ವಿಐಪಿ ದರ್ಶನದ ಕಲ್ಪನೆಯು ಸಮಾನತೆಗೆ ವಿರುದ್ಧ : ಉಪರಾಷ್ಟ್ರಪತಿ ಜಗದೀಪ್ ಧನ್ಕರ್
ವಿಐಪಿ ಸಂಸ್ಕೃತಿ ಕೆಟ್ಟ ಸಂಸ್ಕೃತಿಯ ಪ್ರತೀಕ, ಇದು ಸಮಾನತೆಯ ವಿರುದ್ಧದಾಗಿದೆ. ಧಾರ್ಮಿಕ ಸ್ಥಳ ಸೇರಿದಂತೆ ಸಮಾಜದ ಯಾವುದೇ ಸ್ಥಳಗಳಲ್ಲಿ ವಿಐಪಿ ಸಂಸ್ಕೃತಿಯಿರಬಾರದು. ವಿಐಪಿ ದರ್ಶನದ ಕಲ್ಪನೆಯು ದೈವತ್ವದ ವಿರುದ್ಧ ಹೋರಾಡುತ್ತದೆ ಎಂದು ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಹೇಳಿದರು. ಈ ಬಗ್ಗೆ ಇಲ್ಲಿದೆ ವಿಡಿಯೋ ನೋಡಿ..
ಮಂಗಳೂರು, ಜ.7: ಇಂದು (ಜ.7) ಧರ್ಮಸ್ಥಳದಲ್ಲಿ ಹೊಸದಾಗಿ ನಿರ್ಮಾಣವಾಗಿರುವ ಶ್ರೀ ಸಾನಿಧ್ಯ ಕ್ಯೂ ಕಾಂಪ್ಲೆಕ್ಸ್ ಲೋಕಾರ್ಪಣೆಗೊಂಡಿದೆ. ದಕ್ಷಿಣ ಕನ್ನಡದ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ, ಶ್ರೀ ಸಾನಿಧ್ಯ ಕ್ಯೂ ಕಾಂಪ್ಲೆಕ್ಸ್ ಉದ್ಘಾಟಿಸಿ ಮಾತನಾಡಿದ ಉಪರಾಷ್ಟ್ರಪತಿ ಜಗದೀಪ್ ಧನ್ಕರ್, ವಿಐಪಿ ಸಂಸ್ಕೃತಿ ಕೆಟ್ಟ ಸಂಸ್ಕೃತಿಯಲ್ಲಿ ಒಂದಾಗಿದ್ದು, ಸಮಾನತೆಯ ವಿರುದ್ಧದ ಸಂಸ್ಕೃತಿಯಾಗಿದೆ. ಧಾರ್ಮಿಕ ಸ್ಥಳ ಸೇರಿದಂತೆ ಸಮಾಜದ ಯಾವುದೇ ಸ್ಥಳಗಳಲ್ಲಿ ವಿಐಪಿ ಸಂಸ್ಕೃತಿಯಿರಬಾರದು. ವಿಐಪಿ ದರ್ಶನದ ಕಲ್ಪನೆಯು ದೈವತ್ವದ ವಿರುದ್ಧ ಹೋರಾಡುತ್ತದೆ ಎಂದರು. ಧಾರ್ಮಿಕ ಸಂಸ್ಥೆಗಳು ಸಮಾನತೆಯ ಕೇಂದ್ರಗಳಾಗಿದ್ದು, ಸರ್ವಶಕ್ತನಾದ ದೇವರ ಮುಂದೆ ಯಾವ ವ್ಯಕ್ತಿ ಮೇಲಲ್ಲ. ಹೀಗಾಗಿ ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು ಎನ್ನುವ ತತ್ವ ಪಾಲಿಸಬೇಕು. ಯಾರಿಗಾದರೂ ಮೊದಲು ಆದ್ಯತೆ ನೀಡಿದಾಗ ಸಮಾನತೆಯ ಪರಿಕಲ್ಪನೆಯೂ ಕಡಿಮೆಯಾಗುತ್ತದೆ ಎಂದು ಜಗದೀಪ್ ಧನ್ಕರ್ ತಿಳಿಸಿದರು.ಧರ್ಮಸ್ಥಳವನ್ನು ಸಾರ್ವಕಾಲಿಕ ಗಣ್ಯರು ಮುನ್ನಡೆಸುತ್ತಿದ್ದು, ಈ ಕ್ಷೇತ್ರವು ಸಮಾನತೆಗೆ ಉದಾಹರಣೆಯಾಗಿದೆ. ನಾವು ಸಾರ್ವಕಾಲಿಕ ವಿಐಪಿ ಸಂಸ್ಕೃತಿಯಿಂದ ದೂರವಿರೋಣ. ಇತ್ತೀಚಿನ ವರ್ಷಗಳಲ್ಲಿ ದೇಶದ ಧಾರ್ಮಿಕ ಸ್ಥಳಗಳಿಗೆ ಮೂಲಸೌಕರ್ಯಗಳಲ್ಲಿ ಸಾಕಷ್ಟು ಬೆಳವಣಿಗೆಯಾಗಿದೆ. ಇವು ನಮ್ಮ ನಾಗರಿಕತೆಯ ಮೌಲ್ಯಗಳ ಕೇಂದ್ರಗಳೂ ಈ ಬೆಳವಣಿಗೆಯನ್ನು ಶ್ಲಾಘಿಸಬೇಕಾಗಿದೆ ಎಂದರು.