ಅತ್ಯಾಚಾರ ಸಂತ್ರಸ್ತೆಯ ಕುಟುಂಬದ ಫೋಟೊ ಶೇರ್ ಮಾಡಿರುವ ರಾಹುಲ್ ಗಾಂಧಿಯ ಪೋಸ್ಟ್ ತೆಗೆದು ಹಾಕಿದ ಫೇಸ್​​ಬುಕ್

Rahul Gandhi: ಎನ್‌ಸಿಪಿಸಿಆರ್‌ನ ಆಗಸ್ಟ್ 10, 2021 ರ ಸೂಚನೆ ಪ್ರಕಾರ ನಿಮ್ಮ ಇನ್‌ಸ್ಟಾಗ್ರಾಮ್ ಖಾತೆಯ ಮೂಲಕ ನೀವು ಅಪ್‌ಲೋಡ್ ಮಾಡಿದ ಪೋಸ್ಟ್, ಬಾಲನ್ಯಾಯ ಕಾಯ್ದೆ 2015 ರ ಸೆಕ್ಷನ್ 74 ರ ಅಡಿಯಲ್ಲಿ, ಪೊಕ್ಸೊ, 2012 ರ ಸೆಕ್ಷನ್ 23 ಮತ್ತು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 288 ಎ ಅಡಿಯಲ್ಲಿ ಕಾನೂನುಬಾಹಿರವಾಗಿದೆ

ಅತ್ಯಾಚಾರ ಸಂತ್ರಸ್ತೆಯ ಕುಟುಂಬದ ಫೋಟೊ ಶೇರ್ ಮಾಡಿರುವ ರಾಹುಲ್ ಗಾಂಧಿಯ ಪೋಸ್ಟ್ ತೆಗೆದು ಹಾಕಿದ ಫೇಸ್​​ಬುಕ್
ರಾಹುಲ್ ಗಾಂಧಿ
Updated By: ರಶ್ಮಿ ಕಲ್ಲಕಟ್ಟ

Updated on: Aug 20, 2021 | 4:36 PM

ದೆಹಲಿ: ನವದೆಹಲಿಯ ಸ್ಮಶಾನದಲ್ಲಿ ಅತ್ಯಾಚಾರಕ್ಕೊಳಗಾಗಿ ಕೊಲೆಯಾದ ಮತ್ತು ಬಲವಂತವಾಗಿ ಅಂತ್ಯಸಂಸ್ಕಾರ ಮಾಡಿದ ಒಂಬತ್ತು ವರ್ಷದ ದಲಿತ ಹುಡುಗಿಯ ಕುಟುಂಬದ ಚಿತ್ರಗಳನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಮ್ಮ ಫೇಸ್​​ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು. ಆದರೆ ಈ ಪೋಸ್ಟ್ ಫೇಸ್​ಬುಕ್ ಮತ್ತು ಇನ್ ಸ್ಟಾಗ್ರಾಮ್​​ನ​​​​  ನೀತಿಗಳನ್ನು ಉಲ್ಲಂಘಿಸಿದೆ ಎಂದು ಫೇಸ್​​ಬುಕ್ ಸಂಸ್ಥೆ ಈ ಎರಡೂ ಜಾಲತಾಣಗಳಿಂದ ಈ ಪೋಸ್ಟ್​​​ನ್ನು ಶುಕ್ರವಾರ ತೆಗೆದುಹಾಕಿದೆ. ನೀತಿ ಉಲ್ಲಂಘನೆಯಿಂದಾಗಿಯೇ ಪೋಸ್ಟ್ ತೆಗೆದುಹಾಕಲಾಗಿದೆ ಎಂದು ಫೇಸ್ ಬುಕ್ ಸಂಸ್ಥೆ ರಾಹುಲ್ ಗಾಂಧಿಗೆ ತಿಳಿಸಿದೆ.

ಫೇಸ್‌ಬುಕ್ ರಾಹುಲ್ ಗಾಂಧಿಗೆ ಈ ಬಗ್ಗೆ ತಿಳಿಸಿದ್ದು ಆ ಪೋಸ್ಟ್ ರಿಮೂವ್ ಮಾಡುವಂತೆ ಹೇಳಿತ್ತು. ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದಿಂದ (NCPCR) ಸಮನ್ಸ್ ಸ್ವೀಕರಿಸಿದ ಒಂದು ವಾರದ ನಂತರ ಫೇಸ್ ಬುಕ್ ಈ ರೀತಿ ಕ್ರಮಕೈಗೊಂಡಿತ್ತು.

