ನೆಹರು ಜನರ ಮನುಷ್ಯ, ಪ್ರಧಾನಿ ನರೇಂದ್ರ ಮೋದಿಗೆ ಯೋಗದ ಶಕ್ತಿಯಿದೆ: ಹೊಸ ಪುಸ್ತಕದಲ್ಲಿ ರಸ್ಕಿನ್ ಬಾಂಡ್

Ruskin Bond: ರಾಜಕೀಯ ಮಹತ್ವಾಕಾಂಕ್ಷೆ ಮತ್ತು ಯೋಗಿಗಳಿಗೆ ಮಾತ್ರವೇ ಇರುವಂಥ ಇಚ್ಛಾಶಕ್ತಿಯಿಂದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಮಹತ್ವದ ಸಾಧನೆ ಮಾಡಲು ಸಾಧ್ಯವಾಯಿತು

ನೆಹರು ಜನರ ಮನುಷ್ಯ, ಪ್ರಧಾನಿ ನರೇಂದ್ರ ಮೋದಿಗೆ ಯೋಗದ ಶಕ್ತಿಯಿದೆ: ಹೊಸ ಪುಸ್ತಕದಲ್ಲಿ ರಸ್ಕಿನ್ ಬಾಂಡ್
ಸಾಹಿತಿ ರಸ್ಕಿನ್ ಬಾಂಡ್ ಮತ್ತು ಅವರು ಬರೆದಿರುವ ಹೊಸ ಪುಸ್ತಕ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Feb 16, 2022 | 8:14 PM

ದೆಹಲಿ: ಜನರ ಒಡನಾಟದಿಂದ ಬೆಳೆದ ಮತ್ತು ಹತ್ತಾರು ರೀತಿಯ ಪ್ರತಿಭೆ ಇದ್ದ ಮಹೋನ್ನತ ನಾಯಕ ಜವಾಹರಲಾಲ್ ನೆಹರು. ಅವರು ತಮ್ಮ ಜೀವಿತಾವಧಿಯಲ್ಲಿಯೇ ಹಲವು ಸಾಧನೆಗಳನ್ನು ಮಾಡಿದವರು. ಪ್ರಧಾನಿ ನರೇಂದ್ರ ಮೋದಿ ಅವರ ಸಾರ್ವಜನಿಕ ಬದುಕು ತುಂಬಾ ನಮ್ರವಾಗಿ ಆರಂಭವಾಯಿತು. ಅವರ ರಾಜಕೀಯ ಮಹತ್ವಾಕಾಂಕ್ಷೆ ಮತ್ತು ಯೋಗಿಗಳಿಗೆ ಮಾತ್ರವೇ ಇರುವಂಥ ಇಚ್ಛಾಶಕ್ತಿಯಿಂದಾಗಿ ಅವರು ಮಹತ್ವದ ಸಾಧನೆ ಮಾಡಲು ಸಾಧ್ಯವಾಯಿತು ಎಂದು ಹಿರಿಯ ಲೇಖಕ ರಸ್ಕಿನ್ ಬಾಂಡ್ ಹೇಳಿದರು. ‘ಎ ಲಿಟ್ಲ್​ ಬುಕ್ ಆಫ್ ಇಂಡಿಯಾ: ಸೆಲೆಬ್ರೇಟಿಂಗ್ 75 ಇಯರ್ಸ್​ ಆಫ್ ಇಂಡಿಪೆಂಡೆನ್ಸ್’ (A Little Book of India: Celebrating 75 Years of Independence) ಕೃತಿಯಲ್ಲಿ ರಸ್ಕಿನ್ ಬಾಂಡ್ ಅವರು ಭಾರತದೊಂದಿಗಿನ ತಮ್ಮ 84 ವರ್ಷಗಳ ಒಡನಾಟವನ್ನು ನೆನಪಿಸಿಕೊಂಡಿದ್ದಾರೆ.

