ಇವಿಎಂ ಡೇಟಾ ಡಿಲೀಟ್ ಮಾಡಬೇಡಿ; ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಆದೇಶ
ಚುನಾವಣಾ ಮತಯಂತ್ರಗಳ ಡೇಟಾವನ್ನು ಅಳಿಸಬೇಡಿ ಅಥವಾ ಮರುಲೋಡ್ ಮಾಡಬೇಡಿ ಎಂದು ಇವಿಎಂ ಪರಿಶೀಲನೆಗಾಗಿ ಸಲ್ಲಿಸಲಾದ ಅರ್ಜಿಗಳ ಕುರಿತು ಸುಪ್ರೀಂ ಕೋರ್ಟ್ ಚುನಾವಣಾ ಆಯೋಗಕ್ಕೆ ಸೂಚನೆ ನೀಡಿದೆ. ಮೈಕ್ರೋ-ಕಂಟ್ರೋಲರ್‌ಗಳು ಮತ್ತು ಎಲೆಕ್ಟ್ರಾನಿಕ್ ಮತ ಯಂತ್ರಗಳ (ಇವಿಎಂ) ಎಸ್‌ಎಲ್‌ಯು ಅನ್ನು ಪರಿಶೀಲಿಸಲು ಚುನಾವಣಾ ಸಮಿತಿಗೆ ನಿರ್ದೇಶನ ನೀಡುವಂತೆ ಅರ್ಜಿಗಳು ಕೋರಿತ್ತು.

ನವದೆಹಲಿ: ಇವಿಎಂಗಳಲ್ಲಿ ಚಿಹ್ನೆ ಲೋಡಿಂಗ್ ಘಟಕಗಳನ್ನು ಪರಿಶೀಲಿಸಲು ಕೋರಿ ಸಲ್ಲಿಸಲಾದ ಅರ್ಜಿಗಳ ಕುರಿತು ಅಳವಡಿಸಿಕೊಂಡ ಕಾರ್ಯವಿಧಾನವನ್ನು ವಿವರಿಸಲು ಸುಪ್ರೀಂ ಕೋರ್ಟ್ ಇಂದು ಭಾರತೀಯ ಚುನಾವಣಾ ಆಯೋಗಕ್ಕೆ ಸೂಚಿಸಿದೆ. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ದೀಪಂಕರ್ ದತ್ತ ಅವರನ್ನೊಳಗೊಂಡ ವಿಶೇಷ ನ್ಯಾಯಪೀಠವು ಪರಿಶೀಲನಾ ಪ್ರಕ್ರಿಯೆಯ ಸಮಯದಲ್ಲಿ ಡೇಟಾವನ್ನು ಡಿಲೀಟ್ ಮಾಡುವುದನ್ನು ಅಥವಾ ಮರುಲೋಡ್ ಮಾಡಬೇಡಿ ಎಂದು ಚುನಾವಣಾ ಆಯೋಗಕ್ಕೆ ಸೂಚಿಸಿದೆ.
ಚುನಾವಣೆಯ ಮತ ಎಣಿಕೆ ಮುಗಿದ ಬಳಿಕ ಇವಿಎಂಗಳಿಂದ ಡೇಟಾವನ್ನು ಡಿಲೀಟ್ ಮಾಡಬಾರದು ಎಂದು ಕೋರಿ ಸಲ್ಲಿಸಲಾದ ಅರ್ಜಿಯ ಬಗ್ಗೆ ಸುಪ್ರೀಂ ಕೋರ್ಟ್ ಇಂದು ವಿಚಾರಣೆ ನಡೆಸಿತು. ಈ ವೇಳೆ ಇವಿಎಂನಿಂದ ಯಾವುದೇ ಡೇಟಾವನ್ನು ಡಿಲೀಟ್ ಮಾಡಬೇಡಿ ಎಂದು ಕೋರ್ಟ್ ಸೂಚಿಸಿದೆ. ಚುನಾವಣೆ ಬಳಿಕ ಇವಿಎಂ ಮೆಮೊರಿ ಮತ್ತು ಮೈಕ್ರೋಕಂಟ್ರೋಲರ್ ಬರ್ನ್ ಮಾಡುವ ಪ್ರಕ್ರಿಯೆಯ ಕುರಿತು ಚುನಾವಣಾ ಆಯೋಗ ಸುಪ್ರೀಂ ಕೋರ್ಟ್ಗೆ ಮಾಹಿತಿ ನೀಡಬೇಕೆಂದು ಸೂಚನೆ ನೀಡಲಾಗಿದೆ.
ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಇವಿಎಂ ಮಂದಿರ ನಿರ್ಮಿಸಬೇಕು; ಶಿವಸೇನೆ ನಾಯಕ ಸಂಜಯ್ ರಾವತ್ ಲೇವಡಿ
ಒಂದು ಇವಿಎಂ ಅನ್ನು ಪರಿಶೀಲಿಸಲು 40,000 ರೂ. ಶುಲ್ಕ ವಿಧಿಸಲಾಗಿದೆ ಎಂದು ಚುನಾವಣಾ ಆಯೋಗಕ್ಕೆ ತಿಳಿಸಿದ ನಂತರ ಪರಿಶೀಲನೆಯ ವೆಚ್ಚದ ಬಗ್ಗೆಯೂ ನ್ಯಾಯಪೀಠವು ಕಳವಳ ವ್ಯಕ್ತಪಡಿಸಿತು. 40,000 ರೂ. ವೆಚ್ಚವನ್ನು ಕಡಿಮೆ ಮಾಡಿ, ಅದು ತುಂಬಾ ಹೆಚ್ಚಾಗಿದೆ ಎಂದು ನ್ಯಾಯಪೀಠ ಹೇಳಿದೆ.
ಕಳೆದ ವರ್ಷ ಮೇ 1ರಿಂದ ಚಿಹ್ನೆ ಲೋಡಿಂಗ್ ಘಟಕಗಳನ್ನು ಸೀಲ್ ಮಾಡಿ ಕಂಟೇನರ್‌ನಲ್ಲಿ ಭದ್ರಪಡಿಸಬೇಕು. ಚುನಾವಣಾ ಫಲಿತಾಂಶಗಳ ಘೋಷಣೆಯ ನಂತರ 45 ದಿನಗಳವರೆಗೂ ಇವಿಎಂಗಳೊಂದಿಗೆ ಸ್ಟ್ರಾಂಗ್ ರೂಂನಲ್ಲಿ ಸಂಗ್ರಹಿಸಬೇಕು ಎಂದು ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