ಮುಖ್ಯಮಂತ್ರಿ ಹುದ್ದೆಗೆ ಎಂದೂ ಬೇಡಿಕೆಯಿಟ್ಟಿರಲಿಲ್ಲ: ಏಕನಾಥ್ ಶಿಂದೆ

ಮುಖ್ಯಮಂತ್ರಿ ಹುದ್ದೆಗೆ ಎಂದೂ ಬೇಡಿಕೆಯಿಟ್ಟಿರಲಿಲ್ಲ ಎಂದು ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿ ಏಕನಾಥ್ ಶಿಂದೆ ಹೇಳಿದ್ದಾರೆ. ಏಕನಾಥ್ ಶಿಂದೆ ಕಳೆದ ವಾರವಷ್ಟೇ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಎನ್​ಡಿಟಿವಿ ಜತೆ ನಡೆದ ಸಂದರ್ಶನದಲ್ಲಿ ಮಾತನಾಡಿರುವ ಅವರು, ‘ನಾನು ಎಂದೂ ಮುಖ್ಯಮಂತ್ರಿ ಸ್ಥಾನಕ್ಕೆ ಬೇಡಿಯಿಟ್ಟಿರಲಿಲ್ಲ’ ಎಂದು ತಿಳಿಸಿದ್ದಾರೆ.

ಮುಖ್ಯಮಂತ್ರಿ ಹುದ್ದೆಗೆ ಎಂದೂ ಬೇಡಿಕೆಯಿಟ್ಟಿರಲಿಲ್ಲ: ಏಕನಾಥ್ ಶಿಂದೆ
Eknath Shinde
Edited By:

Updated on: Jul 04, 2022 | 10:23 AM

ಮುಂಬೈ: ಮುಖ್ಯಮಂತ್ರಿ ಹುದ್ದೆಗೆ ಎಂದೂ ಬೇಡಿಕೆಯಿಟ್ಟಿರಲಿಲ್ಲ ಎಂದು ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿ ಏಕನಾಥ್ ಶಿಂದೆ ಹೇಳಿದ್ದಾರೆ. ಏಕನಾಥ್ ಶಿಂದೆ ಕಳೆದ ವಾರವಷ್ಟೇ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಎನ್​ಡಿಟಿವಿ ಜತೆ ನಡೆದ ಸಂದರ್ಶನದಲ್ಲಿ ಮಾತನಾಡಿರುವ ಅವರು, ‘ನಾನು ಎಂದೂ ಮುಖ್ಯಮಂತ್ರಿ ಸ್ಥಾನಕ್ಕೆ ಬೇಡಿಯಿಟ್ಟಿರಲಿಲ್ಲ’ ಎಂದು ತಿಳಿಸಿದ್ದಾರೆ.

ಮಹಾ ವಿಕಾಸ್ ಅಘಾಡಿಯಿಂದ ಪಕ್ಷದ ಕಾರ್ಯಕರ್ತರು ತುಂಬಾ ಬೇಸರಗೊಂಡಿದ್ದಾರೆ, ಹಾಗೆಯೇ ಪಕ್ಷವು ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಕೂಡ ಮಾಡಿರಲಿಲ್ಲ. ಆದರೆ ಬಿಜೆಪಿಯು ನನ್ನನ್ನು ಮುಖ್ಯಮಂತ್ರಿಯನ್ನಾಗಿ ಮಾಡಿ ತನ್ನ ಹೃದಯ ವೈಶಾಲ್ಯತೆಯನ್ನು ಮೆರೆದಿದೆ.

ನಾವು ಮಹಾರಾಷ್ಟ್ರದಲ್ಲಿ ಅಧಿಕಾರಕ್ಕೆ ಬರಲು ಬಿಜೆಪಿ ಸಹಾಯವೇ ಕಾರಣ ಎಂದು ನಂಬಿದ್ದಾರೆ ಆದರೆ ಬಿಜೆಪಿಯಷ್ಟೇ ಜನರು ಕೂಡ ಕಾರಣ, ಜತೆಗೆ 115 ಶಾಸಕರೂ ಕೂಡ ಕಾರಣ.