ನಾವು ಹಲವು ಪ್ರಬುದ್ಧ ಪ್ರಧಾನಿಗಳನ್ನು ಕಂಡೆವು. ಜವಾಹರ್​ಲಾಲ್ ನೆಹರು, ಇಂದಿರಾ ಗಾಂಧಿ, ಅಟಲ್ ಬಿಹಾರಿ ವಾಜಪೇಯಿ, ಮನಮೋಹನ್ ಸಿಂಗ್ ಇತರರ ಆಡಳಿತದ ನೆನಪುಗಳು ಇಂದಿಗೂ ಇದೆ. ಇದೀಗ ನರೇಂದ್ರ ಮೋದಿ ಅವರ ಆಡಳಿತ ಇದೆ. ಮೋದಿ ಅವರ ಸಾರ್ವಜನಿಕ ಬದುಕು ನಮ್ರ ರೀತಿಯಲ್ಲಿ ಆರಂಭವಾಯಿತು. ಅವರ ಮಹತ್ವಾಕಾಂಕ್ಷೆ, ಸರಿದಾರಿಯಲ್ಲಿ ನಡೆಯಬೇಕು ಎನ್ನುವ ಛಲ ಅವರಿಗೆ ಎರಡೂ ಚುನಾವಣೆಗಳಲ್ಲಿ ಗೆಲುವು ದಕ್ಕಿಸಿಕೊಟ್ಟಿತು ಎಂದು ಹೇಳಿದ್ದಾರೆ. ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ರಸ್ಕಿನ್ ಬಾಂಡ್ ಶಾಲೆಯಲ್ಲಿ ಓದುತ್ತಿದ್ದ ವಿದ್ಯಾರ್ಥಿಯಷ್ಟೇ ಆಗಿದ್ದರು. ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ಶಿಮ್ಲಾದ ವಸತಿ ಶಾಲೆಯ ಮೇಲೆ ಹಾರುತ್ತಿದದ ಬ್ರಿಟನ್​ನ ಯೂನಿಯನ್ ಜಾಕ್ ಧ್ವಜವನ್ನು ಕೆಳಗೆ ಇಳಿಸಿ ಸ್ವತಂತ್ರ ಭಾರತದ ತ್ರಿವರ್ಣ ಧ್ವಜವನ್ನು ಹೇಗೆ ಹಾರಿಸಲಾಯಿತು ಎನ್ನುವುದನ್ನೂ ಅವರು ನೆನಪಿಸಿಕೊಂಡರು. ದೇಶಕ್ಕೆ ಸ್ವಾತಂತ್ರ್ಯ ಬಂದ ದಿನ ನೆಹರು ಅವರು ಮಾಡಿದ್ದ ಪ್ರಸಿದ್ಧ ಭಾಷಣವು ಅವರಿಗೆ ವಿಶ್ವ ವಿದ್ಯಮಾನಗಳ ಬಗ್ಗೆ ಇದ್ದ ಆಳವಾದ ಜ್ಞಾನದ ಜೊತೆಗೆ ಇಂಗ್ಲಿಷ್ ಭಾಷೆಯ ಮೇಲೆ ಅವರಿಗೆ ಇದ್ದ ಹಿಡಿತವನ್ನೂ ಸಾರಿ ಹೇಳಿತ್ತು.

