ದೇಶದ ಹೆಸರು ಬದಲಾವಣೆ ಚರ್ಚೆ; ಭಾರತ್ ಎಂಬುದು ಭಾರತದ ಸಂವಿಧಾನದಲ್ಲಿ ಇದೆ: ವಿದೇಶಾಂಗ ಸಚಿವ ಎಸ್ ಜೈಶಂಕರ್
ಜಿ 20 ಶೃಂಗಸಭೆಯೊಂದಿಗೆ ಕಾಕತಾಳೀಯವಾಗಿ ಇಂಡಿಯಾವನ್ನು ಭಾರತ ಎಂದು ಹೆಸರು ಬದಲಿಸಲು ಆಡಳಿತಾರೂಢ ಸರ್ಕಾರ ನಿರ್ಧರಿಸಿದೆಯೇ ಎಂದು ಸಚಿವರಲ್ಲಿ ಪ್ರಶ್ನೆ ಕೇಳಲಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ನೋಡಿ ನೀವು ಭಾರತ್ ಎಂದಾಗ, ಅದ್ಕಕೊಂದು ಅರ್ಥ ಇರುತ್ತದೆ. ಅದು ನಮ್ಮ ಸಂವಿಧಾನದಲ್ಲಿಯೂ ಪ್ರತಿಫಲಿಸುತ್ತದೆ ಎಂದು ಹೇಳಿದ್ದಾರೆ.
ದೆಹಲಿ ಸೆಪ್ಟೆಂಬರ್ 06: ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ (S Jaishankar) ಅವರು ‘ ಇಂಡಿಯಾ-ಭಾರತ’ ಚರ್ಚೆಯ ಬಗ್ಗೆ ಮಾತನಾಡಿದ್ದು, ಭಾರತ್ ಎಂಬುದು ಭಾರತದ ಸಂವಿಧಾನದಲ್ಲಿ ಇದೆ ಎಂದು ಹೇಳಿದ್ದಾರೆ. ರಾಷ್ಟ್ರಪತಿ ಭವನವು ಸೆಪ್ಟೆಂಬರ್ 9 ರಂದು G20 ಔತಣಕೂಟಕ್ಕೆ (G20 dinner) ಕಳುಹಿಸಿದ ಆಹ್ವಾನ ಪತ್ರದಲ್ಲಿ ಪ್ರೆಸಿಡೆಂಟ್ ಆಫ್ ಇಂಡಿಯಾ ಬದಲು ಪ್ರೆಸಿಡೆಂಟ್ ಆಫ್ ಭಾರತ್ (President of Bharat) ಎಂದು ಉಲ್ಲೇಖಿಸಿದ ನಂತರ ಇಂಡಿಯಾ- ಭಾರತ್ ಹೆಸರು ಬದಲಾವಣೆ ಭಾರೀ ಚರ್ಚೆಗಳನ್ನು ಹುಟ್ಟುಹಾಕಿದೆ. ಈ ತಿಂಗಳಾಂತ್ಯದಲ್ಲಿ ನಡೆಯಲಿರುವ ಸಂಸತ್ತಿನ ವಿಶೇಷ ಅಧಿವೇಶನದಲ್ಲಿನ ಅಜೆಂಡಾ ಬಗ್ಗೆ ಕೇಂದ್ರ ಸರ್ಕಾರ ಏನೂ ಹೇಳದೇ ಇದ್ದರೂ ಕೆಲವು ವರದಿಗಳು ಬಿಜೆಪಿ ಸಂಸದರು “ಭಾರತ್” ಹೆಸರಿಗೆ ಆದ್ಯತೆ ನೀಡಲು ವಿಶೇಷ ನಿರ್ಣಯವನ್ನು ಮುಂದಿಡುತ್ತಾರೆ ಎಂದು ಹೇಳಿವೆ.
“ಇಂಡಿಯಾ ಎಂದರೆ ಭಾರತ, ಅದು ಸಂವಿಧಾನದಲ್ಲಿದೆ. ದಯವಿಟ್ಟು, ಅದನ್ನು ಓದಲು ನಾನು ಎಲ್ಲರನ್ನೂ ಆಹ್ವಾನಿಸುತ್ತೇನೆ ಎಂದು ಜೈಶಂಕರ್ ಹೇಳಿದರು.
ಜಿ 20 ಶೃಂಗಸಭೆಯೊಂದಿಗೆ ಕಾಕತಾಳೀಯವಾಗಿ ಇಂಡಿಯಾವನ್ನು ಭಾರತ ಎಂದು ಹೆಸರು ಬದಲಿಸಲು ಆಡಳಿತಾರೂಢ ಸರ್ಕಾರ ನಿರ್ಧರಿಸಿದೆಯೇ ಎಂದು ಸಚಿವರಲ್ಲಿ ಪ್ರಶ್ನೆ ಕೇಳಲಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ನೋಡಿ ನೀವು ಭಾರತ್ ಎಂದಾಗ, ಅದ್ಕಕೊಂದು ಅರ್ಥ ಇರುತ್ತದೆ. ಅದು ನಮ್ಮ ಸಂವಿಧಾನದಲ್ಲಿಯೂ ಪ್ರತಿಫಲಿಸುತ್ತದೆ ಎಂದು ಹೇಳಿದ್ದಾರೆ.
