ಐಷಾರಾಮಿ ಹೋಟೆಲ್​ನಲ್ಲಿ 6 ಲಕ್ಷ ರೂ. ಬಿಲ್​ ಮಾಡಿ ಓಡಿ ಹೋಗಿದ್ದ ಮಹಿಳೆಯ ಖಾತೆಯಲ್ಲಿದ್ದ ಹಣ ತಿಳಿದು ಅಚ್ಚರಿಗೊಂಡ ಪೊಲೀಸರು

ದೆಹಲಿಯ ಐಷಾರಾಮಿ ಹೋಟೆಲ್​ನಲ್ಲಿ 15 ದಿನಗಳ ಕಾಲ ತಂಗಿದ್ದು ಬರೋಬ್ಬರಿ 6 ಲಕ್ಷ ರೂ. ಬಿಲ್​ ಮಾಡಿ ಓಡಿ ಹೋಗಿದ್ದ ಆಂಧ್ರ ಮಹಿಳೆಯ ಬ್ಯಾಂಕ್​ ಖಾತೆಯಲ್ಲಿದ್ದ ಹಣ ನೋಡಿ ಪೊಲೀಸರು ಅಚ್ಚರಿಗೊಂಡಿದ್ದಾರೆ. ಆಂಧ್ರ ಮೂಲದ ಮಹಿಳೆ ಝಾನ್ಸಿ ರಾಣಿ ಸ್ಯಾಮ್ಯುಯೆಲ್ ದೆಹಲಿಯ ಏರೋಸಿಟಿಯಲ್ಲಿರುವ ಪುಲ್‌ಮನ್ ಹೋಟೆಲ್​ನಲ್ಲಿ 15ದಿನಗಳ ಕಾಲ ಉಳಿದು, ಐಷಾರಾಮಿ ಜೀವನ ನಡೆಸಿ ಓಡಿಹೋಗಿದ್ದಳು.

ಹೋಟೆಲ್
Follow us
ನಯನಾ ರಾಜೀವ್
|

Updated on: Jan 31, 2024 | 12:25 PM

ದೆಹಲಿಯ ಐಷಾರಾಮಿ ಹೋಟೆಲ್​ನಲ್ಲಿ 15 ದಿನಗಳ ಕಾಲ ತಂಗಿದ್ದು ಬರೋಬ್ಬರಿ 6 ಲಕ್ಷ ರೂ. ಬಿಲ್​ ಮಾಡಿ ಓಡಿ ಹೋಗಿದ್ದ ಆಂಧ್ರ ಮಹಿಳೆಯ ಬ್ಯಾಂಕ್​ ಖಾತೆಯಲ್ಲಿದ್ದ ಹಣ ನೋಡಿ ಪೊಲೀಸರು ಅಚ್ಚರಿಗೊಂಡಿದ್ದಾರೆ. ಆಂಧ್ರ ಮೂಲದ ಮಹಿಳೆ ಝಾನ್ಸಿ ರಾಣಿ ಸ್ಯಾಮ್ಯುಯೆಲ್ ದೆಹಲಿಯ ಏರೋಸಿಟಿಯಲ್ಲಿರುವ ಪುಲ್‌ಮನ್ ಹೋಟೆಲ್​ನಲ್ಲಿ 15ದಿನಗಳ ಕಾಲ ಉಳಿದು, ಐಷಾರಾಮಿ ಜೀವನ ನಡೆಸಿ ಓಡಿಹೋಗಿದ್ದಳು.

ಕೊನೆಗೆ ಆಕೆಯನ್ನು ಪೊಲೀಸರು ಬಂಧಿಸಿದ್ದರು, ಆಕೆಗೆ ಬ್ಯಾಂಕ್​ ಖಾತೆಯ ವಿವರ ನೀಡಲು ಹೇಳಿದಾಗ ನಿರಾಕರಿಸಿದ್ದಳು, ಬಳಿಕ ಪೊಲೀಸರು ವಿವಿರ ಪರಿಶೀಲಿಸಿದಾಗ ಆಕೆಯ ಖಾತೆಯಲ್ಲಿ ಕೇವಲ 41 ರೂ. ಇರುವುದನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ಇಶಾ ದವೆ ಹೆಸರಿನಲ್ಲಿ ನಕಲಿ ಗುರುತಿನ ಚೀಟಿಯನ್ನು ಸೃಷ್ಟಿಸಿ ಹೋಟೆಲ್‌ನ ಸ್ಪಾ ಸೌಲಭ್ಯದಲ್ಲಿ 2,11,708 ರೂಪಾಯಿ ಮೌಲ್ಯದ ಸೇವೆಗಳನ್ನು ಪಡೆದಿದ್ದಾಳೆ ಎಂದು ಹೋಟೆಲ್ ಸಿಬ್ಬಂದಿ ಪೊಲೀಸರಿಗೆ ತಿಳಿಸಿದ್ದಾರೆ.

ಐಸಿಐಸಿಐ ಬ್ಯಾಂಕ್ ಯುಪಿಐ ಆ್ಯಪ್ ಮೂಲಕ ಹಣ ಕಳುಹಿಸುತ್ತಿರುವುದಾಗಿ ಹೋಟೆಲ್ ಸಿಬ್ಬಂದಿಗೆ ಸ್ಯಾಮ್ಯುಯೆಲ್ ತೋರಿಸಿದ್ದು, ಖಾತೆ ನೋಡಿದಾಗ ಬ್ಯಾಂಕ್‌ಗೆ ಯಾವುದೇ ಹಣ ಪಾವತಿಯಾಗಿಲ್ಲ ಎಂದು ತಿಳಿದು ಬಂದಿದೆ. ಆಕೆ ಬಳಸಿರುವ ಆ್ಯಪ್ ಬಗ್ಗೆ ಸಂಶಯವಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ಮಹಿಳೆ ತನಿಖೆಗೆ ಸಹಕರಿಸುತ್ತಿಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ.

ಮತ್ತಷ್ಟು ಓದಿ: ದೆಹಲಿಯ ಐಷಾರಾಮಿ ಹೋಟೆಲ್​ನಲ್ಲಿ ಹಣ ನೀಡದೆ 15 ದಿನಗಳ ಕಾಲ ಉಳಿದಿದ್ದ ಆಂಧ್ರ ಮಹಿಳೆಯ ಬಂಧನ

ತಾನು ವೈದ್ಯೆ ಮತ್ತು ತನ್ನ ಪತಿಯೂ ವೈದ್ಯನಾಗಿದ್ದು ನ್ಯೂಯಾರ್ಕ್‌ನಲ್ಲಿ ವಾಸವಾಗಿರುವುದಾಗಿ ಪೊಲೀಸರಿಗೆ ಆರಂಭದಲ್ಲಿ ತಿಳಿಸಿದ್ದಾಳೆ. ಆದರೆ ಆ ಮಾಹಿತಿ ಸತ್ಯವೋ, ಸುಳ್ಳೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಹೋಟೆಲ್ ಸಿಬ್ಬಂದಿ ಪಿಸಿಆರ್ ಕರೆ ಮಾಡಿದ ನಂತರ ಜನವರಿ 13 ರಂದು ದೆಹಲಿ ಪೊಲೀಸರು ಸ್ಯಾಮ್ಯುಯೆಲ್ ಅವರನ್ನು ಬಂಧಿಸಿದ್ದರು. ಐಪಿಸಿ ಸೆಕ್ಷನ್ 419, 468, 471 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ

ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್

ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ

ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ

ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ

ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು

ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?

‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ

ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್

ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