Video: ನೀನು ಸತ್ತಿಲ್ಲ ಏಳು, ಎದೆಗವಚಿ ಮರಿಗೆ ಮುತ್ತಿಡುತ್ತಾ, ಸತ್ತ ಮರಿಗೆ ಜೀವ ತುಂಬಲು ಯತ್ನಿಸುತ್ತಿರುವ ತಾಯಿ ಮಂಗ

ನೀನು ಸತ್ತಿಲ್ಲ ಏಳು, ಎದೆಗವಚಿ ಮರಿಗೆ ಮುತ್ತಿಡುತ್ತಾ, ಸತ್ತ ಮರಿಗೆ ತಾಯಿ ಮಂಗ ಜೀವ ತುಂಬಲು ಯತ್ನಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ಈ ಘಟನೆ ಉತ್ತರ ಪ್ರದೇಶದ ಔರೈಯಾದಲ್ಲಿ ನಡೆದಿದೆ. ಮರಿಯನ್ನು ಬಿಗಿಯಾಗಿ ಅಪ್ಪಿಕೊಂಡಿರುವ ಕೋತಿ ಸತ್ತ ಪರಿಯನ್ನು ಬಿಟ್ಟು ಹೋಗುಲು ಸಿದ್ಧಳಿಲ್ಲ. ವೈರಲ್ ಆಗಿರುವ ದೃಶ್ಯಾವಳಿಯಲ್ಲಿ, ಹೆಣ್ಣು ಕೋತಿಯು ತನ್ನ ಸತ್ತ ಮರಿಯ ದೇಹವನ್ನು ಎದೆಯ ಮೇಲೆ ಮಲಗಿಸಿಕೊಂಡಿರುವುದು ಕಂಡುಬಂದಿದೆ. ಆ ಮರಿಗೆ ಮತ್ತೆ ಜೀವ ಬರಬಹುದು ಎಂಬ ಆಶಯದಿಂದ ತಾಯಿ ಮಂಗವು ಪದೇ ಪದೇ ಮರಿಯ ಮುಖಕ್ಕೆ ಮುತ್ತಿಡುತ್ತಾ, ಅದನ್ನು ನೆಕ್ಕುತ್ತಾ ಎಬ್ಬಿಸಲು ಪ್ರಯತ್ನಿಸುತ್ತಿದೆ. ಮರಿ ಕೋತಿಯು ಹೇಗೆ ಸಾವನ್ನಪ್ಪಿದೆ ಎಂಬುದು ತಿಳಿದುಬಂದಿಲ್ಲವಾದರೂ, ತಾಯಿಯ ಈ ತವಕ ನೋಡುಗರ ಕಣ್ಣಾಲಿಗಳನ್ನು ಒದ್ದೆಯಾಗಿಸುತ್ತಿದೆ.

Video: ನೀನು ಸತ್ತಿಲ್ಲ ಏಳು, ಎದೆಗವಚಿ ಮರಿಗೆ ಮುತ್ತಿಡುತ್ತಾ, ಸತ್ತ ಮರಿಗೆ ಜೀವ ತುಂಬಲು ಯತ್ನಿಸುತ್ತಿರುವ ತಾಯಿ ಮಂಗ
ಕೋತಿ -ಸಾಂದರ್ಭಿಕ ಚಿತ್ರ
Image Credit source: News.Microsoft.com

Updated on: Jun 16, 2026 | 12:29 PM

ಔರೈಯಾ, ಜೂನ್ 16: ನೀನು ಸತ್ತಿಲ್ಲ ಏಳು, ಎದೆಗವಚಿ ಮರಿಗೆ ಮುತ್ತಿಡುತ್ತಾ, ಸತ್ತ ಮರಿಗೆ ತಾಯಿ ಮಂಗ ಜೀವ ತುಂಬಲು ಯತ್ನಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ಈ ಘಟನೆ ಉತ್ತರ ಪ್ರದೇಶದ ಔರೈಯಾದಲ್ಲಿ ನಡೆದಿದೆ. ಮರಿಯನ್ನು ಬಿಗಿಯಾಗಿ ಅಪ್ಪಿಕೊಂಡಿರುವ ಕೋತಿ(Monkey) ಸತ್ತ ಪರಿಯನ್ನು ಬಿಟ್ಟು ಹೋಗುಲು ಸಿದ್ಧಳಿಲ್ಲ. ವೈರಲ್ ಆಗಿರುವ ದೃಶ್ಯಾವಳಿಯಲ್ಲಿ, ಹೆಣ್ಣು ಕೋತಿಯು ತನ್ನ ಸತ್ತ ಮರಿಯ ದೇಹವನ್ನು ಎದೆಯ ಮೇಲೆ ಮಲಗಿಸಿಕೊಂಡಿರುವುದು ಕಂಡುಬಂದಿದೆ.

