PM-KISAN: ಪ್ರಧಾನಮಂತ್ರಿ ಕಿಸಾನ್​ ಯೋಜನೆಯ 11ನೇ ಕಂತಿನ ಹಣ ಪಡೆಯಲು ಇ-ಕೆವೈಸಿ ಕಡ್ಡಾಯ; ರೈತರು ತಪ್ಪದೇ ಈ ವಿಧಾನ ಅನುಸರಿಸಿ

10ನೇ ಕಂತಿನಲ್ಲಿ ಸುಮಾರು 48 ಲಕ್ಷ ರೈತರಿಗೆ ಹಣ ಇನ್ನೂ ಬಂದಿಲ್ಲ. ಇದಕ್ಕೆ ಕಾರಣ ಫಂಡ್​ ಟ್ರಾನ್ಸ್​ಫರ್​ ಆರ್ಡರ್​​​​​ ಸಮಸ್ಯೆ  ಎಂದು ಹೇಳಲಾಗಿದೆ. ಅಂದರೆ ಎಫ್​ಟಿಒ ಜನರೇಟ್​ ಆಗಿರುವ ಬಹುತೇಕರ ಖಾತೆಗೆ ಈಗಾಗಲೇ ಹಣ ತಲುಪಿದೆ.

PM-KISAN: ಪ್ರಧಾನಮಂತ್ರಿ ಕಿಸಾನ್​ ಯೋಜನೆಯ 11ನೇ ಕಂತಿನ ಹಣ ಪಡೆಯಲು ಇ-ಕೆವೈಸಿ ಕಡ್ಡಾಯ; ರೈತರು ತಪ್ಪದೇ ಈ ವಿಧಾನ ಅನುಸರಿಸಿ
ಸಾಂಕೇತಿಕ ಚಿತ್ರ
Follow us
TV9 Web
| Updated By: Lakshmi Hegde

Updated on: Feb 26, 2022 | 8:09 AM

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್​ ನಿಧಿ ಯೋಜನೆಯ (Pradhan Mantri Kisan Samman Nidhi Yojana) 10ನೇ ಕಂತಿನ ಹಣ  ಇನ್ನೂ ಸುಮಾರು 48 ಲಕ್ಷ ರೈತರಿಗೆ ತಲುಪಲಿಲ್ಲ ಎಂದು ಏಳಲಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ(PM Narendra Modi)ಯವರು 2022ರ ಜನವರಿ 1ರಂದು ಪಿಎಂ ಕಿಸಾನ್​ ಯೋಜನೆಯ 10ನೇ ಕಂತ ಹಣವನ್ನು ಬಿಡುಗಡೆ ಮಾಡಿದ್ದರು. ಅದರಡಿಯಲ್ಲಿ ಎಲ್ಲ ಫಲಾನುಭವಿ ರೈತರ ಖಾತೆಗಳಿಗೆ 2000 ರೂಪಾಯಿ ತಲುಪಬೇಕಿತ್ತು. ಆದರೆ ಎರಡು ತಿಂಗಳಾದರೂ 48 ಲಕ್ಷ ರೈತರು ಇನ್ನೂ ಹಣ ಸ್ವೀಕರಿಸಲಿಲ್ಲ ಎಂದು ಹೇಳಲಾಗಿದೆ.

