ಹರ್ಯಾಣ ಕಾಂಗ್ರೆಸ್ ಶಾಸಕನ ನಿವಾಸಕ್ಕೆ ಇಡಿ ದಾಳಿ; ₹ 5 ಕೋಟಿ ನಗದು, 300 ಗುಂಡುಗಳು, ಮದ್ಯದ ಬಾಟಲಿಗಳು ವಶ

|

Updated on: Jan 05, 2024 | 5:19 PM

ಸಿಂಗ್ ಯಮುನಾನಗರದ ಮಾಜಿ ಐಎನ್‌ಎಲ್‌ಡಿ ಶಾಸಕರಾಗಿದ್ದರೆ, ಪನ್ವಾರ್ ಸೋನಿಪತ್‌ನ ಕಾಂಗ್ರೆಸ್ ಶಾಸಕರಾಗಿದ್ದಾರೆ. ಯಮುನಾನಗರ, ಸೋನಿಪತ್, ಮೊಹಾಲಿ, ಫರಿದಾಬಾದ್, ಚಂಡೀಗಢ ಮತ್ತು ಕರ್ನಾಲ್‌ನ 20 ಸ್ಥಳಗಳಲ್ಲಿ ಗುರುವಾರ ದಾಳಿ ನಡೆಸಲಾಗಿದೆ. ಮದ್ಯ ಹಾಗೂ ನಗದನ್ನು ಹೊರತುಪಡಿಸಿ 4 ರಿಂದ 5 ಕೆಜಿ ತೂಕದ ಮೂರು ಚಿನ್ನದ ಬಿಸ್ಕತ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಇಡಿ ಅಧಿಕಾರಿಗಳು ಹೇಳಿದ್ದಾರೆ.

ಹರ್ಯಾಣ ಕಾಂಗ್ರೆಸ್ ಶಾಸಕನ ನಿವಾಸಕ್ಕೆ ಇಡಿ ದಾಳಿ; ₹ 5 ಕೋಟಿ ನಗದು, 300 ಗುಂಡುಗಳು, ಮದ್ಯದ ಬಾಟಲಿಗಳು ವಶ
ಇಡಿ ವಶಪಡಿಸಿರುವ ವಸ್ತು
Follow us on

ದೆಹಲಿ ಜನವರಿ 05: ಹರ್ಯಾಣ ಕಾಂಗ್ರೆಸ್ (Congress) ಶಾಸಕ ಮತ್ತು ಮಾಜಿ ಶಾಸಕರೊಬ್ಬರ ನಿವಾಸದಲ್ಲಿ ನಡೆಸಿದ ಶೋಧದ ವೇಳೆ ಜಾರಿ ನಿರ್ದೇಶನಾಲಯವು (Enforcement Directorate) 100 ಮದ್ಯದ ಬಾಟಲಿಗಳು, ₹ 5 ಕೋಟಿ ನಗದು, ಅಕ್ರಮ ವಿದೇಶಿ ನಿರ್ಮಿತ ಶಸ್ತ್ರಾಸ್ತ್ರಗಳು ಮತ್ತು ಸುಮಾರು 300 ಕಾಟ್ರಿಡ್ಜ್‌ಗಳನ್ನು ವಶಪಡಿಸಿಕೊಂಡಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ. ಅಕ್ರಮ ಗಣಿಗಾರಿಕೆ ಆರೋಪದ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ಸುರೇಂದರ್ ಪನ್ವಾರ್ ಮತ್ತು ಇಂಡಿಯನ್ ನ್ಯಾಷನಲ್ ಲೋಕದಳ (INLD) ಮಾಜಿ ಶಾಸಕ ದಿಲ್‌ಬಾಗ್ ಸಿಂಗ್ ಮತ್ತು ಅವರ ಸಹಚರರಿಗೆ ಸಂಬಂಧಿಸಿದ ಸ್ಥಳಗಳಲ್ಲಿ ತನಿಖಾ ಸಂಸ್ಥೆ ದಾಳಿ ನಡೆಸುತ್ತಿದೆ.

