ಅಕ್ಟೋಬರ್​ 31ರವರೆಗಿನ ಅಂತರಾಷ್ಟ್ರೀಯ ವಂದೇ ಭಾರತ್ ವಿಮಾನ ಹಾರಾಟದ ಸಂಪೂರ್ಣ ವಿವರ ಇಲ್ಲಿದೆ

ಅಕ್ಟೋಬರ್​ 31ರವರೆಗಿನ ಅಂತರಾಷ್ಟ್ರೀಯ ವಂದೇ ಭಾರತ್ ವಿಮಾನ ಹಾರಾಟದ ಸಂಪೂರ್ಣ ವಿವರ ಇಲ್ಲಿದೆ
ಸಾಂದರ್ಭಿಕ ಚಿತ್ರ

International Vande Bharat Flights: ಲಾಕ್​ಡೌನ್​ನಿಂದಾಗಿ ಬೇರೆಡೆ ಸಿಲುಕಿಕೊಂಡಿರುವ ಭಾರತೀಯರನ್ನು ಮರಳಿ ಕರೆತರುವ ಉದ್ದೇಶದಿಂದಾಗಿ ನಮ್ಮ ಸರ್ಕಾರವು ವಂದೇ ಭಾರತ್ ಮಿಷನ್ ಎಂಬ ಯೋಜನೆಯನ್ನು ರೂಪಿಸಿತು.

TV9kannada Web Team

| Edited By: shruti hegde

Aug 03, 2021 | 10:41 AM

2020ರ ಮೇ ತಿಂಗಳಿನಲ್ಲಿ ಭಾರತ ಸರ್ಕಾರವು ಭಾರತ್ ಮಿಷನ್ ಎಂಬ ಯೋಜನೆಯನ್ನು ಜಾರಿಗೆ ತಂದಿತು. ಜಗತ್ತಿನಲ್ಲಿ ಬೇರೆ ಬೇರೆ ಕಡೆ ವಾಸಿಸುತ್ತಿರುವ ಭಾರತೀಯರನ್ನು ಕೊವಿಡ್ ಸಾಂಕ್ರಾಮಿಕ ಸಮಯದಲ್ಲಿ ತಮ್ಮ ಮೂಲ ನೆಲೆಗೆ ಹಿಂತಿರುಗಿ ಕರೆದೊಯ್ಯಲು ವಂದೇ ಭಾರತ್ ವಿಮಾನಗಳ (International Vande Bharat Flights) ಹಾರಾಟ ಕೈಗೊಳ್ಳಲಾಯಿತು.

ಲಾಕ್​ಡೌನ್​ನಿಂದಾಗಿ ಬೇರೆಡೆ ಸಿಲುಕಿಕೊಂಡಿರುವ ಭಾರತೀಯರನ್ನು ಮರಳಿ ಕರೆತರುವ ಉದ್ದೇಶದಿಂದಾಗಿ ನಮ್ಮ ಸರ್ಕಾರವು ವಂದೇ ಭಾರತ್ ಮಿಷನ್ ಎಂಬ ಯೋಜನೆಯನ್ನು ರೂಪಿಸಿತು. ಇದರ ಅಡಿಯಲ್ಲಿ ಭಾರತೀಯರನ್ನು ಕರೆತರುವ ಉದ್ದೇಶದಿಂದ ಮಾತ್ರ ಇತರ ದೇಶಗಳಿಗೆ ವಿಮಾನಗಳ ಹಾರಾಟ ನಡೆಸಲು ಅನುಮತಿ ನೀಡಲಾಯಿತು.

ಇಲ್ಲಿಯವರೆಗೆ 30,000 ವಿಮಾನಗಳಲ್ಲಿ ಸುಮಾರು 4 ಮಿಲಿಯನ್ ಜನರನ್ನು ಕರೆದೊಯ್ಯಲಾಗಿದೆ. ಇದು ವಿಶ್ವದಲ್ಲಿಯೇ ಅತಿ ದೊಡ್ಡ ಮಟ್ಟದ ಹಾರಾಟ ಸಂಚಾರವಾಗಿದೆ. ಈ ಯೋಜನೆಯ ಅಡಿಯಲ್ಲಿ ಸುಮಾರು 1,90,000 ಭಾರತೀಯ ಪ್ರಜೆಗಳನ್ನು ಮರಳಿ ತರಲು ಕಲ್ಪಿಸಲಾಗಿತ್ತು. ಈ ಯೋಜನೆಯ ಆರಂಭದಲ್ಲಿ ಏರ್ ಇಂಡಿಯಾ ಮತ್ತು ಅದರ ಅಂಗ ಸಂಸ್ಥೆಯಾದ ಏರ್ ಇಂಡಿಯಾ ಎಕ್ಸ್​ಪ್ರೆಸ್​ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರವಹಿಸಿದೆ.

