ದೆಹಲಿಯಲ್ಲಿ ಭಾರಿ ಮಳೆ, ಮನೆ ಕುಸಿದು ತಾಯಿ, ಮಕ್ಕಳು ಸೇರಿ ನಾಲ್ಕು ಮಂದಿ ಸಾವು

Delhi Rains: ದೆಹಲಿ-ಎನ್​ಸಿಆರ್​ನಲ್ಲಿ ಗುಡುಗು ಸಹಿತ ಮಳೆ(Rain)ಯಾಗುತ್ತಿದೆ. ನಜಾಫ್‌ಗಢ ಪ್ರದೇಶದಲ್ಲಿ ಭಾರೀ ಮಳೆ ಮತ್ತು ಬಿರುಗಾಳಿಯ ನಂತರ ಮನೆ ಕುಸಿದು ಓರ್ವ ಮಹಿಳೆ ಮತ್ತು ಮೂವರು ಮಕ್ಕಳು ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ. ಕೃಷಿ ಜಮೀನಿನಲ್ಲಿ ನಿರ್ಮಿಸಲಾದ ಮನೆಯ ಮೇಲೆ ಮರ ಬಿದ್ದು ಈ ದುರಂತ ಅಪಘಾತ ಸಂಭವಿಸಿದೆ.

ದೆಹಲಿಯಲ್ಲಿ ಭಾರಿ ಮಳೆ, ಮನೆ ಕುಸಿದು ತಾಯಿ, ಮಕ್ಕಳು ಸೇರಿ ನಾಲ್ಕು ಮಂದಿ ಸಾವು
ಮಳೆ

Updated on: May 02, 2025 | 9:59 AM

ನವದೆಹಲಿ, ಮೇ 02: ದೆಹಲಿ-ಎನ್​ಸಿಆರ್​ನಲ್ಲಿ ಗುಡುಗು ಸಹಿತ ಮಳೆ(Rain)ಯಾಗುತ್ತಿದೆ. ನಜಾಫ್‌ಗಢ ಪ್ರದೇಶದಲ್ಲಿ ಭಾರೀ ಮಳೆ ಮತ್ತು ಬಿರುಗಾಳಿಯ ನಂತರ ಮನೆ ಕುಸಿದು ಓರ್ವ ಮಹಿಳೆ ಮತ್ತು ಮೂವರು ಮಕ್ಕಳು ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ. ಕೃಷಿ ಜಮೀನಿನಲ್ಲಿ ನಿರ್ಮಿಸಲಾದ ಮನೆಯ ಮೇಲೆ ಮರ ಬಿದ್ದು ಈ ದುರಂತ ಅಪಘಾತ ಸಂಭವಿಸಿದೆ.

ಮೃತರನ್ನು 26 ವರ್ಷದ ಜ್ಯೋತಿ ಮತ್ತು ಅವರ ಮೂವರು ಮಕ್ಕಳು ಎಂದು ಗುರುತಿಸಲಾಗಿದೆ. ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಹಾಯದಿಂದ, ನಾಲ್ವರನ್ನೂ ಅವಶೇಷಗಳಿಂದ ಹೊರತೆಗೆದು ಜಾಫರ್‌ಪುರ ಕಲಾನ್‌ನ ಆರ್‌ಟಿಆರ್ ಆಸ್ಪತ್ರೆಗೆ ಸಾಗಿಸಲಾಯಿತು, ಆದರೆ ಅಷ್ಟರಲ್ಲಾಗಲೇ ಮೃತಪಟ್ಟಿದ್ದರು. ಜ್ಯೋತಿ ಅವರ ಪತಿ ಅಜಯ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಇದನ್ನೂ ಓದಿ
ಬೆಂಗಳೂರಿನಲ್ಲಿ ಮೋಡಕವಿದ ವಾತಾವರಣ, ಸಂಜೆ ಭಾರಿ ಮಳೆ ಸಾಧ್ಯತೆ
ಬಿಸಿಲು, ಮಳೆ, ಉರಿ ಸೆಕೆ: ಬೆಂಗಳೂರಿನ ವಾತಾವರಣಕ್ಕೆ ಜನ ಕಂಗಾಲು!
ಬೆಂಗಳೂರು ಸೇರಿ ಕರ್ನಾಟಕದ 18 ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆ
ಬೆಂಗಳೂರಿನಲ್ಲಿ ಗಾಳಿ ಸಹಿತ ಮಳೆ: ರಸ್ತೆಗಳು ಜಲಾವೃತ, ವಾಹನ ಸವಾರರ ಪರದಾಟ