ನೆಹರು ಅಂದರೆ ಚುರುಕಿನ ವ್ಯಕ್ತಿ. ಅವರ ಕೋಟ್ ಮೇಲೆ ಯಾವಾಗಲೂ ಗುಲಾಬಿ ಹೂವೊಂದು ಇದ್ದೇ ಇರುತ್ತಿತ್ತು. ಅತ್ಯುತ್ತಮ ಇಂಗ್ಲಿಷ್ ಶಾಲೆ ಮತ್ತು ವಿಶ್ವವಿದ್ಯಾಲಯದಲ್ಲಿ ಕಲಿತಿದ್ದ ಅವರು ನಿರರ್ಗಳವಾಗಿ ಇಂಗ್ಲಿಷಿನಲ್ಲಿ ಮಾತನಾಡುತ್ತಿದ್ದರು. ಅಷ್ಟೇ ಅಲ್ಲ, ಸೊಗಸಾಗಿ ಬರೆಯುತ್ತಿದ್ದರು. ಅವರು ಪಾಶ್ಚಾತ್ಯೀಕರಣಗೊಂಡ ಭಾರತೀಯ. ಅದರ ಜೊತೆಗೆ ಜನರಿಂದ ಮೇಲೆದ್ದು ಬಂದ ನಾಯಕ. ಅವರಿಗೆ ಜನರ ಗುಂಪುಗಳು ಅಂದರೆ ಇಷ್ಟವಿತ್ತು. ಅಷ್ಟೇ ಅಲ್ಲ, ಜನರು ಗುಂಪುಗೂಡಿದಾಗ ಅತ್ಯುತ್ಸಾಹದಲ್ಲಿ ಮಾತನಾಡುತ್ತಿದ್ದರು. ನೆಹರು ತಮ್ಮ ಅಂಗರಕ್ಷಕರಿಗೆ ಕಣ್ತಪ್ಪಿಸಿ ಹಲವು ಬಾರಿ ಜನರ ನಡುವೆ ಬೆರೆತುಬಿಡುತ್ತಿದ್ದರು ಎಂದು ರಸ್ಕಿನ್ ಬಾಂಡ್ ಈ ಪುಸ್ತಕದಲ್ಲಿ ನೆನಪಿಸಿಕೊಂಡಿದ್ದಾರೆ.

‘ನಾನು 1960ರಲ್ಲಿ ನೆಹರು ಅವರ ಮಾಜಿ ಅಂಗರಕ್ಷಕರೊಬ್ಬರನ್ನು ಭೇಟಿಯಾಗಿ ಮಾತನಾಡಿಸಿದ್ದೆ. ನೆಹರು ಅವರೊಂದಿಗೆ ಓಡಿಓಡಿ ಸಾಕಾಗುತ್ತಿತ್ತು. ಅವರು ಆಗಾಗ ನಮ್ಮ ಕಣ್ತಪ್ಪಿಸುತ್ತಿದ್ದರು. ನೆಹರು ಹಿಂದೆ ಓದಿ ನನ್ನ ತೂಕ ಕಡಿಮೆಯಾಗಿತ್ತು. ನಾನು ಆ ಅಂಗರಕ್ಷಕನನ್ನು ಭೇಟಿಯಾದಾಗ ಅವರ ತೂಕ ಮತ್ತೆ ಹೆಚ್ಚಾಗುತ್ತಿತ್ತು. ಅಂಗರಕ್ಷಕನ ಜವಾಬ್ದಾರಿಯನ್ನು ಮತ್ತೊಬ್ಬರಿಗೆ ವರ್ಗಾಯಿಸಿದ ಮೇಲೆ ನೆಮ್ಮದಿಯಾಗಿದೆ ಎಂದು ಹೇಳಿದ್ದಾಗಿ ಈ ಪುಸ್ತಕದಲ್ಲಿ ರಸ್ಕಿನ್ ಬಾಂಡ್ ಹೇಳಿದ್ದಾರೆ. ಪೆಂಗ್ವಿನ್ ರಾಂಡಮ್ ಹೌಸ್​ ಇಂಡಿಯಾ ಈ ಪುಸ್ತಕವನ್ನು ಪ್ರಕಟಿಸಿದೆ.

