AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾವಿನ ಮರಿಗಳಿಗೆ ಜನ್ಮ ನೀಡಿದರೇ ಮಹಿಳೆ? ನಿಜವಾಗಿ ನಡೆದಿದ್ದೇನು?

ಮಧ್ಯಪ್ರದೇಶದ ಛತ್ತರ್​ಪುರದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಮಹಿಳೆಯೊಬ್ಬರು ಹಾವಿನ ಮರಿಗಳಿಗೆ ಜನ್ಮನೀಡಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು. ಆದರೆ ಅಲ್ಲಿ ನಡೆದಿದ್ದೇ ಬೇರೆ. ಆ ಮಹಿಳೆ ಗರ್ಭಿಣಿಯೂ ಆಗಿರಲಿಲ್ಲ, ಯಾವುದೇ ಹಾವಿನ ಮರಿಗಳಿಗೂ ಜನ್ಮ ನೀಡಿಲ್ಲ. ವೈದ್ಯಕೀಯ ಪರೀಕ್ಷೆಯಲ್ಲಿ ಅದು ಅದು ಹಾವಿನಂತೆ ಕಾಣುವ ರಕ್ತ ಹೆಪ್ಪುಗಟ್ಟುವಿಕೆಯಿಂದಾದ ಮುದ್ದೆಯಷ್ಟೇ ಎಂಬುದು ತಿಳಿದುಬಂದಿದೆ.

ಹಾವಿನ ಮರಿಗಳಿಗೆ ಜನ್ಮ ನೀಡಿದರೇ ಮಹಿಳೆ? ನಿಜವಾಗಿ ನಡೆದಿದ್ದೇನು?
ಆಸ್ಪತ್ರೆ Image Credit source: Free Press Journal
ನಯನಾ ರಾಜೀವ್
|

Updated on: Aug 08, 2025 | 10:54 AM

Share

ಛತ್ತರ್​​ಪುರ್,ಆಗಸ್ಟ್ 08: ಮಧ್ಯಪ್ರದೇಶದ ಛತ್ತರ್​ಪುರದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಮಹಿಳೆಯೊಬ್ಬರು ಹಾವಿನ ಮರಿಗಳಿಗೆ ಜನ್ಮನೀಡಿದ್ದಾರೆ ಎನ್ನುವ ಸುದ್ದಿ ಹರಿದಾಡಿದೆ. ಆದರೆ ಅಲ್ಲಿ ನಡೆದಿದ್ದೇ ಬೇರೆ. ಆ ಮಹಿಳೆ ಗರ್ಭಿಣಿ(Pregnant)ಯೂ ಆಗಿರಲಿಲ್ಲ, ಯಾವುದೇ ಹಾವಿನ ಮರಿಗಳಿಗೂ ಜನ್ಮ ನೀಡಿಲ್ಲ. ವೈದ್ಯಕೀಯ ಪರೀಕ್ಷೆಯಲ್ಲಿ ಅದು ಅದು ಹಾವಿನಂತೆ ಕಾಣುವ ರಕ್ತ ಹೆಪ್ಪುಗಟ್ಟುವಿಕೆಯಿಂದಾದ ಮುದ್ದೆಯಷ್ಟೇ ಎಂಬುದು ತಿಳಿದುಬಂದಿದೆ.

ಮಾಹಿತಿ ಪ್ರಕಾರ, ರಿಂಕಿ ಅಹಿರ್ವಾರ್ ಎಂಬ ಮಹಿಳೆ ತಾನು ಹಾವಿನ ಮರಿಗಳಿಗೆ ಜನ್ಮ ನೀಡಿರುವುದಾಗಿ ಹೇಳಿಕೊಂಡಿದ್ದಾಳೆ. ಆ ಪ್ರದೇಶದ ಎಲ್ಲರಿಗೂ ಇದು ಆಘಾತ ಉಂಟು ಮಾಡಿತ್ತು. ಆದರೆ ವೈದ್ಯಕೀಯ ತನಿಖೆ ಬಳಿಕ ವೈದ್ಯರು ಸತ್ಯವು ಸಂಪೂರ್ಣವಾಗಿ ಭಿನ್ನವಾಗಿದೆ ಎಂದು ಹೇಳಿದ್ದಾರೆ.

ಖಜುರಾಹೋ ಪ್ರದೇಶದ ಮೌಮಸಾನಿಯಾ ಗ್ರಾಮದಲ್ಲಿ ಈ ವಿಷಿತ್ರ ಘಟನೆ ವರದಿಯಾಗಿದ್ದು, ಇದು ಭೀತಿ ಮತ್ತು ಕುತೂಹಲದ ಅಲೆಯನ್ನು ಸೃಷ್ಟಿಸಿದೆ.

