AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಿಸಿನ್ ದಾಳಿಗೆ ಸಂಚು ರೂಪಿಸಿ ಸಬರಮತಿ ಜೈಲುಪಾಲಾಗಿದ್ದ ಡಾ. ಅಹ್ಮದ್ ಮೇಲೆ ಸಹ ಕೈದಿಗಳಿಂದ ಹಲ್ಲೆ

ಭಾರತದೊಳಗೆ ದೊಡ್ಡ ರಾಸಾಯನಿಕ ದಾಳಿ ನಡೆಸಲು ಮುಂದಾಗಿ ಜೈಲು ಪಾಲಾಗಿದ್ದ ಅಹ್ಮದ್​ ಮೇಲೆ ಸಹ ಕೈದಿಗಳು ಸಬರಮತಿ ಜೈಲಿನಲ್ಲಿ ಹಲ್ಲೆ ನಡೆಸಿರುವ ಘಟನೆ ವರದಿಯಾಗಿದೆ. ಮೂಲಗಳು ಹೇಳುವಂತೆ ಹೊಡೆತ ಎಷ್ಟು ತೀವ್ರವಾಗಿತ್ತೆಂದರೆ, ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿ ಮಧ್ಯಪ್ರವೇಶಿಸಿ ಅವನ ಜೀವ ಉಳಿಸಬೇಕಾಯಿತು. ಸೆಲ್ ಹೊರಗೆ ನಿಂತಿದ್ದ ಕಾವಲುಗಾರರು ಗದ್ದಲ ಕೇಳಿದ ತಕ್ಷಣ, ಅವರು ಧಾವಿಸಿ ಬಂದು ದಾಳಿಕೋರರಿಂದ ಅವನನ್ನು ದೂರ ಎಳೆದರು.

ರಿಸಿನ್ ದಾಳಿಗೆ ಸಂಚು ರೂಪಿಸಿ ಸಬರಮತಿ ಜೈಲುಪಾಲಾಗಿದ್ದ ಡಾ. ಅಹ್ಮದ್ ಮೇಲೆ ಸಹ ಕೈದಿಗಳಿಂದ ಹಲ್ಲೆ
ಸೈಯದ್ Image Credit source: NDTV
ನಯನಾ ರಾಜೀವ್
|

Updated on: Nov 19, 2025 | 9:26 AM

Share

ಅಹಮದಾಬಾದ್, ನವೆಂಬರ್ 19: ದೇಶಾದ್ಯಂತ ರಿಸಿನ್(Risin) ಭಯೋತ್ಪಾದಕ ದಾಳಿಗೆ ಸಂಚು ರೂಪಿಸಿದ್ದ ಡಾ. ಅಹ್ಮದ್ ಎಂಬುವವನನ್ನು ಇತ್ತೀಚೆಗೆ ಹೈದರಾಬಾದ್​ನಿಂದ ಬಂಧಿಸಿ ಗುಜರಾತ್ನ ಸಬರಮತಿ ಜೈಲಿನಲ್ಲಿರಿಸಲಾಗಿತ್ತು. ಜೈಲಿನಲ್ಲಿ ಕೈದಿಗಳ ನಡುವೆ ನಡೆದ ಗಲಾಟೆಯಲ್ಲಿ ಅಹ್ಮದ್ ಮೇಲೆ ಸಹ ಕೈದಿಗಳು ಹಲ್ಲೆ ನಡೆಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹೆಚ್ಚಿನ ಭದ್ರತೆಯ ಸೆಲ್‌ನಲ್ಲಿದ್ದ ಕೈದಿಗಳು ಡಾ. ಅಹ್ಮದ್ ಮೇಲೆ ದಾಳಿ ಮಾಡಿದ್ದಾರೆ ಎನ್ನಲಾಗಿದೆ. ಹಠಾತ್ ದಾಳಿಯ ಹಿಂದಿನ ಕಾರಣ ಸ್ಪಷ್ಟವಾಗಿಲ್ಲ ಮತ್ತು ಪ್ರಸ್ತುತ ತನಿಖೆಯಲ್ಲಿದೆ.

ಮೂಲಗಳು ಹೇಳುವಂತೆ ಹೊಡೆತ ಎಷ್ಟು ತೀವ್ರವಾಗಿತ್ತೆಂದರೆ, ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿ ಮಧ್ಯಪ್ರವೇಶಿಸಿ ಅವನ ಜೀವ ಉಳಿಸಬೇಕಾಯಿತು. ಸೆಲ್ ಹೊರಗೆ ನಿಂತಿದ್ದ ಕಾವಲುಗಾರರು ಗದ್ದಲ ಕೇಳಿದ ತಕ್ಷಣ, ಅವರು ಧಾವಿಸಿ ಬಂದು ದಾಳಿಕೋರರಿಂದ ಅವನನ್ನು ದೂರ ಎಳೆದಿದ್ದಾರೆ.