ಗಣಿ ಉದ್ಯಮಿ, ಮಾಜಿ ಕಾಂಗ್ರೆಸ್ ಶಾಸಕ ಸುರೇಂದ್ರ ಪನ್ವಾರ್ ಮತ್ತು ಅವರ ಸಹಚರರ ನಿವಾಸದ ಮೇಲೆ ನಿನ್ನೆ ದಾಳಿ ಆರಂಭವಾಗಿದೆ. ಗುರುವಾರ 15ರಿಂದ 20 ತನಿಖಾ ಸಂಸ್ಥೆಯ ಅಧಿಕಾರಿಗಳು ಆರು ವಾಹನಗಳಲ್ಲಿ ಶಾಸಕರ ನಿವಾಸ, ಕಚೇರಿ ಮತ್ತಿತರ ಸ್ಥಳಗಳಿಗೆ ಆಗಮಿಸಿದ್ದು, ದಾಳಿ ಮುಂದುವರಿದಿದೆ. ಇಡಿ ತಂಡ ಮನೆಯಲ್ಲಿದ್ದ ಕುಟುಂಬ ಮತ್ತು ಸಿಬ್ಬಂದಿಯ ಫೋನ್‌ಗಳನ್ನು ವಶಪಡಿಸಿಕೊಂಡಿದೆ.

ಸಿಂಗ್ ಯಮುನಾನಗರದ ಮಾಜಿ ಐಎನ್‌ಎಲ್‌ಡಿ ಶಾಸಕರಾಗಿದ್ದರೆ, ಪನ್ವಾರ್ ಸೋನಿಪತ್‌ನ ಕಾಂಗ್ರೆಸ್ ಶಾಸಕರಾಗಿದ್ದಾರೆ. ಯಮುನಾನಗರ, ಸೋನಿಪತ್, ಮೊಹಾಲಿ, ಫರಿದಾಬಾದ್, ಚಂಡೀಗಢ ಮತ್ತು ಕರ್ನಾಲ್‌ನ 20 ಸ್ಥಳಗಳಲ್ಲಿ ಗುರುವಾರ ದಾಳಿ ನಡೆಸಲಾಗಿದೆ. ಮದ್ಯ ಹಾಗೂ ನಗದನ್ನು ಹೊರತುಪಡಿಸಿ 4 ರಿಂದ 5 ಕೆಜಿ ತೂಕದ ಮೂರು ಚಿನ್ನದ ಬಿಸ್ಕತ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಗಣಿಗಾರಿಕೆಯನ್ನು ನಿಷೇಧಿಸಿದ ನಂತರ ಯಮುನಾನಗರ ಮತ್ತು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಬಂಡೆಗಳು, ಜಲ್ಲಿ ಮತ್ತು ಮರಳು ಅಕ್ರಮ ಗಣಿಗಾರಿಕೆಯ ಕುರಿತು ತನಿಖೆ ನಡೆಸಲು ಹರ್ಯಾಣ ಪೊಲೀಸರು ಅನೇಕ ಪ್ರಕರಣಗಳನ್ನು ದಾಖಲಿಸಿದ ನಂತರ ತನಿಖಾ ಸಂಸ್ಥೆಯು 2013 ರಲ್ಲಿ ಮನಿ ಲಾಂಡರಿಂಗ್ ಪ್ರಕರಣವನ್ನು ದಾಖಲಿಸಿದೆ.

ಇದನ್ನೂ ಓದಿ:ಲಕ್ಷದ್ವೀಪಕ್ಕೆ ಪ್ರಧಾನಿ ಮೋದಿ ಭೇಟಿ; ಗೂಗಲ್ ಸರ್ಚ್ ಮಾಡಿ ಜನ ಕೇಳಿದ ಪ್ರಶ್ನೆ ಅಲ್ಲಿಗೆ ಹೋಗುವುದು ಹೇಗೆ? 

ಕೇಂದ್ರ ಏಜೆನ್ಸಿಯ ಪ್ರಕಾರ, ಶಾಸಕರು ನಕಲಿ ‘ಇ-ರವಾನಾ’ ಯೋಜನೆಯನ್ನು ನಡೆಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಗಣಿಗಾರಿಕೆಗಾಗಿ ಬಿಲ್‌ಗಳು ಮತ್ತು ಸ್ಲಿಪ್‌ಗಳನ್ನು ಉತ್ಪಾದಿಸಲು ಆನ್‌ಲೈನ್ ಪೋರ್ಟಲ್ 2020 ರಲ್ಲಿ ಹರಿಯಾಣ ಸರ್ಕಾರವು ರಾಯಧನ ಸಂಗ್ರಹವನ್ನು ಸರಳೀಕರಿಸಲು ಮತ್ತು ಗಣಿಗಾರಿಕೆ ಪ್ರದೇಶಗಳಲ್ಲಿ ತೆರಿಗೆ ವಂಚನೆಯನ್ನು ತಡೆಯಲು ಪರಿಚಯಿಸಿತ್ತು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