ಆಯುಷ್ ವಿಮರ್ಶಕ ಡಾ ಅಬಿ ಫಿಲಿಪ್ಸ್ ಅವರ ‘ದಿ ಲಿವರ್ ಡಾಕ್’ ಎಂಬ X ಖಾತೆ ರದ್ದು
ಫಿಲಿಪ್ಸ್ ಕೇರಳದವರು. ಅವರು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು ಮತ್ತು ಯೂಟ್ಯೂಬ್ ವಿಡಿಯೊಗಳಿಗೆ ಹೆಸರುವಾಸಿಯಾಗಿದ್ದಾರೆ. ಅವರು ಹುಸಿ ವಿಜ್ಞಾನವನ್ನು ಬಯಲು ಮಾಡುತಿದ್ದು ಮನೆಮದ್ದುಗಳ ಬಗ್ಗೆ ಪ್ರಚಲಿತದಲ್ಲಿರುವ ರೀತಿಗಳನ್ನು ತಿರಸ್ಕರಿಸುತ್ತಾರೆ. ಸ್ವಲ್ಪ ಸಮಯದಿಂದ ಇವರು ಆಯುರ್ವೇದ, ಯೋಗ ಮತ್ತು ನ್ಯಾಚುರೋಪತಿ, ಯುನಾನಿ, ಸಿದ್ಧ ಮತ್ತು ಹೋಮಿಯೋಪತಿಯಂತಹ ಪರ್ಯಾಯ ಔಷಧಗಳು ಮತ್ತು ಚಿಕಿತ್ಸಾ ವಿಧಾನಗಳ ಬಗ್ಗೆ ಸುಳ್ಳುಗಳನ್ನು ಭೇದಿಸುತ್ತಿದ್ದಾರೆ

ದೆಹಲಿ ಸೆಪ್ಟೆಂಬರ 28: ತನ್ನ ನಿಯಮಿತ ಪೋಸ್ಟ್‌ಗಳ ಮೂಲಕ ಹುಸಿ ವಿಜ್ಞಾನವನ್ನು ಭೇದಿಸಲು ಹೆಸರಾದ ವೈದ್ಯರ ಖಾತೆಯನ್ನು ರದ್ದುಗೊಳಿಸುವಂತೆ ಬೆಂಗಳೂರು ಸಿವಿಲ್ ನ್ಯಾಯಾಲಯವು (Bengaluru Civil Court )ಗುರುವಾರ ಸಾಮಾಜಿಕ ಮಾಧ್ಯಮ ಕಂಪನಿ Xಗೆ ಹೇಳಿದೆ . ಎಕ್ಸ್ನಲ್ಲಿ ದಿ ಲಿವರ್ ಡಾಕ್ (The Liver Doc) ಎಂಬ ಖಾತೆಯಿಂದ ಚಿರಪರಿತರಾಗಿರುವ ಹೆಪಟೊಲೊಜಿಸ್ಟ್ ಡಾ ಸಿರಿಯಾಕ್ ಅಬಿ ಫಿಲಿಪ್ಸ್ (Dr Abby Philips) ಅವರು ತಮ್ಮ ಕಂಪನಿಯ ವಿರುದ್ಧ ಮಾನಹಾನಿಕರ ಆರೋಪ ಮಾಡಿದ್ದಾರೆ ಎಂದು ಆರೋಪಿಸಿ ಹಿಮಾಲಯ ವೆಲ್ ನೆಸ್ ಕಾರ್ಪೊರೇಷನ್ ಸಲ್ಲಿಸಿದ ಮೊಕದ್ದಮೆಯಲ್ಲಿ ಬೆಂಗಳೂರು ಸಿವಿಲ್ ಕೋರ್ಟ್ ಈ ಆದೇಶ ನೀಡಿದೆ ಎಂದು ಲೈವ್ ಲಾ ವರದಿ ಮಾಡಿದೆ.