ಸ್ಪೀಕರ್ ಚುನಾವಣೆಯಲ್ಲಿ ಕೂಡ ಒಳ್ಳೆಯ ಮತದೊಂದಿಗೆ ಗೆಲುವು ಸಾಧಿಸಿದ್ದೇವೆ, 116 ಮತಗಳು ದೊರೆತಿವೆ. ಬಂಡಾಯವೆದ್ದು ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಏಕನಾಥ್ ಶಿಂದೆ ಅವರು ಮೊದಲ ಅಗ್ನಿ ಪರೀಕ್ಷೆ ಜಯಿಸಿದ್ದಾರೆ. ಮಹಾರಾಷ್ಟ್ರ ವಿಧಾನಸಭೆಯಲ್ಲಿ ಇಂದಿನಿಂದ ಆರಂಭವಾದ ಎರಡು ದಿನಗಳ ವಿಶೇಷ ಅಧಿವೇಶನದಲ್ಲಿ ಸ್ಪೀಕರ್ ಚುನಾವಣೆ ನಡೆದಿದ್ದು, ಶಿಂದೆ ಬಣದ ಬಿಜೆಪಿ ಅಭ್ಯರ್ಥಿ ರಾಹುಲ್ ನಾರ್ವೇಕರ್ ಅವರು ಆಯ್ಕೆಯಾಗಿದ್ದಾರೆ.

ಸೋಮವಾರ ವಿಶ್ವಾಸಮತ ಸಾಬೀತು ಪಡಿಸಬೇಕಾದ ಕಾರಣ ಹೊಸ ಸ್ಪೀಕರ್ ಆಯ್ಕೆ ನಡೆಯಿತು. ಬಿಜೆಪಿಯಿಂದ ರಾಹುಲ್ ನಾರ್ವೇಕರ್ ಮತ್ತು ಶಿವಸೇನೆಯಿಂದ ರಾಜನ್ ಸಾಲ್ವಿ ಅವರು ಕಣದಲ್ಲಿದ್ದರು.

ರಾಜನ್ ಸಾಲ್ವಿಗೆ ಮತ ಹಾಕಬೇಕು ಎಂದು ಶಿವಸೇನೆಯು ಬಂಡಾಯ ಶಾಸಕರು ಸೇರಿದಂತೆ ತನ್ನ ಎಲ್ಲಾ ಶಾಸಕರಿಗೆ ವಿಪ್ ನೀಡಿತ್ತು. ಆದರೆ ಬಂಡಾಯ ಸೇನಾ ಶಾಸಕರು ವಿಪ್ ಮೀರಿ ಬಿಜೆಪಿ ಅಭ್ಯರ್ಥಿಗೆ ಮತ ಹಾಕಿದ್ದಾರೆ. ಬಿಜೆಪಿ ಅಭ್ಯರ್ಥಿ ರಾಹುಲ್ ನಾರ್ವೇಕರ್ ಅವರು 164 ಮತ ಪಡೆದು ಜಯಿಸಿದ್ದಾರೆ.

ವಿಶೇಷವೆಂದರೆ ರಾಹುಲ್ ನಾರ್ವೇಕರ್ ವಿರುದ್ಧ ಮತ ಹಾಕುವಾಗ ಸಮಾಜವಾದಿ ಪಾರ್ಟಿ ಮತ್ತು ಎಐಎಂಐಎಂ ಶಾಸಕರು ಮತದಾನದಿಂದ ದೂರ ಉಳಿದರು. ಹೀಗಾಗಿ ನಾರ್ವೇಕರ್ ವಿರುದ್ಧ 107 ಮತಗಳಷ್ಟೇ ಬಿತ್ತು.

Web contact

TV9 Kannada

Read More
Follow Us