AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Fact Check | ಭಾರತೀಯ ರೈಲ್ವೆಯನ್ನು ಅದಾನಿ ಖರೀದಿಸಿದ್ದಾರೆ ಎಂಬ ವೈರಲ್ ವಿಡಿಯೊ ಹಿಂದಿನ ಮರ್ಮವೇನು?

ಭಾರತೀಯ ರೈಲ್ವೆಯನ್ನು ಗೌತಮ್ ಅದಾನಿ ಮಾಲೀಕತ್ವದ ಅದಾನಿ ಗ್ರೂಪ್ ಖರೀದಿಸಿದೆ ಎಂಬ ಶೀರ್ಷಿಕೆಯ ವೈರಲ್ ವಿಡಿಯೊ ವೈರಲ್ ಆಗಿದೆ. ಆದರೆ ವಾಸ್ತವ ಬೇರೆಯೇ ಇದೆ.

Fact Check | ಭಾರತೀಯ ರೈಲ್ವೆಯನ್ನು ಅದಾನಿ ಖರೀದಿಸಿದ್ದಾರೆ ಎಂಬ ವೈರಲ್ ವಿಡಿಯೊ ಹಿಂದಿನ ಮರ್ಮವೇನು?
ರಶ್ಮಿ ಕಲ್ಲಕಟ್ಟ
ರಶ್ಮಿ ಕಲ್ಲಕಟ್ಟ| Edited By: |

Updated on:Dec 16, 2020 | 9:05 PM

Share

ಬೆಂಗಳೂರು: ಭಾರತೀಯ ರೈಲ್ವೆಯನ್ನು ಗೌತಮ್ ಅದಾನಿ ಮಾಲೀಕತ್ವದ ಅದಾನಿ ಗ್ರೂಪ್ ಖರೀದಿಸಿದೆ ಎಂದು ಹೇಳುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. WAP 7 ರೈಲು ಎಂಜಿನ್​​ನ್ನು ತೋರಿಸುವ ವಿಡಿಯೊ ಇದಾಗಿದ್ದು ಇದರಲ್ಲಿ ವಡೋದರಾದ ಸ್ಟೇಷನ್ ಕೋಡ್ ಬಿಆರ್​ಸಿ ಎಂದು ಇದೆ. ಈ ಎಂಜಿನ್​​ನ ಬದಿಯಲ್ಲಿ ಅದಾನಿ ವಿಲ್ಮರ್ ಹೆಸರು ಮತ್ತು ಸಫೋಲಾ ಗೋಧಿ ಹಿಟ್ಟಿನ ಜಾಹೀರಾತು ಕಾಣಿಸುತ್ತದೆ. ಅದಾನಿ ಗ್ರೂಪ್ ಮತ್ತು ಸಿಂಗಾಪುರದ ವಿಲ್ಮರ್ ಇಂಟರ್ ನ್ಯಾಷನಲ್ ಲಿಮಿಟೆಡ್​​ನ ಜಂಟಿ ವ್ಯಾಪಾರ ಸಂಸ್ಥೆಯಾಗಿದೆ. ಅಡುಗೆ ತೈಲ ಮತ್ತು ಆಹಾರ ಧಾನ್ಯಗಳು ಈ ಸಂಸ್ಥೆಯ ಉತ್ಪನ್ನಗಳು.

ದೆಹಲಿಯಲ್ಲಿ ರೈತರು ಕೇಂದ್ರದ ಕೃಷಿ ಕಾನೂನು ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಹೊತ್ತಲ್ಲಿಯೇ ಈ ವಿಡಿಯೊ ವೈರಲ್ ಆಗಿದೆ. ಅದಾನಿ ವಿಮಾನ ನಿಲ್ದಾಣ, ಅದಾನಿ ಬಂದರು, ಅದಾನಿ ಪವರ್, ಅದಾನಿ ಕಲ್ಲಿದ್ದಲು, ಅದಾನಿ ರೈಲ್ವೆ ಎಂಬ ಶೀರ್ಷಿಕೆಯೊಂದಿಗೆ ಹಲವಾರು ನೆಟ್ಟಿಗರು ಈ ವಿಡಿಯೊ ಶೇರ್ ಮಾಡಿದ್ದಾರೆ.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಫೇಸ್​ಬುಕ್ ಪುಟದಲ್ಲಿಯೂ ಇದೇ ವಿಡಿಯೊ ಶೇರ್ ಆಗಿತ್ತು. ಕಾಂಗ್ರೆಸ್ ಪಕ್ಷದ ಗುಜರಾತ್ ಘಟಕದ ಅಧ್ಯಕ್ಷ ಹಾರ್ದಿಕ್ ಪಟೇಲ್ ಈ ವಿಡಿಯೊವನ್ನು ಶೇರ್ ಮಾಡಿದ್ದರು.