ಬೆಂಗಳೂರು ಮೂಲದ ಹರ್ಬಲ್ ಹೆಲ್ತ್ ಮತ್ತು ಪರ್ಸನಲ್ ಕೇರ್ ಕಂಪನಿ ಎಂದು ವಿವರಿಸುವ ಹಿಮಾಲಯ ವೆಲ್ನೆಸ್ ಕಾರ್ಪೊರೇಷನ್ ಪ್ರಕರಣವನ್ನು ದಾಖಲಿಸಿದ ನಂತರ ಡಾ ಫಿಲಿಪ್ಸ್ ಅವರ X ಖಾತೆ ರದ್ದು ಮಾಡಲಾಗಿದೆ. ಲೈವ್ ಲಾ ವರದಿಯ ಪ್ರಕಾರ, ಡಾ ಫಿಲಿಪ್ಸ್ ಅವರು ತಮ್ಮ ಕಂಪನಿಯ ಉತ್ಪನ್ನಗಳ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ಪೋಸ್ಟ್ ಮಾಡುತ್ತಿದ್ದು, ಇದು ವ್ಯಾಪಾರ ಕುಸಿತಕ್ಕೆ ಕಾರಣವಾಗಿದೆ ಎಂದು ಹಿಮಾಲಯ ವೆಲ್ ನೆಸ್ ಕಾರ್ಪೊರೇಷನ್ ಹೇಳಿದೆ. “ಕಾನೂನು ಬೇಡಿಕೆಗೆ ಪ್ರತಿಕ್ರಿಯೆಯಾಗಿ @theliverdr ಅನ್ನು ತಡೆಹಿಡಿಯಲಾಗಿದೆ.” ಎಂದು ಎಕ್ಸ್ ಹೇಳಿದೆ.
ಡಾ ಸಿರಿಯಾಕ್ ಅಬಿ ಫಿಲಿಪ್ಸ್ ಯಾರು?
ಫಿಲಿಪ್ಸ್ ಕೇರಳದವರು. ಅವರು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು ಮತ್ತು ಯೂಟ್ಯೂಬ್ ವಿಡಿಯೊಗಳಿಗೆ ಹೆಸರುವಾಸಿಯಾಗಿದ್ದಾರೆ. ಅವರು ಹುಸಿ ವಿಜ್ಞಾನವನ್ನು ಬಯಲು ಮಾಡುತಿದ್ದು ಮನೆಮದ್ದುಗಳ ಬಗ್ಗೆ ಪ್ರಚಲಿತದಲ್ಲಿರುವ ರೀತಿಗಳನ್ನು ತಿರಸ್ಕರಿಸುತ್ತಾರೆ. ಸ್ವಲ್ಪ ಸಮಯದಿಂದ ಇವರು ಆಯುರ್ವೇದ, ಯೋಗ ಮತ್ತು ನ್ಯಾಚುರೋಪತಿ, ಯುನಾನಿ, ಸಿದ್ಧ ಮತ್ತು ಹೋಮಿಯೋಪತಿಯಂತಹ ಪರ್ಯಾಯ ಔಷಧಗಳು ಮತ್ತು ಚಿಕಿತ್ಸಾ ವಿಧಾನಗಳ ಬಗ್ಗೆ ಸುಳ್ಳುಗಳನ್ನು ಭೇದಿಸುತ್ತಿದ್ದಾರೆ. ಪ್ರತ್ಯೇಕ ಆಯುಷ್ ಸಚಿವಾಲಯದೊಂದಿಗೆ ಪರ್ಯಾಯ ಔಷಧಗಳಿಗೆ ಸರ್ಕಾರವು ಒತ್ತಾಯಿಸುತ್ತಿರುವ ಸಮಯದಲ್ಲಿ, ಫಿಲಿಪ್ಸ್ ಈ ಔಷಧಿಗಳು ಮತ್ತು ಚಿಕಿತ್ಸೆಗಳು ವೈಜ್ಞಾನಿಕ ಆಧಾರವನ್ನು ಹೊಂದಿಲ್ಲ ಮತ್ತು ರೋಗಿಗಳಿಗೆ ಹಾನಿಯನ್ನುಂಟುಮಾಡುತ್ತವೆ ಎಂದು ವಾದಿಸುತ್ತಾರೆ.
