಲ ರಾಷ್ಟ್ರೀಯ ಧ್ವಜ ಮತ್ತು ರೈತ ಸಂಘಟನೆಗಳ ಧ್ವಜ ಬಳಕೆ ಮಾಡಲು ಸೂಚನೆ ನೀಡಲಾಗಿದೆ.
ದೆಹಲಿಯಲ್ಲಿ ನಡೆಯಲಿರೋ ಟ್ರ್ಯಾಕ್ಟರ್ ಱಲಿ ಯಾವುದೇ ಕಾರಣಕ್ಕೂ ಗಣರಾಜ್ಯೋತ್ಸವ ಪರೇಡ್ಗೆ ಅಡ್ಡಿ ಮಾಡಲ್ಲ ಅಂತಾ ರೈತ ಮುಖಂಡರು ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ರಾಜ್ಪಥ್ನಲ್ಲಿ ನಡೆಯಲಿರೋ ಗಣರಾಜ್ಯೋತ್ಸವ ಸಂಭ್ರಮ ಯಾವುದೇ ಅಡ್ಡಿ ಆತಂಕ ಇಲ್ಲದೆ ನಡೆಯುವ ಭರವಸೆ ನೀಡಿದ್ದಾರೆ.
ದೆಹಲಿಯಲ್ಲಿ 2-3ದಿನಗಳಲ್ಲಿ ಮತ್ತಷ್ಟು ತೀವ್ರಗೊಳ್ಳಲಿದೆ ಚಳಿ; ಹವಾಮಾನ ಇಲಾಖೆ ಎಚ್ಚರಿಕೆ