AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಧಾರ್ಮಿಕ ಉತ್ಸವದ ಫ್ಲೆಕ್ಸ್​ನಲ್ಲಿ ಮಾಜಿ ನೀಲಿ ತಾರೆ ಮಿಯಾ ಖಲೀಫಾ, ಎಲ್ಲೆಡೆ ಆಕ್ರೋಶ

ತಮಿಳುನಾಡಿನಲ್ಲಿ ತಾಯಿ ಪಾರ್ವತಿಯ ಆರಾಧನೆಗಾಗಿ ನಡೆದ ಉತ್ಸವದಲ್ಲಿ ನೀಲಿ ತಾರೆ ಮಿಯಾ ಖಲೀಫಾ ಫ್ಲೆಕ್ಸ್​ ಕಂಡು ಭಕ್ತರು ಬೆಚ್ಚಿಬಿದ್ದಿದ್ದಾರೆ. ಯಾರೋ ಹಿಂದೂ ಭಾವನೆಗಳಿಗೆ ಧಕ್ಕೆ ತರುವಂತಹ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಧಾರ್ಮಿಕ ಉತ್ಸವದ ಫ್ಲೆಕ್ಸ್​ನಲ್ಲಿ ಮಾಜಿ ನೀಲಿ ತಾರೆ ಮಿಯಾ ಖಲೀಫಾ, ಎಲ್ಲೆಡೆ ಆಕ್ರೋಶ
ಮಿಯಾ ಖಲೀಫಾ
Follow us
ನಯನಾ ರಾಜೀವ್
|

Updated on:Aug 09, 2024 | 10:55 AM

ತಮಿಳುನಾಡಿನ ಕಾಂಚೀಪುರಂ ಜಿಲ್ಲೆಯಲ್ಲಿ ನಡೆದ ಧಾರ್ಮಿಕ ಉತ್ಸವದ ವೇಳೆ ಫ್ಲೆಕ್ಸ್​ನಲ್ಲಿ ಮಾಜಿ ನೀಲಿ ತಾರೆ ಮಿಯಾ ಖಲೀಫಾ(Mia Khalifa) ಅವರ ಫೋಟೊ ಹಾಕಲಾಗಿದ್ದು, ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ. ಕುರುವಿಮಲೈನ ನಾಗತಮ್ಮನ್ ಮತ್ತು ಸೆಲ್ಲಿಯಮ್ಮನ್ ದೇವಾಲಯಗಳ ಸಮೀಪದ ಹೋರ್ಡಿಂಗ್​ಗಳನ್ನು ಹಾಕಲಾಗಿತ್ತು. ಅದರಲ್ಲಿ ಕಲಶ ಹೊತ್ತ ಮಿಯಾ ಖಲೀಫಾರ ಚಿತ್ರವೂ ಇತ್ತು.

ಈ ಹೋರ್ಡಿಂಗ್ ರಾಜ್ಯದಾದ್ಯಂತ ದೇವಾಲಯಗಳಲ್ಲಿ ದೇವಿ ಅಮ್ಮನ್ ಅಂದರೆ ಪಾರ್ವತಿ ಪೂಜಿಸುವ ‘ಆದಿ’ ಹಬ್ಬದ ಸಂದರ್ಭದಲ್ಲಿ ಕಂಡುಬಂದಿದೆ. ಇದು ಸ್ಥಳೀಯರ ಕೆಂಗಣ್ಣಿಗೆ ಕಾರಣವಾಗಿದೆ.

ಹಬ್ಬದ ಅಲಂಕಾರವಾಗಿ ಹಲವು ಹೋರ್ಡಿಂಗ್​ಗಳಿಗೆ ದೀಪದ ಅಲಂಕಾರ ಮಾಡಲಾಗಿದೆ. ಹೋರ್ಡಿಂಗ್​ ಒಂದರಲ್ಲಿ ಮಿಯಾ ಖಲೀಫಾ ಅವರ ಚಿತ್ರವನ್ನು ನೋಡಿ ಜನರು ಬೆಚ್ಚಿ ಬಿದ್ದಿದ್ದಾರೆ.