ನಜಾಫ್‌ಗಢದ ಖಾರ್ಕರಿ ನಹರ್ ಗ್ರಾಮದಲ್ಲಿ ಬೆಳಗ್ಗೆ 5.25 ಕ್ಕೆ ಮನೆ ಕುಸಿದಿರುವ ಬಗ್ಗೆ ಕರೆ ಬಂದಿತ್ತು. ನಾವು ಸ್ಥಳದಲ್ಲೇ ಹಲವಾರು ತಂಡಗಳನ್ನು ನಿಯೋಜಿಸಿದ್ದೇವೆ ಮತ್ತು ನಾಲ್ವರನ್ನು ಅವಶೇಷಗಳಿಂದ ರಕ್ಷಿಸಲಾಗಿದೆ ಎಂದು ದೆಹಲಿ ಅಗ್ನಿಶಾಮಕ ಸೇವೆಗಳ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮತ್ತಷ್ಟು ಓದಿ:  ಬೆಂಗಳೂರಲ್ಲಿ ಇಂದು ಮಳೆ ಜೋರು, ಕರ್ನಾಟಕದ 4 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​

ದೆಹಲಿಯಲ್ಲಿ ಹಠಾತ್ ಪ್ರತಿಕೂಲ ಹವಾಮಾನದಿಂದಾಗಿ ಭಾರತ ಹವಾಮಾನ ಇಲಾಖೆ (ಐಎಂಡಿ) ನಗರಕ್ಕೆ ರೆಡ್ ಅಲರ್ಟ್ ಘೋಷಿಸಿದೆ. ನಗರದ ಹಲವಾರು ಭಾಗಗಳಲ್ಲಿ ನೀರು ನಿಂತಿರುವುದು ಮತ್ತು ಮರಗಳು ಧರೆಗುರುಳಿರುವ ಬಗ್ಗೆ ವರದಿಯಾಗಿದೆ. ಅಕಾಲಿಕ ಮಳೆಯಿಂದಾಗಿ, ದೆಹಲಿಯ ಅನೇಕ ಸ್ಥಳಗಳಲ್ಲಿ ಸ್ವಲ್ಪ ಪ್ರಮಾಣದಲ್ಲಿ ನೀರು ನಿಂತಿದೆ. ಗುಡುಗು, ಮಿಂಚು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು.

ದೆಹಲಿಯಲ್ಲಿ ನಿರಂತರ ಮಳೆಯಿಂದಾಗಿ ರಸ್ತೆಗಳು ಜಲಾವೃತಗೊಂಡಿವೆ. ದೆಹಲಿಯಲ್ಲಿ ಬೆಳಗಿನ ಜಾವ 3 ಗಂಟೆಯ ನಂತರ ತುಂತುರು ಮಳೆ ಪ್ರಾರಂಭವಾಯಿತು. ಮೊದಲಿಗೆ, ಐಟಿಒ, ಮಂಡಿ ಹೌಸ್ ಮತ್ತು ಮಧ್ಯ ದೆಹಲಿಯ ಕೆಲವು ಪ್ರದೇಶಗಳಲ್ಲಿ ತುಂತುರು ಮಳೆ ಪ್ರಾರಂಭವಾಯಿತು.

ಇದಾದ ನಂತರ, ಗಾಳಿಯ ತೀವ್ರತೆ ಹೆಚ್ಚಾಯಿತು. ಹವಾಮಾನ ಇಲಾಖೆಯ ಪ್ರಕಾರ, ಮೇ 1 ರಿಂದ ಮೇ 7 ರವರೆಗೆ ಬಿರುಗಾಳಿ ಮತ್ತು ಮಳೆಯಾಗುವ ನಿರೀಕ್ಷೆಯಿದೆ. ಇದರಿಂದಾಗಿ ತಾಪಮಾನವು 34 ಡಿಗ್ರಿ ತಲುಪುವ ಸಾಧ್ಯತೆಯಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 9:58 am, Fri, 2 May 25

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us