Delhi Earthquake: ಉತ್ತರ ಪ್ರದೇಶ, ದೆಹಲಿ ಮತ್ತು ಹರ್ಯಾಣದಲ್ಲಿ 4.4 ತೀವ್ರತೆಯ ಭೂಕಂಪ

ಇಂದು ದೆಹಲಿ, ಉತ್ತರ ಪ್ರದೇಶ, ಹರ್ಯಾಣದಲ್ಲಿ ಭೂಕಂಪದ ಅನುಭವವಾಗಿದೆ. ರಿಕ್ಟರ್ ಮಾಪಕದಲ್ಲಿ 4.4 ತೀವ್ರತೆ ದಾಖಲಾಗಿದೆ. ಗುರುವಾರ ಬೆಳಗ್ಗೆ 9.04ಕ್ಕೆ ಭೂಮಿ ತೀವ್ರವಾಗಿ ಕಂಪಿಸಿತ್ತು. ದೆಹಲಿ, ನೋಯ್ಡಾ, ಗಾಜಿಯಾಬಾದ್, ಗುರುಗ್ರಾಮ್, ಫರಿದಾಬಾದ್, ಜಿಂದ್, ರೋಹ್ಟಕ್, ಭಿವಾನಿ, ಝಜ್ಜರ್, ಬಹದ್ದೂರ್‌ಗಢ ಸೇರಿದಂತೆ ಹಲವು ನಗರಗಳಲ್ಲಿ ಕಂಪನದ ಅನುಭವವಾಯಿತು. ಭೂಕಂಪದ ಕೇಂದ್ರಬಿಂದು ಹರ್ಯಾಣ.

Delhi Earthquake: ಉತ್ತರ ಪ್ರದೇಶ, ದೆಹಲಿ ಮತ್ತು ಹರ್ಯಾಣದಲ್ಲಿ 4.4 ತೀವ್ರತೆಯ ಭೂಕಂಪ
ಭೂಕಂಪ

Updated on: Jul 10, 2025 | 11:21 AM

ದೆಹಲಿ, ಜುಲೈ 10: ದೆಹಲಿ, ಹರ್ಯಾಣ ಹಾಗೂ ಉತ್ತರ ಪ್ರದೇಶದಲ್ಲಿ ಇಂದು ಭೂಕಂಪ(Earthquake) ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 4.4 ತೀವ್ರತೆ ದಾಖಲಾಗಿದೆ. ಸುಮಾರು 10 ಸೆಕೆಂಡುಗಳ ಕಾಲ ಭೂಮಿ ಕಂಪಿಸಿದ ಅನುಭವವಾಯಿತು ಎಂದು ಜನರು ಹೇಳಿದ್ದಾರೆ. ಈ ಸಮಯದಲ್ಲಿ ಜನರು ತಮ್ಮ ಮನೆಗಳು ಮತ್ತು ಕಚೇರಿಗಳಿಂದ ಹೊರಗೆ ಓಡಿ ಬಂದಿದ್ದರು. ಗುರುವಾರ ಬೆಳಗ್ಗೆ 9.04ಕ್ಕೆ ಭೂಮಿ ತೀವ್ರವಾಗಿ ಕಂಪಿಸಿತ್ತು. ದೆಹಲಿ, ನೋಯ್ಡಾ, ಗಾಜಿಯಾಬಾದ್, ಗುರುಗ್ರಾಮ್, ಫರಿದಾಬಾದ್, ಜಿಂದ್, ರೋಹ್ಟಕ್, ಭಿವಾನಿ, ಝಜ್ಜರ್, ಬಹದ್ದೂರ್‌ಗಢ ಸೇರಿದಂತೆ ಹಲವು ನಗರಗಳಲ್ಲಿ ಕಂಪನದ ಅನುಭವವಾಯಿತು. ಭೂಕಂಪದ ಕೇಂದ್ರಬಿಂದು ಹರ್ಯಾಣ.