ಮತ್ತಷ್ಟು ಓದಿ: Mia Khalifa: ‘ಬಿಗ್ ಬಾಸ್ ಒಟಿಟಿ’ಗೆ ಮಾಜಿ ಅಡಲ್ಟ್ ಸ್ಟಾರ್? ಅಶ್ಲೀಲ ಸಿನಿಮಾ ನಿರ್ಮಾಣದ ಆರೋಪಿಗೂ ಆಹ್ವಾನ

ಈ ವಿವಾದಾತ್ಮಕ ಹೋರ್ಡಿಂಗ್‌ನ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಸ್ಥಳೀಯ ಪೊಲೀಸರು ತಕ್ಷಣ ಕ್ರಮ ಕೈಗೊಂಡಿದ್ದಾರೆ. ಪೋಲೀಸರು ಈ ಹೋರ್ಡಿಂಗ್ ತೆಗೆದು ತನಿಖೆ ಆರಂಭಿಸಿದರು.

ಮಿಯಾ ಖಲೀಫಾ ಹಬ್ಬದ ಹೋರ್ಡಿಂಗ್‌ಗಳಲ್ಲಿ ದೇವರು ಮತ್ತು ದೇವತೆಗಳ ಚಿತ್ರಗಳ ಜೊತೆಗೆ ‘ಪಾಲ್ ಕುದ್ದಮ್’ (ಹಾಲಿನ ಕಲಶ) ಹಿಡಿದಿರುವುದು ಕಂಡುಬಂದಿದೆ. ಈ ಹಬ್ಬದಲ್ಲಿ ಭಕ್ತರು ತಮ್ಮ ಹಣೆಯ ಮೇಲೆ ಹಾಲಿನ ಕಳಶ ಹೊತ್ತುಕೊಂಡು ದೇವಸ್ಥಾನಗಳಲ್ಲಿರುವ ದೇವರು ಮತ್ತು ದೇವತೆಗಳಿಗೆ ಅರ್ಪಿಸುತ್ತಾರೆ.

ಹೋರ್ಡಿಂಗ್ ಹಾಕಿದ್ದ ವ್ಯಕ್ತಿ ಮಿಯಾನ್ ಖಲೀಫಾ ಅವರ ಫೋಟೋ ಮಾತ್ರವಲ್ಲದೆ ಅವರದೇ ಫೋಟೋವನ್ನೂ ಆಧಾರ್ ಕಾರ್ಡ್ ರೂಪದಲ್ಲಿ ಹಾಕಿದ್ದರು. ಆದರೆ, ನಂತರ ಮ್ಯಾಗರಲ್ ಪೊಲೀಸರು ಸ್ಥಳಕ್ಕೆ ಆಗಮಿಸಿ ರಸ್ತೆಬದಿಯಲ್ಲಿದ್ದ ಹೋರ್ಡಿಂಗ್ ತೆಗೆದರು. ಹೋರ್ಡಿಂಗ್‌ನ ಈ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಬಗ್ಗೆ ಜನ ಕಾಮೆಂಟ್ ಕೂಡ ಮಾಡಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:47 am, Fri, 9 August 24