ವಿದೇಶದಲ್ಲಿರುವ ಭಾರತೀಯರಿಗೆ ಸಹಾಯ ಮಾಡುವ ವಂದೇ ಭಾರತ್ ವಿಷನ್! ಎಂದು ನಾಗರಿಕ ವಿಮಾನಯಾನ ಸಚಿವಾಲಯ ಟ್ವೀಟ್ ಮೂಲಕ ಉಲ್ಲೇಖಿಸಿದೆ.

ಆಗಸ್ಟ್ 1, 20211 ರವರೆಗೆ

ನಮ್ಮ ದೇಶಕ್ಕೆ ಬರುವ ವಿಮಾನಗಳು: 14,968 ಒಳ ಬರುವ ಪ್ರಯಾಣಿಕರು: 2,261,720 ಹೊರಹೋಗುವ ವಿಮಾನಗಳು: 14,965 ಇಲ್ಲಿಯವರೆಗಿನ ಒಟ್ಟು ವಿಮಾನಗಳು: 29,933 ಇಲ್ಲಿಯವರೆಗಿನ ಪ್ರಯಾಣಿಕರು: 3,823,789

ಕೊವಿಡ್ ಎರಡನೇ ಅಲೆಯ ವಿರುದ್ಧ ಹೋರಾಡಲು ಭಾರತ ಹೆಣಗಾಡುತ್ತಿದೆ. ಈ ಮಧ್ಯೆ ಮೂರನೇ ಅಲೆಯೂ ಸಹ ಆವರಿಸಿಕೊಂಡಿದೆ. ನಾಗರಿಕ ವಿಮಾನಯಾನ ಸಚಿವಾಲಯವು ಅಕ್ಟೋಬರ್ 31ರವರೆಗೆ ವಂದೇ ಭಾರತ್ ವಿಮಾನಗಳ ಹೊಸ ಸುತ್ತನ್ನು ಘೋಷಿಸಿದೆ. ಹೊಸ ಪಟ್ಟಿಯ ಪ್ರಕಾರ, ವಿಮಾನವು ಇಸ್ರೇಲ್, ಸಿಂಗಾಪುರ್, ಶ್ರೀಲಂಕಾ, ಥೈಲೆಂಡ್, ಇಟಲಿ ಮುಂತಾದ ದೇಶಗಳಿಗೆ ಹಾರಾಟ ನಡೆಸಲಿದೆ. ಜೂನ್ 3ರಿಂದ ಆರಂಭಗೊಂಡ ವೇಳಾಪಟ್ಟಿ ಅಕ್ಟೋಬರ್ 31ಕ್ಕೆ ಕೊನೆಗೊಳ್ಳಲಿದೆ.

ಇದನ್ನೂ ಓದಿ:

ಕೊವಿಡ್​ ಮತ್ತೆ ಆವರಿಸಿದೆ ಚೀನಾದಲ್ಲಿ… ಲಸಿಕೆ ಪಡೆಯಲು ಜನ ಪರದಾಟ; ಹೊಸ ಕೇಸ್​ ಪತ್ತೆಯಾಗುತ್ತಿದ್ದಂತೆ ವಿಮಾನ ಹಾರಾಟ ರದ್ದು

UAE flights suspend: ಏಪ್ರಿಲ್ 25ರಿಂದ 10 ದಿನ ಭಾರತದಿಂದ ವಿಮಾನ ಹಾರಾಟ ಅಮಾನತು ಮಾಡಿದ ಯುಎಇ

Follow us on

Related Stories

Most Read Stories

Click on your DTH Provider to Add TV9 Kannada