Kargil Earthquake: ಜಮ್ಮು ಮತ್ತು ಕಾಶ್ಮೀರದ ಕಾರ್ಗಿಲ್​ನಲ್ಲಿ 4.3 ತೀವ್ರತೆಯ ಭೂಕಂಪ

|

Updated on: May 10, 2024 | 8:55 AM

ಜಮ್ಮು ಮತ್ತು ಕಾಶ್ಮೀರದ ಕಾರ್ಗಿಲ್​ನಲ್ಲಿ 4.3 ತೀವ್ರತೆಯ ಭೂಕಂಪದ ಅನುಭವವಾಗಿದೆ. ತಕ್ಷಣವೇ ಜನರು ಮನೆಯಿಂದ ಹೊರಗೆ ಓಡಿಬಂದಿದ್ದಾರೆ. ಕಾರ್ಗಿಲ್‌ನಲ್ಲಿ ಹಠಾತ್ತನೆ ಹವಾಮಾನ ಹದಗೆಟ್ಟಿತು. ಯಾವುದೇ ಪ್ರಾಣಹಾನಿ, ಆಸ್ತಿ ಪಾಸ್ತಿ ನಷ್ಟದ ಸುದ್ದಿ ಬಾರದಿದ್ದರೂ ಜನರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ರಾಷ್ಟ್ರೀಯ ಭೂಕಂಪನ ಕೇಂದ್ರವು ಭೂಕಂಪವನ್ನು ದೃಢಪಡಿಸಿದೆ ಮತ್ತು ಅದರ ತೀವ್ರತೆಯನ್ನು ಅಂದಾಜಿಸಿದೆ.

Kargil Earthquake: ಜಮ್ಮು ಮತ್ತು ಕಾಶ್ಮೀರದ ಕಾರ್ಗಿಲ್​ನಲ್ಲಿ 4.3 ತೀವ್ರತೆಯ ಭೂಕಂಪ
ಭೂಕಂಪ
Follow us on

ಜಮ್ಮು ಮತ್ತು ಕಾಶ್ಮೀರದ ಕಾರ್ಗಿಲ್(Kargil)​ನಲ್ಲಿ 4.3 ತೀವ್ರತೆಯ ಭೂಕಂಪ(Earthquake) ಸಂಭವಿಸಿದೆ. ಬೆಳಗ್ಗೆ 7.15ರ ಸುಮಾರಿಗೆ ಭೂಕಂಪ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ತಕ್ಷಣವೇ ಜನರು ಮನೆಯಿಂದ ಹೊರಗೆ ಓಡಿಬಂದಿದ್ದಾರೆ. ಕಾರ್ಗಿಲ್‌ನಲ್ಲಿ ಹಠಾತ್ತನೆ ಹವಾಮಾನ ಹದಗೆಟ್ಟಿತು. ಯಾವುದೇ ಪ್ರಾಣಹಾನಿ, ಆಸ್ತಿ ಪಾಸ್ತಿ ನಷ್ಟದ ಸುದ್ದಿ ಬಾರದಿದ್ದರೂ ಜನರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ರಾಷ್ಟ್ರೀಯ ಭೂಕಂಪನ ಕೇಂದ್ರವು ಭೂಕಂಪವನ್ನು ದೃಢಪಡಿಸಿದೆ ಮತ್ತು ಅದರ ತೀವ್ರತೆಯನ್ನು ಅಂದಾಜಿಸಿದೆ.

ಕಳೆದ ಕೆಲವು ದಿನಗಳಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಪದೇ ಪದೇ ಭೂಕಂಪಗಳು ಕಂಡುಬರುತ್ತಿವೆ. ಮೇ 1 ರಂದು ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್‌ನಲ್ಲಿ ಮಧ್ಯರಾತ್ರಿ ಭೂಕಂಪದ ಅನುಭವವಾಗಿತ್ತು.

ಆ ಸಮಯದಲ್ಲಿ ರಿಕ್ಟರ್ ಮಾಪಕದಲ್ಲಿ 3.4 ರ ತೀವ್ರತೆ ಕಂಡುಬಂದಿತ್ತು. ಬುಧವಾರ ರಾತ್ರಿ 1:33ಕ್ಕೆ ಭೂಕಂಪ ಸಂಭವಿಸಿದೆ ಎಂದು ಎನ್‌ಸಿಎಸ್ ತಿಳಿಸಿದೆ.

ಮತ್ತಷ್ಟು ಓದಿ: Maharashtra Earthquake: ಮಹಾರಾಷ್ಟ್ರದಲ್ಲಿ ಕೇವಲ 10 ನಿಮಿಷಗಳ ಅಂತರದಲ್ಲಿ ಎರಡು ಭೂಕಂಪ

ಏಪ್ರಿಲ್ 19 ರ ಬೆಳಿಗ್ಗೆ, ಜಮ್ಮು ಮತ್ತು ಕಾಶ್ಮೀರದ ಕಾರ್ಗಿಲ್ ಮತ್ತು ಲಡಾಖ್‌ನಲ್ಲಿ ಭೂಕಂಪನದ ಅನುಭವವಾಯಿತು. ಆ ಸಮಯದಲ್ಲಿ ಭೂಕಂಪದ ತೀವ್ರತೆಯನ್ನು ರಿಕ್ಟರ್ ಮಾಪಕದಲ್ಲಿ 3.0 ಎಂದು ಅಳೆಯಲಾಗಿತ್ತು.

ಜಮ್ಮು-ಕಾಶ್ಮೀರದಲ್ಲಿ ಪದೇ ಪದೇ ಭೂಕಂಪ ಸಂಭವಿಸುತ್ತಿರುವುದರಿಂದ ಜನರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಏಪ್ರಿಲ್ 18 ರ ರಾತ್ರಿ ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್‌ನಲ್ಲಿ ಭೂಕಂಪನದ ಅನುಭವವಾಯಿತು. ಆ ಸಮಯದಲ್ಲಿ ಅದರ ತೀವ್ರತೆಯನ್ನು ರಿಕ್ಟರ್ ಮಾಪಕದಲ್ಲಿ 4.0 ಎಂಬುದು ತಿಳಿದುಬಂದಿತ್ತು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 8:24 am, Fri, 10 May 24