ಫ್ಯಾಕ್ಟ್ ಚೆಕ್ ಈ ವೈರಲ್ ವಿಡಿಯೊದ ಫ್ಯಾಕ್ಟ್​ಚೆಕ್ ಮಾಡಿದ ಬೂಮ್ ಲೈವ್, ಇದು ಲೋಕೋಮೋಟಿವ್ ಎಂಜಿನ್​ನಲ್ಲಿರುವ ಜಾಹೀರಾತು ಅದು ಎಂದು ವರದಿ ಮಾಡಿದೆ. ವಿಡಿಯೊದಲ್ಲಿರುವ ಎಂಜಿನ್ ನಂಬರ್ WAP7 30502 ಆಗಿದೆ. Adani WAP 7 Engines ಎಂಬ ಕೀವರ್ಡ್ ಬಳಸಿ ಗೂಗಲಿಸಿದಾಗ ಲೋಕೋಮೋಟಿವ್ ಬ್ರಾಂಡಿಂಗ್ ಬಗ್ಗೆ ಇರುವ ಪುಟವೊಂದು ಸಿಗುತ್ತದೆ. ರೈಲ್ವೆ ಎಂಜಿನ್​ಗಳ ಮೇಲೆ ಜಾಹೀರಾತು ಪ್ರದರ್ಶಿಸಿರುವುದು ಇಲ್ಲಿ ಕಾಣಿಸುತ್ತದೆ.

ಫೈನಾನ್ಶಿಯನ್ ಎಕ್ಸ್​ಪ್ರೆಸ್ ಪತ್ರಿಕೆಯ ವರದಿ ಪ್ರಕಾರ ವಡೋದರಲ್ಲಿ (ಪಶ್ಚಿಮ ರೈಲ್ವೆಯ ಗುಜರಾತ್ ವಿಭಾಗದಲ್ಲಿ) ಕೋಮೋಟಿವ್ ಬ್ರಾಂಡಿಂಗ್​ನಿಂದ ಭಾರತೀಯ ರೈಲ್ವೆ ವಾರ್ಷಿಕ ₹73.26 ಲಕ್ಷ ಆದಾಯ ಗಳಿಸುತ್ತದೆ. 2020ರ ಫೆಬ್ರುವರಿ 27ರಂದು ಐದು WAP 7 ಲೋಕೋಮೋಟಿವ್​​ಗಳಲ್ಲಿ ಅದಾನಿ-ವಿಲ್ಮರ್ ಕಂಪನಿಯ ಜಾಹೀರಾತು ಪ್ರಕಟಿಸಲಾಗಿತ್ತು. The Rail Zone ಯುಟ್ಯೂಬ್ ಖಾತೆಯಲ್ಲಿರುವ ವಿಡಿಯೊದಲ್ಲಿ ಜಾಹೀರಾತುಗಳನ್ನು ಕಾಣಬಹುದು. ಅದಾನಿ ವಿಲ್ಮರ್ ವೆಬ್​ಸೈಟ್​ನ ಪತ್ರಿಕಾ ಪ್ರಕಟಣೆಯಲ್ಲಿಯೂ ಲೋಕೊಮೋಟಿವ್ ಎಂಜಿನ್​ಗಳಲ್ಲಿನ ಜಾಹೀರಾತು ಬಗ್ಗೆ ಇದೆ.

ಸರ್ಕಾರದ ಫ್ಯಾಕ್ಟ್ ಚೆಕಿಂಗ್ ವಿಭಾಗವಾದ ಪಿಐಬಿ ಫ್ಯಾಕ್ಟ್ ಚೆಕ್ ಕೂಡಾ ವೈರಲ್ ವಿಡಿಯೊ ಸುಳ್ಳು ಸುದ್ದಿ ಎಂದು ಟ್ವೀಟ್ ಮಾಡಿದೆ.

Fact Check | ರೈತರ ಪ್ರತಿಭಟನೆಯಲ್ಲಿ ಖಾಲಿಸ್ತಾನ್ ಪೋಸ್ಟರ್: ವೈರಲ್ ಫೋಟೊ ಹಿಂದಿರುವ ಸತ್ಯಾಸತ್ಯತೆ ಏನು?

Published On - 8:59 pm, Wed, 16 December 20

Follow Us
ರಶ್ಮಿ ಕಲ್ಲಕಟ್ಟ
ರಶ್ಮಿ ಕಲ್ಲಕಟ್ಟ

ಊರು ಕಾಸರಗೋಡು. ಓದಿದ್ದು ಇಂಜಿನಿಯರಿಂಗ್, ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಇಂಗ್ಲಿಷ್ ಸ್ನಾತಕೋತ್ತರ ಪದವಿ. ಕನ್ನಡಪ್ರಭ, ಪ್ರಜಾವಾಣಿ ಡಿಜಿಟಲ್ ಮತ್ತು ಪ್ರಿಂಟ್ ವಿಭಾಗದಲ್ಲಿ ಕೆಲಸದ ಅನುಭವ. ಬ್ಲಾಗರ್, ಸಾಹಿತ್ಯ ಪ್ರೇಮಿ. ಇಲ್ಲಿವರೆಗೆ 2 ಪುಸ್ತಕಗಳು ಪ್ರಕಟವಾಗಿವೆ. ಕಲೆ,ಸಾಹಿತ್ಯ,ತಂತ್ರಜ್ಞಾನ,ಸಂದರ್ಶನ, ಫ್ಯಾಕ್ಟ್ ಚೆಕಿಂಗ್ ಆಸಕ್ತಿಕರ ವಿಷಯಗಳು. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷ ಅನುಭವ

ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್