ನೆಹರು ಅವರ ಆಡಳಿತದ ವರ್ಷಗಳಲ್ಲಿ ಭಾರತವು ವಿಶ್ವದಲ್ಲಿ ತನ್ನ ಅಸ್ತಿತ್ವವನ್ನು ಸಾರಿ ಹೇಳುತ್ತಿತ್ತು. ಆಲಿಪ್ತ ನೀತಿಯ ಮೂಲಕ ವಿಶ್ವದಲ್ಲಿ ಪ್ರಭಾವ ಹೆಚ್ಚಿಸಿಕೊಳ್ಳಲು ಯತ್ನಿಸುತ್ತಿತ್ತು. ರಷ್ಯಾ, ಚೀನಾ ಮತ್ತು ಅಮೆರಿಕ ಜೊತೆಗೆ ಭಾರತದ ಸಂಬಂಧವು ಆ ದಿನಗಳಲ್ಲಿ ಚೆನ್ನಾಗಿತ್ತು. ನೆಹರು ಅವರ ‘ಎನ್ ಆಟೊಬಯೋಗ್ರಫಿ’ ಮತ್ತು ‘ಡಿಸ್ಕವರಿ ಆಫ್ ಇಂಡಿಯಾ’ ಕೃತಿಗಳು ಸಾಹಿತ್ಯಕ ಮೌಲ್ಯ ಹೊಂದಿರುವ ಕೃತಿಗಳಾಗಿವೆ. ಇಂದಿರಾ ಗಾಂಧಿ ಒಬ್ಬ ಗಟ್ಟಿ ನಾಯಕಿ. ಭಾರತೀಯ ಸೇನೆಯನ್ನು ಪೂರ್ವ ಪಾಕಿಸ್ತಾನಕ್ಕೆ ಕಳಿಸಿ ಬಾಂಗ್ಲಾದೇಶವನ್ನು ಹುಟ್ಟುಹಾಕುವಷ್ಟು ಧೈರ್ಯ ಅವರಿಗಿತ್ತು. ಅವರ ಅಧಿಕಾರ ಅವಧಿಯು ಹಲವು ಏರಿಳಿತಗಳಿಂದ ಕೂಡಿತ್ತು. ಎರಡು ವರ್ಷಗಳ ಅವಧಿಗೆ ತುರ್ತು ಪರಿಸ್ಥಿತಿಯಲ್ಲಿ ದೇಶ ನಲುಗಿತು. ಈ ಅವಧಿಯಲ್ಲಿ ಆಕೆಯ ಬಹುತೇಕ ರಾಜಕೀಯ ವಿರೋಧಿಗಳು ಮತ್ತು ತಮ್ಮನ್ನು ಪ್ರಶ್ನಿಸುತ್ತಿದ್ದವರನ್ನು ಸೆರೆಮನೆಗೆ ತಳ್ಳಿದ್ದರು.

ರಾಜೀವ್ ಗಾಂಧಿ ಜನರ ನಡುವಿನಿಂದ ಬೆಳೆದ ನಾಯಕರಲ್ಲ, ಅವರಿಗೆ ರಾಜಕೀಯ ಹಿನ್ನೆಲೆಯೂ ಇರಲಿಲ್ಲ. ಆದರೆ ಅವರು ತಮ್ಮ ಅಧಿಕಾರ ಅವಧಿಯಲ್ಲಿ ಕೈಲಾದ ಮಟ್ಟಿಗೂ ಶ್ರಮಿಸಿದರು. ತಮ್ಮ ಹಿತೈಷಿಗಳು ಮತ್ತು ಹೆಂಡತಿಯ ಸತತ ಬೆಂಬಲ ಅವರಿಗೆ ಸಿಕ್ಕಿತ್ತು. ಆದ್ರೆ ಶ್ರೀಲಂಕಾದ ಅಂತರ್ಯುದ್ಧದಲ್ಲಿ ಮಧ್ಯಪ್ರವೇಶಿಸಿದ್ದು ಅವರ ಬದುಕಿಗೆ ದುಬಾರಿಯಾಗಿ ಪರಿಣಮಿಸಿತು. ಕೊನೆಗೆ ಆತ್ಮಾಹುತಿ ದಾಳಿಗೆ ಅವರು ಜೀವ ತೆರಬೇಕಾಯಿತು ಎಂದು ರಸ್ಕಿನ್ ಬಾಂಡ್ ನೆನಪಿಸಿಕೊಂಡಿದ್ದಾರೆ.

