AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಡುಪಿ: ಲೀಸ್​ಗೆ ಕೊಟ್ಟ ಹೋಟೆಲ್​ನಲ್ಲಿ ಅಕ್ರಮ ಚಟುವಟಿಕೆ, ಕೇಳಲು ಹೋದ ಮಾಲೀಕಿ ಮೇಲೆ ಹಲ್ಲೆ

ಉಡುಪಿ ನಗರದ KSRTC ಬಸ್ ನಿಲ್ದಾಣ ಬಳಿ ಇರುವ ಶಾಂಭವಿ ಫಾರ್ಚೂನ್ ಹೊಟೇಲ್​ನಲ್ಲಿ ಅಕ್ರಮ ಚಟುವಟಿಕೆ ನಡೆಯುತ್ತಿದೆ ಎಂದು ಮಾಹಿತಿ ತಿಳಿಯುತ್ತಿದ್ದಂತೆ ಮಾಲೀಕಿ ಸಿಬ್ಬಂದಿಗೆ ಪ್ರಶ್ನೆ ಮಾಡಿದ್ದು ಮಾಲೀಕಿ ಮೇಲೆಯೇ ದೌಜನ್ಯ ಎಸಗಲಾಗಿದೆ.

ಉಡುಪಿ: ಲೀಸ್​ಗೆ ಕೊಟ್ಟ ಹೋಟೆಲ್​ನಲ್ಲಿ ಅಕ್ರಮ ಚಟುವಟಿಕೆ, ಕೇಳಲು ಹೋದ ಮಾಲೀಕಿ ಮೇಲೆ ಹಲ್ಲೆ
ಮಾಲೀಕಿ ಮೇಲೆ ಹಲ್ಲೆ
TV9 Web
| Edited By: ಆಯೇಷಾ ಬಾನು|

Updated on:Jan 14, 2024 | 12:51 PM

Share

ಉಡುಪಿ, ಜ.14: ಲೀಸ್​ಗೆ ಕೊಟ್ಟ ಹೋಟೆಲ್​ನಲ್ಲಿ ಅಕ್ರಮ ಚಟುವಟಿಕೆ ನಡೆಸಲಾಗುತ್ತಿದ್ದ ವಿಷಯ ತಿಳಿಯುತ್ತಿದ್ದಂತೆ ಹೋಟೆಲ್ (hotel) ಲೀಸ್ ವಾಪಸ್ ಪಡೆಯಲು ಹೋದ ಮಾಲೀಕಿ ಮೇಲೆಯೇ ದೌರ್ಜನ್ಯ (Assault) ಎಸಗಿರುವ ಘಟನೆ ನಡೆದಿದೆ. ಉಡುಪಿ (Udupi) ನಗರದ KSRTC ಬಸ್ ನಿಲ್ದಾಣ ಬಳಿ ಇರುವ ಶಾಂಭವಿ ಫಾರ್ಚೂನ್ ಹೊಟೇಲ್​ನಲ್ಲಿ ಅಕ್ರಮ ಚಟುವಟಿಕೆ ನಡೆಯುತ್ತಿದೆ ಎಂದು ಮಾಹಿತಿ ತಿಳಿಯುತ್ತಿದ್ದಂತೆ ಮಾಲೀಕಿ ಸಿಬ್ಬಂದಿಗೆ ಪ್ರಶ್ನೆ ಮಾಡಿದ್ದು ಮಾಲೀಕಿ ಮೇಲೆಯೇ ದೌಜನ್ಯ ಎಸಗಲಾಗಿದೆ.

2021ರಲ್ಲಿ ದಿನೇಶ್ ಶೆಟ್ಟಿ ಎಂಬುವರಿಗೆ ಮಮತಾ ಶೆಟ್ಟಿ ಅವರು 10 ವರ್ಷಕ್ಕೆ ಹೋಟೆಲ್ ಲೀಸ್​ಗೆ ನೀಡಿದ್ದರು. ಅಗ್ರಿಮೆಂಟ್ ಕೂಡ ಮಾಡಲಾಗಿತ್ತು. ಆದರೆ ದಿನೇಶ್ ಶೆಟ್ಟಿ ಹೋಟೆಲ್ ಕಟ್ಟಡವನ್ನು ದುರುಪಯೋಗ ಪಡಿಸಿಕೊಂಡಿದ್ದ. ಹೋಟೆಲ್ ರೂಂಗಳಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ. ಕಳೆದ ವರ್ಷ ವೇಶ್ಯಾವಾಟಿಕೆ ಹಿನ್ನೆಲೆ ಪೊಲೀಸ್ ದಾಳಿ ನಡೆದಿತ್ತು. ಹೀಗಾಗಿ ಡಿಸೆಂಬರ್ 22 ರಂದು ಮಮತಾ ಶೆಟ್ಟಿ ಅವರು ಹೋಟೆಲ್​ಗೆ ಹೋಗಿ ಲೀಸ್ ಅಗ್ರಿಮೆಂಟ್ ಕ್ಯಾನ್ಸಲ್ ಮಾಡಿ ಹೋಟೆಲ್ ವಾಪಸ್ ನೀಡುವಂತೆ ದಿನೇಶ್ ಶೆಟ್ಟಿಗೆ ಸೂಚಿಸಿದ್ದರು. ಇದರಿಂದ ಕೋಪಗೊಂಡ ದಿನೇಶ್ ಶೆಟ್ಟಿ ಹೋಟಲ್​ನಲ್ಲೇ ಹಲ್ಲೆ ಮಾಡಿದ್ದಾನೆ.

