AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೆಹಲಿಯ ಐಷಾರಾಮಿ ಹೋಟೆಲ್​ನಲ್ಲಿ ಹಣ ನೀಡದೆ 15 ದಿನಗಳ ಕಾಲ ಉಳಿದಿದ್ದ ಆಂಧ್ರ ಮಹಿಳೆಯ ಬಂಧನ

ದೆಹಲಿಯ ಐಷಾರಾಮಿ ಹೋಟೆಲ್​ನಲ್ಲಿ ಹಣ ನೀಡದೆ 15 ದಿನಗಳ ಕಾಲ ತಂಗಿದ್ದ ಆಂಧ್ರದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ವಿಮಾನ ನಿಲ್ದಾಣದ ಬಳಿ ಇರುವ ಏರೋಸಿಟಿಯ ಐಷಾರಾಮಿ ಹೋಟೆಲ್‌ನಲ್ಲಿ 15 ದಿನಗಳ ಕಾಲ ಯಾವುದೇ ಹಣವನ್ನು ಪಾವತಿಸದೆ ತಂಗಿದ್ದ ಆರೋಪದ ಮೇಲೆ 37 ವರ್ಷದ ಮಹಿಳೆಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೆಹಲಿಯ ಐಷಾರಾಮಿ ಹೋಟೆಲ್​ನಲ್ಲಿ ಹಣ ನೀಡದೆ 15 ದಿನಗಳ ಕಾಲ ಉಳಿದಿದ್ದ ಆಂಧ್ರ ಮಹಿಳೆಯ ಬಂಧನ
Image Credit source: India Today
ನಯನಾ ರಾಜೀವ್
|

Updated on: Jan 18, 2024 | 9:39 AM

Share

ದೆಹಲಿಯ ಐಷಾರಾಮಿ ಹೋಟೆಲ್​ನಲ್ಲಿ ಹಣ ನೀಡದೆ 15 ದಿನಗಳ ಕಾಲ ತಂಗಿದ್ದ ಆಂಧ್ರದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ವಿಮಾನ ನಿಲ್ದಾಣದ ಬಳಿ ಇರುವ ಏರೋಸಿಟಿಯ ಐಷಾರಾಮಿ ಹೋಟೆಲ್‌ನಲ್ಲಿ 15 ದಿನಗಳ ಕಾಲ ಯಾವುದೇ ಹಣವನ್ನು ಪಾವತಿಸದೆ ತಂಗಿದ್ದ ಆರೋಪದ ಮೇಲೆ 37 ವರ್ಷದ ಮಹಿಳೆಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆಕೆ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರುವ ಹೋಟೆಲ್​ನಲ್ಲಿ ಲಕ್ಷಗಟ್ಟಲೆ ವಂಚಿಸಿದ್ದಾಳೆ. ಆಹಾರ, ಪಾನೀಯ ಮತ್ತು ಸ್ಪಾಗೆ ಯುಪಿಐ ಮೂಲಕ ಹಣ ಪಾವತಿಸುತ್ತಿದ್ದಳು, ಆದರೆ ಮೊತ್ತ ಮಾತ್ರ ಹೋಟೆಲ್​ನ ಬ್ಯಾಂಕ್​ ಖಾತೆಗೆ ಹೋಗಿರಲಿಲ್ಲ ಎಂಬುದು ನಂತರ ತಿಳಿದುಬಂದಿದೆ.

ಈ ಬಗ್ಗೆ ಹೋಟೆಲ್ ಸಿಬ್ಬಂದಿ ಬಂದು ಕೇಳಿದಾಗ ಗಲಾಟೆ ಮಾಡಿದ್ದಾರೆ. ಆಕೆಯ ಈ ಅವಧಿಯ ಸ್ಪಾ ಬಿಲ್​ 2.11 ಲಕ್ಷ ರೂ. ಆಗಿದೆ. ಹೋಟೆಲ್​ನ ಒಟ್ಟು ಮೊತ್ತ 5.88 ಲಕ್ಷ ರೂ. ಆಗಿದೆ.

ಮತ್ತಷ್ಟು ಓದಿ: ಹೊಸ ವರ್ಷದ ಪಾರ್ಟಿ ಟಿಕೆಟ್ ಹೆಸರಲ್ಲಿ ವಂಚನೆ; ಸ್ಟಾರ್ ಹೋಟೆಲ್ ಹೆಸರು ಬಳಸಿ ಹಣ ಪೀಕಿದ ಖದೀಮರು

ಎಎಸ್​ಐ ಪ್ರದೀಪ್ ಹಾಗೂ ಮಹಿಳಾ ಪೇದೆ ಸೋನು ಹೋಟೆಲ್​ಗೆ ಬಂದು ಆಕೆಯನ್ನು ವಂಚನೆ ಪ್ರಕರಣದಲ್ಲಿ ಬಂಧಿಸಿದ್ದಾರೆ. ಹಣದ ಬಗ್ಗೆ ಹೋಟೆಲ್ ಸಿಬ್ಬಂದಿ ಕೇಳಿದಾಗ, ಆಕೆ ಪರಾರಿಯಾಗಲು ಪ್ರಯತ್ನಿಸಿದ್ದಳು ಎಂದು ಅವರು ತಿಳಿಸಿದ್ದಾರೆ. ಆಂಧ್ರಪ್ರದೇಶದ ಝಾನ್ಸಿ ರಾಣಿ ಸ್ಯಾಮ್ಯುಯೆಲ್ ಎಂಬ ಮಹಿಳೆ ಡಿಸೆಂಬರ್ 13 ರಂದು ಹೋಟೆಲ್ ಅನ್ನು ಬುಕ್ ಮಾಡಿದ್ದರು. ಪೊಲೀಸ್ ಅಧಿಕಾರಿಯ ಪ್ರಕಾರ, ಪುಲ್‌ಮನ್ ಹೋಟೆಲ್ ಅಧಿಕಾರಿಗಳು ತಮ್ಮ ದೂರಿನಲ್ಲಿ ಸ್ಯಾಮ್ಯುಯೆಲ್ ಹೋಟೆಲ್ ಸೇವೆಗಳಿಗೆ ಮೋಸದ ಪಾವತಿ ವಿಧಾನಗಳನ್ನು ಬಳಸಿದ್ದಾರೆ ಎಂದು ಹೇಳಿದ್ದಾರೆ.

ಹಣ ನೀಡುವಂತೆ ಕೇಳಿದಾಗ ಆಕೆ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾಳೆ ಎಂದು ಆರೋಪಿಸಿದ್ದಾರೆ.  ಐಪಿಸಿಯ ಸೆಕ್ಷನ್ 420 (ವಂಚನೆ) ಅಡಿಯಲ್ಲಿ ಐಜಿಐ ಏರ್‌ಪೋರ್ಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಮಹಿಳೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಯಿತು ಎಂದು ಅಧಿಕಾರಿ ತಿಳಿಸಿದ್ದಾರೆ. ಈ ಮೊದಲು ಅಂಕುಶ್ ದತ್ತಾ ಎಮಬುವವರ ಹೋಟೆಲ್​ನಲ್ಲಿ 603 ದಿನಗಳಿದ್ದರು, ಚೆಕ್​ಔಟ್​ ಮಾಡುವಾಗ ಯಾವುದೇ ಹಣ ನೀಡಿರಲಿಲ್ಲ. 2019ರ ಮೇ 30ರಿಂದ 2021ರ ಜನವರಿ 22ರವರೆಗೆ ಇದ್ದರು

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