ಮಿಯಾ ಬದಲು ಮಾಯಾ, ಅಲಿ ಬದಲು ಆರ್ಯ; ಗೋರಖ್‌ಪುರದಲ್ಲಿ ಮುಸ್ಲಿಂ ಹೆಸರುಗಳಿರುವ ವಾರ್ಡ್ ಹೆಸರು ಬದಲಾವಣೆಗೆ ನಿರ್ಧಾರ

ಅಶ್ಫಾಕುಲ್ಲಾ ಖಾನ್, ಶಿವಸಿಂಗ್ ಚೆಟ್ರಿ, ಬಾಬಾ ಗಂಭೀರ್ ನಾಥ್, ಬಾಬಾ ರಾಘವದಾಸ್, ಡಾ.ರಾಜೇಂದ್ರ ಪ್ರಸಾದ್ ಮತ್ತು ಮದನ್ ಮೋಹನ್ ಮಾಳವೀಯ ಅವರಂತಹ ವ್ಯಕ್ತಿಗಳ ಹೆಸರನ್ನು ವಾರ್ಡ್‌ಗಳಿಗೆ ಇರಿಸಲಾಗಿದೆ.

ಮಿಯಾ ಬದಲು ಮಾಯಾ, ಅಲಿ ಬದಲು ಆರ್ಯ; ಗೋರಖ್‌ಪುರದಲ್ಲಿ ಮುಸ್ಲಿಂ ಹೆಸರುಗಳಿರುವ ವಾರ್ಡ್ ಹೆಸರು ಬದಲಾವಣೆಗೆ ನಿರ್ಧಾರ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Sep 04, 2022 | 3:42 PM

ಗೋರಖ್‌ಪುರ ಮುನ್ಸಿಪಲ್ ಕಾರ್ಪೊರೇಷನ್ (Gorakhpur Municipal Corporation) ಹೊರಡಿಸಿದ ಕರಡು ಡಿಲಿಮಿಟೇಶನ್ ಆದೇಶವು ಸುಮಾರು ಹನ್ನೆರಡು ವಾರ್ಡ್‌ಗಳ “ಮುಸ್ಲಿಂ ಹೆಸರುಗಳಂತೆ ಧ್ವನಿಸುವ ಹೆಸರುಗಳನ್ನು” ಬದಲಾಯಿಸಲು ನಿರ್ಧರಿಸಿದೆ. ಇದನ್ನು ಸಮಾಜವಾದಿ ಪಕ್ಷ (Samajwadi Party) ಮತ್ತು ಕಾಂಗ್ರೆಸ್‌ನ ನಾಯಕರು ಖಂಡಿಸಿದ್ದಾರೆ. ಹೆಸರುಗಳ ಬದಲಾವಣೆಯು ಡಿಲಿಮಿಟೇಶನ್ ಪ್ರಕ್ರಿಯೆಯ ಭಾಗವಾಗಿದ್ದು ಗೋರಖ್‌ಪುರದಲ್ಲಿ ವಾರ್ಡ್‌ಗಳ ಸಂಖ್ಯೆ 80 ಕ್ಕೆ ಏರಿದೆ. ಹೆಸರು ಬದಲಾವಣೆ ಮಾಡಿದಾಗ ಹಲವಾರು ಅಪ್ರತಿಮ ವ್ಯಕ್ತಿಗಳು ಮತ್ತು ಸ್ವಾತಂತ್ರ್ಯ ಹೋರಾಟಗಾರರ ಹೆಸರನ್ನು ಇಡಲಾಗಿದೆ. ಒಂದು ವಾರದೊಳಗೆ ಜನರು ತಮ್ಮ ಆಕ್ಷೇಪಣೆಗಳನ್ನು ಸಲ್ಲಿಸಬಹುದು ಮತ್ತು ಅವುಗಳ ವಿಲೇವಾರಿ ನಂತರ ಡಿಲಿಮಿಟೇಶನ್ ಅನುಮೋದನೆ ನೀಡಲಾಗುವುದು ಎಂದು ಹಿರಿಯ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ. ಕಾಂಗ್ರೆಸ್ ನಾಯಕ ತಲತ್ ಅಜೀಜ್ ಹೆಸರು ಬದಲಾಯಿಸುವ ಕಸರತ್ತು ಹಣವನ್ನು ವ್ಯರ್ಥ ಮಾಡುವ ಕಾರ್ಯ ಎಂದು ಬಣ್ಣಿಸಿದ್ದಾರೆ. “ಈ ಪ್ರಕ್ರಿಯೆ ಮೂಲಕ ಸರ್ಕಾರವು ಏನನ್ನು ಸಾಧಿಸುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ನಾನು ವಿಫಲನಾಗಿದ್ದೇನೆ” ಎಂದಿದ್ದಾರೆ ಅವರು.