ಆ ಮರಿಗೆ ಮತ್ತೆ ಜೀವ ಬರಬಹುದು ಎಂಬ ಆಶಯದಿಂದ ತಾಯಿ ಮಂಗವು ಪದೇ ಪದೇ ಮರಿಯ ಮುಖಕ್ಕೆ ಮುತ್ತಿಡುತ್ತಾ, ಅದನ್ನು ನೆಕ್ಕುತ್ತಾ ಎಬ್ಬಿಸಲು ಪ್ರಯತ್ನಿಸುತ್ತಿದೆ. ಮರಿ ಕೋತಿಯು ಹೇಗೆ ಸಾವನ್ನಪ್ಪಿದೆ ಎಂಬುದು ತಿಳಿದುಬಂದಿಲ್ಲವಾದರೂ, ತಾಯಿಯ ಈ ತವಕ ನೋಡುಗರ ಕಣ್ಣಾಲಿಗಳನ್ನು ಒದ್ದೆಯಾಗಿಸುತ್ತಿದೆ.

ವಿಡಿಯೋ

ಉಮೇಶ್ ಅವಸ್ಥಿ ಎಂಬ ಬಳಕೆದಾರರು ಈ ವಿಡಿಯೋವನ್ನು ಎಕ್ಸ್​ನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ತಾಯಿಯ ವಾತ್ಸಲ್ಯ ಮತ್ತು ಅಗಲಿಕೆಯ ನೋವು ಕೇವಲ ಮನುಷ್ಯರಿಗಷ್ಟೇ ಅಲ್ಲ, ಜಗತ್ತಿನ ಎಲ್ಲಾ ಜೀವಿಗಳಿಗೂ ಒಂದೇ ಆಗಿರುತ್ತದೆ ಎಂಬುದಕ್ಕೆ ಈ ದೃಶ್ಯವೇ ಸಾಕ್ಷಿ ಎಂದು ಅವರು ಬರೆದುಕೊಂಡಿದ್ದಾರೆ.

ಮತ್ತಷ್ಟು ಓದಿ: Video: ಗೊಂಬೆಯೇ ಈ ಕೋತಿ ಮರಿಯ ಕುಟುಂಬ, ಬೇರೆ ಕೋತಿಗಳು ಕೊಡುವ ಕಾಟ ನೋಡಿದ್ರೆ ನಿಮ್ಮ ಕಣ್ಣಲ್ಲೂ ನೀರು ಬರುತ್ತೆ

ಈ ವೀಡಿಯೋ ಪ್ರಾಣಿ ಪ್ರಪಂಚದಲ್ಲಿರುವ ತಾಯ್ತನದ ನೈಜ ಪ್ರವೃತ್ತಿಯನ್ನು ಜಗತ್ತಿಗೆ ಪರಿಚಯಿಸಿದೆ. ಯಾವುದೇ ಪ್ರಾಣಿಯಾದರೂ ಹೆತ್ತ ಕರುಳಿನ ಬಾಂಧವ್ಯ ಎಷ್ಟು ಪವಿತ್ರ ಮತ್ತು ಸಾರ್ವತ್ರಿಕ ಎಂಬುದನ್ನು ಈ ವಿಡಿಯೋ ಎಲ್ಲರಿಗೂ ನೆನಪಿಸುವಂತಿದೆ.

ಇತ್ತೀಚೆಗಷ್ಟೇ ಕೋತಿಯೊಂದು ನಾಯಿ ಮರಿಯನ್ನು ಎತ್ತಿಕೊಂಡು ಹೋಗಿ 15 ನಿಮಿಷಗಳ ಕಾಲ ಮರದ ಮೇಲೆ ಕುಳಿತಿರುವ ವಿಡಿಯೋ ವೈರಲ್ ಆಗಿತ್ತು. ಹಾಗೆಯೇ ಮೆಟ್ರೋ ನಿಲ್ದಾಣವೊಂದರಲ್ಲಿ ಕೋತಿಯೊಂದು ತನ್ನ ಮರಿಯ ಅವಶೇಷಗಳನ್ನು ಹಿಡಿದುಕೊಂಡು ಅದಿನ್ನು ಬದುಕಿದೆ ಎಂಬ ಭ್ರಮೆಯಲ್ಲಿದ್ದ ವಿಡಿಯೋ ಕೂಡ ಕಾಣಿಸಿಕೊಂಡಿತ್ತು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:29 pm, Tue, 16 June 26

Loading...
Unable to load recommendations.
Follow Us