ಅಮಾನತುಗೊಂಡಿರುವ ಐಎಎಸ್ ಅಧಿಕಾರಿ ಪೂಜಾ ಸಿಂಘಾಲ್​​ಗೆ ಸೇರಿದ ₹82 ಕೋಟಿ ಮೌಲ್ಯದ ಆಸ್ತಿ ವಶಪಡಿಸಿದ ಇಡಿ

ಎಂಎನ್‌ಆರ್‌ಇಜಿಎ ಹಗರಣದಿಂದ ಕಮಿಷನ್ ರೂಪದಲ್ಲಿ ಗಳಿಸಿದ ಅಪರಾಧದ ಆದಾಯವನ್ನು ಪೂಜಾ ಸಿಂಘಾಲ್ ಮತ್ತು ಅವರ ಸಂಬಂಧಿಕರಿಗೆ ಸೇರಿದ ವಿವಿಧ ಬ್ಯಾಂಕ್ ಖಾತೆಗಳಲ್ಲಿ ಠೇವಣಿ ಮಾಡಲಾಗಿದೆ ಎಂದು ತನಿಖೆಯಿಂದ ತಿಳಿದುಬಂದಿದೆ

ಅಮಾನತುಗೊಂಡಿರುವ ಐಎಎಸ್ ಅಧಿಕಾರಿ ಪೂಜಾ ಸಿಂಘಾಲ್​​ಗೆ ಸೇರಿದ ₹82 ಕೋಟಿ ಮೌಲ್ಯದ ಆಸ್ತಿ ವಶಪಡಿಸಿದ ಇಡಿ
ಪೂಜಾ ಸಿಂಘಾಲ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Dec 01, 2022 | 7:50 PM

ರಾಂಚಿಯಲ್ಲಿ ಅಮಾನತುಗೊಂಡಿರುವ ಐಎಎಸ್ ಅಧಿಕಾರಿ ಪೂಜಾ ಸಿಂಘಾಲ್ (Pooja Singhal)ಅವರ ₹82.77 ಕೋಟಿ ಮೌಲ್ಯದ ಸ್ಥಿರಾಸ್ತಿಗಳನ್ನು ಜಾರಿ ನಿರ್ದೇಶನಾಲಯ (Directorate of Enforcement) ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿದೆ. ಖೂಂಟಿ ಜಿಲ್ಲೆಯಲ್ಲಿ ಎಂಜಿಎನ್‌ಆರ್‌ಇಜಿಎ ನಿಧಿಯ ದುರುಪಯೋಗ ಮತ್ತು ಇತರ ಕೆಲವು ಅನುಮಾನಾಸ್ಪದ ಹಣಕಾಸು ವಹಿವಾಟುಗಳಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಐಎಎಸ್ ಅಧಿಕಾರಿಯನ್ನು ಬಂಧಿಸಲಾಗಿದೆ. ಸಿಂಘಾಲ್ ಅವರನ್ನು ಫೆಬ್ರವರಿ 16, 2009 ಮತ್ತು ಜುಲೈ 19, 2010 ರ ನಡುವೆ ಖೂಂಟಿಯ ಡೆಪ್ಯುಟಿ ಕಮಿಷನರ್ (DC) ಆಗಿ ನೇಮಿಸಲಾಯಿತು. ಇವರ ಆಸ್ತಿಗಳಲ್ಲಿ ಒಂದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಾದ ‘ಪಲ್ಸ್ ಸೂಪರ್ ಸ್ಪೆಷಾಲಿಟಿ ಹಾಸ್ಪಿಟಲ್’, ಡಯಾಗ್ನೋಸ್ಟಿಕ್ ಸೆಂಟರ್ ‘ಪಲ್ಸ್ ಡಯಾಗ್ನೋಸ್ಟಿಕ್ ಅಂಡ್ ಇಮ್ಯಾಜಿನಿಂಗ್ ಸೆಂಟರ್’ ಮತ್ತು ರಾಂಚಿಯಲ್ಲಿರುವ ಎರಡು ಜಮೀನು ಸೇರಿವೆ ಎಂದು ಇಡಿ ಹೇಳಿದೆ.  ಜಾರ್ಖಂಡ್ ಪೊಲೀಸ್ ಮತ್ತು ವಿಜಿಲೆನ್ಸ್ ಬ್ಯೂರೋ ಜಾರ್ಖಂಡ್ ದಾಖಲಿಸಿರುವ ಬಹು ಎಫ್‌ಐಆರ್‌ಗಳ ಆಧಾರದ ಮೇಲೆ ಇಡಿ ಸಿಂಘಾಲ್ ವಿರುದ್ಧ ಹಣ ವರ್ಗಾವಣೆ ಪ್ರಕರಣದ ತನಿಖೆಯನ್ನು ಪ್ರಾರಂಭಿಸಿದೆ ಎಂದು ತನಿಖಾ ಸಂಸ್ಥೆ ತಿಳಿಸಿದೆ.

