AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊಟ್ಟ ಮಾತು ಉಳಿಸಿಕೊಳ್ಳಲು ಏನೆಲ್ಲಾ ಮಾಡ್ತೀರಿ: ಪ್ರಣಾಳಿಕೆ ವಿವರಗಳಿಗೆ ಷರತ್ತು ವಿಧಿಸಲು ಮುಂದಾದ ಚುನಾವಣಾ ಆಯೋಗ

Electon Promise: ಹೊಸದಾಗಿ ತೆರಿಗೆ ವಿಧಿಸುವ, ಸರ್ಕಾರಿ ಆಸ್ತಿ ಮಾರುವ, ಬಂಡವಾಳ ಹಿಂಪಡೆಯುವ ಆಲೋಚನೆಯಿದ್ದರೆ ಅದನ್ನೂ ಹಂಚಿಕೊಳ್ಳಬೇಕು’ ಎಂದು ಆಯೋಗವು ಸೂಚಿಸಿದೆ.

ಕೊಟ್ಟ ಮಾತು ಉಳಿಸಿಕೊಳ್ಳಲು ಏನೆಲ್ಲಾ ಮಾಡ್ತೀರಿ: ಪ್ರಣಾಳಿಕೆ ವಿವರಗಳಿಗೆ ಷರತ್ತು ವಿಧಿಸಲು ಮುಂದಾದ ಚುನಾವಣಾ ಆಯೋಗ
ಚುನಾವಣಾ ಆಯೋಗ
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on: Oct 05, 2022 | 12:30 PM

Share

ದೆಹಲಿ: ಚುನಾವಣೆ ವೇಳೆ ರಾಜಕೀಯ ಪಕ್ಷಗಳು ಬೇಕಾಬಿಟ್ಟಿ ಭರವಸೆ ನೀಡುವುದಕ್ಕೆ ಕಡಿವಾಣ ಹಾಕಲು ಚುನಾವಣಾ ಆಯೋಗ (Election Commission of India) ಮುಂದಾಗಿದೆ. ಚುನಾವಣೆ ವೇಳೆ ಘೋಷಿಸುವ ಉಚಿತ ಕೊಡುಗೆಗಳಿಂದ (Feebies) ರಾಷ್ಟ್ರ ಮತ್ತು ರಾಜ್ಯಗಳ ಆರ್ಥಿಕತೆಗೆ (Indian Economy) ದಕ್ಕೆಯಾಗುತ್ತಿರುವ ಬಗ್ಗೆ ಸುಪ್ರೀಂಕೋರ್ಟ್​ನಲ್ಲಿ (Supreme Court of India) ವಿಚಾರಣೆ ನಡೆಯುತ್ತಿರುವಾಗಲೇ ಚುನಾವಣಾ ಆಯೋಗವು ಈ ಕ್ರಮಕ್ಕೆ ಮುಂದಾಗಿರುವುದು ಎಲ್ಲರ ಗಮನ ಸೆಳೆದಿದೆ. ಚುನಾವಣೆ ಸಂದರ್ಭದಲ್ಲಿ ಹೊರಡಿಸುವ ಪ್ರಣಾಳಿಕೆಯಲ್ಲಿ ಕೇವಲ ಭರವಸೆಗಳನ್ನು ಕೊಟ್ಟರೆ ಸಾಲದು, ಅದರಿಂದ ಎಷ್ಟು ಜನರಿಗೆ ಅನುಕೂಲವಾಗಲಿದೆ ಮತ್ತು ಅಗತ್ಯ ಸಂಪನ್ಮೂಲವನ್ನು ಹೇಗೆ ಹೊಂದಿಸಲಾಗುತ್ತದೆ ಎಂಬ ಬಗ್ಗೆಯೂ ಮಾಹಿತಿ ನೀಡಬೇಕು ಎಂದು ಚುನಾವಣಾ ಆಯೋಗವು ತಾಕೀತು ಮಾಡಿದೆ.