ಹೊಸ ಹೆಸರುಗಳು ಹೆಮ್ಮೆಯ ಭಾವನೆಯನ್ನು ಮೂಡಿಸುತ್ತವೆ ಎಂದು ಮೇಯರ್ ಸೀತಾರಾಮ್ ಜೈಸ್ವಾಲ್ ಹೇಳಿದ್ದಾರೆ. ಅಶ್ಫಾಕುಲ್ಲಾ ಖಾನ್, ಶಿವಸಿಂಗ್ ಚೆಟ್ರಿ, ಬಾಬಾ ಗಂಭೀರ್ ನಾಥ್, ಬಾಬಾ ರಾಘವದಾಸ್, ಡಾ.ರಾಜೇಂದ್ರ ಪ್ರಸಾದ್ ಮತ್ತು ಮದನ್ ಮೋಹನ್ ಮಾಳವೀಯ ಅವರಂತಹ ವ್ಯಕ್ತಿಗಳ ಹೆಸರನ್ನು ವಾರ್ಡ್‌ಗಳಿಗೆ ಇರಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಆಕ್ಷೇಪಣೆಗಳನ್ನು ಒಂದು ವಾರದೊಳಗೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ, ಲಖನೌಗೆ ಕಳುಹಿಸಬಹುದು ಎಂದು ಪಾಲಿಕೆ ಆಯುಕ್ತ ಅವಿನಾಶ್ ಸಿಂಗ್ ತಿಳಿಸಿದ್ದಾರೆ. ಆಕ್ಷೇಪಣೆಗಳ ವಿಲೇವಾರಿ ನಂತರ ವಿಂಗಡಣೆಗೆ ಅನುಮೋದನೆ ನೀಡಲಾಗುವುದು ಎಂದು ಸಿಂಗ್ ಹೇಳಿದ್ದಾರೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ತವರು ಗೋರಖ್‌ಪುರ ಈಗ 80 ವಾರ್ಡ್‌ಗಳನ್ನು ಹೊಂದಿರುತ್ತದೆ.

ಮಿಯಾ ಬಜಾರ್, ಮುಫ್ತಿಪುರ್, ಅಲಿನಗರ, ತುರ್ಕಮನ್‌ಪುರ್, ಇಸ್ಮಾಯಿಲ್‌ಪುರ್, ರಸ್ಸೋಲ್‌ಪುರ್, ಹುಮಾಯೂನ್‌ಪುರ್ ನಾರ್ಥ್, ಘೋಸಿಪುರ್ವ, ದೌದ್‌ಪುರ್, ಜಾಫ್ರಾ ಬಜಾರ್, ಖಾಜಿಪುರ್ ಖುರ್ದ್ ಮತ್ತು ಚಕ್ಸಾ ಹುಸೇನ್ ಎಂಬ ಹೆಸರುಗಳನ್ನು ಬದಲಾಯಿಸಲಾಗಿದೆ. ನಾಗರಿಕ ಸಂಸ್ಥೆ ಹೊರಡಿಸಿದ ಆದೇಶದ ಪ್ರಕಾರ, ಇಲಾಹಿ ಬಾಗ್ ಅನ್ನು ಈಗ ಬಂಧು ಸಿಂಗ್ ನಗರ ಎಂದೂ ಇಸ್ಮಾಯಿಲ್‌ಪುರವನ್ನು ಸಾಹಬ್‌ಗಂಜ್ ಎಂದು ಮತ್ತು ಜಾಫ್ರಾ ಬಜಾರ್ ಅನ್ನು ಆತ್ಮ ರಾಮ್ ನಗರ ಎಂದು ಬದಲಾವಣೆ ಮಾಡಲಾಗಿದೆ.

Published On - 3:42 pm, Sun, 4 September 22

ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