Swamy Shraddananda: ಬೆಂಗಳೂರಿನಲ್ಲಿ ಶಕೀರಾ ಕೊಲೆ ಪ್ರಕರಣ; ಕ್ಷಮಾದಾನ ಕೋರಿ ರಾಷ್ಟ್ರಪತಿಗೆ ಅರ್ಜಿ ಸಲ್ಲಿಸಿದ 83 ವರ್ಷದ ಶ್ರದ್ಧಾನಂದ

Swamy Shraddananda: ಬೆಂಗಳೂರಿನಲ್ಲಿ ಶಕೀರಾ ಕೊಲೆ ಪ್ರಕರಣ; ಕ್ಷಮಾದಾನ ಕೋರಿ ರಾಷ್ಟ್ರಪತಿಗೆ ಅರ್ಜಿ ಸಲ್ಲಿಸಿದ 83 ವರ್ಷದ ಶ್ರದ್ಧಾನಂದ
ಬೆಂಗಳೂರಿನಲ್ಲಿ ಶಕೀರಾ ಕೊಲೆ ಪ್ರಕರಣ; ಕ್ಷಮಾದಾನ ಕೋರಿ ರಾಷ್ಟ್ರಪತಿಗೆ ಅರ್ಜಿ ಸಲ್ಲಿಸಿದ 83 ವರ್ಷದ ಪ್ರಧಾನ ಅಪರಾಧಿ

Mercy petition: ಬೆಂಗಳೂರಿನ ರಿಚ್ಮಂಡ್ ರಸ್ತೆಯಲ್ಲಿ ಶಕೀರಾ ಹೆಸರಿನಲ್ಲಿರುವ 600 ಕೋಟಿ ರೂಪಾಯಿ ಆಸ್ತಿಯಿತ್ತು. ಪತ್ನಿ ಶಕೀರಾ ಹತ್ಯೆ ಮಾಡಿ ಮನೆಯ ಹಿಂಭಾಗವೇ ಶವವನ್ನು ಹೂತಿಟ್ಟಿದ್ದ. 2011 ರಲ್ಲಿ ಶ್ರದ್ಧಾನಂದನ ಮನವಿ ಮೇರೆಗೆ ಸ್ವಂತ ರಾಜ್ಯವಾದ ಮಧ್ಯ ಪ್ರದೇಶದ ಸಾಗರ್ ಜಿಲ್ಲೆಯ ಜೈಲಿಗೆ ಶ್ರದ್ಧಾನಂದ ಸ್ಥಳಾಂತರವಾಗಿದ್ದ.

TV9kannada Web Team

| Edited By: sadhu srinath

Aug 03, 2021 | 12:24 PM

ಮಧ್ಯ ಪ್ರದೇಶ: ರಾಜಧಾನಿ ಬೆಂಗಳೂರಿನಲ್ಲಿ 1991 ರಲ್ಲಿ ನಡೆದಿದ್ದ ಶಕೀರಾ ಕೊಲೆ ಪ್ರಕರಣದ ಪ್ರಧಾನ ಅಪರಾಧಿ ಶ್ರದ್ಧಾನಂದ ಕ್ಷಮಾದಾನ ಕೋರಿ ರಾಷ್ಟ್ರಪತಿಗೆ ಅರ್ಜಿ ಸಲ್ಲಿಸಲು ಮುಂದಾಗಿದ್ದಾನೆ. ಪ್ರಕರಣದಲ್ಲಿ ಶ್ರದ್ಧಾನಂದ ಬದುಕಿರುವವರೆಗೂ ಜೈಲಿನಲ್ಲಿರುವಂತೆ 2008ರಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಪ್ರಸ್ತುತ ಶ್ರದ್ಧಾನಂದ ಮಧ್ಯ ಪ್ರದೇಶದ ಸಾಗರ್ ಜಿಲ್ಲಾ ಸೆಂಟ್ರಲ್ ಜೈಲಿನಲ್ಲಿದ್ದಾನೆ.