ಈ ಸಂಬಂಧ ಭಾರತದ ಎಲ್ಲ ನೋಂದಾಯಿತ ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳಿಗೆ ಚುನಾವಣಾ ಆಯೋಗವು ಪತ್ರ ಬರೆದಿದ್ದು, ಚುನಾವಣೆ ಸಂದರ್ಭದಲ್ಲಿ ನೀಡುವ ಉಚಿತ ಕೊಡುಗೆಗಳ ಭರವಸೆಯನ್ನು ಹೇಗೆ ಈಡೇರಿಸಲಾಗುವುದು ಎಂಬ ಬಗ್ಗೆ ಮಾಹಿತಿ ನೀಡಬೇಕು ಎಂದು ಕೋರಿದೆ. ಉಚಿತ ಕೊಡುಗೆಗಳು ಕೇಂದ್ರ ಮತ್ತು ರಾಜ್ಯಗಳ ಆರ್ಥಿಕತೆಯ ಮೇಲೆ ಬೀರುವ ಪರಿಣಾಮದ ಬಗ್ಗೆಯೂ ಪ್ರಣಾಳಿಕೆಯಲ್ಲಿ ವಿವರಣೆ ಇರಬೇಕು. ಈ ಸೂಚನೆಯ ಬಗ್ಗೆ ರಾಜಕೀಯ ಪಕ್ಷಗಳು ಅಕ್ಟೋಬರ್ 19ರ ಒಳಗೆ ತಮ್ಮ ಅಭಿಪ್ರಾಯವನ್ನು ಸಲ್ಲಿಸಬೇಕು ಎಂದು ಕೋರಿದೆ.

ಈ ಬೆಳವಣಿಗೆಯು ಚುನಾವಣಾ ಆಯೋಗವು ತನ್ನ ಈ ಮೊದಲಿನ ನಿಲುವಿನಿಂದ ಹಿಂದೆ ಸರಿದಿರುವುದನ್ನು ಸೂಚಿಸುತ್ತದೆ. ಕೆಲ ವಾರಗಳ ಹಿಂದಷ್ಟೇ ಸುಪ್ರೀಂಕೋರ್ಟ್​ಗೆ ಈ ಸಂಬಂಧ ಪ್ರತಿಕ್ರಿಯಿಸಿದ್ದ ಚುನಾವಣಾ ಆಯೋಗವು, ‘ಉಚಿತ ಕೊಡುಗೆಗಳು ಸಮಾಜ, ಆರ್ಥಿಕತೆ ಮತ್ತು ಸಮಾನತೆಯ ಮೇಲೆ ಪ್ರತ್ಯೇಕ ಪರಿಣಾಮಗಳನ್ನು ಬೀರಬಹುದು’ ಎಂದು ಅಭಿಪ್ರಾಯಪಟ್ಟಿತ್ತು. ‘ಉಚಿತ ಕೊಡುಗೆಗಳ ಭರವಸೆ ಬಗ್ಗೆ ನೀತಿ ನಿರೂಪಿಸುವುದು ತನ್ನ ಅಧಿಕಾರ ವ್ಯಾಪ್ತಿಯನ್ನು ಮೀರಿದ್ದು’ ಎಂದು ಆಯೋಗವು ಸುಪ್ರೀಂಕೋರ್ಟ್​ಗೆ ತಿಳಿಸಿತ್ತು.

