AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಕ್ರಮ ಹಣ ವರ್ಗಾವಣೆ ಆರೋಪ: ಅಶೋಕ ವಿಶ್ವವಿದ್ಯಾನಿಲಯ ಸಂಸ್ಥಾಪಕರು ಸೇರಿ ಮೂವರನ್ನು ಬಂಧಿಸಿದ ಇಡಿ

ಪ್ರಣವ್ ಗುಪ್ತಾ ಮತ್ತು ವಿನೀತ್ ಗುಪ್ತಾ ಪ್ರಚಾರ ಮಾಡಿದ ಪ್ಯಾರಾಬೋಲಿಕ್ ಡ್ರಗ್ಸ್ ಲಿಮಿಟೆಡ್‌ಗೆ ಸಂಬಂಧಿಸಿದ ಬ್ಯಾಂಕ್ ವಂಚನೆ ಪ್ರಕರಣದಲ್ಲಿ ಇಡಿ 17 ಸ್ಥಳಗಳನ್ನು ಶೋಧಿಸಿದ ನಂತರ ಈ ಬಂಧನಗಳು ನಡೆದಿವೆ.  ₹ 1,600 ಕೋಟಿ ಮೊತ್ತದ ಬ್ಯಾಂಕ್ ವಂಚನೆಗೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ (CBI) ಪ್ಯಾರಾಬೋಲಿಕ್ ಡ್ರಗ್ಸ್ ವಿರುದ್ಧ ಆರೋಪ ಹೊರಿಸಿತ್ತು.ಸಿಬಿಐನ ಪ್ರಥಮ ಮಾಹಿತಿ ವರದಿ ಆಧರಿಸಿ ಇಡಿ ತನಿಖೆ ಆರಂಭಿಸಿದೆ.

ಅಕ್ರಮ ಹಣ ವರ್ಗಾವಣೆ ಆರೋಪ: ಅಶೋಕ ವಿಶ್ವವಿದ್ಯಾನಿಲಯ ಸಂಸ್ಥಾಪಕರು ಸೇರಿ ಮೂವರನ್ನು ಬಂಧಿಸಿದ ಇಡಿ
ಇಡಿ
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on: Oct 28, 2023 | 8:58 PM

Share

ದೆಹಲಿ ಅಕ್ಟೋಬರ್ 28: ಅಕ್ರಮ ಹಣ ವರ್ಗಾವಣೆ (Money laundering) ಆರೋಪದ ಮೇಲೆ ಜಾರಿ ನಿರ್ದೇಶನಾಲಯ (ED) ಬಂಧಿಸಿರುವ ಮೂವರಲ್ಲಿ ಖಾಸಗಿ ಸಂಸ್ಥೆ ಅಶೋಕ ವಿಶ್ವವಿದ್ಯಾಲಯದ (Ashoka University) ಇಬ್ಬರು ಸಹ ಸಂಸ್ಥಾಪಕರು ಸೇರಿದ್ದಾರೆ ಎಂದು ಮೂಲಗಳು ತಿಳಿಸಿವೆ.ಇಬ್ಬರು ಅಶೋಕ ವಿಶ್ವವಿದ್ಯಾನಿಲಯದ ಸಹ-ಸಂಸ್ಥಾಪಕರಾದ ಪ್ರಣವ್ ಗುಪ್ತಾ ಮತ್ತು ವಿನೀತ್ ಗುಪ್ತಾ, ಚಾರ್ಟರ್ಡ್ ಅಕೌಂಟೆಂಟ್ ಎಸ್‌ಕೆ ಬನ್ಸಾಲ್ ಅವರನ್ನು ಮನಿ ಲಾಂಡರಿಂಗ್ ತಡೆ ಕಾಯ್ದೆ ಅಥವಾ ಪಿಎಂಎಲ್‌ಎ ಅಡಿಯಲ್ಲಿ ಕೇಂದ್ರೀಯ ಸಂಸ್ಥೆ ಬಂಧಿಸಿದೆ.

ಪ್ರಣವ್ ಗುಪ್ತಾ ಮತ್ತು ವಿನೀತ್ ಗುಪ್ತಾ ಪ್ರಚಾರ ಮಾಡಿದ ಪ್ಯಾರಾಬೋಲಿಕ್ ಡ್ರಗ್ಸ್ ಲಿಮಿಟೆಡ್‌ಗೆ ಸಂಬಂಧಿಸಿದ ಬ್ಯಾಂಕ್ ವಂಚನೆ ಪ್ರಕರಣದಲ್ಲಿ ಇಡಿ 17 ಸ್ಥಳಗಳನ್ನು ಶೋಧಿಸಿದ ನಂತರ ಈ ಬಂಧನಗಳು ನಡೆದಿವೆ.  ₹ 1,600 ಕೋಟಿ ಮೊತ್ತದ ಬ್ಯಾಂಕ್ ವಂಚನೆಗೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ (CBI) ಪ್ಯಾರಾಬೋಲಿಕ್ ಡ್ರಗ್ಸ್ ವಿರುದ್ಧ ಆರೋಪ ಹೊರಿಸಿತ್ತು.ಸಿಬಿಐನ ಪ್ರಥಮ ಮಾಹಿತಿ ವರದಿ ಆಧರಿಸಿ ಇಡಿ ತನಿಖೆ ಆರಂಭಿಸಿದೆ.

ಹರ್ಯಾಣ ಮೂಲದ ಅಶೋಕ ವಿಶ್ವವಿದ್ಯಾಲಯದ ಸಹ-ಸ್ಥಾಪಕರಾದ ಗುಪ್ತ, 2021 ರಲ್ಲಿ ತಮ್ಮ ಮತ್ತು ಅವರ ಕಂಪನಿಯ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದ ನಂತರ 2022 ರಲ್ಲಿ ಸಂಸ್ಥೆಯಲ್ಲಿನ ತಮ್ಮ ಹುದ್ದೆಗಳಿಂದ ಕೆಳಗಿಳಿದಿದ್ದರು.

ಇದನ್ನೂ ಓದಿ: ರಾಷ್ಟ್ರೀಯ ಭದ್ರತೆಯಲ್ಲಿ ರಾಜಿ ಮಾಡಿಕೊಂಡಿದಕ್ಕೆ ಮಹುವಾ ಮೊಯಿತ್ರಾ ವಿರುದ್ಧ ಅನುರಾಗ್ ಠಾಕೂರ್ ವಾಗ್ದಾಳಿ

ಮೂವರನ್ನು ಚಂಡೀಗಢದ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆಯಿದೆ, ಅಲ್ಲಿ ಇಡಿ ಅವರ ಕಸ್ಟಡಿಗೆ ಕೋರಲಿದೆ.

ಪ್ರವರ್ತಕರು ಮತ್ತು ಫಾರ್ಮಾ ಕಂಪನಿಯು ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ನೇತೃತ್ವದ ಒಕ್ಕೂಟಕ್ಕೆ ₹ 1,626 ವಂಚಿಸಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