ಇಂಡಿಯಾವನ್ನು ಭಾರತ್ ಮತ್ತು ಹಿಂದೂಸ್ತಾನ್ ಎಂದೂ ಕರೆಯಲಾಗುತ್ತದೆ. ಭಾರತೀಯ ಭಾಷೆಗಳಲ್ಲಿ ಮತ್ತು ಇವುಗಳನ್ನು ಸಾರ್ವಜನಿಕರು ಮತ್ತು ಅಧಿಕೃತವಾಗಿಯೂ ಭಾರತ ಎನ್ನುತ್ತಾರೆ.
ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರವು ವಸಾಹತುಶಾಹಿ ಹೆಸರುಗಳನ್ನು ಬದಲಾಯಿಸುವ ಮೂಲಕ ಬ್ರಿಟಿಷ್ ಆಳ್ವಿಕೆಯ ದೀರ್ಘಕಾಲದ ಕುರುಹುಗಳನ್ನು ತೆಗೆದುಹಾಕಲು ಕೆಲಸ ಮಾಡಿದೆ. ಭಾರತವು ಗುಲಾಮಗಿರಿಯ ಮನಸ್ಥಿತಿಯನ್ನು ದಾಟಲು ಸಹಾಯ ಮಾಡುತ್ತದೆ ಎಂದು ಬಿಜೆಪಿ ನಾಯಕರು ಸಮರ್ಥಿಸಿದ್ದಾರೆ.
ಇದನ್ನೂ ಓದಿ: ಪ್ರೆಸಿಡೆಂಡ್ ಆಫ್ ಭಾರತ್ ಬಳಿಕ ಪ್ರೈಮ್ ಮಿನಿಸ್ಟರ್ ಆಫ್ ಭಾರತ್: ಮೋದಿ ಪ್ರವಾಸದ ಕುರಿತು ಸಂಬಿತ್ ಪಾತ್ರಾ ಪೋಸ್ಟ್
ಭಾರತ ಮತ್ತು ಇಂಡಿಯಾ ಎರಡಕ್ಕೂ ಕೆಲಸ ಮಾಡಲು ತಮ್ಮ ಪಕ್ಷವು ಸಮರ್ಪಿತವಾಗಿದೆ ಎಂದು ಕಾಂಗ್ರೆಸ್ ನಾಯಕ ಗೌರವ್ ಗೊಗೊಯ್ ಹೇಳಿದ್ದಾರೆ. ಆದರೆ ಬಿಜೆಪಿ ಭಾರತ vs ಇಂಡಿಯಾ ಭಾರತಕ್ಕೆ ತನ್ನ ಗಮನವನ್ನು ನೀಡಿದೆ. ಇಂಡಿಯಾ ಮೈತ್ರಿಕೂಟವು ಜನಬೆಂಬಲವನ್ನು ಗಳಿಸಿರುವುದನ್ನು ಒಪ್ಪಿಕೊಳ್ಳಲು ಬಿಜೆಪಿಗೆ ಸಾಧ್ಯವಾಗುತ್ತಿಲ್ಲ ಎಂದು ತೋರುತ್ತದೆ. ಇಂಡಿಯಾ ಮೈತ್ರಿಕೂಟದ ಹೊರಹೊಮ್ಮಿದ ನಂತರ ಬಿಜೆಪಿ ನಾಯಕರಲ್ಲಿ ಹೊಸ ಹಗೆತನ ಕಾಣಿಸಿಕೊಂಡಿದೆ ಎಂದು ಗೌರವ್ ಗೊಗೊಯ್ ಹೇಳಿದ್ದಾರೆ.
ಹಣದುಬ್ಬರ, ನಿರುದ್ಯೋಗ, ಅದಾನಿ, ಚೀನಾ, ಲಡಾಖ್,ಜಮ್ಮು ಮತ್ತು ಕಾಶ್ಮೀರ,ತ್ತು ಮಣಿಪುರದ ವಿರುದ್ಧದ ತನಿಖೆಯ ಪ್ರಮುಖ ವಿಷಯಗಳಿಂದ ಗಮನವನ್ನು ಬೇರೆಡೆ ತಿರುಗಿಲ ಬಿಜೆಪಿ ನಿರಂತರವಾಗಿ ಪ್ರಯತ್ನಿಸುತ್ತಿದೆ. ನಾವು ಭಾರತ ಮತ್ತು ಇಂಡಿಯಾಗಾಗಿ ಕೆಲಸ ಮಾಡುತ್ತಿದ್ದೇವೆ, ಆದರೆ ಬಿಜೆಪಿ ಭಾರತ vs ಇಂಡಿಯಾಗಾಗಿ ಕೆಲಸ ಮಾಡುತ್ತಿದೆ ಎಂದು ಅವರು ಹೇಳಿದರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