ಎರಡು ನಿಮಿಷಗಳಲ್ಲಿ ಝಜ್ಜರ್‌ನಲ್ಲಿ ಎರಡು ಬಾರಿ ಭೂಕಂಪ ಸಂಭವಿಸಿದೆ. ಬೆಳಗ್ಗೆ 9.07 ಕ್ಕೆ ಝಜ್ಜರ್‌ನಲ್ಲಿ ಮೊದಲ ಭೂಕಂಪ ಸಂಭವಿಸಿದೆ. ನಂತರ ಬೆಳಗ್ಗೆ 9.10 ಕ್ಕೆ ಸೌಮ್ಯ ಭೂಕಂಪ ಸಂಭವಿಸಿದೆ. ಹಠಾತ್ ಕಂಪನದಿಂದಾಗಿ ಜನರು ಭಯಭೀತರಾಗಿದ್ದರು. ದ ಝಜ್ಜರ್‌ನಲ್ಲಿದೆ ಎಂದು ಹೇಳಲಾಗಿದೆ.
ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್‌ಸಿಎಸ್) ಪ್ರಕಾರ, ಭೂಕಂಪದ ಕೇಂದ್ರಬಿಂದು ಝಜ್ಜರ್‌ನಿಂದ ಉತ್ತರಕ್ಕೆ 10 ಕಿಲೋಮೀಟರ್ ದೂರದಲ್ಲಿತ್ತು ಮತ್ತು ಅದರ ತೀವ್ರತೆಯು ರಿಕ್ಟರ್ ಮಾಪಕದಲ್ಲಿ 4.4 ಎಂದು ಅಳೆಯಲಾಗಿದೆ.

ಝಜ್ಜರ್‌ ಪಕ್ಕದಲ್ಲಿರುವ ಬಹದ್ದೂರ್‌ಗಢದಲ್ಲೂ ಭೂಕಂಪನದ ಅನುಭವವಾಗಿದೆ. ಬೆಳಗ್ಗೆ 9 ಗಂಟೆ ಸುಮಾರಿಗೆ ಕಂಪನದ ಅನುಭವವಾದ ನಂತರ ಜನರು ಬೀದಿಗಿಳಿದಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ. ಜನರು ಜಾಗರೂಕರಾಗಿರಲು ಆಡಳಿತವು ಮನವಿ ಮಾಡಿದೆ.

ಮತ್ತಷ್ಟು ಓದಿ: Video:ಕೊನೆಯ ಮಹಡಿಯ ಸ್ವಿಮ್ಮಿಂಗ್​ ಪೂಲ್​ನಲ್ಲಿ ಮಲಗಿದ್ದ ಜೋಡಿ, ಭೂಕಂಪ ಸಂಭವಿಸಿದಾಗ ಏನಾಯ್ತು ನೋಡಿ

ಭಿವಾನಿಯಲ್ಲಿಯೂ ಸೌಮ್ಯ ಕಂಪನಗಳು ದಾಖಲಾಗಿವೆ ಎಂದು ಎನ್‌ಸಿಎಸ್ ದೃಢಪಡಿಸಿದೆ, ಆದರೆ ಅದರ ತೀವ್ರತೆ ಮತ್ತು ಕೇಂದ್ರಬಿಂದುವಿನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ.
ರಿಕ್ಟರ್ ಮಾಪಕವನ್ನು ಬಳಸಿಕೊಂಡು ಭೂಕಂಪಗಳನ್ನು ಅಳೆಯಲಾಗುತ್ತದೆ. ಇದನ್ನು ರಿಕ್ಟರ್ ಮ್ಯಾಗ್ನಿಟ್ಯೂಡ್ ಟೆಸ್ಟ್ ಮಾಪಕ ಎಂದು ಕರೆಯಲಾಗುತ್ತದೆ.

ರಿಕ್ಟರ್ ಮಾಪಕದಲ್ಲಿ, ಭೂಕಂಪಗಳನ್ನು 1 ರಿಂದ 9 ರ ಆಧಾರದ ಮೇಲೆ ಅಳೆಯಲಾಗುತ್ತದೆ. ಭೂಕಂಪಗಳನ್ನು ಅದರ ಕೇಂದ್ರಬಿಂದುವಿನಿಂದ ಅಳೆಯಲಾಗುತ್ತದೆ.  ಭೂಕಂಪದ ಸಮಯದಲ್ಲಿ ಭೂಮಿಯ ಒಳಗಿನಿಂದ ಬಿಡುಗಡೆಯಾಗುವ ಶಕ್ತಿಯ ತೀವ್ರತೆಯನ್ನು ಇದರಿಂದ ಅಳೆಯಲಾಗುತ್ತದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Published On - 10:31 am, Thu, 10 July 25

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us