
ಬೆಂಗಳೂರು (ಜು. 09): ಪೊದೆಗಳ ಮಧ್ಯೆ ಗಾಯಗೊಂಡು ಮಲಗಿರುವ ಮಹಿಳೆಯೊಬ್ಬರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಪೊಲೀಸರು ಆಕೆಯನ್ನು ಪರಿಶೀಲಿಸುತ್ತಿರುವುದನ್ನು ಕಾಣಬಹುದು. ಕೆಲವು ಪೊಲೀಸರು ಗಾಯಗೊಂಡ ಮಹಿಳೆಯ ಸುತ್ತಲೂ ನಿಂತು ಅವರು ಉಸಿರಾಡುತ್ತಿದ್ದಾರೆಯೇ ಅಥವಾ ಇಲ್ಲವೇ ಎಂದು ಪರಿಶೀಲಿಸುತ್ತಿದ್ದಾರೆ. ಹತ್ತಿರದಲ್ಲಿ ಇತರ ಜನರು ಕೂಡ ನಿಂತಿದ್ದಾರೆ. ಈ ಘಟನೆ ಜಾರ್ಖಂಡ್‌ನಲ್ಲಿ ನಡೆದಿದ್ದು, ಆರು ಹುಡುಗರು ಒಟ್ಟಾಗಿ ಬಾಲಕಿಯ ಮೇಲೆ ಅತ್ಯಾಚಾರ ಮಾಡಿ ನಂತರ ಪೊದೆಗಳಲ್ಲಿ ಎಸೆದಿದ್ದಾರೆ ಎಂಬ ಹೇಳಿಕೆಯೊಂದಿಗೆ ಇದನ್ನು ಹಂಚಿಕೊಳ್ಳಲಾಗುತ್ತಿದೆ.
ವಿಡಿಯೋವನ್ನು ಹಂಚಿಕೊಂಡವರ ಪ್ರಕಾರ, ಆರು ಹುಡುಗರು ಜಾರ್ಖಂಡ್‌ನ ಈ ಮಹಿಳೆಯ ಮೇಲೆ ಅತ್ಯಾಚಾರ ಮಾಡಿ ನಂತರ ಕೊಂದು ಪೊದೆಯಲ್ಲಿ ಎಸೆದಿದ್ದಾರೆ. ಪೋಸ್ಟ್‌ಗೆ ಕಾಮೆಂಟ್ ಮಾಡುತ್ತಾ, ಅನೇಕ ಜನರು ಈ ಘಟನೆಗೆ ಸರ್ಕಾರವನ್ನು ದೂಷಿಸುತ್ತಿದ್ದಾರೆ ಮತ್ತು ಆರೋಪಿಗಳಿಗೆ ಮರಣದಂಡನೆ ವಿಧಿಸಬೇಕೆಂದು ಒತ್ತಾಯಿಸುತ್ತಿದ್ದಾರೆ.
ಟಿವಿ9 ಕನ್ನಡ ಫ್ಯಾಕ್ಟ್ ಚೆಕ್ ನಡೆಸಿದ ಸಂಶೋಧನೆಯಲ್ಲಿ ಇದು ಯಾವುದೇ ನೈಜ ಘಟನೆಯ ವಿಡಿಯೋ ಅಲ್ಲ, ಬದಲಾಗಿ ಸಿನಿಮಾ ಶೂಟಿಂಗ್‌ನ ವಿಡಿಯೋ ಎಂದು ತಿಳಿದುಬಂದಿದೆ. ವೈರಲ್ ವೀಡಿಯೊದ ಸತ್ಯವನ್ನು ಕಂಡುಹಿಡಿಯಲು, ನಾವು ಇನ್ವಿಡ್ ಉಪಕರಣದ ಸಹಾಯದಿಂದ ವೈರಲ್ ವಿಡಿಯೋದ ಹಲವಾರು ಪ್ರಮುಖ ಫ್ರೇಮ್‌ಗಳನ್ನು ಹೊರತೆಗೆದು ಗೂಗಲ್ ರಿವರ್ಸ್ ಇಮೇಜ್ ಸಹಾಯದಿಂದ ಅವುಗಳನ್ನು ಹುಡುಕಿದೆವು.
ಹೀಗೆ ಸರ್ಚ್ ಮಾಡಿದಾಗ prodip__panging ಎಂಬ ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋದ ದೀರ್ಘ ಆವೃತ್ತಿಯನ್ನು ನಾವು ಕಂಡುಕೊಂಡಿದ್ದೇವೆ. ವಿಡಿಯೋವನ್ನು ಮೇ 14, 2025 ರಂದು ಹಂಚಿಕೊಳ್ಳಲಾಗಿದೆ. ಲಭ್ಯವಿರುವ ಮಾಹಿತಿಯ ಪ್ರಕಾರ, ವಿಡಿಯೀ ಲುಜೆಗ್ ಸಿನಿಮಾ ದೃಶ್ಯಗಳ ಚಿತ್ರೀಕರಣವಾಗಿದೆ. prodip__panging ನ ಇನ್ಸ್ಟಾ ಖಾತೆಯನ್ನು ಹುಡುಕಿದಾಗ, ಖಾತೆಯ ಬಯೋದಲ್ಲಿ ಬಳಕೆದಾರರು ತಮ್ಮನ್ನು ಕಲಾವಿದ ಎಂದು ವಿವರಿಸಿದ್ದಾರೆ.