ಸ್ತ್ರೀಯರು ಗರ್ಭಾವಸ್ಥೆಯಲ್ಲಿ ನೀತಿಕತೆಗಳನ್ನು ಯಾಕೆ ಕೇಳಬೇಕು?
ಸ್ತ್ರೀಯರು ಗರ್ಭಾವಸ್ಥೆಯಲ್ಲಿ ನೀತಿಕತೆಗಳನ್ನು ಯಾಕೆ ಕೇಳಬೇಕು?
ಮೇಷ ರಾಶಿಯವರಿಗಿಂದು ಐದು ರಾಶಿಗಳ ಶುಭ ಫಲ: ಉಳಿದ ರಾಶಿಗಳ ಫಲಾಫಲವೂ ಇಲ್ಲಿದೆ
ಮೇಷ ರಾಶಿಯವರಿಗಿಂದು ಐದು ರಾಶಿಗಳ ಶುಭ ಫಲ: ಉಳಿದ ರಾಶಿಗಳ ಫಲಾಫಲವೂ ಇಲ್ಲಿದೆ
ಕಾಲು ನೋವಿದ್ದರೂ ವೈಭವ್ ಶತಕಕ್ಕೆ ದ್ರಾವಿಡ್ ಸಂಭ್ರಮ ನೋಡಿ
ಕಾಲು ನೋವಿದ್ದರೂ ವೈಭವ್ ಶತಕಕ್ಕೆ ದ್ರಾವಿಡ್ ಸಂಭ್ರಮ ನೋಡಿ
ಪದ್ಮ ಭೂಷಣ ಪ್ರಶಸ್ತಿ ಪಡೆಯಲು ಬಂದ ಬಾಲಯ್ಯ ಗತ್ತು ಹೇಗಿತ್ತು ನೋಡಿ..
ಪದ್ಮ ಭೂಷಣ ಪ್ರಶಸ್ತಿ ಪಡೆಯಲು ಬಂದ ಬಾಲಯ್ಯ ಗತ್ತು ಹೇಗಿತ್ತು ನೋಡಿ..
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಕೊಪ್ಪಳದ 96 ವರ್ಷದ ಭೀಮವ್ವ ಶಿಳ್ಳೆಕ್ಯಾತರ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಕೊಪ್ಪಳದ 96 ವರ್ಷದ ಭೀಮವ್ವ ಶಿಳ್ಳೆಕ್ಯಾತರ
ಸ್ಪಿನ್ ಲೆಜೆಂಡ್ ಆರ್​. ಅಶ್ವಿನ್​ಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ಸ್ಪಿನ್ ಲೆಜೆಂಡ್ ಆರ್​. ಅಶ್ವಿನ್​ಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ಕಪ್ಪು ಬಾವುಟ ಪ್ರದರ್ಶಿಶಿದ ಮಹಿಳೆಯರ ವಿರುದ್ಧ ಕೇಸ್ ದಾಖಲಾಗಿದೆ: ಐಜಿಪಿ
ಕಪ್ಪು ಬಾವುಟ ಪ್ರದರ್ಶಿಶಿದ ಮಹಿಳೆಯರ ವಿರುದ್ಧ ಕೇಸ್ ದಾಖಲಾಗಿದೆ: ಐಜಿಪಿ
ಪ್ರಧಾನಿ ಹೇಳಿದಂತೆ ಪಾಕ್​ ಅನ್ನು ನುಗ್ಗಿ ವೈರಿಗಳನ್ನು ಸದೆಬಡಿಯಬೇಕು: ಅರುಣ್
ಪ್ರಧಾನಿ ಹೇಳಿದಂತೆ ಪಾಕ್​ ಅನ್ನು ನುಗ್ಗಿ ವೈರಿಗಳನ್ನು ಸದೆಬಡಿಯಬೇಕು: ಅರುಣ್
ಇದು ಮನವಿ ಅಲ್ಲ ಎಚ್ಚರಿಕೆ ಮತ್ತು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆ ಎಂದ ಡಿಕೆಶಿ
ಇದು ಮನವಿ ಅಲ್ಲ ಎಚ್ಚರಿಕೆ ಮತ್ತು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆ ಎಂದ ಡಿಕೆಶಿ
ಪ್ರವಾದಿ, ಬಸವಣ್ಣ ಬಗ್ಗೆ ಯತ್ನಾಳ್​ಗೇನು ಗೊತ್ತು: ಕಾಶಪ್ಪನವರ್, ಶಾಸಕ
ಪ್ರವಾದಿ, ಬಸವಣ್ಣ ಬಗ್ಗೆ ಯತ್ನಾಳ್​ಗೇನು ಗೊತ್ತು: ಕಾಶಪ್ಪನವರ್, ಶಾಸಕ