Jayalalitha’s Death: ಜಯಲಲಿತಾ ಸಾವಿಗೆ ಬಿಜೆಪಿಯೇ ಕಾರಣ: ಡಿಎಂಕೆ ಶಾಸಕ ಗಂಭೀರ ಆರೋಪ
ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಸಾವಿಗೆ ಬಿಜೆಪಿಯೇ ಕಾರಣ ಎಂದು ಡಿಕೆಂಕೆ ಶಾಸಕ ಮಾರ್ಕಂಡೇಯನ್ ಗಂಭೀರ ಆರೋಪ ಮಾಡಿದ್ದಾರೆ.
ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಸಾವಿಗೆ ಬಿಜೆಪಿಯೇ ಕಾರಣ ಎಂದು ಡಿಕೆಂಕೆ ಶಾಸಕ ಮಾರ್ಕಂಡೇಯನ್ ಗಂಭೀರ ಆರೋಪ ಮಾಡಿದ್ದಾರೆ. ಸುಮಾರು ಐದು ವರ್ಷಗಳಿಂದ ತನಿಖೆ ನಡೆಯುತ್ತಿದೆ, ಆಯೋಗದ ತನಿಖಾ ಅವಧಿಯನ್ನು ಹಲವು ಬಾರಿ ವಿಸ್ತರಿಸಲಾಗಿದೆ. ಆಯೋಗದ ತನಿಖಾ ಮುಖ್ಯಸ್ಥ ಆರುಮುಗಸಾಮಿ ಅವರು ಸಮಿತಿಯ ವರದಿಯನ್ನು ಕೆಲವು ವಾರಗಳ ಹಿಂದೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಸಲ್ಲಿಸಿದ್ದರು.
ಆಯೋಗದ ವರದಿಯಲ್ಲಿ ಜಯಲಲಿತಾ ಅವರ ಆಪ್ತರಾದ, ಶಶಿಕಲಾ, ಮಾಜಿ ಆರೋಗ್ಯ ಸಚಿವ ಡಾ.ಸಿ.ವಿಜಯಭಾಸ್ಕರ್, ಆಗಿನ ಮುಖ್ಯ ಕಾರ್ಯದರ್ಶಿ ಡಾರಾಮಮೋಹನ ರಾವ್, ಮಾಜಿ ಆರೋಗ್ಯ ಇಲಾಖೆ ಕಾರ್ಯದರ್ಶಿರಾಧಾಕೃಷ್ಣನ್ಮತ್ತು ಇತರರನ್ನು ಸರ್ಕಾರದ ತನಿಖೆಗೆ ಆದೇಶಿಸಲು ಶಿಫಾರಸು ಮಾಡಲಾಗಿದೆ.
ತಮಿಳುನಾಡಿನ ವಿಧಾನಸಭಾ ಅಧಿವೇಶನದಲ್ಲಿ ಕೆಲವು ವಿಚಾರಗಳ ಬಗ್ಗೆ ಪ್ರಸ್ತಾಪಿಸಲಾಯಿತು. ಜಯಲಲಿತಾ ಅವರು ಸೆಪ್ಟೆಂಬರ್ 22, 2016 ರಂದು ಆಸ್ಪತ್ರೆಗೆ ದಾಖಲಾಗಿದ್ದರು ಮತ್ತು ಹತ್ತು ವಾರಗಳ ಜೀವನ್ಮರಣದ ನಂತರ ಡಿಸೆಂಬರ್ 5, 2016 ರಂದು ನಿಧನರಾದರು.
ಅವರ ಸಾವಿನ ಬಗ್ಗೆ ಹಲವಾರು ವಲಯಗಳಲ್ಲಿ ಪ್ರಶ್ನೆ ಎದ್ದಿತ್ತು. ಸತ್ಯಾಂಶಗಳನ್ನು ಬಯಲಿಗೆಳೆಯಲು ತನಿಖಾ ಆಯೋಗ ರಚಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಲಾಗಿತ್ತು. ಸರ್ಕಾರವು ಅಂತಿಮವಾಗಿ 1952 ರ ತನಿಖಾ ಆಯೋಗಗಳ ಕಾಯ್ದೆಯ ಅಡಿಯಲ್ಲಿ ಒಂದು ತನಿಖಾ ಆಯೋಗವನ್ನು ರಚಿಸಲು ನಿರ್ಧರಿಸಿತು.
ವರದಿಗಳ ಪ್ರಕಾರ ಸ್ಥೂಲಕಾಯತೆ, ಅಧಿಕ ರಕ್ತದೊತ್ತಡ, ಮಧುಮೇಹ, ಹೈಪೋಥೈರಾಯ್ಡಿಸಮ್, ನಿರಂತರ ಅತಿಸಾರದೊಂದಿಗೆ, ದೀರ್ಘಕಾಲದ ಸೀಸನಲ್ ಬ್ರಾಂಕೈಟಿಸ್ ಇವೆಲ್ಲವೂ ಜಯಲಲಿತಾ ಅವರಿಗೆ ಇತ್ತು ಎಂದು ಹೇಳಲಾಗಿತ್ತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