ಮಗನೊಂದಿಗೆ ತೆರಳಿದ್ದ ಮಮತಾ ಶೆಟ್ಟಿ ಮೇಲೆ ಹಲ್ಲೆ ನಡೆಸಿದ್ದಾನೆ. ಹೋಟೆಲ್​ನಲ್ಲಿರುವ ಸಿಸಿಟಿವಿಯಲ್ಲಿಯೂ ಹಲ್ಲೆ ದೃಶ್ಯ ಸೆರೆಯಾಗಿದೆ. ದಿನೇಶ್ ಶೆಟ್ಟಿ ವಿರುದ್ಧ ಉಡುಪಿ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೋಟೆಲ್​ ವಾಪಸ್ ಕೊಡಿಸುವಂತೆ ಸಂತ್ರಸ್ತೆ ಅಳಲು ತೋಡಿಕೊಂಡಿದ್ದಾರೆ. ಅಲ್ಲದೆ ಎಫ್​ಐಆರ್ ಆದ್ರೂ ಸೂಕ್ತ ತನಿಖೆ ನಡೆದಿಲ್ಲ ಎಂದು ಆರೋಪ ಮಾಡಿದ್ದಾರೆ.

ಇದನ್ನೂ ಓದಿ: ಕಲಬುರಗಿ: ಬಿಜೆಪಿ ಶಾಸಕ ಬಸವರಾಜ್ ಮತ್ತಿಮೂಡ್​ ಪ್ರಯಾಣಿಸುತ್ತಿದ್ದ ಕಾರು ಪಲ್ಟಿ

ಟ್ರಾಕ್ಟರ್ ನಿಲ್ಲಿಸುವ ವಿಚಾರಕ್ಕೆ ಮಾರಾಮಾರಿ

ಪಾರ್ಕಿಂಗ್ ವಿಚಾರಕ್ಕೆ ಸಣ್ಣಪುಟ್ಟ ಗಲಾಟೆಗಳಾಗೋದು ಸಹಜ. ಆದ್ರೆ, ಈ ಗ್ರಾಮದಲ್ಲಿ ದೊಡ್ಡ ಮಾರಾಮಾರಿಯೇ ನಡೆದು ಹೋಗಿದೆ. 40 ರಿಂದ 50 ಜನರ ಗುಂಪುಗಳ ಮಧ್ಯೆ ಈ ಗಲಾಟೆಯಾಗಿದೆ. ಟ್ರ್ಯಾಕ್ಟರ್ ನಿಲ್ಲಿಸೋ ವಿಚಾರಕ್ಕೆ ಮೊದಲು ಇಬ್ಬರ ಮಧ್ಯೆ ಗಲಾಟೆಯಾಗಿದೆ. ನಂತ್ರ ಎರಡು ಕಡೆಯವರು ಕಟ್ಟಿಗೆ ಹಿಡಿದು ಹೊಡೆದಾಡಿದ್ದಾರೆ. ಈ ಘಟನೆ ನಡೆದಿರೋದು ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಎಲ್ಹೇರಿ ಗ್ರಾಮದಲ್ಲಿ. ಗುರುಮಠಕಲ್‌ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಮಾರಾಮಾರಿಯಲ್ಲಿ ನಾಲ್ವರಿಗೆ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 12:47 pm, Sun, 14 January 24