ಆದರೆ ಇದೀಗ ಆಯೋಗವು ಈ ಸಂಬಂಧ ನೀತಿ ನಿರೂಪಿಸಲು ಸ್ಪಷ್ಟ ಹೆಜ್ಜೆಗಳನ್ನು ಇಟ್ಟಿದೆ. ಚುನಾವಣೆ ವೇಳೆ ನೀಡುವ ಭರವಸೆಗಳಿಗೆ ಖರ್ಚಾಗಬಹುದಾದ ಹಣ, ಅದನ್ನು ಹೇಗೆ ಕ್ರೋಡೀಕರಿಸಲಾಗುತ್ತದೆ ಮತ್ತು ಅದರಿಂದ ರಾಜ್ಯದ ಆರ್ಥಿಕತೆಯ ಮೇಲೆ ಆಗುವ ಪರಿಣಾಮಗಳ ಬಗ್ಗೆ ರಾಜಕೀಯ ಪಕ್ಷಗಳಿಂದ ಮಾಹಿತಿ ಪಡೆಯಲು ಆಯೋಗವು ಚಿಂತನೆ ನಡೆಸಿದೆ.

ಹಾಲಿ ಅಸ್ತಿತ್ವದಲ್ಲಿರುವ ಚುನಾವಣಾ ಆಯೋಗದ ಪ್ರಣಾಳಿಕೆ ನಿಯಮಗಳ ಭಾಗವಾಗಿ ಹೊಸ ನಿಯಮಗಳನ್ನು ಜಾರಿಗೆ ತರಲು ಆಯೋಗವು ಚಿಂತನೆ ನಡೆಸಿದೆ. ಈ ಚಿಂತನೆಯು ‘ಜನರನ್ನು ಒಲಿಸಿಕೊಳ್ಳಲು ರಾಜಕೀಯ ಪಕ್ಷಗಳು ಬೇಕಾಬಿಟ್ಟಿಯಾಗಿ ಭರವಸೆ ನೀಡುವ ಪರಿಪಾಠ ತಪ್ಪಿಸಲು ಅಗತ್ಯ ಕ್ರಮ ರೂಪಿಸಬೇಕಿದೆ’ ಎಂದು ಸುಪ್ರೀಂಕೋರ್ಟ್​ ಆಶಯಕ್ಕೆ ಅನುಗುಣವಾಗಿಯೇ ಇರುವುದು ವಿಶೇಷ.

ಚುನಾವಣಾ ಆಯೋಗವು ತನ್ನ ಪತ್ರದಲ್ಲಿ ‘ಪ್ರಣಾಳಿಕೆ ರೂಪಿಸುವ ರಾಜಕೀಯ ಪಕ್ಷಗಳ ಸ್ವಾತಂತ್ರ್ಯ ಗೌರವಿಸುತ್ತೇವೆ. ಆದರೆ ಮುಕ್ತ ನ್ಯಾಯಸಮ್ಮತ ಚುನಾವಣೆ ನಡೆಸಲು ಹಾಗೂ ವಿವಿಧ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳಿಗೆ ಸಮಾನ ಅವಕಾಶಗಳನ್ನು ಕಲ್ಪಿಸುವ ವಿಚಾರದಲ್ಲಿ ಅನಪೇಕ್ಷಿತ ಪರಿಣಾಮಗಳನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ಈಡೇರಿಸಲು ಸಾಧ್ಯವಿರುವ ಭರವಸೆಗಳನ್ನು ಮಾತ್ರವೇ ಮತದಾರರಿಗೆ ನೀಡಬೇಕು’ ಎಂದು ಆಯೋಗವು ತಾಕೀತು ಮಾಡಿದೆ.

ಆಯೋಗ ಬರೆದಿರುವ ಪತ್ರದಲ್ಲಿ ಎರಡು ಭಾಗಗಳಿವೆ. ಮೊದಲ ಭಾಗದಲ್ಲಿ ‘ಚುನಾವಣಾ ಭರವಸೆಗಳನ್ನು ಈಡೇರಿಸಲು ಆಗುವ ಖರ್ಚುಗಳ ಮಾಹಿತಿ’ ನೀಡಲು ಸೂಚಿಸಲಾಗಿದೆ. ಇದರಲ್ಲಿ ಘೋಷಿತ ಯೋಜನೆ ಅಥವಾ ಕ್ರಮ, ಅದು ಎಷ್ಟು ಜನರಿಗೆ ಅನ್ವಯವಾಗಲಿದೆ ಎಂಬ ಮಾಹಿತಿ, ಫಲಾನುಭವಿಗಳ ವಿವರ, ಪ್ರತಿ ಫಲಾನುಭವಿಗೆ ಈ ಸೌಲಭ್ಯ ಒದಗಿಸಲು ಆಗುವ ಖರ್ಚು, ರಾಜ್ಯಮಟ್ಟದಲ್ಲಿ ಆಗುವ ಖರ್ಚಿನ ವಿವರ ನೀಡಬೇಕು’ ಎಂದು ಆಯೋಗವು ಸೂಚಿಸಿದೆ.

