ಬಿಹಾರದಲ್ಲಿ ಪಾಕಿಸ್ತಾನ ಸೃಷ್ಟಿಸಬೇಡಿ: ನಿತೀಶ್ ಕುಮಾರ್ ವಿರುದ್ಧ ಗುಡುಗಿದ ಬಿಜೆಪಿ

ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ ನಿತೀಶ್ ಕುಮಾರ್ ಬಿಜೆಪಿ ಪ್ರಚಾರ ಮಾತ್ರ ಮಾಡುತ್ತಿದ್ದು ಬಡ ರಾಜ್ಯಗಳಿಗಾಗಿ ಕೆಲಸ ಮಾಡುವುದು ಕಡಿಮೆ. ನಮ್ಮ ಬೇಡಿಕೆಗಳನ್ನು ಅಂಗೀಕರಿಸಿದ್ದರೆ, ರಾಜ್ಯವು ವೇಗವಾಗಿ

ಬಿಹಾರದಲ್ಲಿ ಪಾಕಿಸ್ತಾನ ಸೃಷ್ಟಿಸಬೇಡಿ: ನಿತೀಶ್ ಕುಮಾರ್ ವಿರುದ್ಧ ಗುಡುಗಿದ ಬಿಜೆಪಿ
ಬಿಹಾರ ಮುಖ್ಯಮಂತ್ರಿ ನಿತೀಶ್​ ಕುಮಾರ್​
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Nov 04, 2022 | 2:51 PM

ಶಾಲೆಗಳಲ್ಲಿ ಉರ್ದುವನ್ನು (Urdu) ಮರುಸ್ಥಾಪಿಸುವ ಉದ್ದೇಶ ಹೊಂದಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ (Nitish Kumar) ವಿರುದ್ಧ ಬಿಜೆಪಿ(BJP) ಟೀಕೆ ಮಾಡಿದೆ.ನಿತೀಶ್ ಕುಮಾರ್ ತಮ್ಮ ಪಕ್ಷದೊಂದಿಗೆ ಮೈತ್ರಿ ಕಡಿದುಕೊಂಡ ನಂತರ ಅವರು ‘ಬಿಹಾರದಲ್ಲಿ ಪಾಕಿಸ್ತಾನವನ್ನು ಸೃಷ್ಟಿಸಿದ್ದಾರೆ’ ಎಂದು ಬಿಹಾರದ ಬಿಜೆಪಿ ಘಟಕ ಆರೋಪಿಸಿದೆ. ಪ್ರತಿ ಶಾಲೆಯಲ್ಲಿ ಉರ್ದು ಶಿಕ್ಷಕರನ್ನು ಪುನಃಸ್ಥಾಪಿಸುವುದು ಸಿಎಂ ನಿತೀಶ್ ಕುಮಾರ್ ಅವರ ಉದ್ದೇಶವಾಗಿದೆ. ಬಿಹಾರದ ಅಸೆಂಬ್ಲಿಯಲ್ಲಿ ಉರ್ದು ಬಲ್ಲವರನ್ನು ನೇಮಿಸಿಕೊಳ್ಳುವ ಅಗತ್ಯವೇನಿದೆ? ಈಗ ಪ್ರತಿ ಪೊಲೀಸ್ ಠಾಣೆಗಳಲ್ಲಿ ಉರ್ದು ಭಾಷಾಂತರಕಾರರನ್ನು ನೇಮಿಸಲಾಗುವುದು ಎಂದು ರಾಜ್ಯ ಬಿಜೆಪಿ ವಕ್ತಾರ ನಿಖಿಲ್ ಆನಂದ್ ಹೇಳಿದ್ದಾರೆ. “ಬಿಹಾರದ ಮುಸ್ಲಿಂ ಪ್ರಾಬಲ್ಯದ ಜಿಲ್ಲೆಗಳಲ್ಲಿ ದಲಿತರು, ಒಬಿಸಿಗಳು ಮತ್ತು ಇಬಿಸಿಗಳ ಜೀವನ ಹಾಳಾಗುತ್ತದೆ..ಸಹೋದರ, ಬಿಹಾರದಲ್ಲಿ ಪಾಕಿಸ್ತಾನವನ್ನು ಸೃಷ್ಟಿಸಬೇಡಿ, ನೀವೇ ಪಾಕಿಸ್ತಾನಕ್ಕೆ ಹೋಗಿ,” ಎಂದು ಅವರು ಹೇಳಿದ್ದಾರೆ.

ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ ನಿತೀಶ್ ಕುಮಾರ್ ಬಿಜೆಪಿ ಪ್ರಚಾರ ಮಾತ್ರ ಮಾಡುತ್ತಿದ್ದು ಬಡ ರಾಜ್ಯಗಳಿಗಾಗಿ ಕೆಲಸ ಮಾಡುವುದು ಕಡಿಮೆ. ನಮ್ಮ ಬೇಡಿಕೆಗಳನ್ನು ಅಂಗೀಕರಿಸಿದ್ದರೆ, ರಾಜ್ಯವು ವೇಗವಾಗಿ ಅಭಿವೃದ್ಧಿ ಹೊಂದುತ್ತಿತ್ತು. ಎಲ್ಲ ಬಡ ರಾಜ್ಯಗಳು ಪಡೆಯಬೇಕಾಗಿರುವ ಬಿಹಾರಕ್ಕೆ ವಿಶೇಷ ಸ್ಥಾನಮಾನದ ದೀರ್ಘಾವಧಿಯ ಬೇಡಿಕೆಯನ್ನು ಸಹ ಸ್ವೀಕರಿಸಲಾಗಿಲ್ಲ ಎಂದು ಅವರು ಹೇಳಿದ್ದಾರೆ.

ಗರೀಬ್ ಗುರ್ಬಾ ರಾಜ್ಯೋಂ ಮೇ ಕುಛ್ ಹೋ ರಹಾ ಹೈ? ಜೂಟೇ ಪ್ರಚಾರ್ ಪ್ರಸಾರ ಮೇ ಲಗಾ ರಹತಾ ಹೈ (ಬಡ ರಾಜ್ಯಗಳಲ್ಲಿ ಏನಾದರೂ ಮಾಡಲಾಗುತ್ತಿದೆಯೇ? ಪ್ರಚಾರ ಮಾತ್ರ ನಡೆಯುತ್ತಿದೆ) ”ಎಂದು ನಿತೀಶ್ ಕುಮಾರ್ ಹೇಳಿದ್ದಾರೆ

ಈ ವರ್ಷದ ಆಗಸ್ಟ್‌ನಲ್ಲಿ ಎನ್‌ಡಿಎ ಮೈತ್ರಿಕೂಟದಿಂದ ಹೊರಬಂದ ನಂತರ ಬಿಹಾರದ ಅತಿ ಹೆಚ್ಚು ಕಾಲ ಮುಖ್ಯಮಂತ್ರಿಯಾಗಿದ್ದವರು ವಿಶೇಷ ಸ್ಥಾನಮಾನ ಬೇಡಿಕೆಯನ್ನು ಎತ್ತಿದ್ದು ಇದೇ ಮೊದಲಲ್ಲ. ಸೆಪ್ಟೆಂಬರ್‌ನಲ್ಲಿ, ಬಿಹಾರಕ್ಕೆ ವಿಶೇಷ ಸ್ಥಾನಮಾನ ನೀಡದಿದ್ದಕ್ಕಾಗಿ ಅವರ ಪಕ್ಷವು ಕೇಂದ್ರದ ಬಿಜೆಪಿಯ ಮೇಲೆ ದಾಳಿ ನಡೆಸಿತ್ತು ಎಲ್ಲಾ ರಾಜ್ಯಗಳಿಗೂ ವಿಶೇಷ ಸ್ಥಾನಮಾನ ನೀಡಬೇಕು ಎಂಬ ನಮ್ಮ ಬೇಡಿಕೆ ಈಡೇರದ ಕಾರಣ ನಾವು ಕಂಗಾಲಾಗಿದ್ದೇವೆ ಎಂದು ಜೆಡಿಯು ನಾಯಕ ಟೀಕಿಸಿದ್ದಾರೆ.

2024 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸಲು ಏಕೀಕೃತ ವಿರೋಧ ಪಕ್ಷಕ್ಕೆ ಕುಮಾರ್ ಶ್ರಮಿಸುತ್ತಿದ್ದಾರೆ. ಕೇಂದ್ರದಲ್ಲಿ ಮುಂದಿನ ಸರ್ಕಾರ ರಚಿಸಲು ವಿರೋಧ ಪಕ್ಷಗಳು ಯಶಸ್ವಿಯಾದರೆ ಬಿಹಾರ ಸೇರಿದಂತೆ ಎಲ್ಲಾ ಹಿಂದುಳಿದ ರಾಜ್ಯಗಳಿಗೆ ವಿಶೇಷ ಸ್ಥಾನಮಾನ ಸಿಗಲಿದೆ ಎಂದು ಅವರು ಘೋಷಿಸಿದ್ದಾರೆ.