ಪಿಎಂ ಕಿಸಾನ್​ ಯೋಜನೆಯಡಿ ಅರ್ಹ ಫಲಾನುಭವಿ ರೈತರ ಖಾತೆಗೆ 6000 ರೂಪಾಯಿ ಬರುತ್ತದೆ. ಇನ್ನು ಒಂದೇ ಬಾರಿಗೆ ಹಾಕುವ ಬದಲು 2 ಸಾವಿರದ ಕಂತಿನ ರೂಪದಲ್ಲಿ ನೀಡಲಾಗುತ್ತದೆ. 2019ರಲ್ಲಿ ಈ ಯೋಜನೆ ಶುರುವಾಗಿದ್ದು ಇಲ್ಲಿಯವರೆಗೆ ಒಟ್ಟು 10 ಕಂತುಗಳು ಬಿಡುಗಡೆಯಾಗಿದ್ದು, ಕೆಲವೇ ದಿನಗಳಲ್ಲಿ 11ನೇ ಕಂತನ್ನು ಪಿಎಂ ಮೋದಿ ಬಿಡುಗಡೆ ಮಾಡಲಿದ್ದಾರೆ. ಆದರೆ 11ನೇ ಕಂತಿನ ಹಣ ಪಡೆಯಲು ಅರ್ಹ ರೈತರು ಕಡ್ಡಾಯವಾಗಿ ಇ ಕೆವೈಸಿ ಮಾಡಿಕೊಳ್ಳಬೇಕಾಗಿದೆ.

ಪ್ರಧಾನಮಂತ್ರಿ ಕಿಸಾನ್​ ಸಮ್ಮಾನ್​ ನಿಧಿ ಯೋಜನೆ ವೆಬ್​​ಸೈಟ್​​ನಲ್ಲಿ ನೀಡಲಾದ ಮಾಹಿತಿ ಅನ್ವಯ ಈ ಯೋಜನೆಯಡಿ 12 ಕೋಟಿ 49 ಲಕ್ಷ ರೈತರು ನೋಂದಣಿ ಮಾಡಿಕೊಂಡಿದ್ದಾರೆ.  ಅಂದಹಾಗೇ ಈ ಯೋಜನೆಯಡಿ ಕೇಂದ್ರ ಸರ್ಕಾರ ನೇರವಾಗಿ ರೈತರ ಖಾತೆಗೆ ಹಣ ಹಾಕುತ್ತದೆ.  ಇದು ಸಂಪೂರ್ಣವಾಗಿ ಕೇಂದ್ರ ಸರ್ಕಾರದ ಅಡಿಯಲ್ಲೇ ಬರುವ ಸ್ಕೀಮ್​ ಆಗಿದ್ದು, ಅದಕ್ಕಾಗಿ ಹಣವನ್ನು ಪ್ರತಿವರ್ಷ ಬಜೆಟ್​​ನಲ್ಲಿ ಮೀಸಲಾಗಿಡಲಾಗುತ್ತಿದೆ.

11ನೇ ಕಂತಿಗೆ ಇ-ಕೆವೈಸಿ ಕಡ್ಡಾಯ 10ನೇ ಕಂತಿನಲ್ಲಿ ಸುಮಾರು 48 ಲಕ್ಷ ರೈತರಿಗೆ ಹಣ ಬರುವುದು ವಿಳಂಬವಾಗಲು ಕಾರಣ ಫಂಡ್​ ಟ್ರಾನ್ಸ್​ಫರ್​ ಆರ್ಡರ್​​​​​ ಸಮಸ್ಯೆ  ಎಂದು ಹೇಳಲಾಗಿದೆ. ಅಂದರೆ ಎಫ್​ಟಿಒ ಜನರೇಟ್​ ಆಗಿರುವ ಬಹುತೇಕರ ಖಾತೆಗೆ ಈಗಾಗಲೇ ಹಣ ತಲುಪಿದೆ. ಜನರೇಟ್​ ಆಗದವರ ಖಾತೆಗೆ ಇನ್ನೂ ಹೋಗಿಲ್ಲ. ಸ್ವಲ್ಪ ವಿಳಂಬವಾದರೂ ಹಣ ಬರಲಿದೆ ಎನ್ನಲಾಗಿದೆ. ಈ ಮಧ್ಯೆ ಕೆಲವೇ ದಿನಗಳಲ್ಲಿ ಪಿಎಂ ಮೋದಿ 11ನೇ ಕಂತನ್ನು ಬಿಡುಗಡೆ ಮಾಡುವರು. ಈ 11ನೇ ಕಂತಿನ ಹಣ ಪಡೆಯಬೇಕು ಎಂದರೆ, ಪಿಎಂ ಕಿಸಾನ್​ ಸ್ಕೀಮ್​​ನಲ್ಲಿ ನೋಂದಣಿ ಮಾಡಿಕೊಂಡಿರುವ ಎಲ್ಲ ರೈತರೂ ಇ-ಕೆವೈಸಿ ಮಾಡಿಕೊಳ್ಳಲೇಬೇಕು..