Follow Us
ಮಹಿಳಾ PSI ವರ್ಗಾವಣೆ ಆಗಿದ್ದಕ್ಕೆ ಪಟಾಕಿ ಸಿಡಿಸಿ ಸಂಭ್ರಮಿಸಿದ ಯುವಕರು!
ಮಹಿಳಾ PSI ವರ್ಗಾವಣೆ ಆಗಿದ್ದಕ್ಕೆ ಪಟಾಕಿ ಸಿಡಿಸಿ ಸಂಭ್ರಮಿಸಿದ ಯುವಕರು!
ಬೆಟ್ಟದ ರಂಗನಾಥ ಸ್ವಾಮಿ ದೇವಾಲಯದಲ್ಲಿ ಹೆಚ್.ಡಿ. ಕುಮಾರಸ್ವಾಮಿ ವಿಶೇಷ ಪೂಜೆ
ಬೆಟ್ಟದ ರಂಗನಾಥ ಸ್ವಾಮಿ ದೇವಾಲಯದಲ್ಲಿ ಹೆಚ್.ಡಿ. ಕುಮಾರಸ್ವಾಮಿ ವಿಶೇಷ ಪೂಜೆ
‘ಹಳ್ಳಿ ಪವರ್ ರಿಯಾಲಿಟಿ ಶೋ’: ವಾಡೆ ಮನೆಗೆ ಗ್ರಹಪ್ರವೇಶ ಮಾಡಿದ ಸ್ಪರ್ಧಿಗಳು
‘ಹಳ್ಳಿ ಪವರ್ ರಿಯಾಲಿಟಿ ಶೋ’: ವಾಡೆ ಮನೆಗೆ ಗ್ರಹಪ್ರವೇಶ ಮಾಡಿದ ಸ್ಪರ್ಧಿಗಳು
ಹಳೇ ಹುಬ್ಬಳ್ಳಿ ಆಸಾರ ಓಣಿ ಪುಷ್ಕರಣಿ ವಿವಾದ: ಹಿಂದೂಪರ ಸಂಘಟನೆಗಳ ಪ್ರತಿಭಟನೆ
ಹಳೇ ಹುಬ್ಬಳ್ಳಿ ಆಸಾರ ಓಣಿ ಪುಷ್ಕರಣಿ ವಿವಾದ: ಹಿಂದೂಪರ ಸಂಘಟನೆಗಳ ಪ್ರತಿಭಟನೆ
28 ಕೈದಿಗಳ ಬಿಡುಗಡೆಗೆ ಸಚಿವ ಸಂಪುಟ ಅಸ್ತು
28 ಕೈದಿಗಳ ಬಿಡುಗಡೆಗೆ ಸಚಿವ ಸಂಪುಟ ಅಸ್ತು
ಇಂದು ಶ್ರಾವಣ ಶನಿವಾರ; ವೆಂಕಟೇಶ್ವರನ ದರ್ಶನ ಹಾಗೂ ನಾಮಸ್ಮರಣೆಗೆ ಶುಭ ದಿನ
ಇಂದು ಶ್ರಾವಣ ಶನಿವಾರ; ವೆಂಕಟೇಶ್ವರನ ದರ್ಶನ ಹಾಗೂ ನಾಮಸ್ಮರಣೆಗೆ ಶುಭ ದಿನ
ಬಾಗಲಕೋಟೆಯಲ್ಲಿ ಅಜಾನ್ ವಿವಾದ: ಸಿಡಿದೆದ್ದ ಬಿಜೆಪಿ, ಹಿಂದೂ ಸಂಘಟನೆಗಳು
ಬಾಗಲಕೋಟೆಯಲ್ಲಿ ಅಜಾನ್ ವಿವಾದ: ಸಿಡಿದೆದ್ದ ಬಿಜೆಪಿ, ಹಿಂದೂ ಸಂಘಟನೆಗಳು
ಭಾರತ-ಬಾಂಗ್ಲಾ ಗಡಿ ಭದ್ರಪಡಿಸದೆ ಬಂಗಾಳ ಭದ್ರವಾಗಲು ಸಾಧ್ಯವಿಲ್ಲ; ಅಮಿತ್ ಶಾ
ಭಾರತ-ಬಾಂಗ್ಲಾ ಗಡಿ ಭದ್ರಪಡಿಸದೆ ಬಂಗಾಳ ಭದ್ರವಾಗಲು ಸಾಧ್ಯವಿಲ್ಲ; ಅಮಿತ್ ಶಾ
ಮಠದಲ್ಲೇ ಅಪ್ರಾಪ್ತೆ ಮೇಲೆರಗಿ ಅಟ್ಟಹಾಸ: ಸ್ವಾಮೀಜಿ ಅರೆಸ್ಟ್
ಮಠದಲ್ಲೇ ಅಪ್ರಾಪ್ತೆ ಮೇಲೆರಗಿ ಅಟ್ಟಹಾಸ: ಸ್ವಾಮೀಜಿ ಅರೆಸ್ಟ್
ನೈಸರ್ಗಿಕವಾಗಿ ಬಾಳೆಕಾಯಿ ಹಣ್ಣು ಮಾಡುವ ವಿಧಾನ ಹೇಗೆ? ವಿಡಿಯೋ ನೋಡಿ
ನೈಸರ್ಗಿಕವಾಗಿ ಬಾಳೆಕಾಯಿ ಹಣ್ಣು ಮಾಡುವ ವಿಧಾನ ಹೇಗೆ? ವಿಡಿಯೋ ನೋಡಿ