Fact Check: ತೆಲಂಗಾಣದಲ್ಲಿ ರೈಲ್ವೆ ಹಳಿಗಳ ಮೇಲೆ ಕಾರು ಚಲಾಯಿಸಿದ್ದು ಮುಸ್ಲಿಂ ಮಹಿಳೆಯೇ?: ಸತ್ಯ ಇಲ್ಲಿದೆ ನೋಡಿ
ತನಿಖೆಯ ಸಮಯದಲ್ಲಿ, chand_raj_music ಎಂಬ ಇನ್ನೊಂದು ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವೈರಲ್ ವಿಡಿಯೋಗೆ ಸಂಬಂಧಿಸಿದ ಮತ್ತೊಂದು ವಿಡಿಯೋ ನಮಗೆ ಕಂಡುಬಂದಿದೆ. ಇಲ್ಲಿಯೂ ಸಹ, ಆ ವಿಡಿಯೋ ಚಲನಚಿತ್ರದ ಚಿತ್ರೀಕರಣದ ದೃಶ್ಯ ಎಂದು ಹೇಳಲಾಗಿದೆ.
ಲುಜೆಗ್ ಚಿತ್ರಕ್ಕೆ ಸಂಬಂಧಿಸಿದ ಅನೇಕ ಬ್ಲಾಗ್‌ಗಳನ್ನು ನಾವು ಯೂಟ್ಯೂಬ್‌ನಲ್ಲಿ ಕಂಡುಕೊಂಡೆವು. ಮೇ 2025 ರಲ್ಲಿ, ಯೂಟ್ಯೂಬ್‌ನಲ್ಲಿ ಅನೇಕ ಬ್ಲಾಗರ್‌ಗಳು ಚಿತ್ರದ ಚಿತ್ರೀಕರಣಕ್ಕೆ ಸಂಬಂಧಿಸಿದ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ವೈರಲ್ ವಿಡಿಯೋದಲ್ಲಿ ಕಾಣುವ ಅದೇ ಹುಡುಗಿಯನ್ನು ಬ್ಲಾಗಿಂಗ್ ವಿಡಿಯೋದಲ್ಲೂ ಕಾಣಬಹುದು.
ಕ್ಯಾಮೆರಾಮನ್ ಚಂದನ್ ಅವರ ಖಾತೆಯಲ್ಲಿ, ವೈರಲ್ ಕ್ಲಿಪ್‌ನಿಂದ ದೃಶ್ಯದ ಚಿತ್ರೀಕರಣದ ವಿಡಿಯೋವನ್ನು ನಾವು ಬೇರೆ ಕೋನದಿಂದ ಕಂಡುಕೊಂಡಿದ್ದೇವೆ. ಇದರಲ್ಲಿ, ಪೊಲೀಸರಂತೆ ನಟಿಸುವ ಜನರು ಮಹಿಳೆಯನ್ನು ಎತ್ತಿ ಆಂಬ್ಯುಲೆನ್ಸ್ ಕಡೆಗೆ ಕರೆದೊಯ್ಯುತ್ತಿರುವಾಗ, ಅವರು ಇದ್ದಕ್ಕಿದ್ದಂತೆ ಯಾವುದೋ ಕಾರಣಕ್ಕಾಗಿ ನಿಲ್ಲುತ್ತಾರೆ. ಇದರ ನಂತರ, ಪೊಲೀಸ್ ಸಮವಸ್ತ್ರ ಧರಿಸಿದ ಮಹಿಳೆ ನಗಲು ಪ್ರಾರಂಭಿಸುತ್ತಾಳೆ. ಇದನ್ನೆಲ್ಲ ಗಮನಿಸಿದಾಗ, ಇದು ಒಂದು ಸಿನಿಮಾದ ಚಿತ್ರೀಕರಣದ ವಿಡಿಯೋ ಎಂದು ಸ್ಪಷ್ಟವಾಗುತ್ತದೆ.
ಟಿವಿ9 ಕನ್ನಡ ತನ್ನ ತನಿಖೆಯಲ್ಲಿ ಅರಣ್ಯದ ಮಧ್ಯೆ ಮಲಗಿರುವ ಮಹಿಳೆಯ ವೈರಲ್ ವಿಡಿಯೋದ ಬಗ್ಗೆ ಮಾಡಲಾಗಿರುವ ಹೇಳಿಕೆ ಸುಳ್ಳು ಎಂದು ಕಂಡುಹಿಡಿದಿದೆ. ಈ ವಿಡಿಯೋ ಯಾವುದೇ ನೈಜ ಘಟನೆಯದ್ದಲ್ಲ, ಬದಲಾಗಿ ಸಿನಿಮಾದ ಚಿತ್ರೀಕರಣದ್ದಾಗಿದೆ.
ಇನ್ನಷ್ಟು ಫ್ಯಾಕ್ಟ್ ಚೆಕ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:15 pm, Wed, 9 July 25