Abhijit Sen: ಗ್ರಾಮೀಣ ಹಣಕಾಸಿನ ಮಿಡಿತ ಅರಿತಿದ್ದ ಅರ್ಥಶಾಸ್ತ್ರಜ್ಞ ಅಭಿಜಿತ್ ಸೇನ್ ನಿಧನ
Rural Economy: ಗ್ರಾಮೀಣ ಆರ್ಥಿಕತೆ ಹಾಗೂ ಹಣಕಾಸು ವ್ಯವಸ್ಥೆಯ ತಳಸ್ಪರ್ಶಿ ಜ್ಞಾನವಿದ್ದ ಅಪರೂಪದ ವಿದ್ವಾಂಸ ಅಭಿಜಿತ್ ಸೇನ್ ಸೋಮವಾರ ರಾತ್ರಿ ನಿಧನರಾದರು.
ದೆಹಲಿ: ಹಿರಿಯ ಅರ್ಥಶಾಸ್ತ್ರಜ್ಞ, ಯೋಜನಾ ಆಯೋಗದ ಮಾಜಿ ಸದಸ್ಯ (Former Member of Planning Commission) ಮತ್ತು ಗ್ರಾಮೀಣ ಆರ್ಥಿಕತೆ (Rural Economy) ಹಾಗೂ ಹಣಕಾಸು ವ್ಯವಸ್ಥೆಯ ತಳಸ್ಪರ್ಶಿ ಜ್ಞಾನವಿದ್ದ ಅಪರೂಪದ ವಿದ್ವಾಂಸ ಅಭಿಜಿತ್ ಸೇನ್ (72) (Abhijit Sen) ಸೋಮವಾರ ರಾತ್ರಿ ನಿಧನರಾದರು. ‘ರಾತ್ರಿ 11 ಗಂಟೆ ವೇಳೆಯಲ್ಲಿ ಅವರಿಗೆ ಹೃದಯಾಘಾತವಾಯಿತು. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಆಸ್ಪತ್ರೆಗೆ ತಲುಪುವ ಹೊತ್ತಿಗೆ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು’ ಎಂದು ಅಭಿಜಿತ್ ಅವರ ಸೋದರ ಡಾ ಪ್ರಣಬ್ ಸೇನ್ ಮಾಹಿತಿ ನೀಡಿದ್ದಾರೆ.
ಸುಮಾರು 40 ವರ್ಷಕ್ಕೂ ಹೆಚ್ಚು ಕಾಲ ಅರ್ಥಶಾಸ್ತ್ರಜ್ಞರಾಗಿ ಸೇವೆ ಸಲ್ಲಿಸಿದ್ದ ಅಭಿಜಿತ್ ಸೇನ್ ದೆಹಲಿಯ ಜವಾಹರ್ಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ಬೋಧಿಸಿದ್ದರು. ಕೃಷಿ ವೆಚ್ಚ ಮತ್ತು ಬೆಲೆ ಆಯೋಗದ ಅಧ್ಯಕ್ಷತೆಯ ಜೊತೆಗೆ ಹಲವು ಪ್ರಮುಖ ಜವಾಬ್ದಾರಿಗಳನ್ನು ನಿರ್ವಹಿಸಿದ್ದರು. ಕೇಂದ್ರ ಸರ್ಕಾರವು ಹಲವು ಮಹತ್ವದ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸುವಲ್ಲಿ ಸೇನ್ ಅವರ ಕೊಡುಗೆ ದೊಡ್ಡದರು. ಅರ್ಥಶಾಸ್ತ್ರಜ್ಞ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದ ಅವಧಿಯಲ್ಲಿ ಸೇನ್ ಯೋಜನಾ ಆಯೋಗದ ಸದಸ್ಯರಾಗಿದ್ದರು.
Published On - 9:03 am, Tue, 30 August 22