ಎಂಎನ್‌ಆರ್‌ಇಜಿಎ ಹಗರಣದಿಂದ ಕಮಿಷನ್ ರೂಪದಲ್ಲಿ ಗಳಿಸಿದ ಅಪರಾಧದ ಆದಾಯವನ್ನು ಪೂಜಾ ಸಿಂಘಾಲ್ ಮತ್ತು ಅವರ ಸಂಬಂಧಿಕರಿಗೆ ಸೇರಿದ ವಿವಿಧ ಬ್ಯಾಂಕ್ ಖಾತೆಗಳಲ್ಲಿ ಠೇವಣಿ ಮಾಡಲಾಗಿದೆ ಎಂದು ತನಿಖೆಯಿಂದ ತಿಳಿದುಬಂದಿದೆ. ಪೂಜಾ ಸಿಂಘಾಲ್ ತನ್ನ ಅಧಿಕೃತ ಸ್ಥಾನವನ್ನು ದುರುಪಯೋಗಪಡಿಸಿಕೊಂಡು ಗಳಿಸಿದ ಇತರ ಲೆಕ್ಕವಿಲ್ಲದ ಹಣಕ್ಕೆ ಪ್ರೂಫ್ ತೋರಿಸಿದ್ದಾರೆ ಎಂದು ಇಡಿ ಹೇಳಿಕೆಯಲ್ಲಿ ತಿಳಿಸಿದೆ.

ಇದನ್ನೂ ಓದಿ
Image
Money Laundering Case: ಮಾಜಿ ಸಚಿವ ನವಾಬ್ ಮಲಿಕ್‌ಗೆ ಜಾಮೀನು ನಿರಾಕರಿಸಿದ ಮುಂಬೈ ಕೋರ್ಟ್
Image
ಸತ್ಯೇಂದ್ರ ಜೈನ್ ಜಾಮೀನು ಅರ್ಜಿ ವಜಾಗೊಳಿಸಿದ ದೆಹಲಿ ನ್ಯಾಯಾಲಯ
Image
ED raid: ಪಿಎಸ್​ಐ ನೇಮಕಾತಿ ಅಕ್ರಮ ಪ್ರಕರಣ -ಕಳಂಕಿತ ಎಡಿಜಿಪಿ ಅಮೃತ್ ಪಾಲ್ ಮನೆ ಮೇಲೆ ಇ.ಡಿ. ದಾಳಿ

ಆರಂಭದಲ್ಲಿ POC ಯನ್ನು MNREGA ಹಗರಣದಿಂದ ಮಾತ್ರ ರಚಿಸಲಾಯಿತು, ನಂತರ ಅದನ್ನು ಪೂಜಾ ಸಿಂಘಾಲ್‌ರ ಅಪರಾಧಗಳಿಂದ ಸಿಕ್ಕಿದ ಲೆಕ್ಕವಿಲ್ಲದ ನಿಧಿಯೊಂದಿಗೆ ಬೆರೆಸಲಾಯಿತು. ಈ ಹಣವನ್ನು ಬಂಡವಾಳ/ಹೂಡಿಕೆಯಾಗಿ ನಿಯೋಜಿಸಲಾಯಿತು ಮತ್ತು ಈ ನಿಧಿಯಿಂದ ಕಾನೂನುಬದ್ಧ ಲಾಭ ಮತ್ತು ಹೆಚ್ಚಿನ ಹಣವನ್ನು ಉತ್ಪಾದಿಸಲಾಯಿತು. ಈ ಮೂಲಕ, ಪೂಜಾ ಸಿಂಘಾಲ್ ಅವರು ತಿಳಿದಿರುವ ಆದಾಯದ ಮೂಲ ಮತ್ತು ಈ ಸ್ಥಿರ ಆಸ್ತಿಗಳಲ್ಲಿ ಹೂಡಿಕೆ ಮಾಡಿದ ನಿಧಿಗಳ ಮೂಲಕ್ಕೆ ಅನುಗುಣವಾಗಿ ಅಪಾರ ಸಂಪತ್ತನ್ನು ಸಂಗ್ರಹಿಸಿದರು. ಪ್ರಾಥಮಿಕವಾಗಿ ಈ ಪಿಒಸಿಯಿಂದ ಬಂದ ಲೆಕ್ಕವಿಲ್ಲದ ನಗದನ್ನು ಅಪರಾಧದ ಆದಾಯ ಎಂದು ಕರೆಯಲಾಗುತ್ತದೆ ಎಂದು ಇಡಿ ಹೇಳಿದೆ. ಈ ಪ್ರಕರಣದಲ್ಲಿ ಸಿಂಘಾಲ್ ಸೇರಿದಂತೆ ಮೂವರೂ ಬಂಧಿತರು ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾರೆ. ಈ ಪ್ರಕರಣದಲ್ಲಿ ಮೂರು ಪ್ರಾಸಿಕ್ಯೂಷನ್ ದೂರುಗಳನ್ನು ಸಲ್ಲಿಸಲಾಗಿದ, ಈ ಎಲ್ಲಾ ದೂರುಗಳು ವಿಶೇಷ ಪಿಎಂಎಲ್‌ಎ ನ್ಯಾಯಾಲಯದಲ್ಲಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