ಎನ್‌ಸಿಪಿಸಿಆರ್‌ನ ಆಗಸ್ಟ್ 10, 2021 ರ ಸೂಚನೆ ಪ್ರಕಾರ ನಿಮ್ಮ ಇನ್‌ಸ್ಟಾಗ್ರಾಮ್ ಖಾತೆಯ ಮೂಲಕ ನೀವು ಅಪ್‌ಲೋಡ್ ಮಾಡಿದ ಪೋಸ್ಟ್, ಬಾಲನ್ಯಾಯ ಕಾಯ್ದೆ 2015 ರ ಸೆಕ್ಷನ್ 74 ರ ಅಡಿಯಲ್ಲಿ, ಪೊಕ್ಸೊ, 2012 ರ ಸೆಕ್ಷನ್ 23 ಮತ್ತು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 288 ಎ ಅಡಿಯಲ್ಲಿ ಕಾನೂನುಬಾಹಿರವಾಗಿದೆ. ಎನ್‌ಸಿಪಿಸಿಆರ್‌ನ ಸೂಚನೆಗೆ ಅನುಸಾರವಾಗಿ, ಈ ಪೋಸ್ಟ್ ಅನ್ನು ತ್ವರಿತವಾಗಿ ತೆಗೆದುಹಾಕಲು ನಿಮ್ಮನ್ನು ವಿನಂತಿಸಲಾಗಿದೆ, “ಎಂದು ಫೇಸ್ ಬುಕ್ ರಾಹುಲ್ ಗಾಂಧಿಗೆ ಇಮೇಲ್ ಕಳುಹಿಸಿತ್ತು.

ಎನ್‌ಸಿಪಿಸಿಆರ್ ಈ ಹಿಂದೆ ಫೇಸ್‌ಬುಕ್‌ಗೆ ಪತ್ರ ಬರೆದು, ಗಾಂಧಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಾಮಾಜಿಕ ಮಾಧ್ಯಮ ವೇದಿಕೆಯನ್ನು ಕೇಳಿತ್ತು. ಮೂರು ದಿನಗಳ ನಂತರ, ಆಗಸ್ಟ್ 13 ರಂದು, ಅದು ತನ್ನ ನೋಟಿಸ್‌ಗೆ ಯಾವುದೇ ಪ್ರತಿಕ್ರಿಯೆಯಿಲ್ಲದ ಕಾರಣ ತನ್ನ ಪ್ರತಿನಿಧಿಗಳನ್ನು ಖುದ್ದಾಗಿ ಹಾಜರಾಗುವಂತೆ ಫೇಸ್‌ಬುಕ್‌ಗೆ ಸಮನ್ಸ್ ಜಾರಿ ಮಾಡಿತು.

ಫೇಸ್‌ಬುಕ್ ರಾಹುಲ್‌ಗೆ ಪತ್ರ ಬರೆದು ಎನ್‌ಸಿಪಿಸಿಆರ್‌ಗೆ ಪತ್ರದ ಪ್ರತಿಯನ್ನು ನೀಡಿದ ನಂತರ, ಮಕ್ಕಳ ಹಕ್ಕುಗಳ ಸಮಿತಿಯು ಅದನ್ನು ಸಮನ್ಸ್‌ನಿಂದ ವಿನಾಯಿತಿ ನೀಡಿತು.

ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಮೈಕ್ರೋ ಬ್ಲಾಗಿಂಗ್ ತಾಣಕ್ಕೆ ನೋಟಿಸ್ ನೀಡಿ ಟ್ವೀಟ್ ಅನ್ನು ತೆಗೆದುಹಾಕುವಂತೆ ಕೇಳಿದ ನಂತರ, ಹುಡುಗಿಯ ಪೋಷಕರ ಛಾಯಾಚಿತ್ರವನ್ನು ಹೊಂದಿದ್ದ ಗಾಂಧಿಯವರ ಟ್ವೀಟ್ ಅನ್ನು ಟ್ವಿಟರ್ ಅಳಿಸಿತ್ತು. ಅದೇ ವೇಳೆ ತಾತ್ಕಾಲಿಕವಾಗಿ ರಾಹುಲ್ ಟ್ವಿಟರ್ ಖಾತೆಯನ್ನು ಲಾಕ್ ಮಾಡಿತ್ತು.

ಇದನ್ನೂ ಓದಿ:  ದೆಹಲಿ ರೇಪ್​ ಕೇಸ್​; ಕಾಂಗ್ರೆಸ್​ ಸಂಸದ ರಾಹುಲ್​ ಗಾಂಧಿಗೆ ಫೇಸ್​​ಬುಕ್​ನಿಂದ ನೋಟಿಸ್​​

ಇದನ್ನೂ ಓದಿ: ದೆಹಲಿ ಅತ್ಯಾಚಾರ ಸಂತ್ರಸ್ತೆಯ ಪಾಲಕರ ಫೋಟೋ ಡಿಲೀಟ್​ ಮಾಡಿದ ರಾಹುಲ್​ ಗಾಂಧಿ..

(Facebook took down a post family of Dalit victim shared by Congress leader Rahul Gandhi cites policy violation)