ಇಲ್ಲಿದೆ ನೋಡಿ ಇ-ಕೆವೈಸಿ ಮಾಡುವ ವಿಧಾನ

1. ಮೊದಲಿಗೆ ಪಿಎಂ ಕಿಸಾನ್​ ವೆಬ್​ಸೈಟ್​ https://pmkisan.gov.in/ ಗೆ ಭೇಟಿ ಕೊಡಿ.

2. ಹೋಂಪೇಜ್​ ತೆರೆದುಕೊಳ್ಳುತ್ತದೆ. ಅಲ್ಲಿ ಬಲಭಾಗದಲ್ಲಿ Farmers Corner ಎಂಬ ಒಂದು ವಿಭಾಗ ಕಾಣಿಸಿಕೊಳ್ಳುತ್ತದೆ.

3. ಅದರ ಕೆಳಗೆ ಇ-ಕೆವೈಸಿ ಎಂದು ಬರೆದುಕೊಂಡಿರುವ ಬಾಕ್ಸ್​ ಇದೆ. ಅದರ ಮೇಲೆ ಕ್ಲಿಕ್​ ಮಾಡಿ.

4. ಆಗ ಒಂದು ಹೊಸದಾದ ಪೇಜ್​ ಕಾಣಿಸಿಕೊಳ್ಳುತ್ತದೆ. ಅದರಲ್ಲಿ ಆಧಾರ್​ ನಂಬರ್​ ತುಂಬಬೇಕು. ಆಗ ಕ್ಯಾಪ್ಚಾ ಕೋಡ್​ ಕಾಣಿಸಿಕೊಳ್ಳುತ್ತದೆ. ನೀವು ಆ ಅಕ್ಷರಗಳನ್ನು ಜಾಗರೂಕತೆಯಿಂದ ತುಂಬಿ ವೆರಿಫೈ ಮಾಡಬೇಕು.

5. ನಂತರ ನಿಮ್ಮ ಆಧಾರ್​ಕಾರ್ಡ್​ಗೆ ಲಿಂಕ್​ ಆಗಿರುವ ಮೊಬೈಲ್​​ ನಂಬರ್​ನ್ನು ತುಂಬಬೇಕು ಮತ್ತು ಒಟಿಪಿ ಬಟನ್​​ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮ್ಮ ಅದೇ ನಂಬರ್​ಗೆ ಒಂದು ಒಟಿಪಿ ಬರುತ್ತದೆ.

6. ದೃಢೀಕರಣಕ್ಕಾಗಿ ಅದೇ ಒಟಿಪಿಯನ್ನು ನೀವು ತುಂಬಿ. ಸಬ್​​ಮಿಟ್ ಮಾಡಿದರೆ ನಿಮ್ಮ ಪಿಎಂ ಕಿಸಾನ್​ ಕೆವೈಸಿ ಯಶಸ್ವಿಯಾಗಿ ಅಪ್​ಡೇಟ್​ ಆಗುತ್ತದೆ.

ಇದನ್ನೂ ಓದಿ: ಶಾಲೆಯಿಂದ ವಾಪಸಾಗುತ್ತಿದ್ದಾಗ ಹುಡುಗಿಯ ಅಡ್ಡಗಟ್ಟಿ, ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆಗೈದ ದುಷ್ಕರ್ಮಿಗಳು