ನವೆಂಬರ್ 8 ರಂದು ಗುಜರಾತ್ ಎಟಿಎಸ್ ಡಾ. ಅಹ್ಮದ್ ಅವರನ್ನು ಇತರ ಇಬ್ಬರು ಶಂಕಿತ ಐಎಸ್‌ಕೆಪಿ ಸದಸ್ಯರೊಂದಿಗೆ ಬಂಧಿಸಿತ್ತು. ತನಿಖಾಧಿಕಾರಿಗಳು ಈ ಗುಂಪು ಅತ್ಯಂತ ಮಾರಕ ವಿಷಗಳಲ್ಲಿ ಒಂದಾದ ರಿಸಿನ್ ವಿಷವನ್ನು ಬಳಸಿಕೊಂಡು ದಾಳಿ ನಡೆಸಲು ಯೋಜಿಸುತ್ತಿದೆ ಎಂದು ಈ ಹಿಂದೆ ಹೇಳಿದ್ದರು.ಮಾರಕ ರಾಸಾಯನಿಕ ‘ರಿಸಿನ್’ ಅನ್ನು ತಯಾರಿಸುತ್ತಿದ್ದರು ಮತ್ತು ಅವರ ನಿರ್ವಾಹಕ ಇಸ್ಲಾಮಿಕ್ ಸ್ಟೇಟ್ ಖೊರಾಸನ್ ಪ್ರಾಂತ್ಯದೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಹೇಳಲಾಗಿದೆ.

ಆರೋಪಿಗಳನ್ನು ಡಾ. ಅಹ್ಮದ್ ಮೊಹಿಯುದ್ದೀನ್ ಸಯ್ಯದ್, ಆಜಾದ್ ಸುಲೇಮಾನ್ ಶೇಖ್ ಮತ್ತು ಮೊಹಮ್ಮದ್ ಸುಹೇಲ್ ಮೊಹಮ್ಮದ್ ಸಲೀಮ್ ಎಂದು ಗುರುತಿಸಲಾಗಿದೆ. ಇತರ ಇಬ್ಬರು ಬಂಧಿತ ಆರೋಪಿಗಳು ಲಕ್ನೋ, ದೆಹಲಿ ಮತ್ತು ಅಹಮದಾಬಾದ್‌ನ ಹಲವಾರು ಸೂಕ್ಷ್ಮ ಸ್ಥಳಗಳಲ್ಲಿ ಭಯೋತ್ಪಾದಕ ಕೃತ್ಯ ನಡೆಸಲು ಮುಂದಾಗಿದ್ದರು.

ಆರೋಪಿಗಳು ತಮ್ಮ ನಿರ್ವಾಹಕರು ಪಾಕಿಸ್ತಾನ ಗಡಿಯಾದ್ಯಂತ ಡ್ರೋನ್ ಮೂಲಕ ಶಸ್ತ್ರಾಸ್ತ್ರಗಳನ್ನು ರವಾನಿಸುತ್ತಿರುವುದನ್ನು ಬಹಿರಂಗಪಡಿಸಿದ್ದಾರೆ ಎಂದು ಅವರು ಹೇಳಿದರು. ಈ ಸುಳಿವಿನ ಆಧಾರದ ಮೇರೆಗೆ ಕಾರ್ಯನಿರ್ವಹಿಸಿದ ಎಟಿಎಸ್ ತಂಡವು, ನವೆಂಬರ್ 7 ರಂದು ಗಾಂಧಿನಗರದ ಅದಲಾಜ್ ಬಳಿ ಹೈದರಾಬಾದ್ ಮೂಲದ ಡಾ. ಸೈಯದ್​​ನನ್ನು ಬಂಧಿಸಿತ್ತು.

ಮತ್ತಷ್ಟು ಓದಿ: ಅಮೋನಿಯಂ ನೈಟ್ರೇಟ್, ರಿಸಿನ್ ಬಳಸಿ ಭಾರತದಲ್ಲಿ ರಾಸಾಯನಿಕ ದಾಳಿಗೆ ಪ್ಲ್ಯಾನ್ , ರಿಸಿನ್ ದೇಹ ಹೊಕ್ಕರೆ ಸಂಜೀವಿನಿಯೂ ಕೆಲಸ ಮಾಡದು

ಆತನ ಬಳಿ ಇದ್ದ ಎರಡು ಪಿಸ್ತೂಲ್‌ಗಳು, ಒಂದು ಬೆರೆಟ್ಟಾ ಪಿಸ್ತೂಲ್, 30 ಜೀವಂತ ಕಾರ್ಟ್ರಿಡ್ಜ್‌ಗಳು ಮತ್ತು ನಾಲ್ಕು ಲೀಟರ್ ಕ್ಯಾಸ್ಟರ್ ಆಯಿಲ್‌ ವಶಪಡಿಸಿಕೊಂಡಿತ್ತು. ಚೀನಾದಲ್ಲಿ ಎಂಬಿಬಿಎಸ್ ಪದವಿ ಪಡೆದ ಸೈಯದ್, ಪ್ರಮುಖ ಭಯೋತ್ಪಾದಕ ದಾಳಿಯನ್ನು ನಡೆಸಲು ‘ರಿಸಿನ್’ ಎಂಬ ಅತ್ಯಂತ ಮಾರಕ ವಿಷವನ್ನು ತಯಾರಿಸುತ್ತಿದ್ದ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