ಬಿಜೆಪಿ ರೂಪಿಸಿದ ಅತ್ಯಂತ ಸುಧಾರಣಾವಾದಿ ಮತ್ತು ಚಿಂತಕ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ. ಅವರು ಪ್ರಧಾನಿಯಾಗುವುದಕ್ಕೂ ಕೆಲ ದಿನಗಳಿಗೆ ಮೊದಲು ಮಸ್ಸೂರಿನ ಲಾಂಡೋರ್ ಬಜಾರ್​ನಲ್ಲಿ ಅವರೊಂದಿಗೆ ಮಾತನಾಡಲು ಅವಕಾಶ ಸಿಕ್ಕಿತ್ತು. ಈ ಅವಧಿಯಲ್ಲಿ ಅವರೊಂದಿಗೆ ಹೆಚ್ಚು ಜನರು ಇರಲಿಲ್ಲ. ಅಲ್ಲಿನ ಅಂಗಡಿಗಳ ವ್ಯಾಪಾರಿಗಳು ಮತ್ತು ಇತರರೊಂದಿಗೆ ಮಾತನಾಡುತ್ತಿದ್ದರು. ಬಿಜೆಪಿಯು ಅಧಿಕಾರಕ್ಕೆ ಬಂದ ನಂತರವೂ ಅವರಲ್ಲಿ ಅದೇ ಸಭ್ಯತೆ, ಶಿಷ್ಟಾಚಾರ ಮತ್ತು ಮುಕ್ತ ಮನಸ್ಥಿತಿಯನ್ನು ಉಳಿಸಿಕೊಂಡಿದ್ದರು. ಈ ಸ್ವಭಾವಗಳೇ ಅವರನ್ನು ಹಿಂದಿನ ಪ್ರಧಾನಿಗಳಿಗಿಂತಲೂ ಭಿನ್ನವಾಗಿಸಿತ್ತು. ಜನರ ಆಶೋತ್ತರಗಳನ್ನು ಗುರುತಿಸು ಸ್ಪಂದಿಸುವ ಸಾಮರ್ಥ್ಯ ಅವರಿಗೆ ಇತ್ತು ಎಂದು ರಸ್ಕಿನ್ ಬಾಂಡ್ ಬರೆದಿದ್ದಾರೆ.

ಭಾರತದ ವೈವಿಧ್ಯತೆಯ ಬಗ್ಗೆಯೂ ರಸ್ಕಿನ್ ಬಾಂಡ್ ತಮ್ಮ ಪುಸ್ತಕದಲ್ಲಿ ಪ್ರಸ್ತಾಪಿಸಿದ್ದಾರೆ. ಭಾರತದ ನದಿಗಳು, ಕಾಡು, ಸಾಹಿತ್ಯ, ಸಂಸ್ಕೃತಿ, ಭೌಗೋಳಿಕ ನೋಟ, ಬಣ್ಣಗಳು ಮತ್ತು ಸಂಗೀತದ ಬಗ್ಗೆ ಹಲವು ನೆನಪುಗಳನ್ನು ಹಂಚಿಕೊಂಡಿದ್ದಾರೆ. ‘ಈ ಸಣ್ಣ ಪುಸ್ತಕವು ಯಾವುದೇ ರಾಜಕೀಯ ಅಥವಾ ಐತಿಹಾಸಿಕ ಘಟನೆಗಳ ವಿಶ್ಲೇಷಣೆ ಅಲ್ಲ. ಬದಲಾಗಿ 75 ವರ್ಷಗಳಲ್ಲಿ ಭಾರತವು ಒಂದು ದೇಶವಾಗಿ ಹೇಗೆ ಪ್ರಬುದ್ಧವಾಯಿತು’ ಎಂಬುದನ್ನು ಈ ಪುಸ್ತಕ ಕಟ್ಟಿಕೊಡುತ್ತದೆ ಎಂದು ರಸ್ಕಿನ್ ಬಾಂಡ್ ತಿಳಿಸಿದ್ದಾರೆ.

ಇದನ್ನೂ ಓದಿ: Bookmark: ‘ಪುಸ್ತಕೋದ್ಯಮ ಪೂರ್ಣಪ್ರಮಾಣದ ಉದ್ಯಮವಾಗಿಲ್ಲ ಎನ್ನುವುದು ಅಭಿನಂದನೀಯ’

ಇದನ್ನೂ ಓದಿ: Gandhiji : ಅಭಿಜ್ಞಾನ ; ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕೃತಿ ‘ಗಾಂಧಿ ಕಥನ’ದ ಆಯ್ದ ಭಾಗ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