ಘಟನೆ ಏನಿದು? ಹಲ್ಕೆ ಅಹಿರ್ವಾರ್ ಪತ್ನಿ ರಿಂಕಿ ಅವರಿಗೆ ಇದ್ದಕ್ಕಿದ್ದಂತೆ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ಬಳಿಕ ಎರಡು ಹಾವಿನ ಮರಿಗಳಿಗೆ ನಮ್ಮ ನೀಡಿದ್ದೇನೆ ಎಂದು ಅವರು ಹೇಳಿಕೊಂಡಿದ್ದರು. ಸುದ್ದಿ ಹರಡುತ್ತಿದ್ದಂತೆ, ಗ್ರಾಮಸ್ಥರು ತಮ್ಮ ಮನೆಯಲ್ಲಿ ಜಮಾಯಿಸಿದರು ಮತ್ತು ಹಾವಿನ ಮರಿಗಳು ಎಂದು ಕರೆಯಲ್ಪಡುವ ಹಾವುಗಳನ್ನು ಪ್ಲಾಸ್ಟಿಕ್ ಬಟ್ಟಲಿನ ಕೆಳಗೆ ಇಡಲಾಗಿತ್ತು.

ನಂತರ ರಿಂಕಿಯನ್ನು ರಾಜನಗರ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿತ್ತು. ಕೇಂದ್ರದ ಬಿಎಂಒ ಡಾ. ಅವಧೇಶ್ ಚತುರ್ವೇದಿ ಮಾತನಾಡಿ, ರಿಂಕಿ ನಮ್ಮ ಆಸ್ಪತ್ರೆಗೆ ಬಂದಿದ್ದರು, ಇತ್ತೀಚೆಗೆ ತಮಗೆ ಮುಟ್ಟು ಆಗಿತ್ತು ಎಂದು ಹೇಳಿಕೊಂಡಿದ್ದರು. ಅದು ಬಳಿಕ ನಿಂತು ಹೋಗಿತ್ತು. ಪರೀಕ್ಷೆಯ ನಂತರ, ಅವಳು ಗರ್ಭಿಣಿಯಲ್ಲ ಎಂಬುದು ಸ್ಪಷ್ಟವಾಯಿತು.

ಮರಿ ಹಾವುಗಳು ಎಂದು ಆಕೆ ಭಾವಿಸಿದ್ದು ವಾಸ್ತವವಾಗಿ ರಕ್ತ ಹೆಪ್ಪುಗಟ್ಟುವಿಕೆಯಿಂದಾಗಿತ್ತು. ಅವು ಕೆಲವೊಮ್ಮೆ ದಾರದಂತಹ ಅಥವಾ ಉದ್ದವಾದ ಆಕಾರದಲ್ಲಿ ಕಾಣಿಸಿಕೊಳ್ಳಬಹುದು ಎಂದು ವೈದ್ಯರು ಹೇಳಿದ್ದಾರೆ.

ಮತ್ತಷ್ಟು ಓದಿ: Video: ಬೆಡ್ ರೂಮಿನ ಹಾಸಿಗೆ ಮೇಲೆ ರಾಶಿ ರಾಶಿ ಹಾವುಗಳು, ಈ ಯುವತಿ ಏನ್ ಮಾಡ್ತಿದ್ದಾಳೆ ನೋಡಿ

ಹಾವಿನಂತಹ ವಸ್ತು ಸ್ವಲ್ಪ ಸಮಯದ ನಂತರ ಕರಗಿತು ಮತ್ತು ಮಹಿಳೆ ಕೂಡ ಇದನ್ನು ಒಪ್ಪಿಕೊಂಡರು. ಅವರಿಗೆ ಇನ್ನೂ ಸೌಮ್ಯವಾದ ಹೊಟ್ಟೆ ನೋವು ಇತ್ತು ಮತ್ತು ಛತ್ತರ್ಪುರದಲ್ಲಿ ಅಲ್ಟ್ರಾಸೌಂಡ್ ಸ್ಕ್ಯಾನ್‌ಗೆ ಶಿಫಾರಸು ಮಾಡಲಾಯಿತು. ಮನುಷ್ಯರು ಹಾವುಗಳಂತಹ ಸರಿಸೃಪಗಳಿಗೆ ಜನ್ಮ ನೀಡುವುದು ಜೈವಿಕವಾಗಿ ಅಸಾಧ್ಯ ಎಂದು ತಜ್ಞರು ವಿವರಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