ಜೈಲಿನಲ್ಲಿ ಒಳ್ಳೆಯ ನಡತೆ ತೋರಿದ ಕಾರಣಕ್ಕಾಗಿ ಬಿಡುಗಡೆ ಕೋರಿ ಶ್ರದ್ಧಾನಂದ ಅರ್ಜಿ ಸಲ್ಲಿಸಿದ್ದಾನೆ. ಕಳೆದ 27 ವರ್ಷಗಳಿಂದ ಜೈಲಿನಲ್ಲಿರುವ ಸ್ವಾಮಿ ಶ್ರದ್ಧಾನಂದ ಅಲಿಯಾಸ್ ಮುರುಳಿ ಮನೋಹರ್ ಮಿಶ್ರಾಗೆ (Swamy Shraddananda Alias Murali Manohar Mishra) ಈಗ 83 ವರ್ಷ ವಯಸ್ಸು.

ಶ್ರದ್ಧಾನಂದ, ಮೈಸೂರಿನ ಮಾಜಿ ದಿವಾನ್ ಸರ್ ಮಿರ್ಜಾ ಇಸ್ಮಾಯಿಲ್ (grand daughter of Sir Mirza Ismail) ಮೊಮ್ಮಗಳು ಶಕೀರಾ ಕಲೀಲಿ (Shakereh Khaleeli) ವಿವಾಹವಾಗಿದ್ದ. ಸಾಗರ್ ಜಿಲ್ಲಾ ನ್ಯಾಯಾಧೀಶ ದೇವ್ ನಾರಾಯಣ್ ಸಿಂಗ್ ಜೈಲಿಗೆ ಭೇಟಿ ನೀಡಿದಾಗ ರಾಷ್ಟ್ರಪತಿಯಿಂದ ಕ್ಷಮಾದಾನ ಕೋರಿ ಅರ್ಜಿ ಸಲ್ಲಿಸಲು ಶ್ರದ್ಧಾನಂದ ನಿರ್ಧರಿಸಿದ್ದಾನೆ‌. ಪತ್ನಿ ಶಕೀರಾ ಹೆಸರಿನಲ್ಲಿದ್ದ 600 ಕೋಟಿ ರೂ ಆಸ್ತಿಗಾಗಿ ಆಕೆಯನ್ನು ಶ್ರದ್ಧಾನಂದ ಹತ್ಯೆ ಮಾಡಿದ್ದ.

ಬೆಂಗಳೂರಿನ ರಿಚ್ಮಂಡ್ ರಸ್ತೆಯಲ್ಲಿ ಶಕೀರಾ ಹೆಸರಿನಲ್ಲಿರುವ 600 ಕೋಟಿ ರೂಪಾಯಿ ಆಸ್ತಿಯಿತ್ತು. ಪತ್ನಿ ಶಕೀರಾ ಹತ್ಯೆ ಮಾಡಿ ಮನೆಯ ಹಿಂಭಾಗವೇ ಶವವನ್ನು ಹೂತಿಟ್ಟಿದ್ದ. 2011 ರಲ್ಲಿ ಶ್ರದ್ಧಾನಂದನ ಮನವಿ ಮೇರೆಗೆ ಸ್ವಂತ ರಾಜ್ಯವಾದ ಮಧ್ಯ ಪ್ರದೇಶದ ಸಾಗರ್ ಜಿಲ್ಲೆಯ ಜೈಲಿಗೆ ಶ್ರದ್ಧಾನಂದ ಸ್ಥಳಾಂತರವಾಗಿದ್ದ.

Also Read: ಗಲ್ಲು ಗುಲ್ಲು ಇನ್ನೂ ಜೀವಂತ.. ನಿರ್ಭಯಾ ಹಂತಕರಿಗೆ ಸದ್ಯಕ್ಕೆ ಗಲ್ಲು ಶಿಕ್ಷೆ ಜಾರಿ ಇಲ್ಲ ಕೊನೆಗೂ ಫಲಿಸಿತು ನಿರ್ಭಯಾ ತಾಯಿಯ ನಿರಂತರ ಹೋರಾಟ!

(Mercy petition: 1991 shakira murder case in bangalore shraddhanand mercy plea by president)

Follow us on

Related Stories

Most Read Stories

Click on your DTH Provider to Add TV9 Kannada