Earthquake: ಉತ್ತರಾಖಂಡ್‌ನ ಪಿಥೋರಗಢದಲ್ಲಿ ಕಂಪಿಸಿದ ಭೂಮಿ: 3.2ರಷ್ಟು ತೀವ್ರತೆ ದಾಖಲು

| Updated By: ಗಂಗಾಧರ​ ಬ. ಸಾಬೋಜಿ

Updated on: Jul 23, 2023 | 7:52 PM

ಉತ್ತರಾಖಂಡ್‌ನ ಪಿಥೋರಗಢದಲ್ಲಿ ಇಂದು ಸಂಜೆ 6.34ರ ಸುಮಾರಿಗೆ ಭೂಮಿ ಕಂಪಿಸಿದ ಅನುಭವ ಆಗಿದೆ. ರಿಕ್ಟರ್ ಮಾಪಕದಲ್ಲಿ 3.2ರಷ್ಟು ಕಂಪನದ ತೀವ್ರತೆ ದಾಖಲು ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ.

Earthquake: ಉತ್ತರಾಖಂಡ್‌ನ ಪಿಥೋರಗಢದಲ್ಲಿ ಕಂಪಿಸಿದ ಭೂಮಿ: 3.2ರಷ್ಟು ತೀವ್ರತೆ ದಾಖಲು
ಭೂಕಂಪನ
Follow us on

ನವದೆಹಲಿ, ಜುಲೈ 23: ಉತ್ತರಾಖಂಡ್‌ನ ಪಿಥೋರಗಢದಲ್ಲಿ ಇಂದು ಸಂಜೆ 6.34ರ ಸುಮಾರಿಗೆ ಭೂಮಿ ಕಂಪಿಸಿದ (Earthquake) ಅನುಭವ ಆಗಿದೆ. ರಿಕ್ಟರ್ ಮಾಪಕದಲ್ಲಿ 3.2ರಷ್ಟು ಕಂಪನದ ತೀವ್ರತೆ ದಾಖಲು ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ.

ಅದೃಷ್ಟವಶಾತ್​ ಯಾವುದೇ ಸಾವು ನೋವು ಸಂಭವಿಸಿಲ್ಲ. ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಪ್ರಕಾರ, ಸಂಜೆ 6:34 ರ ಸುಮಾರಿಗೆ ಭೂಕಂಪನದ ಅನುಭವ ಆಗಿದೆ. ತಕ್ಷಣ ಜನರು ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ಭೂಕಂಪನದ ಆಳವು ನೆಲದಿಂದ 5 ಕಿಲೋಮೀಟರ್​​ ಒಳಗೆ ಸಂಭವಿಸಿದೆ ಎನ್ನಲಾಗಿದೆ.

ಇದನ್ನೂ ಓದಿ: Rajasthan Earthquake: ರಾಜಸ್ಥಾನದ ಜೈಪುರ​​ ಸುತ್ತಮುತ್ತ ಸರಣಿ ಭೂಕಂಪ, ಬೆಚ್ಚಿಬಿದ್ದ ಜನ

ಇದಕ್ಕೂ ಮುನ್ನ ಮೇ 11ರಂದು ಬೆಳಿಗ್ಗೆ ಉತ್ತರಾಖಂಡದ ಪಿಥೋರಗಢದಲ್ಲಿ 3.1 ತೀವ್ರತೆಯ ಭೂಕಂಪ ಸಂಭವಿಸಿತ್ತು. ಮೇ 8 ರಂದು ಬಾಗೇಶ್ವರ ಜಿಲ್ಲೆಯಲ್ಲಿ 2.5 ತೀವ್ರತೆಯ ಭೂಕಂಪ ಸಂಭವಿಸಿತ್ತು. ಅದೇ ರೀತಿಯಾಗಿ ಮೇ 5 ಮತ್ತು 7 ರಂದು ಸಹ ಭೂಕಂಪವಿಸಿತ್ತು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:40 pm, Sun, 23 July 23