ಪತ್ರದ ಎರಡನೇ ಭಾಗದಲ್ಲಿ, ‘ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆ ಈಡೇರಿಸಲು ಆಗುವ ಖರ್ಚನ್ನು ಹೇಗೆ ಹೊಂದಿಸಲಾಗುತ್ತದೆ ಎಂಬ ಮಾಹಿತಿಯನ್ನು ನೀಡಬೇಕು. ಹೊಸದಾಗಿ ತೆರಿಗೆ ವಿಧಿಸುವ, ಸರ್ಕಾರಿ ಆಸ್ತಿ ಮಾರುವ, ಬಂಡವಾಳ ಹಿಂಪಡೆಯುವ ಆಲೋಚನೆಯಿದ್ದರೆ ಅದನ್ನೂ ಹಂಚಿಕೊಳ್ಳಬೇಕು’ ಎಂದು ಆಯೋಗವು ಸೂಚಿಸಿದೆ. ಈ ಕ್ರಮವು ಜಿಎಸ್​ಡಿಪಿ ಮಟ್ಟದಿಂದ ಜಿಡಿಪಿ ಹಂತವರೆಗೆ ಉಂಟುಮಾಡುವ ಪರಿಣಾಮಗಳ ಬಗ್ಗೆಯೂ ವಿವರ ಇರಬೇಕು ಎಂದು ಆಯೋಗವು ಸೂಚಿಸಿದೆ.

‘ಬಹುತೇಕ ಚುನಾವಣಾ ಭರವಸೆಗಳು ಮಹತ್ವಾಕಾಂಕ್ಷೆ ಹೊಂದಿರುತ್ತವೆ. ಆದರೆ ಅವನ್ನು ಈಡೇರಿಸುವ ಬಗ್ಗೆ ಮತದಾರರಿಗೆ ಯಾವುದೇ ತರ್ಕಬದ್ಧ ಮಾಹಿತಿ ನೀಡುವುದಿಲ್ಲ. ಹಣಕಾಸಿನ ಸ್ಥಿತಿಗತಿ ಹಾಗೂ ಚುನಾವಣಾ ಭರವಸೆ ಈಡೇರಿಸಲು ತೆಗೆದುಕೊಳ್ಳುವ ಕ್ರಮಗಳ ಬಗ್ಗೆ ರಾಜಕೀಯ ಪಕ್ಷಗಳು ಸ್ಪಷ್ಟ ಮಾಹಿತಿ ನೀಡಿದರೆ ಮತದಾರರಿಗೆ ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಅನುಕೂಲವಾಗುತ್ತದೆ’ ಎಂದು ಆಯೋಗವು ಅಭಿಪ್ರಾಯಪಟ್ಟಿದೆ.

ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್
ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್
ಡಿಕೆ ಶಿವಕುಮಾರ್ ಡಿನ್ನರ್ ಮೀಟಿಂಗ್ ರಹಸ್ಯ ಇಲ್ಲಿದೆ ನೋಡಿ
ಡಿಕೆ ಶಿವಕುಮಾರ್ ಡಿನ್ನರ್ ಮೀಟಿಂಗ್ ರಹಸ್ಯ ಇಲ್ಲಿದೆ ನೋಡಿ