Gujarat Accident: ಚಾಲಕನ ನಿಯಂತ್ರಣ ತಪ್ಪಿ ಗುಡಿಸಲಿಗೆ ನುಗ್ಗಿದ ಟ್ರಕ್; 8 ಜನರ ದುರ್ಮರಣ, ನಾಲ್ವರಿಗೆ ಗಂಭೀರ ಗಾಯ

Gujarat Accident: ಚಾಲಕನ ನಿಯಂತ್ರಣ ತಪ್ಪಿ ಗುಡಿಸಲಿಗೆ ನುಗ್ಗಿದ ಟ್ರಕ್; 8 ಜನರ ದುರ್ಮರಣ, ನಾಲ್ವರಿಗೆ ಗಂಭೀರ ಗಾಯ
ಚಾಲಕನ ನಿಯಂತ್ರಣ ತಪ್ಪಿ ಗುಡಿಸಲಿಗೆ ನುಗ್ಗಿದ ಟ್ರಕ್; 8 ಜನರ ದುರ್ಮರಣ, ನಾಲ್ವರಿಗೆ ಗಂಭೀರ ಗಾಯ

ಜಿಲ್ಲೆಯ ಸಾವರ್ಕುಂಡ್ಲಾದ ಬರ್ದಾ ಬಳಿ ಮಹುವ ಕಡೆಗೆ ಹೋಗುತ್ತಿದ್ದ ಟ್ರಕ್ ನಿಯಂತ್ರಣ ತಪ್ಪಿ ಗುಡಿಸಲಿಗೆ ನುಗ್ಗಿ ಹೊಂಡಕ್ಕೆ ಉರುಳಿದ ಈ ಪರಿಣಾಮ ಗುಡಿಸಿಲಿನಲ್ಲಿ ಮಲಗಿದ್ದ 8 ಜನರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

TV9kannada Web Team

| Edited By: Ayesha Banu

Aug 09, 2021 | 7:57 AM

ಅಮರೇಲಿ: ಗುಜರಾತ್‌ನ ಅಮರೇಲಿಯಲ್ಲಿ ಭೀಕರ ಅಪಘಾತವೊಂದು ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿ ಗುಡಿಸಲಿಗೆ ಟ್ರಕ್ ನುಗ್ಗಿದ್ದು ಅಪಘಾತದಲ್ಲಿ 8 ಜನರ ಮೃತಪಟ್ಟಿದ್ದಾರೆ. ಹಾಗೂ ನಾಲ್ವರಿಗೆ ಗಂಭೀರ ಗಾಯಗಳಾಗಿವೆ.

ಜಿಲ್ಲೆಯ ಸಾವರ್ಕುಂಡ್ಲಾದ ಬರ್ದಾ ಬಳಿ ಮಹುವ ಕಡೆಗೆ ಹೋಗುತ್ತಿದ್ದ ಟ್ರಕ್ ನಿಯಂತ್ರಣ ತಪ್ಪಿ ಗುಡಿಸಲಿಗೆ ನುಗ್ಗಿ ಹೊಂಡಕ್ಕೆ ಉರುಳಿದ ಈ ಪರಿಣಾಮ ಗುಡಿಸಿಲಿನಲ್ಲಿ ಮಲಗಿದ್ದ 8 ಜನರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹಾಗೂ 4 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು 108 ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ನಿನ್ನೆ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಸದ್ಯ ಸಾವರಕುಂಡ್ಲಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ.

ಇದನ್ನೂ ಓದಿ: ಮಹಾರಾಷ್ಟ್ರ ರಾಜ್ಯಪಾಲ ಭಗತ್​ ಸಿಂಗ್ ಕೋಶ್ಯಾರಿ ಬೆಂಗಾವಲಿಗಿದ್ದ 3 ವಾಹನಗಳಿಗೆ ಅಪಘಾತ..

Follow us on

Related Stories

Most Read Stories

Click on your DTH Provider to Add TV9 Kannada