ಈ ಉದಾಹರಣೆಯನ್ನು ತೆಗೆದುಕೊಳ್ಳಿ. ಈ ವರ್ಷದ ಆರಂಭದಲ್ಲಿ ಫಿಲಿಪ್ಸ್ ಕೆಲವು ಹೋಮಿಯೋಪತಿ ಔಷಧಿಗಳಲ್ಲಿ ಬಳಸಲಾದ ಆಲ್ಕೋಹಾಲ್ ಪ್ರಮಾಣವನ್ನು ಕುರಿತು ಕಳವಳ ವ್ಯಕ್ತಪಡಿಸಿದರು. ಹೋಮಿಯೋಪತಿಯು “ನೈಜ ಆಲ್ಕೋಹಾಲ್ ಲಾಬಿಯ ವಿರುದ್ಧ ಕೇವಲ ಪ್ರತಿಸ್ಪರ್ಧಿ ವ್ಯಾಪಾರವಾಗಿದೆ” ಎಂದು ಆರೋಪಿಸಿದರು. ಆಯಾಸಕ್ಕೆ ಚಿಕಿತ್ಸೆ ನೀಡಲು ಆಗಾಗ್ಗೆ ಶಿಫಾರಸು ಮಾಡಲಾದ ಹೋಮಿಯೋಪತಿ ಔಷಧವಾದ ಸಟಿವೋಲ್ 40% ರಷ್ಟು ಪ್ರಮಾಣಿತ ಆಲ್ಕೋಹಾಲ್ ಸಾಂದ್ರತೆಯನ್ನು ಹೊಂದಿದೆ ಎಂದು ಅವರು ವಾದಿಸಿದ್ದಾರೆ.
ದಿ ಪ್ರಿಂಟ್ ಪ್ರಕಾರ, ಫಿಲಿಪ್ಸ್ ಅವರ ಪರ್ಯಾಯ ಔಷಧಿಗಳ ವಿರುದ್ಧ ಹೋರಾಟವು 2017 ರಲ್ಲಿ ಪ್ರಾರಂಭವಾಯಿತು, ಅವರು ಆಯುರ್ವೇದ ಮಾತ್ರೆಗಳ ಬಳಕೆಯಿಂದ ಯಕೃತ್ತಿನ ವೈಫಲ್ಯದಿಂದ ಬಳಲುತ್ತಿರುವ ರೋಗಿ ಬಗ್ಗೆ ಹೇಳಿದ್ದರು. ತನ್ನ ಟ್ವಿಟರ್ ಖಾತೆಯಲ್ಲಿ ಅವರು ತಪ್ಪುದಾರಿಗೆಳೆಯುವ ಜಾಹೀರಾತುಗಳನ್ನು ಟೀಕಿಸುತ್ತಾರೆ ಮತ್ತು ಆಯುರ್ವೇದ ಮತ್ತು ಹೋಮಿಯೋಪತಿಯ ಪರಿಣಾಮಕಾರಿತ್ವವನ್ನು ಪ್ರಶ್ನಿಸುತ್ತಾರೆ.
ಇದನ್ನೂ ಓದಿ: ರಾಜಸ್ಥಾನದ ಭಿಲ್ವಾರ ದೇವಸ್ಥಾನದ ಕಾಣಿಕೆ ಡಬ್ಬಿಗೆ ಮೋದಿ ಹಾಕಿದ ಹಣವೆಷ್ಟು? ಇಲ್ಲಿದೆ ನಿಜ ಸಂಗತಿ
ಮಲಯಾಳಂ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಆಯುರ್ವೇದದಲ್ಲಿ ವ್ಯಾಪಕವಾಗಿ ಬಳಸಲಾಗುವ ಗಿಡಮೂಲಿಕೆಯಾದ ಗಿಲೋಯ್ (ಟಿನೋಸ್ಪೊರಾ ಕಾರ್ಡಿಫೋಲಿಯಾ) ಕುರಿತು ಮಾಡಿದ ಟೀಕೆಗಳಿಗಾಗಿ ಆಯುಷ್ ಸಚಿವಾಲಯವು ವೈದ್ಯರಿಗೆ ಮಾನನಷ್ಟ ಬೆದರಿಕೆ ಹಾಕಿದೆ. ಫೆಬ್ರವರಿ 2022 ರಲ್ಲಿ ಅವರಿಗೆ ಕೇರಳ ಸ್ಟೇಟ್ ಮೆಡಿಕಲ್ ಕೌನ್ಸಿಲ್ ಫಾರ್ ಇಂಡಿಯನ್ ಸಿಸ್ಟಮ್ಸ್ ಆಫ್ ಮೆಡಿಸಿನ್‌ನಿಂದ ನೋಟಿಸ್ ನೀಡಲಾಯಿತು. ಅಕ್ಟೋಬರ್‌ನಲ್ಲಿ ಎಲ್ಲಾ ಆರೋಪಗಳಿಂದ ತೆರವುಗೊಳಿಸಲಾಯಿತು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



